ನಿರಂಜನ ಜ್ಯೋತಿ | |
---|---|
![]() ನಿರಂಜನ ಜ್ಯೋತಿ ೨೦೨೨ | |
Preceded by | ರಾಮ್ ಕೃಪಾಲ್ ಯಾದವ್ |
Assumed office ೮ ಜುಲೈ ೨೦೨೧ | |
Preceded by | ರಾವ್ಸಾಹೇಬ್ ದಾದಾರಾವ್ ದಾನ್ವೆ |
In office ೮ ನವೆಂಬರ್ ೨೦೧೪ – ೩೦ ಮೇ ೨೦೧೯ | |
Succeeded by | ರಾಮೇಶ್ವರ ತೇಲಿ |
Assumed office ೧೬ ಮೇ ೨೦೧೪ | |
Preceded by | ರಾಕೇಶ್ ಸಚನ್ |
Personal details | |
Born | Error: Need valid birth date: year, month, day[೧] ಪಟೆಶ್ವರ, ಉತ್ತರ ಪ್ರದೇಶ, ಭಾರತ |
Political party | ಭಾರತೀಯ ಜನತಾ ಪಕ್ಷ |
Profession | ಕಥಾವಹಚಕ್ (ಧಾರ್ಮಿಕ ಕಥೆಗಾರ್ತಿ) |
ನಿರಂಜನ್ ಜ್ಯೋತಿ (ಜನನ ೧ ಮಾರ್ಚ್ ೧೯೬೭), ಸಾಮಾನ್ಯವಾಗಿ ಸಾಧ್ವಿ ನಿರಂಜನ್ ಜ್ಯೋತಿ ಎಂದು ಇವರನ್ನು ಕರೆಯಲಾಗುತ್ತದೆ. ಅವರು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದ ಭಾರತೀಯ ಮಹಿಳಾ ರಾಜಕಾರಣಿ. ಅವರು ನವೆಂಬರ್ ೨೦೧೪ ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವರಾಗಿ ನೇಮಕಗೊಂಡರು. [೨] ೩೦ ಮೇ ೨೦೧೯ ರಂದು, ಅವರು ನರೇಂದ್ರ ಮೋದಿ ೨೦೧೯ ಕ್ಯಾಬಿನೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿ ನೇಮಕಗೊಂಡರು.
ಅವರು ೨೦೧೪ ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ನಂತರ ಲೋಕಸಭೆಯಲ್ಲಿ ಉತ್ತರ ಪ್ರದೇಶದ ಫತೇಪುರ್ ಕ್ಷೇತ್ರವನ್ನು ಪ್ರತಿನಿಧಿಸಿದರು. [೩] ಅವರು ೨೦೧೨ರ ಚುನಾವಣೆಯಲ್ಲಿ ಗೆದ್ದ ನಂತರ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಹಮೀರ್ಪುರ್ ಕ್ಷೇತ್ರವನ್ನು ಪ್ರತಿನಿಧಿಸಿದರು. [೪]
ನಿರಂಜನ್ ಜ್ಯೋತಿ ಅವರು ಮಾರ್ಚ್ ೧, ೧೯೬೭ ರಂದು ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಪಟೇವ್ರಾ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಅಚ್ಯುತಾನಂದ ಮತ್ತು ತಾಯಿ ಶಿವ ಕಾಳಿ ದೇವಿ. [೫] ಅವರು ನಿಶಾದ್ -ಜಾತಿ ಕುಟುಂಬದಲ್ಲಿ ಜನಿಸಿದರು. [೬]
೧೪ ಜೂನ್ ೨೦೧೪ ರಂದು, ಲಕ್ನೋದ ಆವಾಸ್ ವಿಕಾಸ್ ಕಾಲೋನಿಯಲ್ಲಿ ನಡೆದ ಸಮಾರಂಭದಲ್ಲಿ ಜ್ಯೋತಿ ವಾಪಸಾಗುತ್ತಿದ್ದಾಗ ಭಾನು ಪಟೇಲ್ ಮತ್ತು ಅವರ ಮೂವರು ಸಹಚರರು ಜ್ಯೋತಿ ಮೇಲೆ ಗುಂಡು ಹಾರಿಸಿದರು. ಅವರು ಪ್ರಾಣಾಪಾಯದಿಂದ ಪಾರಾದರು. ಆದರೆ ಆಕೆಯ ಅಂಗರಕ್ಷಕ ಗಾಯಗೊಂಡಿದ್ದರು.. [೭]
ಮೇ ೨೦೧೯ರಲ್ಲಿ, ಜ್ಯೋತಿ ಅವರು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾದರು. [೮]
೧ ಡಿಸೆಂಬರ್ ೨೦೧೪ ರಂದು, [೯] ಅವರು ಸಾರ್ವಜನಿಕ ರ‍್ಯಾಲಿಯಲ್ಲಿ, "ದೆಹಲಿಯಲ್ಲಿ ಸರ್ಕಾರವನ್ನು ರಾಮ (ರಾಮಜಾದೆ) ಅಥವಾ ಕಿಡಿಗೇಡಿಗಳು (ಹರಾಮಜಾದೆ) ನಡೆಸುತ್ತಾರೆಯೇ ಎಂದು ನೀವು ನಿರ್ಧರಿಸಬೇಕು" ಎಂದು ಪ್ರತಿಪಕ್ಷದ ನಾಯಕನನ್ನು ಉಲ್ಲೇಖಿಸಿ ಹೇಳಿದರು. [೧೦] ಈ ಹೇಳಿಕೆ ಸಂಸತ್ತಿನಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. [೧೧] ನಂತರ ಅವರು ತಮ್ಮ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಲು ಮುಂದಾದರು. [೯]
{{cite news}}
: |archive-date=
requires |archive-url=
(help)CS1 maint: url-status (link)