ನಿರ್ಮಲ್ ವರ್ಮಾ | |
---|---|
![]() | |
ಜನನ | ಶಿಮ್ಲಾ, ಪಂಜಾಬ್, ಬ್ರಿಟಿಷ್ ಭಾರತ | ೩ ಏಪ್ರಿಲ್ ೧೯೨೯
ಮರಣ | 25 October 2005 ನವದೆಹಲಿ, ಭಾರತ | (aged 76)
ವೃತ್ತಿ | ಕಾದಂಬರಿಕಾರ, ಬರಹಗಾರ, ಕಾರ್ಯಕರ್ತ, ಅನುವಾದಕ |
ನಿರ್ಮಲ್ ವರ್ಮಾ (೩ ಏಪ್ರಿಲ್ ೧೯೨೯ - ೨೫ ಅಕ್ಟೋಬರ್ ೨೦೦೫) ಅವರು ಒಬ್ಬ ಹಿಂದಿ ಬರಹಗಾರ, ಕಾದಂಬರಿಕಾರ, ಕಾರ್ಯಕರ್ತ ಮತ್ತು ಅನುವಾದಕ. ಅವರು ಹಿಂದಿ ಸಾಹಿತ್ಯದ ನೈ ಕಹಾನಿ ಚಳವಳಿಯ ಪ್ರವರ್ತಕರಲ್ಲಿ ಒಬ್ಬರು.[೧] ಅವರ ಮೊದಲ ಕಥಾ ಸಂಗ್ರಹ 'ಪರಿಂದೆ' (ಹಕ್ಕಿಗಳು) ಅನ್ನು ಅವರ ಮೊದಲ ಸಹಿ ಎಂದು ಪರಿಗಣಿಸಲಾಗಿದೆ.[೨]
ಐದು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ ಅವರು ಸಾಹಿತ್ಯದ ವಿವಿಧ ಪ್ರಕಾರಗಳು, ಬರವಣಿಗೆ ಕಥೆ, ಪ್ರವಾಸ ಕಥನಗಳು ಮತ್ತು ಪ್ರಬಂಧಗಳನ್ನು, ಐದು ಕಾದಂಬರಿಗಳು, ಎಂಟು ಸಣ್ಣ-ಕಥೆಗಳ ಸಂಗ್ರಹಗಳು ಮತ್ತು ಪ್ರಬಂಧಗಳು ಮತ್ತು ಪ್ರವಾಸ ಕಥನಗಳು ಸೇರಿದಂತೆ ಒಂಬತ್ತು ಕಾಲ್ಪನಿಕವಲ್ಲದ ಪುಸ್ತಕಗಳನ್ನು ಬರೆದಿದ್ದಾರೆ.[೩]
ನಿರ್ಮಲ್ ವರ್ಮಾ ಅವರು ೩ ಏಪ್ರಿಲ್ ೧೯೨೯ ರಂದು ಶಿಮ್ಲಾದಲ್ಲಿ ಜನಿಸಿದರು. ಅಲ್ಲಿ ಅವರ ತಂದೆ ಬ್ರಿಟಿಷ್ ಭಾರತ ಸರ್ಕಾರದ ನಾಗರಿಕ ಮತ್ತು ಸೇವೆಗಳ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಎಂಟು ಒಡಹುಟ್ಟಿದವರಲ್ಲಿ ನಿರ್ಮಲ್ ವರ್ಮಾ ಅವರು ಏಳನೇ ಮಗು. ಅವರ ಸಹೋದರರಾದ ರಾಮ್ ಕುಮಾರ್ ಒಬ್ಬ ಭಾರತೀಯ ಕಲಾವಿದ ಮತ್ತು ಬರಹಗಾರರು.[೪] ಅವರು ಬರಹಗಾರ್ತಿಯಾಗಿರುವ ಗಗನ್ ಗಿಲ್ ಅವರನ್ನು ವಿವಾಹವಾದರು.[೫][೬]
ಅವರು ೧೯೫೦ ರ ದಶಕದ ಆರಂಭದಲ್ಲಿ ವಿದ್ಯಾರ್ಥಿಗಳ ಪತ್ರಿಕೆಗೆ ತಮ್ಮ ಮೊದಲ ಕಥೆಯನ್ನು ಬರೆದರು. ಅವರು ದೆಹಲಿ ವಿಶ್ವವಿದ್ಯಾನಿಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಇತಿಹಾಸದಲ್ಲಿ ಮಾಸ್ಟರ್ಸ್ ಆಫ್ ಆರ್ಟ್ಸ್ ಅನ್ನು ಪೂರ್ಣಗೊಳಿಸಿದರು. ನಂತರ ಅವರು ದೆಹಲಿಯಲ್ಲಿ ಬೋಧನೆ ಮಾಡಲು ಪ್ರಾರಂಭಿಸಿದರು. ವಿವಿಧ ಸಾಹಿತ್ಯ ನಿಯತಕಾಲಿಕೆಗಳಿಗೆ ಬರೆಯಲು ಪ್ರಾರಂಭಿಸಿದರು.
ಅವರ ವಿದ್ಯಾರ್ಥಿ ದಿನಗಳಲ್ಲಿಯೂ ಅವರ ಕ್ರಿಯಾಶೀಲತೆಯ ಹರಿವು ಗೋಚರಿಸಿತು. ೧೯೪೭-೪೮ ರಲ್ಲಿ, ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಕಾರ್ಡ್ ಹೋಲ್ಡಿಂಗ್ ಸದಸ್ಯರಾಗಿದ್ದರು ಸಹ ಅವರು ದೆಹಲಿಯಲ್ಲಿ ಮಹಾತ್ಮಾ ಗಾಂಧೀಜಿಯವರ ಬೆಳಗಿನ ಪ್ರಾರ್ಥನಾ ಸಭೆಗಳಿಗೆ ಹಾಜರಾಗುತ್ತಿದ್ದರು. ೧೯೫೬ ರಲ್ಲಿ ಹಂಗೇರಿಯ ಮೇಲೆ ಸೋವಿಯತ್ ಆಕ್ರಮಣದ ನಂತರ ಅವರು ರಾಜೀನಾಮೆಯನ್ನು ನೀಡಿದರು.
ಅವರು ೧೦ ವರ್ಷಗಳ ಕಾಲ ಪ್ರಾಗ್‌ನಲ್ಲಿ ಉಳಿದುಕೊಂಡರು. ಅಲ್ಲಿನ ಒರಿಯೆಂಟಲ್ ಇನ್ಸ್ಟಿಟ್ಯೂಟ್ ಅವರು ಕಾರೇಲ್ ಚಾಪೆಕ್, ಮಿಲಾನ್ ಕುಂಡೇರ, ಬೊಹುಮಿಲ್ ಹ್ರಬಲ್ ಹಾಗೂ ಇತರ ಆಧುನಿಕ ಚೆಕ್ ಬರಹಗಾರರ ಕೃತಿಗಳನ್ನು ಹಿಂದಿಯಲ್ಲಿ ಭಾಷಾಂತರಿಸುವ ಕಾರ್ಯಕ್ರಮವನ್ನು ಆರಂಭಿಸಲು ನಿರ್ಮಲ್ ವರ್ಮಾ ಅವರನ್ನು ಆಹ್ವಾನಿಸಿದರು. ಅವರು ಜೆಕ್ ಭಾಷೆಯನ್ನೂ ಸಹ ಕಲಿತರು.
ಅವರು ಪ್ರಾಗ್‌ನಲ್ಲಿದ್ದಾಗ ಯುರೋಪಿನಾದ್ಯಂತ ವ್ಯಾಪಕವಾಗಿ ಪ್ರಯಾಣಿಸಿದರು. ಚೀರೋನ್ ಪರ್ ಚಾಂದಿನಿ (೧೯೬೨), ಹರ್ ಬರಿಶ್ ಮೇ (೧೯೭೦) ಮತ್ತು ಧುಂಡ್ ಸೆ ಉತ್ತಿ ಧುನ್ ಸೇರಿದಂತೆ ಏಳು ಪ್ರವಾಸ ಕಥನಗಳು ಬರೆದರು. ಪ್ರೇಗ್‌ನಲ್ಲಿನ ಅವರ ವಿದ್ಯಾರ್ಥಿ ದಿನಗಳನ್ನು ಆಧರಿಸಿದ ಅವರ ಮೊದಲ ಕಾದಂಬರಿ ವೆ ದಿನ್ (ಆ ದಿನಗಳು) (೧೯೬೪) ಅನ್ನು ಬರೆದರು. ವರ್ಮಾ ಅವರ ಕೆಲಸದ ವಿಮರ್ಶಾತ್ಮಕ ವಿಶ್ಲೇಷಣೆಯನ್ನು ರಾಮ್ ಪ್ರಕಾಶ್ ದ್ವಿವೇದಿಯವರು ಪ್ರಸ್ತುತಪಡಿಸಿದರು.[೭]
೧೯೮೦-೮೩ ರಿಂದ, ವರ್ಮಾ ಅವರು ಭೋಪಾಲ್‌ನ ಭಾರತ್ ಭವನದಲ್ಲಿ ನಿರಾಲಾ ಸೃಜನಶೀಲ ಬರವಣಿಗೆಯ ಪೀಠದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ೧೯೮೮-೯೦ ರಲ್ಲಿ ಅವರು ಶಿಮ್ಲಾದಲ್ಲಿ ಯಶಪಾಲ್ ಕ್ರಿಯೇಟಿವ್ ರೈಟಿಂಗ್ ಚೇರ್‌ನ ನಿರ್ದೇಶಕರಾಗಿದ್ದರು.[೨] ಅವರ ಕಥೆಯನ್ನು ಆಧರಿಸಿದ ಕುಮಾರ್ ಶಹಾನಿ ನಿರ್ದೇಶಿಸಿದ ಮಾಯಾ ದರ್ಪಣ್ (೧೯೭೨) ಎಂಬ ಚಲನಚಿತ್ರಕ್ಕಾಗಿ ಫಿಲ್ಮ್‌ಫೇರ್ ವಿಮರ್ಶಕರ ಪ್ರಶಸ್ತಿಯನ್ನು ಗೆದ್ದುಕೊಂಡಿತು.[೮]
ನಿರ್ಮಲ್ ವರ್ಮಾ ಅವರು ೨೫ ಅಕ್ಟೋಬರ್ ೨೦೦೫ ರಂದು ನವದೆಹಲಿಯಲ್ಲಿ ನಿಧನರಾದರು.
ನಿರ್ಮಲ್ ವರ್ಮಾ, ಮೋಹನ್ ರಾಕೇಶ್, ಭಿಷಮ್ ಸಾಹ್ನಿ, ಕಮಲೇಶ್ವರ್, ಅಮರಕಾಂತ್, ರಾಜೇಂದ್ರ ಯಾದವ್ ಮತ್ತು ಇತರರೊಂದಿಗೆ ಸೇರಿ, ಹಿಂದಿ ಸಾಹಿತ್ಯದಲ್ಲಿ ನೈ ಕಹಾನಿಯ (ಹೊಸ ಸಣ್ಣ ಕಥೆ) ಸ್ಥಾಪಕರಾಗಿದ್ದಾರೆ.
ನಿರ್ಮಲ್ ವರ್ಮಾ ಅವರ ಸಣ್ಣ ಕಥೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಕಥೆಯಾದ 'ಪರಿಂಡೆ' (ಹಕ್ಕಿಗಳು) (೧೯೫೯) ಹಿಂದಿ ಸಾಹಿತ್ಯದಲ್ಲಿ ನೈ ಕಹಾನಿ ಚಳವಳಿಯ ಪ್ರವರ್ತಕ ಎಂದು ಭಾವಿಸಲಾಗಿದೆ.[೪] ಅಂಧೆರೆ ಮೇ, ದೇಧ್ ಇಂಚ್ ಉಪರ್ ಮತ್ತು ಕವ್ವೆ ಔರ್ ಕಾಲಾ ಪಾನಿ ಇವುಗಳು ನಿರ್ಮಲ್ ವರ್ಮಾ ಅವರ ಇತರ ಕಥೆಗಳು. ನಿರ್ಮಲ್ ವರ್ಮಾ ಅವರ ಕೊನೆಯ ಕಥೆಯು "ನಯ ಜ್ಞಾನೋದಯ" ಆಗಸ್ಟ್ ೨೦೦೫ ರ ಸಂಚಿಕೆಯಲ್ಲಿ "ಅಬ್ ಕುಛ್ ನಹಿನ್" ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಯಿತು.
ರಾಮಕುಮಾರ್ (ಪ್ರಸಿದ್ಧ ಕಲಾವಿದ ಮತ್ತು ವರ್ಮಾ ಅವರ ಸಹೋದರ) ಅವರಿಗೆ ಬರೆದ ಪತ್ರಗಳ ಸಂಗ್ರಹವನ್ನು ಭಾರತೀಯ ಜ್ಞಾನಪೀಠವು "ಪ್ರಿಯಾ ರಾಮ್" (ಡಿಯರ್ ರಾಮ್) ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದೆ. ಅವರ ಪುಸ್ತಕಗಳನ್ನು ಇಂಗ್ಲಿಷ್, ರಷ್ಯನ್, ಜರ್ಮನ್, ಐಸ್ಲ್ಯಾಂಡಿಕ್, ಪೋಲಿಷ್, ಇಟಾಲಿಯನ್ ಮತ್ತು ಫ್ರೆಂಚ್ ಮುಂತಾದ ಹಲವಾರು ಯುರೋಪಿಯನ್ ಭಾಷೆಗಳಿಗೆ ಅನುವಾದಿಸಲಾಗಿದೆ.
ಕಥಾ ಸಂಕಲನಗಳು
ವರದಿ ಮತ್ತು ಪ್ರವಾಸ ಕಥನಗಳು
ನಾಟಕಗಳು
ಪ್ರಬಂಧಗಳು ಮತ್ತು ಸಾಹಿತ್ಯ ವಿಮರ್ಶೆ