ನೀತು ಡೇವಿಡ್

ನೀತು ಡೇವಿಡ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ನೀತು ಲಾರೆನ್ಸ್ ಡೇವಿಡ್
ಹುಟ್ಟು (1977-09-01) 1 September 1977 (ವಯಸ್ಸು 47)
ಕಾನ್ಪುರ್, ಉತ್ತರ ಪ್ರದೇಶ, ಭಾರತ
ಬ್ಯಾಟಿಂಗ್ಬಲಗೈ
ಬೌಲಿಂಗ್ನಿಧಾನಗತಿಯ ಎಡಗೈ ಆರ್ಥೊಡಾಕ್ಸ್
ಪಾತ್ರಚೆಂಡು ಎಸೆಯುವವರು
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
  • India (೧೯೯೫–೨೦೦೮)
ಟೆಸ್ಟ್ ಚೊಚ್ಚಲ (ಕ್ಯಾಪ್ ೩೯)೭ ಫೆಬ್ರವರಿ ೧೯೯೫ v ನ್ಯೂಜಿಲೆಂಡ್
ಕೊನೆಯ ಟೆಸ್ಟ್೧೮ ಫೆಬ್ರವರಿ ೨೦೦೬ v ಇಂಗ್ಲೆಂಡ್
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೪೩)೧೨ ಫೆಬ್ರವರಿ ೧೯೯೫ v ನ್ಯೂಜಿಲೆಂಡ್
ಕೊನೆಯ ಅಂ. ಏಕದಿನ​೭ ಸೆಪ್ಟೆಂಬರ್ ೨೦೦೮ v ಇಂಗ್ಲೆಂಡ್
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
೧೯೯೨/೯೩–೧೯೯೪/೯೫ಉತ್ತರ ಪ್ರದೇಶ
೧೯೯೬/೯೭–೨೦೧೨/೧೩ರೈಲ್ವೆಗಳು
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಡಬ್ಲ್ಯೂ‌ಟೆಸ್ಟ್ ಡಬ್ಲ್ಯೂ‌ಒ‌ಡಿಐ ಡಬ್ಲ್ಯೂ‌ಎಫ್‌ಸಿ ಡಬ್ಲ್ಯೂ‌ಎಲ್‌ಎ
ಪಂದ್ಯಗಳು ೧೦ ೯೭ ೩೮ ೨೦೫
ಗಳಿಸಿದ ರನ್ಗಳು ೨೫ ೭೪ ೩೯ ೧೦೪
ಬ್ಯಾಟಿಂಗ್ ಸರಾಸರಿ ೬.೨೫ ೪.೯೩ ೬.೫೦ ೬.೧೧
೧೦೦/೫೦ ೦/೦ ೦/೦ ೦/೦ ೦/೦
ಉನ್ನತ ಸ್ಕೋರ್ ೧೧ ೧೮* ೧೧ ೨೯*
ಎಸೆತಗಳು ೨,೬೬೨ ೪,೮೯೨ ೪,೯೬೫ ೯,೪೨೪
ವಿಕೆಟ್‌ಗಳು ೪೧ ೧೪೧ ೧೧೫ ೩೩೦
ಬೌಲಿಂಗ್ ಸರಾಸರಿ ೧೮.೯೦ ೧೬.೩೪ ೧೩.೬೭ ೧೨.೭೮
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೮/೫೩ ೫/೨೦ ೮/೫೩ ೫/೩
ಹಿಡಿತಗಳು/ ಸ್ಟಂಪಿಂಗ್‌ ೪/– ೨೧/– ೧೧/– ೪೦/–
ಮೂಲ: CricketArchive, 15 August 2022
Medal record
Representing  ಭಾರತ
ಮಹಿಳಾ ಕ್ರಿಕೆಟ್
ವಿಶ್ವಕಪ್
Second place ೨೦೦೫ ದಕ್ಷಿಣ ಆಫ್ರಿಕಾ

ನೀತು ಲಾರೆನ್ಸ್ ಡೇವಿಡ್ (ಜನನ ೧ ಸೆಪ್ಟೆಂಬರ್ ೧೯೭೭) ಇವರು ಭಾರತೀಯ ಮಾಜಿ ಕ್ರಿಕೆಟ್ ಆಟಗಾರ್ತಿ ಹಾಗೂ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.[] ಇವರು ನಿಧಾನಗತಿಯ ಎಡಗೈ ಆರ್ಥೊಡಾಕ್ಸ್ ಬೌಲರ್ ಆಗಿ ಆಡಿದರು. ೧೯೯೫ ಮತ್ತು ೨೦೦೮ ರ ನಡುವೆ ಅವರು ಭಾರತಕ್ಕಾಗಿ ೧೦ ಟೆಸ್ಟ್ ಪಂದ್ಯಗಳು ಮತ್ತು ೯೭ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡರು. ಅವರು ಉತ್ತರ ಪ್ರದೇಶ ಮತ್ತು ರೈಲ್ವೆಗಾಗಿ ದೇಶೀಯ ಕ್ರಿಕೆಟ್ ಆಡಿದರು.[][]

ನವೆಂಬರ್ ೧೯೯೫ ರಲ್ಲಿ, ಇಂಗ್ಲೆಂಡ್ ವಿರುದ್ಧ ೮/೫೩ ವಿಕೆಟ್ ಪಡೆಯುವ ಮೂಲಕ ಡೇವಿಡ್‌ರವರು ಮಹಿಳಾ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳ ದಾಖಲೆಯನ್ನು ಹೊಂದಿದ್ದಾರೆ.[] ಈ ಪಂದ್ಯದಲ್ಲಿ ಅವರ ಬೌಲಿಂಗ್ ಅಂಕಿಅಂಶಗಳು ೯/೯೦ ಆಗಿತ್ತು.[] ಇದರಲ್ಲಿ, ಭಾರತವು ಎರಡು ರನ್‌ಗಳಿಂದ ಸೋತಿತು.[] ಇವು ಮಹಿಳಾ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳಾಗಿವೆ.[][] ಅವರು ವಿಶ್ವ ಟಿ ಕ್ರಿಕೆಟ್‍ನಲ್ಲಿ ಭಾರತದ ನಾಲ್ಕನೇ ಅತಿ ಹೆಚ್ಚು ಸಾರ್ವಕಾಲಿಕ ವಿಕೆಟ್ ಪಡೆದವರು ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಭಾರತಕ್ಕಾಗಿ ಎರಡನೇ ಅತಿ ಹೆಚ್ಚು ಸಾರ್ವಕಾಲಿಕ ವಿಕೆಟ್ ಪಡೆದವರು. ಅವರು ೧೦೦ ಏಕದಿನ ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಆಗಿದ್ದರು.[]

೨೦೦೬ ರ ರಾಣಿ ಝಾನ್ಸಿ ಟ್ರೋಫಿಯ ನಂತರ, ಡೇವಿಡ್‌ರವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು..[೧೦][೧೧] ಫೈನಲ್‌ನಲ್ಲಿ ಏರ್ ಇಂಡಿಯಾ ವಿರುದ್ಧ ರೈಲ್ವೇಸ್ ಪರ ೩/೧೯ ಪಂದ್ಯ ವಿಜೇತ ಅಂಕಿಅಂಶಗಳೊಂದಿಗೆ ಗೆದ್ದರು. ಆದರೆ, ಅವರು ೨೦೦೮ ರಲ್ಲಿ, ಈ ನಿರ್ಧಾರವನ್ನು ಬದಲಾಯಿಸಿದರು. ತರುವಾಯ ಭಾರತದ ಏಷ್ಯಾ ಕಪ್ ತಂಡಕ್ಕೆ ಆಯ್ಕೆಯಾದರು. ಅವರು ೨೦೦೮ ರಲ್ಲಿ, ಭಾರತದ ಇಂಗ್ಲೆಂಡ್ ಪ್ರವಾಸದಲ್ಲಿ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದರು.[೧೨] ಅವರು ೨೦೧೩ ರಲ್ಲಿ, ತಮ್ಮ ಕೊನೆಯ ದೇಶೀಯ ಪಂದ್ಯವನ್ನು ಆಡಿದರು. ರೈಲ್ವೆಯೊಂದಿಗೆ ೨೦೧೨–೧೩ ರ ಹಿರಿಯ ಮಹಿಳಾ ಟಿ ೨೦ ಲೀಗ್‌ನ ಫೈನಲ್ ಗೆದ್ದರು.[೧೩]

ಸೆಪ್ಟೆಂಬರ್ ೨೦೨೦ ರಲ್ಲಿ, ಭಾರತದ ಮಹಿಳಾ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಡೇವಿಡ್ ಅವರ ನೇಮಕವನ್ನು ಘೋಷಿಸಲಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. "Neetu David to lead new Indian women's selection committee". ESPNcricinfo. Retrieved 15 August 2022.
  2. "Player Profile: Neetu David". ESPNcricinfo. Retrieved 15 August 2022.
  3. "Player Profile: Neetu David". CricketArchive. Retrieved 15 August 2022.
  4. "Records/Women's Test Matches/Bowling Records/Best Figures in an Innings". ESPNcricinfo. Retrieved 15 August 2022.
  5. "Full Scorecard of ENG Women vs IND Women 2nd Test 1995/96 - Score Report". ESPNcricinfo. Retrieved 2022-11-19.
  6. "Records. Women's Test matches. Bowling records. Best figures in a match when on the losing side". ESPNcricinfo. Retrieved 2022-11-19.
  7. "Records/Women's Test Matches/Bowling Records/Most wickets". ESPNcricinfo. Retrieved 15 August 2022.
  8. "Records/Women's One Day Internationals/Bowling Records/Most wickets". ESPNcricinfo. Retrieved 15 August 2022.
  9. "Leading Ladies: First to 100 ODI wickets from each team". Women's CricZone. Retrieved 6 June 2020.
  10. "CA details". CricketArchive. Retrieved 2022-11-24.
  11. "Neetu David retires from international cricket". ESPNcricinfo. Archived from the original on 27 ಮೇ 2008. Retrieved 15 August 2022.
  12. "England Women v India Women, 7th September 2008". CricketArchive. Retrieved 15 August 2022.
  13. "Hyderabad Women v Railways Women, 14th March 2013". CricketArchive. Retrieved 15 August 2022.


ಬಾಹ್ಯ ಕೊಂಡಿಗಳು

[ಬದಲಾಯಿಸಿ]