ನೂರಾನ್ ಸಹೋದರಿಯರು | |
---|---|
ಮೂಲಸ್ಥಳ | ಜಲಂಧರ, ಭಾರತ |
ಸಂಗೀತ ಶೈಲಿ | ಶಾಮ ಚೌರಾಸಿಯಾ ಘರಾನಾ |
ಸಕ್ರಿಯ ವರ್ಷಗಳು | ೨೦೧೦ | –ಪ್ರಸ್ತುತ
ಸಧ್ಯದ ಸದಸ್ಯರು |
|
ನೂರಾನ್ ಸಹೋದರಿಯರು - ಜ್ಯೋತಿ ನೂರಾನ್ ಮತ್ತು ಸುಲ್ತಾನಾ ನೂರಾನ್ - ಭಾರತದ ಜಲಂಧರ್ನ ಸೂಫಿ ಗಾಯನದ ಜೋಡಿಗಳು. ಅವರು ಶಾಮ್ ಚೌರಾಸಿಯಾ ಘರಾನಾ ಶಾಸ್ತ್ರೀಯ ಸಂಗೀತದಲ್ಲಿ ಪ್ರದರ್ಶಿಸುತಿದ್ದರು.
ಈ ಸಹೋದರಿಯರಿಗೆ ಬಾಲ್ಯದಿಂದಲೂ ಅವರ ತಂದೆ ಉಸ್ತಾದ್ ಗುಲ್ಶನ್ ಮಿರ್ ತಮ್ಮ ಮಕ್ಕಳಿಗೆ ಸಂಗೀತ ತರಬೇತಿಯನ್ನು ನೀಡಿದರು. ಉಸ್ತಾದ್ ಗುಲ್ಶನ್ ಮಿರ್ ಅವರು ಬೀಬಿ ನೂರಾನ್ ಅವರ ಮೊಮ್ಮಗ ಮತ್ತು ೧೯೭೦ ರ ದಶಕದ ಸೂಫಿ ಗಾಯಕ ಸ್ವರ್ಣ್ ನೂರಾನ್ ಅವರ ಮಗ. ಉಸ್ತಾದ್ ಗುಲ್ಶನ್ ಮಿರ್ ಅವರ ಪ್ರಕಾರ, ತನ್ನ ಕುಟುಂಬವು ಕಷ್ಟದ ಸಮಯದಲ್ಲಿದ್ದಾಗ, ಬೆಂಬಲಕ್ಕಾಗಿ ಸಂಗೀತ ಪಾಠಗಳನ್ನು ಹೇಳಿಕೊಡುತ್ತಿದ್ದರು.[೧]
ಸುಲ್ತಾನಾ ನೂರಾನ್ಗೆ ಏಳು ವರ್ಷ ಮತ್ತು ಜ್ಯೋತಿ ನೂರಾನ್ಗೆ ಐದು ವರ್ಷವಾಗಿದ್ದಾಗ, ತಮ್ಮ ಅಜ್ಜಿಯಿಂದ ಕೇಳಿದ್ದ ಬುಲ್ಲೆಹ್ ಶಾ ಕಲಾಂ ಅವರ 'ಕುಲ್ಲಿ ವಿಚೋನ್ ನಿ ಯಾರ್ ಲಬ್ ಲೈ' ಎಂಬ ಹಾಡನ್ನು ಮನೆಯಲ್ಲಿ ಆಡುತ್ತಿದ್ದಾಗ ಹಾಡುತ್ತಿರುವುದನ್ನು ಕಂಡ ಗುಲ್ಶನ್ ಮಿರ್ ಅವರ ಪ್ರತಿಭೆಯನ್ನು ಕಂಡುಹಿಡಿದರು. ನಂತರ ಉಸ್ತಾದ್ ಗುಲ್ಶನ್ ಮಿರ್ ಅವರು ಇತರ ಸಂಗೀತ ವಾದ್ಯಗಳೊಂದಿಗೆ ಹಾಡಬಹುದೇ ಎಂದು ಸುಲ್ತಾನಾ ಮತ್ತು ಜ್ಯೋತಿಯನ್ನು ಕೇಳಿದರು. ತಬಲಾ ಮತ್ತು ಹಾರ್ಮೋನಿಯಂನೊಂದಿಗೆ ವೃತ್ತಿಪರವಾಗಿ ಹಾಡುತ್ತಿದ್ದ ಸುಲ್ತಾನಾ ಮತ್ತು ಜ್ಯೋತಿಯವರು ಸ್ವಲ್ಪವೂ ತಪ್ಪುತ್ತಿರಲ್ಲಿಲ್ಲ. ಕೆನಡಾದ ಸಂಗೀತ ಪ್ರವರ್ತಕರಾದ ಇಕ್ಬಾಲ್ ಮಹಲ್ ಅವರು ೨೦೧೦ ರಲ್ಲಿ ಈ ಸಹೋದರಿಯರನ್ನು ಗುರುತಿಸಿದರು ಮತ್ತು ಅವರ ಯಶಸ್ಸಿನಲ್ಲಿ ದೊಡ್ಡ ಪಾತ್ರವನ್ನು ವಹಿಸಿದರು. ೨೦೧೩ ರಲ್ಲಿ, ಅವರು ಮೊದಲ ಬಾರಿಗೆ ನಾಕೋದರ್ನ ಬಾಬಾ ಮುರಾದ್ ಶಾ ದರ್ಗಾದಲ್ಲಿ ಈ ಸಹೋದರಿಯರು ಪ್ರದರ್ಶನ ನೀಡಿದರು ಮತ್ತು ಆ ರಾತ್ರಿಯಿಂದ ಅವರು ಜನಪ್ರಿಯರಾದರು. ಅವರ ಅಲ್ಲಾ ಹೂ ಹಾಡು ಯೂಟ್ಯೂಬ್ನಲ್ಲಿ ಪ್ರಸಿದ್ಧವಾಗಿಯತ್ತು. ಅದರ ನಂತರ, ಮೇ ಯಾರ್ ದ ದಿವಾನಾ" ಮತ್ತು ಪಟಾಖಾ ಗುಡ್ಡಿ ಮುಂತಾದ ಹಾಡುಗಳನ್ನು ಜೋಡಿಯಾಗಿ ಹಾಡಿ ಜನಪ್ರಿಯತೆಯನ್ನು ಗಳಿಸಿದರು. ಅವರು ಬಾಲಿವುಡ್ ಚಲನಚಿತ್ರಗಳಲ್ಲಿ ಅನೇಕ ಹಾಡುಗಳನ್ನು ಹಾಡಿದ್ದಾರೆ.
ಅವರು ಹರ್ಪಾಲ್ ತಿವಾನಾ ಸೆಂಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ (ಹೆಚ್.ಟಿ.ಸಿ.ಪಿ.ಎಯಲ್ಲಿ) ದಿವಂಗತ ಗಝಲ್ ಮಾಂತ್ರಿಕ ಜಗಜಿತ್ ಸಿಂಗ್ ಅವರ ೭೨ ನೇ ಜನ್ಮದಿನದ ಪಾರ್ಟಿಯಲ್ಲಿ ಪ್ರದರ್ಶನ ನೀಡಿದರು ಮತ್ತು ಪಟಿಯಾಲ, ಪಂಜಾಬ್ದ ಭಾರತೀಯ ನಿವಾಸಿಗಳಿಂದ ಮೆಚ್ಚುಗೆಯನ್ನು ತಮ್ಮ ಪ್ರತಿಭೆಯ ಮೂಲಕ ಪಡೆದುಕೊಂಡರು. ಅವರು ಭಾರತದ ಎಮ್ಟಿವಿ ಟ್ಯಾಲೆಂಟ್ ಹಂಟ್ ಸರಣಿಯ ಎಮ್ಟಿವಿ ಸೌಂಡ್ ಟ್ರಿಪ್ಪಿಂಗ್ನಲ್ಲಿ ತಮ್ಮ "ಟುಂಗ್ ಟುಂಗ್" ಹಾಡಿನಿಂದ, ಮತ್ತು ನಂತರದಲ್ಲಿ ಎಮ್ಟಿವಿ ಅನ್ಪ್ಲಗ್ಡ್ ಮತ್ತು ಕೋಕ್ ಸ್ಟುಡಿಯೋದಿಂದ ಖ್ಯಾತಿಯನ್ನು ಗಳಿಸಿದರು. ಅವರು ೨೦೧೬ ಮತ್ತು ೨೦೧೭ ರಲ್ಲಿ ಢಾಕಾ ಇಂಟರ್ನ್ಯಾಷನಲ್ ಫೋಕ್ ಫೆಸ್ಟ್ ನಲ್ಲಿ ಪ್ರದರ್ಶನ ನೀಡಿದರು. ದಿ ಸ್ಕೈ ಈಸ್ ಪಿಂಕ್ ಎಂಬ ಚಲನಚಿತ್ರದಲ್ಲಿ ಕಾಣಿಸಿಕೊಂಡ 'ಫಾರ್ ಆಯಿಶಾ' ಎಂಬ ಹಾಡಿಗಾಗಿ ಅವರು ಮೆಂಬ(ಎಮ್.ಇ.ಎಮ್.ಬಿ.ಎ) ಮತ್ತು ಇವಾನ್ ಗಿಯಾರೊಂದಿಗೆ ಸಹಕರಿಸಿದರು.
ಅವರು ೨೦೧೪ ರಲ್ಲಿ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರೊಂದಿಗೆ ಹೈವೇ ಚಿತ್ರದಲ್ಲಿ ಪಟಖಾ ಗುಡ್ಡಿ ಹಾಡಿನ ಮೂಲಕ ಬಾಲಿವುಡ್ನಲ್ಲಿ ತಮ್ಮ ಮೊದಲ ಅವಕಾಶವನ್ನು ಪಡೆದರು. ಅವರು ಹಾಡಿರುವ ಚಲನಚಿತ್ರಗಳು ಸುಲ್ತಾನ್, ಮಿರ್ಜ್ಯಾ, ದಂಗಲ್, ಜಬ್ ಹ್ಯಾರಿ ಮೀಟ್ ಸೇಜಲ್ ಮತ್ತು ಭಾರತ್.