ನೆರಳು (ಛಾಯೆ) ಎಂದರೆ ಯಾವುದೇ ವಸ್ತುವು ಸೂರ್ಯನ ಬೆಳಕನ್ನು (ವಿಶೇಷವಾಗಿ ನೇರ ಬಿಸಿಲನ್ನು) ತಡೆಗಟ್ಟುವುದು, ಮತ್ತು ಆ ವಸ್ತುವಿನಿಂದ ಸೃಷ್ಟಿಯಾದ ಛಾಯೆ ಕೂಡ ಆಗಿದೆ. ನೆರಳು ಕೂಡ ಬೂದು, ಕಪ್ಪು, ಬಿಳಿ, ಇತ್ಯಾದಿ ಬಣ್ಣಗಳನ್ನು ಹೊಂದಿರುತ್ತದೆ. ಇದು ಛಾವಣಿ, ಮರ, ಕೊಡೆ, ಕಿಟಕಿ ತೆರೆ ಅಥವಾ ತಡಿಕೆ, ಪರದೆಗಳು, ಅಥವಾ ಇತರ ವಸ್ತುಗಳಿಂದಾಗುವ ಸೂರ್ಯನ ಬೆಳಕಿನ ತಡೆಗಟ್ಟುವಿಕೆಯನ್ನು ಸೂಚಿಸಬಹುದು.
ಸಮಶೀತೋಷ್ಣ ಮತ್ತು ಉಷ್ಣ ವಲಯಗಳಲ್ಲಿ (ಭೂಮಿಯ ಮೇಲಿನ ಬಹುತೇಕ ಸ್ಥಳಗಳು), ಸೂರ್ಯನು ಹೊರಸೂಸಿದ ಹಾನಿಕಾರಕ ಶಾಖ ಮತ್ತು ಅತಿನೇರಳೆ ವಿಕಿರಣದಿಂದ ತಂಪು ಮತ್ತು ಆಶ್ರಯ ಒದಗಿಸುವಲ್ಲಿ ನೆರಳು ಮುಖ್ಯ ವಿಷಯವಾಗಿದೆ.
ಸಕ್ಕರೆಯನ್ನು ಉತ್ಪಾದಿಸಲು ದ್ಯುತಿಸಂಶ್ಲೇಷಣೆಯಲ್ಲಿ ಶಕ್ತಿಯಾಗಿ ಹೂಡಲು ಸೂರ್ಯನ ಬೆಳಕನ್ನು ಹೀರಿಕೊಳ್ಳುವ ಮೂಲಕ ಹಸಿರು ಸಸ್ಯಗಳು ನೆರಳನ್ನು ಸೃಷ್ಟಿಸುತ್ತವೆ. ಅವು ಸಕ್ರೀಯವಾಗಿ ಬಾಷ್ಪವನ್ನು ವಿಸರ್ಜಿಸಿ ಕೂಡ, ಹೆಚ್ಚುವರಿ ತಂಪು ಪರಿಣಾಮವನ್ನು ಉಂಟುಮಾಡುತ್ತವೆ.