ನೇಮಿ ಎಂದರೆ ಟೈರನ್ನು ಹಿಡಿದಿಡುವ ಗಾಲಿಯ ಹೊರ ಅಂಚು.[೧] ಇದು ಗಾಲಿಯ ಹೊರಗಿನ ವೃತ್ತಾಕಾರದ ವಿನ್ಯಾಸವನ್ನು ರಚಿಸುತ್ತದೆ. ಮೋಟಾರು ವಾಹನಗಳಂತಹ ವಾಹನಗಳಲ್ಲಿ ಇದರ ಮೇಲೆ ಟೈರ್‌ನ ಒಳಗಿನ ಅಂಚನ್ನು ಕೂರಿಸಲಾಗುತ್ತದೆ. ಉದಾಹರಣೆಗೆ, ಸೈಕಲ್‍ನ ಗಾಲಿಯಲ್ಲಿ ನೇಮಿಯು ಗಾಲಿಯ ಕಡ್ಡಿಗಳ ಹೊರ ತುದಿಗಳಿಗೆ ಜೋಡಿಸಲಾದ ದೊಡ್ಡದಾದ ದುಂಡುಕಟ್ಟಾಗಿರುತ್ತದೆ ಮತ್ತು ಟೈರ್ ಹಾಗೂ ಟ್ಯೂಬ್‍ನ್ನು ಹಿಡಿದಿಡುತ್ತದೆ. ಅಡ್ಡಕೊಯ್ತದಲ್ಲಿ ನೋಡಿದಾಗ, ನೇಮಿಯು ಮಧ್ಯದಲ್ಲಿ ಆಳವಾಗಿದ್ದು ಹೊರ ಅಂಚುಗಳಲ್ಲಿ ಆಳವಿರುವುದಿಲ್ಲ. ಹಾಗಾಗಿ "U" ಆಕಾರವನ್ನು ರಚಿಸಿ ಟೈರ್ ಕವಚದ ಬೀಡ್‍ಗೆ ಆಧಾರ ಒದಗಿಸುತ್ತದೆ.[೨]
ಕ್ರಿ.ಪೂ. ೧ನೇ ಸಹಸ್ರಮಾನದಲ್ಲಿ, ಒರಟಾದ ಮೇಲ್ಮೈಗಳ ಮೇಲೆ ಆಯಸ್ಸನ್ನು ಸುಧಾರಿಸಲು ರಥಗಳ ಕಟ್ಟಿಗೆಯ ಗಾಲಿಗಳ ಸುತ್ತ ಕಬ್ಬಿಣದ ನೇಮಿಯನ್ನು ಪರಿಚಯಿಸಲಾಯಿತು.[೩]