ವಯಕ್ತಿಕ ಮಾಹಿತಿ | |
---|---|
ಪೂರ್ಣ ಹೆಸರು | ನೋಸ್ತಶ್ ಪ್ರದೀಪ್ ಕೆಂಜಿಗೆ |
ಹುಟ್ಟು | ಆಬರ್ನ್, ಅಲಬಾಮಾ, ಅಮೇರಿಕ ಸಂಯುಕ್ತ ಸಂಸ್ಥಾನ | ೨ ಮಾರ್ಚ್ ೧೯೯೧
ಬ್ಯಾಟಿಂಗ್ | ಎಡಗೈ ದಾಂಡಿಗ |
ಬೌಲಿಂಗ್ | ನಿಧಾನವಾದ ಎಡಗೈ ಸಾಂಪ್ರದಾಯಿಕ ಬೌಲಿಂಗ್ |
ಪಾತ್ರ | ಆಲ್ ರೌಂಡರ್ |
ಅಂತಾರಾಷ್ಟ್ರೀಯ ಮಾಹಿತಿ | |
ರಾಷ್ಟೀಯ ತಂಡ |
|
ಅಂ. ಏಕದಿನ ಚೊಚ್ಚಲ (ಕ್ಯಾಪ್ ೨೮) | ೮ ಡಿಸೆಂಬರ್ ೨೦೧೯ v ಸಂಯುಕ್ತ ಅರಬ್ ಸಂಸ್ಥಾನ |
ಟಿ೨೦ಐ ಚೊಚ್ಚಲ (ಕ್ಯಾಪ್ ೩೦) | ೭ ಏಪ್ರಿಲ್ ೨೦೨೪ v ಕೆನಡಾ |
ದೇಶೀಯ ತಂಡದ ಮಾಹಿತಿ | |
ವರ್ಷಗಳು | ತಂಡ |
೨೦೨೩ | ಎಂ.ಐ ನ್ಯೂಯಾರ್ಕ್ |
ಮೂಲ: Cricinfo, ೭ ಏಪ್ರಿಲ್ ೨೦೨೪ |
ನೋಸ್ತಶ್ ಪ್ರದೀಪ್ ಕೆಂಜಿಗೆ (ಜನನ ಮಾರ್ಚ್ ೨, ೧೯೯೧) ಒಬ್ಬ ಅಮೇರಿಕನ್ ಕ್ರಿಕೆಟಿಗ, ಇವರು ಮೇ ೨೦೧೭ ರಲ್ಲಿ ಉಗಾಂಡದಲ್ಲಿ ನಡೆದ ೨೦೧೭ ಐಸಿಸಿ ವರ್ಲ್ಡ್ ಕ್ರಿಕೆಟ್ ಲೀಗ್ ಡಿವಿಷನ್ ಮೂರು ನಲ್ಲಿ ಯು.ಎಸ್ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದರು. [೧] ಅವರು ಎಡಗೈ ಬ್ಯಾಟ್ಸ್‌ಮನ್ ಮತ್ತು ಎಡಗೈ ಸಾಂಪ್ರದಾಯಿಕ ಬೌಲರ್.
ಜನವರಿ ೨೦೧೮ ರಲ್ಲಿ, ವೆಸ್ಟ್ ಇಂಡೀಸ್‌ನಲ್ಲಿ ನಡೆದ ೨೦೧೭-೧೮ ಪ್ರಾದೇಶಿಕ ಸೂಪರ್50 ಪಂದ್ಯಾವಳಿಗಾಗಿ ಅಮೇರಿಕ ಸಂಯುಕ್ತ ತಂಡದಲ್ಲಿ ಅವರನ್ನು ಹೆಸರಿಸಲಾಯಿತು. [೨] ಜನವರಿ ೩೧, ೨೦೧೮ ರಂದು ೨೦೧೭-೧೮ ಪ್ರಾದೇಶಿಕ ಸೂಪರ್50 ನಲ್ಲಿ ಲೀವಾರ್ಡ್ ದ್ವೀಪಗಳ ವಿರುದ್ಧ ಯುನೈಟೆಡ್ ಸ್ಟೇಟ್ಸ್‌ಗಾಗಿ ಅವರು ತಮ್ಮ ಲಿಸ್ಟ್ ಎ ಚೊಚ್ಚಲ ಪಂದ್ಯವನ್ನು ಆಡಿದರು [೩]
ಡಿಸೆಂಬರ್ ೨೦೧೯ ರಲ್ಲಿ, ಅವರು ೨೦೧೯ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿಗಾಗಿ ಅಮೇರಿಕ ಸಂಯುಕ್ತ ಸಂಸ್ಥಾನದ ಏಕದಿನ ಅಂತರರಾಷ್ಟ್ರೀಯ (ODI) ತಂಡದಲ್ಲಿ ಹೆಸರಿಸಲ್ಪಟ್ಟರು. [೪] ಅವರು ಯುನೈಟೆಡ್ ಸ್ಟೇಟ್ಸ್‌ಗಾಗಿ ತಮ್ಮ ODI ಚೊಚ್ಚಲ ಪಂದ್ಯವನ್ನು ಡಿಸೆಂಬರ್ 8, 2019 ರಂದು ಸಂಯುಕ್ತ ಅರಬ್ ಸಂಸ್ಥಾನ ವಿರುದ್ಧ ಆಡಿದರು [೫]
ಮಾರ್ಚ್ ೨೦೨೪ ರಲ್ಲಿ, ಕೆನಡಾ ವಿರುದ್ಧದ T20I ಸರಣಿಗಾಗಿ ಯುನೈಟೆಡ್ ಸ್ಟೇಟ್ಸ್ ತಂಡದಲ್ಲಿ ಅವರನ್ನು ಹೆಸರಿಸಲಾಯಿತು. [೬] ಅವರು ೭ ಏಪ್ರಿಲ್ ೨೦೨೪ ರಂದು ಕೆನಡಾ ವಿರುದ್ಧ ಯು.ಎಸ್.ಎ ಗಾಗಿ T20I ಪಾದಾರ್ಪಣೆ ಮಾಡಿದರು. [೭]