ಪಂಪಾ ಸರೋವರ (ಲಿಪಿ:- ದೇವನಾಗಿರಿ: पंप सरोवर; ಕನ್ನಡ: ಪಂಪ ಸರೋವರ) ಕರ್ನಾಟಕದ ಹಂಪಿ ಬಳಿಯ ಕೊಪ್ಪಳ ಜಿಲ್ಲೆಯಲ್ಲಿದೆ. ತುಂಗಭದ್ರ ನದಿಯ ದಕ್ಷಿಣ ಭಾಗದಲ್ಲಿ ಇರುವ ಪಂಪಾ ಸರೋವರ ಹಿಂದೂಗಳು ಪವಿತ್ರ ಸರೋವರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ ಐದು ಪವಿತ್ರ ಸರೋವರಗಳಿದ್ದು, ಅವುಗಳನ್ನು ಪಂಚ ಸರೋವರ ಎಂದು ಕರೆಯುತ್ತಾರೆ. ಅವುಗಳೆಂದರೆ, ಮಾನಸ ಸರೋವರ, ಬಿಂದು ಸರೋವರ, ನಾರಾಯಣ ಸರೋವರ, ಪಂಪಾ ಸರೋವರ ಮತ್ತು ಪುಷ್ಕರ ಸರೋವರ . [೧] ಇವುಗಳನ್ನು ಶ್ರೀಮದ್ ಭಾಗವತ ಪುರಾಣದಲ್ಲಿಯೂ ಉಲ್ಲೇಖಿಸಲಾಗಿದೆ. [೧] ಹಿಂದೂ ಧರ್ಮಗ್ರಂಥಗಳ ಪ್ರಕಾರ ಪಾರ್ವತಿಯು ತನ್ನ ಪತಿಯಾದ ಶಿವನ ಮೇಲಿನ ಭಕ್ತಿಯನ್ನು ತನ್ನ ನೃತ್ಯದ ಮೂಲಕ ತೋರಿಸಿದ ಸ್ಥಳ [೨] ಇದೇ ಸರೋವರದ ಸಮೀಪ ರಾಮನ ಭಕ್ತೆಯಾದ ಶಬರಿಯು ರಾಮನ ಆಗಮನಕ್ಕಾಗಿ ಕಾಯುತ್ತಿದ್ದ ಳೆಂದು ಹಿಂದೂ ಮಹಾಕಾವ್ಯವಾದ ರಾಮಾಯಣದಲ್ಲಿ ಉಲ್ಲೇಖ ನೀಡಲಾಗಿದೆ.
ಪಂಪಾ ಸರೋವರ ಹೊಸಪೇಟೆಯಿಂದ ಆನೆಗುಂಡಿಗೆ ಹೋಗುವ ರಸ್ತೆಯ ಮಧ್ಯೆ ಸಿಗುವ ಬೆಟ್ಟ ಪ್ರದೇಶದ ನಡುವೆ ಇರುವ ಕಣಿವೆಯಲ್ಲಿದೆ. ಇದು ಹನುಮಾನ್ ದೇವಾಲಯದ ತಪ್ಪಲಿನಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿದೆ. ಈ ಸರೋವರವು ಕಮಲಗಳಿಂದ ತುಂಬಿದ್ದು ಅವು ಅರಳುವ ಸಮಯದಲ್ಲಿ ಅತ್ಯಂತ ಮನೋಹರವಾಗಿರುತ್ತದೆ. ಸರೋವರ ಎದುರಿನಲ್ಲಿ ಲಕ್ಷ್ಮಿ ದೇವಸ್ಥಾನ ಹಾಗೂ, ಶಿವನ ದೇವಸ್ಥಾನವಿದೆ. ಕೊಳದ ಪಕ್ಕದಲ್ಲಿ ಮಾವಿನ ಮರದ ಕೆಳಗೆ ಒಂದು ಸಣ್ಣ ಗಣೇಶನ ಗುಡಿಯೂ ಇದೆ. [೩]
ರಾಮಾಯಣದಲ್ಲಿ ಉಲ್ಲೇಖಿಸಿದಂತೆ ರಾಮನು ತನ್ನ ಪತ್ನಿಯಾದ ಸೀತೆಯನ್ನು ಹುಡುಕುತ್ತಾ ಇರುವಾಗ ಶಬರಿಯು ಇದೇ ಸ್ಥಳದಲ್ಲಿ ರಾಮನಿಗೆ ದಕ್ಷಿಣದ ಕಡೆಗೆ ತೆರಳುವಂತೆ ಸಲಹೆ ನೀಡುತ್ತಾಳೆ. ಶಬರಿಯು ರಾಮನ ಅತ್ಯಂತ ನಿಷ್ಟಾವಂತ ಭಕ್ತೆಯಾಗಿದ್ದು, ತನ್ನ ಗುರುಗಳಾದ ಮಾತಂಗರ ಆಶ್ರಮದಲ್ಲಿ ರಾಮನನ್ನು ಪೂಜಿಸುತ್ತಾ ಎದುರುನೋಡುತ್ತಿದ್ದಳು. ಆವಳು ವಾಸಿಸುತ್ತಿದ್ದ ಪ್ರದೇಶವನ್ನು ಮಾತಂಗ ಪರ್ವತ ಎಂದು ಕರೆಯಾಲಾಗಿದ್ದು, ಅದು ಹಂಪಿಯಲ್ಲಿದೆ. ಆಕೆಯ ಗುರು ಮಾತಂಗ ಋಷಿ ಸಾಯುವ ಮೊದಲು ಅವಳು ರಾಮನನ್ನು ಖಂಡಿತವಾಗಿ ನೋಡುವಳು ಎಂದು ಹೇಳಿದ್ದನು. ಅವನ ಮರಣದ ನಂತರ, ಶಬರಿಯು ರಾಮನಿಗಾಗಿ ಅದೇ ಆಶ್ರಮದಲ್ಲಿ ವಾಸಿಸುವುದನ್ನು ಮುಂದುವರೆಸಿದಳು. ಹೀಗೆ ರಾಮನಿಗಾಗಿ ಕಾಯುತ್ತಾ ಆಕೆ 13 ವರ್ಷಗಳನ್ನು ಕಳೆಯುತ್ತಾಳೆ, ರಾಮನಿಗಾಗಿ ಕಾಯುತ್ತಾ ಮುದುಕಿಯಾದ ಆಕೆಯನ್ನು ರಾಮನು ಸೀತೆಯನ್ನು ಹುಡುಕುತ್ತಾ ಲಂಕೆಗೆ ಪ್ರಯಾಣಿಸುವಾಗ ಭೆಟಿಯಾಗುತ್ತಾನೆ. ಅವಳು ರಾಮ ಮತ್ತು ಅವನ ಸಹೋದರ ಲಕ್ಷ್ಮಣನಿಗೆ ಆಹಾರವನ್ನು ನೀಡುತ್ತಾಳೆ. ಅವಳ ಭಕ್ತಿಯನ್ನು ಕಂಡು ರಾಮ ಮತ್ತು ಲಕ್ಷ್ಮಣನು ಅವಳ ಪಾದಗಳಿಗೆ ನಮಸ್ಕರಿಸುತ್ತಾರೆ. ನಂತರ,ರಾಮಲಕ್ಷಣರು ಸೀತೆಯ ಅಪಹರಣದ ಘಟನೆಯನ್ನು ಅವಳಿಗೆ ವಿವರಿಸುತ್ತಾರೆ. ಪಂಪಾ ಸರೋವರದ ಬಳಿ ದಕ್ಷಿಣದಲ್ಲಿ ವಾಸಿಸುತ್ತಿದ್ದ ವಾನರ ಸಾಮ್ರಾಜ್ಯದ ಹನುಮಂತ ಮತ್ತು ಸುಗ್ರೀವನ ಸಹಾಯವನ್ನು ಕೇಳಲು ಶಬರಿ ಸೂಚಿಸುತ್ತಾಳೆ. ಇದೇ ಸಂದರ್ಭದಲ್ಲಿ ಶ್ರೀರಾಮನು ಮಾತಂಗ ಸರೋವರದಲ್ಲಿ ಪವಿತ್ರ ಸ್ನಾನ ಮಾಡಿದನು ಎಂಬ ಉಲ್ಲೇಖ ಇದೆ..