ಪದ್ಮನಾಭನ್ ಬಲರಾಮ್ | |
---|---|
![]() | |
ಕಾರ್ಯಕ್ಷೇತ್ರ | ಬೈಯೊ ಕೆಮಿಸ್ಟ್ರಿ |
ಸಂಸ್ಥೆಗಳು | ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು |
ಅಭ್ಯಸಿಸಿದ ವಿದ್ಯಾಪೀಠ | ಪುಣೆ ವಿಶ್ವವಿದ್ಯಾಲಯ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಟೆಕ್ನೊಲೊಜಿ,ಕಾನ್ಪುರ್, Carnegie Mellon University |
ಡಾಕ್ಟರೇಟ್ ಸಲಹೆಗಾರರು | Aksel A. Bothner-By |
ಗಮನಾರ್ಹ ಪ್ರಶಸ್ತಿಗಳು | Padma Bhushan[೧] |
ಪದ್ಮನಾಭನ್ ಬಲರಾಮ್ ರವರು ಭಾರತೀಯ ಜೈವಿಕ ತಜ್ಞ ಮತ್ತು ಭಾರತದ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಮಾಜಿ ನಿರ್ದೇಶಕರಾಗಿದ್ದರು. ಅವರು ಪದ್ಮಭೂಷಣ (೨೦೧೪)ರ ಮೂರನೆಯ ಅತ್ಯುನ್ನತ ಭಾರತೀಯ ನಾಗರಿಕ ಗೌರವ ಮತ್ತು TWAS ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಪದ್ಮನಾಭನ್ ಬಲರಾಮ್ ರವರು ೧೯ ಫೆಬ್ರವರಿ ೧೯೪೯ ರಂದು ಜನಿಸಿದರು.[೨]
ಬಲರಾಮ್ ರವರು ಪುಣೆ ವಿಶ್ವವಿದ್ಯಾನಿಲಯದ ಫೆರ್ಗುಸನ್ ಕಾಲೇಜಿನಿಂದ ರಸಾಯನಶಾಸ್ತ್ರದಲ್ಲಿ ಪದವಿ ಪಡೆದ ನಂತರ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾನಿಲಯದಿಂದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,ಕಾನ್ಪುರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಹಾಗೂ ಅವರು ತಮ್ಮ ಪಿ.ಎಚ್‌ಡಿ. ಪದವಿಯನ್ನು ಕಾರ್ನೆಗೀ ಮೆಲಾನ್ ವಿಶ್ವವಿದ್ಯಾನಿಲಯದಲ್ಲಿ ಪಡೆದರು. ಅವರು ಪಿ.ಎಚ್‌ಡಿ.ಸಮಯದಲ್ಲಿ ನಕಾರಾತ್ಮಕ ಪರಮಾಣು ಓವರ್ ಹೌಸರ್ ಪರಿಣಾಮ ಸಿಗ್ನಲ್ ಗಳನ್ನು ಬೃಹತ್ ಕಣಗಳ ರೂಪಾಂತರ ತನಿಖೆಗಳಂತೆ ಅಧ್ಯಯನ ಮಾಡಿದರು. ವುಡ್ವರ್ಡ್ ಪೋಸ್ಟ್ ಡಾಕ್ನಂತೆ,ಬಲರಾಮ್ ರವರು ಪ್ರತಿಜೀವಕ ಎರಿಥ್ರೊಮೈಸಿನ್ ಸಂಶ್ಲೇಷಣೆಯಲ್ಲಿ ಕೆಲಸ ಮಾಡಿದರು.
ಬಲರಾಮ್ ರವರ ಸಂಶೋಧನಾ ಕ್ಷೇತ್ರವು ವಿನ್ಯಾಸ ಮತ್ತು ನೈಸರ್ಗಿಕ ಪೆಪ್ಟೈಡ್ ಗಳ ರಚನೆ,ರೂಪಾಂತರ ಮತ್ತು ಜೈವಿಕ ಚಟುವಟಿಕೆಗಳ ತನಿಖೆಯಾಗಿದೆ.ಇದನ್ನು ಮಾಡಲು,ಎಕ್ಸ್ -ರೇ ಸ್ಫಟಿಕಶಾಸ್ತ್ರದ ಜೊತೆಗೆ ಅವರು ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಸ್ಪೆಕ್ಟ್ರೋಸ್ಕೋಪಿ,ಇನ್‌ಫ್ರಾರೆಡ್ ಸ್ಪೆಕ್ಟ್ರೋಸ್ಕೋಪಿ ಮತ್ತು ವೃತ್ತಾಕಾರದ ಡಿಕ್ರೊಯಿಸಮ್ ನಂತಹ ತಂತ್ರಗಳನ್ನು ವ್ಯಾಪಕವಾಗಿ ಬಳಸಿದ್ದಾರೆ. ವಿನ್ಯಾಸಗೊಳಿಸಿದ ಪೆಪ್ಟೈಡ್ ಗಳ ಮಡಿಸುವ ಮತ್ತು ರೂಪಾಂತರಗಳನ್ನು ಪ್ರಭಾವಿಸುವ ಅಂಶಗಳ ಮೌಲ್ಯಮಾಪನಕ್ಕೆ ಅವರು ಪ್ರಮುಖ ಕೊಡುಗೆ ನೀಡಿದ್ದಾರೆ ಮತ್ತು ಹೆಲಿಕ್ಸ್,ಬೀಟಾ ತಿರುವುಗಳು ಮತ್ತು ಹಾಳೆಗಳು ಮುಂತಾದ ದ್ವಿತೀಯ ರಚನಾತ್ಮಕ ಲಕ್ಷಣಗಳ ರಚನೆಯಲ್ಲಿ ಪ್ರಮುಖ ಪಾತ್ರವಹಿಸುವ ರಚನಾತ್ಮಕ ಅಂಶಗಳನ್ನು ತನಿಖೆ ಮಾಡಿದ್ದಾರೆ. ಬಲರಾಮ್ ರವರ ಸಹಯೋಗಿಯಾಗಿದ್ದ ಇಸಾಬೆಲ್ಲಾ ಕರ್ಲೆ ಜೊತೆಯಲ್ಲಿ ಅವರು ಆಲ್ಫಾ-ಅಮೈನೋ ಐಸೋಬ್ಯೂಟ್ರಿಕ್ ಆಮ್ಲವನ್ನು ಹೆಲಿಸಿಟಿಯನ್ನು ಉಂಟುಮಾಡುವ ಮತ್ತು ಉಳಿಸುಕೊಳ್ಳುವಲ್ಲಿ ಬಳಸುತ್ತಾರೆ ಮತ್ತು ಪೆಪ್ಟೈಡ್ ಅನುರೂಪತೆಯನ್ನು ನಿರ್ಭಂದಿಸುತ್ತಾರೆ. ಅವರು ೪೦೦ ಕ್ಕಿಂತಲೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ ಮತ್ತು ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಸಹವರ್ತಿಯಾಗಿದ್ದಾರೆ. ಅವರು ಜೂನ್ ೨೦೧೩ ರವರೆಗೂ ಕರೆಂಟ್ ಸೈನ್ಸ್ ಎಂಬ ನಿಯತಕಾಲಿಕದ ಸಂಪಾದಕರಾಗಿದ್ದರು.[೩]