ಪರಮಾತ್ಮ | |
---|---|
ನಿರ್ದೇಶನ | ಯೋಗರಾಜ್ ಭಟ್ |
ನಿರ್ಮಾಪಕ |
|
ಲೇಖಕ |
|
ಪಾತ್ರವರ್ಗ | |
ಸಂಗೀತ | ವಿ. ಹರಿಕೃಷ್ಣ |
ಛಾಯಾಗ್ರಹಣ | ಸಂತೋಷ್ ರಾಜ್ ಪತಂಜೆ |
ಸಂಕಲನ | ದೀಪು ಎಸ್ ಕುಮಾರ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ದೇಶ | ಭಾರತ |
ಭಾಷೆ | ಕನ್ನಡ |
ಬಾಕ್ಸ್ ಆಫೀಸ್ | ₹೩೨ ಕೋಟಿ (ಯುಎಸ್$೭.೧ ದಶಲಕ್ಷ)[೨] |
ಪರಮಾತ್ಮ 2011ರಲ್ಲಿ ಬಿಡುಗಡೆಯಾದ ಕನ್ನಡ ಭಾಷೆಯ ಚಿತ್ರ. ಯೋಗರಾಜ್ ಭಟ್ ರವರು ಈ ಚಿತ್ರಕ್ಕೆ ನಿರ್ದೇಶನ ಮತ್ತು ಸಹ ನಿರ್ಮಾಣ ಮಾಡಿದ್ದಾರೆ.[೩]ಇದರಲ್ಲಿಪುನೀತ್ ರಾಜ್‌ಕುಮಾರ್ ಮತ್ತು ದೀಪಾ ಸನ್ನಿಧಿ ಮುಖ್ಯ ಪಾತ್ರಗಳಲ್ಲಿ[೪]ನಟಿಸಿದ್ದಾರೆ.ಈ ಚಿತ್ರವು 6 ಅಕ್ಟೋಬರ್ 2011 ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಯಿತು.[೫][೬] ನಿರ್ಮಾಣ ಹಂತದಲ್ಲಿದ್ದಾಗಲೇ ಚಿತ್ರದ ಟಿವಿ ಹಕ್ಕುಗಳು ದಾಖಲೆಯ ₹ 3.5 ಕೋಟಿಗೆ ಮಾರಾಟವಾಯಿತು.[೭][೮]ಬಿಡುಗಡೆಗೆ ಮುಂಚೆಯೇ,ಚಿತ್ರವು ಪ್ರಸಾರ ಮತ್ತು ವಿತರಣಾ ಹಕ್ಕುಗಳನ್ನು ಒಳಗೊಂಡಂತೆ ₹ 25 ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಗಳಿಸಿತು. [೨]
ಪುನೀತ್ ರಾಜ್‌ಕುಮಾರ್ ಅಭಿನಯದ ಲಗೋರಿ ಹೆಸರಿನ ಚಲನಚಿತ್ರವನ್ನು 2009 ರಲ್ಲಿ ಚಿತ್ರೀಕರಿಸಬೇಕಾಗಿತ್ತು, ಆದರೆ ನಿರ್ಮಾಣದ ವೆಚ್ಚವು ಹೆಚ್ಚಿಸಿರುವುದರಿಂದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಚಿತ್ರದಿಂದ ಹಿಂದೆ ಸರಿದರು, ನಂತರ ಅದು ಸ್ಥಗಿತಗೊಂಡಿತು. 2011 ರಲ್ಲಿ, ಭಟ್ ಅವರ 2010 ರ ನಿರ್ಮಿತ ಚಿತ್ರ ಪಂಚರಂಗಿಯ ಯಶಸ್ಸಿನ ನಂತರ, ಅವರು ಪುನೀತ್ ರಾಜ್‌ಕುಮಾರ್ ಅಭಿನಯದ ಪರಮಾತ್ಮ ಚಿತ್ರವನ್ನು ನಿರ್ಮಾಪಕ ಜಯಣ್ಣ ರವರೊಂದಿಗೆ ಸಹ ನಿರ್ಮಾಣ ಮಾಡುತ್ತಿದ್ದಾರೆ. [೯] ಚಿತ್ರದ ಕಥೆಯ ಪ್ರಕಾರ ಮೂವರು ನಟಿಯರು ನಟಿಸಬೇಕಿದೆ, ಅವರೇ: ದೀಪ ಸನ್ನಿಧಿ ಐಂದ್ರಿತಾ ರೈ ಮತ್ತು ರಮ್ಯಾ ಬಾರ್ನಾ . [೧೦] ಚಿತ್ರದ ಚಿತ್ರೀಕರಣ ಮಾರ್ಚ್ 3 ರಂದು ಸಕಲೇಶಪುರದಲ್ಲಿ ಪ್ರಾರಂಭವಾಯಿತು,ಚಿತ್ರವು ಅಕ್ಟೋಬರ್ 6, 2011 ರಂದು ಬಿಡುಗಡೆಯಾಗುತ್ತಿದೆ. [೧೧] [೧೨] ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯ ಸುತ್ತ ಮುತ್ತ ಚಿತ್ರೀಕರಣ ನಡೆಯಿತು. [೧೩]