ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯ
Parambikulam Wildlife Sanctuary | |
---|---|
wildlife sanctuary | |
Established | ೧೯೭೩ |
Government | |
• Governing Body: | Kerala Forest Dept., Hon. Minister for Forest, Sri Binoy Viswam |
Website | http://www.parambikulam.org |
ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯ ವು ದಕ್ಷಿಣ ಭಾರತದ ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯಲ್ಲಿನ ಚಿತ್ತೂರು ತಾಲ್ಲೂಕಿನಲ್ಲಿರುವ ೮೯ ಚದರ ಕಿ.ಮೀ. ವಿಸ್ತೀರ್ಣದ ಒಂದು ಸಂರಕ್ಷಿತ ಪ್ರದೇಶವಾಗಿದೆ. ೧೯೭೩ರಲ್ಲಿ ಸ್ಥಾಪಿಸಲ್ಪಟ್ಟ ಈ ಸಂರಕ್ಷಿತ ಪ್ರದೇಶವು ಆನೈಮಲೈ ಬೆಟ್ಟಗಳು ಮತ್ತು ನೆಲ್ಲಿಯಂಪತ್ತಿ ಬೆಟ್ಟಗಳ ನಡುವಿನ ಸುಂಗಮ್ ಬೆಟ್ಟಗಳ ಶ್ರೇಣಿಯಲ್ಲಿದೆ.[೧],[೨],[೩] ಪಶ್ಚಿಮ ಘಟ್ಟಗಳು, ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯದ ಎಲ್ಲ ಭಾಗವನ್ನು ಒಳಗೊಂಡಿರುವ ಆನೈಮಲೈ ಅಧೀನದ-ಸಮುದಾಯವು ಒಂದು ವಿಶ್ವ ಪರಂಪರೆ ತಾಣದ ಆಯ್ಕೆಗೆ ಸಂಬಂಧಿಸಿದಂತೆ UNESCO ವಿಶ್ವ ಪರಂಪರೆ ಸಮಿತಿಯ ಪರಿಗಣನೆಯ ಅಡಿಯಲ್ಲಿದೆ.[೪] ಆರು ನೆಲಸುನಾಡುಗಳಲ್ಲಿ ನೆಲೆಗೊಂಡಿರುವ ಸ್ಥಳೀಯ ಜನರ ೪ ವಿಭಿನ್ನ ಬುಡಕಟ್ಟುಗಳಿಗೆ ಈ ಅಭಯಾರಣ್ಯವು ನೆಲೆಯಾಗಿದ್ದು, ಅವುಗಳಲ್ಲಿ ಕದಾರ್, ಮಾಲಾಸರ್, ಮುದುವರ್ ಮತ್ತು ಮಾಲಾ ಮಾಲಾಸರ್ ಬುಡಕಟ್ಟುಗಳು ಸೇರಿವೆ. ೨೦೧೦ರ ಫೆಬ್ರುವರಿ ೧೯ರಂದು ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯವು 390.88 square kilometres (150.9 sq mi)[೫] ಪರಾಂಬಿಕುಲಂ ಹುಲಿ ಮೀಸಲು ಪ್ರದೇಶದ ಭಾಗವೆಂಬುದಾಗಿ ಘೋಷಿಸಲ್ಪಟ್ಟಿತು.[೬] |[೭] [೮]
೭೬° ೩೫’- ೭೬° ೫೦’ E ರೇಖಾಂಶ ಮತ್ತು ೧೦° ೨೦’ – ೧೦° ೨೬’ N ಅಕ್ಷಾಂಶದ ನಡುವೆ ಈ ಅಭಯಾರಣ್ಯವು ನೆಲೆಗೊಂಡಿದೆ. ಇದು ಪಾಲಕ್ಕಾಡ್ ಪಟ್ಟಣದಿಂದ ೧೩೫ ಕಿ.ಮೀ.ಗಳಷ್ಟು ದೂರದಲ್ಲಿದ್ದು, ಇದಕ್ಕೆ ಹೊಂದಿಕೊಂಡಂತೆ ತಮಿಳುನಾಡಿನಲ್ಲಿ ಇರುವ ಅಣ್ಣಾಮಲೈ ವನ್ಯಜೀವಿಗಳ ಅಭಯಾರಣ್ಯವು ಪೂರ್ವಭಾಗಕ್ಕಿದೆ. ಇದರ ಉತ್ತರದ ಗಡಿಯಲ್ಲಿ ನೆಮ್ಮಾರ ಅರಣ್ಯ ವಿಭಾಗವಿದ್ದರೆ, ದಕ್ಷಿಣದ ಗಡಿಯಲ್ಲಿ ವಳಾಚಲ್ ಅರಣ್ಯ ವಿಭಾಗ ಮತ್ತು ಪಶ್ಚಿಮದಲ್ಲಿ ಚಾಲಕುಡಿ ಅರಣ್ಯ ವಿಭಾಗಗಳಿವೆ. ಈ ಅಭಯಾರಣ್ಯವು ಹಾರ್ನ್‌ಬ್ಲೆಂಡ್ (ಮುಖ್ಯವಾಗಿ ಕ್ಯಾಲ್ಷಿಯಂ, ಮೆಗ್ನೀಷಿಯಂ ಮತ್ತು ಕಬ್ಬಿಣದ ಸಿಲಿಕೇಟುಗಳಿಂದಾದ, ಗ್ರಾನೈಟಿನ ಒಂದು ಘಟಕವಾದ, ದಟ್ಟ ಕಂದು, ಕಪ್ಪು ಅಥವಾ ಹಸಿರು ಬಣ್ಣದ ಒಂದು ಖನಿಜ), ಬಯೋಟೈಟ್, ಗ್ನೈಸ್ (ಕ್ವಾರ್ಟ್ಸ್, ಫೆಲ್‌ಸ್ಪಾರ್ ಮತ್ತು ಆಭ್ರಕಗಳಿರುವ ಒಂದು ಬಗೆಯ ಪದರ ಪದರವಾದ ರೂಪಾಂತರಿತ ಶಿಲೆ) ಮತ್ತು ಚಾರ್ನೋಕೈಟ್ ಇವೇ ಮೊದಲಾದವುಗಳನ್ನು ಒಳಗೊಂಡಿರುವ ಒಂದು ಭೂವೈಜ್ಞಾನಿಕ ಲಕ್ಷಣವನ್ನು ಹೊಂದಿದೆ.
೩೦೦ ಮೀ. ಮತ್ತು ೧೪೩೮ ಮೀ. ನಡುವಿನ ಉನ್ನತಿಯನ್ನು ಇದು ಹೊಂದಿದೆ. ಅಭಯಾರಣ್ಯದ ಉತ್ತರದ ಸೀಮಾಸ್ತರದ ಆನೈಮಲೈ ಬೆಟ್ಟಗಳಿಂದ ನೆಲ್ಲಿಯಂಪತ್ತಿ ಬೆಟ್ಟಗಳನ್ನು ಹಾದುಹೋಗುವಂತಿರುವ ೬೦೦ ಮೀ.ನಷ್ಟಿರುವ ಒಂದು ಮೇಲೆತ್ತಿದ ಸ್ಥಿತಿ ಅಥವಾ ಚಾಚುವಿಕೆಯು ಥೂಟಂಪಾರಾದಲ್ಲಿದೆ. ಅಭಯಾರಣ್ಯದಲ್ಲಿರುವ ಪ್ರಮುಖ ಶಿಖರಗಳೆಂದರೆ ಅಭಯಾರಣ್ಯದ ದಕ್ಷಿಣದ ಸೀಮಾಸ್ತರದಲ್ಲಿರುವ ಕರಿಮಲಾ (೧೪೩೮ ಮೀ.), ಉತ್ತರದಲ್ಲಿರುವ ಪಂಡಾರವಾರೈ (೧೨೯೦ ಮೀ.), ಪೂರ್ವದ ಸೀಮಾಸ್ತರದಲ್ಲಿರುವ ಕೂಚಿಮುಡಿ, ವೆಂಗೋಲಿ ಮಲೈ (೧೧೨೦ ಮೀ.) ಮತ್ತು ಪಶ್ಚಿಮದಲ್ಲಿರುವ ಪುಲಿಯಾರಾಪಾದಂ (೧೦೧೦ ಮೀ.) ಆಗಿವೆ. ಪರಾಂಬಿಕುಲಂ, ಥುನಾಕಡವು ಮತ್ತು ಪೆರುವಾರಿಪಲ್ಲಂ ಎಂದು ಕರೆಯಲ್ಪಡುವ ಮಾನವ-ನಿರ್ಮಿತವಾದ ಮೂರು ಜಲಾಶಯಗಳನ್ನು ಈ ಅಭಯಾರಣ್ಯವು ಹೊಂದಿದ್ದು, ಅವುಗಳ ಸಂಯೋಜಿತ ವಿಸ್ತೀರ್ಣವು ೨೦.೬೬ ಚದರ ಕಿ.ಮೀ.ನಷ್ಟಿದೆ. ಈ ಜಲಾಶಯಗಳ ಪೈಕಿ ಒಂದರೊಳಗೆ ಥುವೈಯಾರ್ ಜಲಪಾತವು ಧುಮ್ಮಿಕ್ಕುತ್ತದೆ. ೭ ಪ್ರಮುಖ ಕಣಿವೆಗಳು ಮತ್ತು ಪರಾಂಬಿಕುಲಂ, ಶೋಲಯಾರ್ ಹಾಗೂ ಥೆಕ್ಕಾಡಿ ಎಂಬ ೩ ಪ್ರಮುಖ ನದಿಗಳು ಅಲ್ಲಿವೆ. ಕರಪ್ಪಾರ ನದಿ ಮತ್ತು ಕುರಿಯಾರ್‌ಕುಟ್ಟಿ ನದಿಗಳೂ ಸಹ ಈ ಪ್ರದೇಶದಲ್ಲಿ ಹರಿಯುತ್ತವೆ. ನೋಡಿ: ಸ್ಥಳದ ಸ್ವರೂಪಕ್ಕೆ ಸಂಬಂಧಿಸಿದ 3-D ನಕ್ಷೆಗಳು
ಪೂರ್ವಾನುಮತಿಯೊಂದಿಗೆ ಅರಣ್ಯದಲ್ಲಿ ಚಾರಣಕ್ಕೆ ಅವಕಾಶ ನೀಡಲಾಗುತ್ತದೆ.ಇದಕ್ಕೆ ಸಂಬಂಧಿಸಿದ ಸಂಪರ್ಕದ ವಿವರಗಳು ಹೀಗಿವೆ: ಇಕೋಕೇರ್ ಸೆಂಟರ್, ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯ, ಅನಪ್ಪಾಡಿ, ಥುನಾಕಡವು (PO), ಪೊಲ್ಲಾಚಿ (ಮಾರ್ಗವಾಗಿ), ಪಾಲಕ್ಕಾಡ್, ಕೇರಳ – ೬೭೮ ೬೬೧.ದೂರವಾಣಿ : ೦೪೨೫೩ – ೨೪೫೦೨೫ [೧] ಜಲಾಶಯದಲ್ಲಿ ದೋಣಿವಿಹಾರವನ್ನು ಮಾಡಬಹುದಾಗಿದೆ. ಏಷ್ಯಾದಲ್ಲೇ ಅತಿದೊಡ್ಡದು ಎಂದು ಹೇಳಲಾಗುವ ಕ್ಯಾನ್ನಿಮರೆ ಸಾಗವಾನಿ ಮರ ವು ಇಲ್ಲಿನ ಥೂನಕಡವು ಹಳ್ಳಿಯ ಸಮೀಪದಲ್ಲಿದೆ.
ಥೂನಕಡವುವಿನಲ್ಲಿನ ಮೀಸಲು ಅರಣ್ಯ ಪ್ರದೇಶದಲ್ಲಿ ಮರದ-ಮನೆಯೊಂದಿದ್ದು, ಅದು ಪರಾಂಬಿಕುಲಂನ ಕೇಂದ್ರಕಾರ್ಯಾಲಯವಾಗಿದೆ ಹಾಗೂ ಅದನ್ನು ಮುಂಗಡವಾಗಿ ಕಾದಿರಿಸಬೇಕಾಗುತ್ತದೆ. ಥೂನಕಡವು, ಥೆಲ್ಲಿಕ್ಕಳ್ ಮತ್ತು ಎಲಥೋಡ್‌ಗಳಲ್ಲಿರುವ ರಾಜ್ಯ ಅರಣ್ಯ ಇಲಾಖೆಯ ವಿಶ್ರಾಂತಿಗೃಹಗಳು ಆರಾಮದಾಯಕವಾದ ವಸತಿ ವ್ಯವಸ್ಥೆಯನ್ನು ಒದಗಿಸುತ್ತವೆ.[೯]
ತಮಿಳುನಾಡಿನ ಪೊಲ್ಲಾಚಿಯಿಂದ ರಸ್ತೆಯ ಮಾರ್ಗವಾಗಿ ಪರಾಂಬಿಕುಲಂಗೆ ಪ್ರವೇಶಸಬಹುದು. ಪಾಲಕ್ಕಾಡ್‌ನಿಂದ ಪೊಲ್ಲಾಚಿಗೆ ಸುಮಾರು ೪೫ ಕಿ.ಮೀ.ಗಳಿದ್ದು, ನಂತರ ಪೊಲ್ಲಾಚಿಯಿಂದ ಪರಾಂಬಿಕುಲಂಗೆ ಸುಮಾರು ೬೫ ಕಿ.ಮೀ.ಗಳಷ್ಟು ಅಂತರವಿದೆ. ಅತ್ಯಂತ ಸಮೀಪದ ರೈಲು ನಿಲ್ದಾಣವು ಪೊಲ್ಲಾಚಿಯಲ್ಲಿದೆ ಮತ್ತು ಅತ್ಯಂತ ಸಮೀಪದ ವಿಮಾನ ನಿಲ್ದಾಣವು ತಮಿಳುನಾಡಿನ ಕೊಯಂಬತ್ತೂರ್‌ನಲ್ಲಿದೆ; ಇಲ್ಲಿಗೆ ಪಾಲಕ್ಕಾಡ್ ಮಾರ್ಗವಾಗಿ ಸುಮಾರು ೧೨೦ ಕಿ.ಮೀ.ಗಳಾಗುತ್ತವೆ.
ಈ ಅಭಯಾರಣ್ಯವು ಪ್ರಾಣಿ ಸಂಕುಲದ ಒಂದು ಸಮೃದ್ಧ ವೈವಿಧ್ಯತೆಯನ್ನು ಹೊಂದಿದ್ದು, ೩೯ ಜಾತಿಗಳ ಸಸ್ತನಿಗಳು, ೧೬ ಜಾತಿಗಳ ಉಭಯವಾಸಿಗಳು, ೨೬೮ ಜಾತಿಗಳ ಪಕ್ಷಿಗಳು, ೬೧ ಜಾತಿಗಳ ಸರೀಸೃಪಗಳು, ೪೭ ಜಾತಿಗಳ ಮೀನುಗಳು, ೧೦೪೯ ಜಾತಿಗಳ ಕೀಟಗಳು ಮತ್ತು ೧೨೪ ಜಾತಿಗಳ ಚಿಟ್ಟೆಗಳನ್ನು ಅದು ಒಳಗೊಂಡಿದೆ.
ಈ ಅಭಯಾರಣ್ಯವು ವೈವಿಧ್ಯಮಯವಾದ ಮರಗಳನ್ನು ಹೊಂದಿದ್ದು, ಮುಖ್ಯವಾಗಿ ಸಾಗವಾನಿ, ಬೇವು, ಶ್ರೀಗಂಧದ ಮರ ಮತ್ತು ಬೀಟೆಮರಗಳು ಅವುಗಳಲ್ಲಿ ಸೇರಿವೆ. ಅತಿಹಳೆಯ ಸಾಗವಾನಿ ಮರವೆಂದು ಹೇಳಲಾಗುವ ಕನ್ನಿಮರ ಸಾಗವಾನಿಯೂ (KANNIMARA TEAK) ಸಹ ಇಲ್ಲಿ ಕಂಡುಬರುತ್ತದೆ. ಇದು ಸುಮಾರು ೪೫೦ ವರ್ಷಗಳಷ್ಟು ಹಳೆಯದಾಗಿದ್ದು, ನಂಬಲಸಾಧ್ಯವಾಗಿರುವ ೬.೮ ಮೀಟರುಗಳಷ್ಟು ಸುತ್ತಳತೆ ಹಾಗೂ ೪೯.೫ ಮೀಟರುಗಳಷ್ಟು ಎತ್ತರವನ್ನು ಹೊಂದಿದೆ. ಭಾರತದ ಸರ್ಕಾರದ ವತಿಯಿಂದ ನೀಡಲ್ಪಡುವ ಮಹಾವೃಕ್ಷ ಪುರಸ್ಕಾರವನ್ನು ಇದು ಗೆದ್ದುಕೊಂಡಿದೆ.
೨೦೦೭ರ ಏಪ್ರಿಲ್‌ನಲ್ಲಿ, ರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯದ ಭಾಗಗಳಲ್ಲಿ ಹಾಗೂ ಹೊಂದಿಕೊಂಡಿರುವ ನೆಲ್ಲಿಯಂಪತ್ತಿ ಅರಣ್ಯಗಳಲ್ಲಿ ಕಂಡುಬಂದ ಒಂದು ಕಾಳ್ಗಿಚ್ಚು ನೂರಾರು ಎಕರೆಗಳಷ್ಟಿರುವ ವಿಶಾಲ ಅರಣ್ಯ ಪ್ರದೇಶಗಳು ಮತ್ತು ನೆಡುತೋಪುಗಳನ್ನು ನಾಶಪಡಿಸಿತು. ನಿರುದ್ಯೋಗಿ ಬೆಂಕಿ-ಕಾವಲುಗಾರರು ಮತ್ತು ಜೇನುತುಪ್ಪದ ಸಂಗ್ರಾಹಕರಿಂದ ಸದರಿ ಕಾಳ್ಗಿಚ್ಚುಗಳು ಉಂಟಾಗಿದ್ದವು.
ಈ ಪ್ರದೇಶದಲ್ಲಿ ಮಳೆಗಾಲಕ್ಕೆ-ಮುಂಚಿನ ಮಳೆಯ ಒಂದು ಕೊರತೆ ಕಂಡುಬಂದಿದ್ದುದು ಸದರಿ ಕಾಳ್ಗಿಚ್ಚುಗಳಿಗೆ ಸಂಬಂಧಿಸಿದ ಕಾರಣಗಳ ಪೈಕಿ ಒಂದಾಗಿತ್ತು. ಈ ಪ್ರದೇಶದಲ್ಲಿ ಜನವರಿ, ಫೆಬ್ರುವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳ ಅವಧಿಯಲ್ಲಿ ಮಳೆಬರುವುದು ವಾಡಿಕೆ. ಈ ವರ್ಷ, ಜನವರಿ ತಿಂಗಳಲ್ಲಿ ಅಲ್ಲಿ ಕೇವಲ ೪ ಮಿ.ಮೀ.ನಷ್ಟು ಮಳೆಯಾಗಿತ್ತು ಮತ್ತು ಅದಾದ ನಂತರ ಮಳೆಯೇ ಇರಲಿಲ್ಲ. ಈ ಬೇಸಿಗೆಯಲ್ಲಿ ನೆಲ್ಲಿಯಂಪತ್ತಿಯು ಒಂದು ಅಭೂತಪೂರ್ವವಾದ ಬರಗಾಲವನ್ನು ಎದುರಿಸುತ್ತಿತ್ತು. ತಾಪಮಾನದ ಸರಾಸರಿ ಉನ್ನತ ಮಟ್ಟವು ಸಾಮಾನ್ಯವಾಗಿ ೨೬oCನಷ್ಟು ಇರಬೇಕಿದ್ದ ಸಂದರ್ಭದಲ್ಲಿ, ಇಲ್ಲಿನ ತಾಪಮಾನವು ಏಪ್ರಿಲ್‌ನಲ್ಲಿ ೩೪oCನಷ್ಟು ಮಟ್ಟವನ್ನು ತಲುಪಿತ್ತು.[೧೨]
{{citation}}
: Cite has empty unknown parameter: |5=
(help)
{{citation}}
: Check date values in: |accessdate=
and |date=
(help)
{{cite news}}
: Check date values in: |date=
(help)
{{cite web}}
: Check date values in: |date=
(help)