ಪಾಲಿಯನ್ | |
---|---|
Native to | ಭಾರತ |
Region | ಕೇರಳ |
Native speakers | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨". |
Language codes | |
ISO 639-3 | pcf |
ಪಾಲಿಯನ್ ಕೇರಳದ ದ್ರಾವಿಡ ಭಾಷೆಯಾಗಿದ್ದು ಅದು ತಮಿಳಿಗೆ ನಿಕಟ ಸಂಬಂಧ ಹೊಂದಿದೆ. ಈ ಭಾಷೆಯನ್ನು ಪಾಲಿಯನ್ ಸಮುದಾಯದವರು ಮಾತನಾಡುತ್ತಾರೆ.[೧],[೨]
ಪಾಲಿಯನ್ನರು ತಮಿಳುನಾಡಿನಿಂದ ವಲಸೆ ಬಂದ ಆದಿವಾಸಿ ದ್ರಾವಿಡ ಜನರು, ಪಶ್ಚಿಮ ಘಟ್ಟಗಳ ಪರ್ವತಗಳ ಮಳೆಕಾಡು, ವಿಶೇಷವಾಗಿ ಕೇರಳದಲ್ಲಿ ವಾಸವಾಗಿದ್ದಾರೆ. ಕೇರಳವು ಇಡುಕ್ಕಿ ಜಿಲ್ಲೆಯ ಪೀರುಮೇಡು ಮತ್ತು ಉಡುಂಬಂಚೋಳ ತಾಲೂಕುಗಳಲ್ಲಿ ವಾಸಿಸುವ ಇವರು ಮೂಲತಃ ತಮಿಳುನಾಡಿನ ಮಧುರೈ ಜಿಲ್ಲೆಯ ಗುಡಲ್ಲೂರಿನಿಂದ ಬಂದು ನೆಲೆ. ಇವರು ವಲಸೆ ಬಂದು ಅರ್ಧ ಶತಮಾನದಲ್ಲಿ ನೆಲೆಸಿದ ಪ್ರದೇಶವನ್ನು ಕೃಷಿ ಪ್ರದೇಶವನ್ನಾಗಿ ಬದಲಾಯಿಸಿದರು. ಸಾಂಪ್ರದಾಯಿಕವಾಗಿ ಅವರು ಅಲೆಮಾರಿಗಳು ಬೇಟೆಗಾರರು, ಜೇನು ಬೇಟೆಗಾರರು ಮತ್ತು ಆಹಾರ ಹುಡುಕುವವರು. 1960 ರ ದಶಕದ ಆರಂಭದಲ್ಲಿ ಪಾಲಿಯನ್ನರು ಬಂಡೆಯ ಬಿರುಕುಗಳು ಮತ್ತು ಗುಹೆಗಳಲ್ಲಿ ವಾಸಿಸುತ್ತಿದ್ದರು. ಕ್ರಮೇಣ, ಹೆಚ್ಚಿನವರು ಕಾಡಿನ ವ್ಯಾಪಾರಿಗಳಾಗಿ ರೂಪಾಂತರಗೊಂಡಿದ್ದಾರೆ.[೩]
ಕೇರಳದ ಇತರ ಬುಡಕಟ್ಟುಗಳುಲ್ಲಿ ಇಡುಕ್ಕಿ ಜಿಲ್ಲೆಯ ಪಾಲಿಯನ್ ಬುಡಕಟ್ಟು ಸಮುದಾಯದ ಜನಸಂಖ್ಯೆಯು ಬಹಳ ಕಡಿಮೆ. 1991ರ ಜನಗಣತಿಯ ಪ್ರಕಾರ ಕೇರಳದಲ್ಲಿ ಅವರ ಜನಸಂಖ್ಯೆಯು 1442 ಆಗಿತ್ತು. 1999ರ ಐಟಿಡಿಪಿ ವರದಿ ಪ್ರಕಾರ ಇಡುಕ್ಕಿ ಜಿಲ್ಲೆಯಲ್ಲಿ 383 ಪಾಲಿಯನ್ ಕುಟುಂಬಗಳಿವೆ.[೪] 2001 ರ ಜನಗಣತಿಯ ಪ್ರಕಾರ, ಇಡುಕ್ಕಿಯಲ್ಲಿ ಪಾಲಿಯನ್‌ನ ಒಟ್ಟು ಜನಸಂಖ್ಯೆಯು 1709 ಅಂದರೆ 0.47 % ರಾಜ್ಯದ ಪರಿಶಿಷ್ಟ ಜನಸಂಖ್ಯೆ. 2011ರ ಜನಗಣತಿ ಇವರ ಒಟ್ಟು ಜನಸಂಖ್ಯೆ 1464 ಎಂದು ಅಂದಾಜಿಸಬಹುದು, ಅಂದರೆ ಇದು ಒಟ್ಟು ಪರಿಶಿಷ್ಟ ಪಂಗಡಗಳಲ್ಲಿ 0.43% ರಷ್ಟಿದೆ.[೫]