ಪಿಯರೆ ನ್ಯಾಂಟೆರ್ಮೆ

ಪಿಯರೆ ನ್ಯಾಂಟೆರ್ಮೆ
ಜನನ(೧೯೫೯-೦೯-೦೭)೭ ಸೆಪ್ಟೆಂಬರ್ ೧೯೫೯
ಲಿಯಾನ್, ಫ್ರಾನ್ಸ್
ಮರಣ೩೧ ಜನವರಿ ೨೦೧೯ (ವಯಸ್ಸು ೫೯)
ಪ್ಯಾರಿಸ್, ಫ್ರಾನ್ಸ್
ಶಿಕ್ಷಣ ಸಂಸ್ಥೆಇ‌ಎಸ್‌ಎಸ್‌ಇ‌ಸಿ ಬಿಸಿನೆಸ್ ಸ್ಕೂಲ್
ಗಮನಾರ್ಹ ಕೆಲಸಗಳುಆಕ್ಸೆಂಚರ್ ನ ಅಧ್ಯಕ್ಷ ಮತ್ತು ಸಿ‌ಇಒ (೨೦೧೧-೨೦೧೯)
ಮಕ್ಕಳು

ಪಿಯರೆ ನ್ಯಾಂಟೆರ್ಮೆ (೭ ಸೆಪ್ಟೆಂಬರ್ ೧೯೫೯[] - ೩೧ ಜನವರಿ ೨೦೧೯) ಒಬ್ಬ ಫ್ರೆಂಚ್ ವ್ಯಾಪಾರ ಕಾರ್ಯನಿರ್ವಾಹಕರಾಗಿದ್ದರು. ಅವರು ಜಾಗತಿಕ ನಿರ್ವಹಣಾ ಸಲಹಾ ಮತ್ತು ವೃತ್ತಿಪರ ಸೇವಾ ಸಂಸ್ಥೆಯಾದ ಆಕ್ಸೆಂಚರ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿ‌ಇಒ) ಆಗಿದ್ದರು.

ಆರಂಭಿಕ ಜೀವನ

[ಬದಲಾಯಿಸಿ]

ನ್ಯಾಂಟೆರ್ಮೆ ೧೯೫೯ ರಲ್ಲಿ ಫ್ರಾನ್ಸ್‌ನಲ್ಲಿ ಜನಿಸಿದರು.[] ಅವರು ಪ್ಯಾರಿಸ್‌ನ ಇಎಸ್‌ಇಸಿ ಬಿಸಿನೆಸ್ ಸ್ಕೂಲ್ (ಎಕೋಲ್ ಸೂಪರಿಯೇರ್ ಡೆಸ್ ಸಯಾನ್ಸ್ ಎಕೋನಾಮಿಕ್ಸ್ ಎಟ್ ಕಾಮರ್ಶಿಯೇಲ್ಸ್)ನಲ್ಲಿ ಶಿಕ್ಷಣ ಪಡೆದು ೧೯೮೧ ರಲ್ಲಿ ಮ್ಯಾನೇಜ್‌ಮೆಂಟ್‌ನಲ್ಲಿ ಮಾಸ್ಟರ್ ಡಿಗ್ರಿ ಪಡೆದರು.[] ಪದವಿಯ ನಂತರ, ಅವರು ಫ್ರಾನ್ಸ್‌ನಲ್ಲಿ ತಮ್ಮ ಮಿಲಿಟರಿ ಸೇವೆಯನ್ನು ಪೂರ್ಣಗೊಳಿಸಿದರು.[]

ಆಕ್ಸೆಂಚರ್‌ನಲ್ಲಿ ವೃತ್ತಿ

[ಬದಲಾಯಿಸಿ]

೧೯೮೩ ರಲ್ಲಿ, ನ್ಯಾಂಟೆರ್ಮೆ ಅವರು ಸಮಾಲೋಚನಾ ಸಂಸ್ಥೆಯಾದ ಅಕ್ಸೆಂಚರ್ (ಆಂದು ಅದನ್ನು ಆಂಡರ್ಸನ್ ಕನ್ಸಲ್ಟಿಂಗ್ ಎಂದು ಕರೆಯಲಾಗುತ್ತಿತ್ತು) ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.[][] ಕಂಪನಿಯಲ್ಲಿನ ಅವರ ಆರಂಭಿಕ ವೃತ್ತಿಜೀವನದ ಪಾತ್ರಗಳಲ್ಲಿ ಫ್ರಾನ್ಸ್‌ನಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ಅಭ್ಯಾಸದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು.[] ಅವರು ೧೯೯೩ ರಲ್ಲಿ ಆ ಸಂಸ್ಥೆಯಲ್ಲಿ ಪಾಲುದಾರರಾದರು.[] ೧೯೯೩ ಮತ್ತು ೨೦೦೫ ರ ನಡುವೆ, ಯುರೋಪ್, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ವ್ಯವಸ್ಥಾಪಕ ನಿರ್ದೇಶಕರು ಮತ್ತು ವಿಮಾ ಉದ್ಯಮ ಗುಂಪಿನ ಜಾಗತಿಕ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಸಂಸ್ಥೆಯ ಹಣಕಾಸು ಸೇವೆಗಳ ಅಭ್ಯಾಸದಲ್ಲಿ ನ್ಯಾಂಟೆರ್ಮೆ ಹಲವಾರು ಸ್ಥಾನಗಳನ್ನು ಹೊಂದಿದ್ದರು.[]

ನವೆಂಬರ್ ೨೦೦೫ ರಲ್ಲಿ, ಫ್ರಾನ್ಸ್‌ನಲ್ಲಿನ ಆಕ್ಸೆಂಚರ್‌ನ ರಾಷ್ಟ್ರೀಯ ವ್ಯವಸ್ಥಾಪಕ ನಿರ್ದೇಶಕರಾಗಿ ನ್ಯಾಂಟೆರ್ಮೆ ಅವರನ್ನು ನೇಮಿಸಲಾಯಿತು.[] ಮುಂದಿನ ವರ್ಷ, ಅವರು ಆಕ್ಸೆಂಚರ್‌ನ ಜಾಗತಿಕ ನಾಯಕತ್ವ ತಂಡವನ್ನು ಸೇರಿಕೊಂಡರು ಮತ್ತು ಕಂಪನಿಯ ಮುಖ್ಯ ನಾಯಕತ್ವ ಅಧಿಕಾರಿಯಾದರು, ಮತ್ತು ಅದರ ನಾಯಕತ್ವದ ಬೆಳವಣಿಗೆಯನ್ನು ನಿರ್ವಹಿಸಿದರು.[][][]

೨೦೦೭ ರಲ್ಲಿ, ನಾಂಟರ್ಮೆ ಅವರನ್ನು ಬ್ಯಾಂಕಿಂಗ್, ವಿಮೆ ಮತ್ತು ಬಂಡವಾಳ ಮಾರುಕಟ್ಟೆಗಳಲ್ಲಿ ಕ್ಲೈಂಟುಗಳ ಮೇಲೆ ಕೇಂದ್ರೀಕರಿಸಿದ ಅಕ್ಸೆಂಚರ್‌ನ ಜಾಗತಿಕ ಹಣಕಾಸು ಸೇವೆಗಳ ಕಾರ್ಯಾಚರಣೆ ಗುಂಪಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕ ಮಾಡಲಾಯಿತು.[][][][] ಅಕ್ಟೋಬರ್ ೨೦೧೦ ರಲ್ಲಿ, ಆಕ್ಸೆಂಚರ್‌ನ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನಾಂಟೆರ್ಮೆ ಕಾರ್ಯನಿರ್ವಹಿಸುತ್ತಾರೆ ಎಂದು ಕಂಪನಿಯು ಘೋಷಿಸಿತು, ಆ ಸಮಯದಲ್ಲಿ ಅವರು ನಿರ್ದೇಶಕರ ಮಂಡಳಿಯ ಸದಸ್ಯರಾದರು.[೧೦]ಅವರು ೧ ಜನವರಿ ೨೦೧೧ ರಂದು ಅಧಿಕೃತವಾಗಿ ಸಿ‌ಇಒ ಆಗಿ ಅಧಿಕಾರವನ್ನು ವಹಿಸಿಕೊಂಡರು.[][][೧೦] ಮತ್ತು ಫೆಬ್ರವರಿ ೨೦೧೩ ರಲ್ಲಿ ಅಧ್ಯಕ್ಷರ ಹೆಚ್ಚುವರಿ ಪಾತ್ರವನ್ನು ವಹಿಸಿಕೊಂಡರು.[]

೧೧ ಜನವರಿ ೨೦೧೯ ರಂದು, ಆರೋಗ್ಯ ಕಾಳಜಿಯನ್ನು ಉಲ್ಲೇಖಿಸಿ ನ್ಯಾಂಟೆರ್ಮೆ ಅಧ್ಯಕ್ಷ ಮತ್ತು ಸಿ‌ಇಒ ಸ್ಥಾನಕ್ಕೆ ರಾಜೀನಾಮೆ ನೀಡಿದರು.[೧೧] ಅವರು ಒಟ್ಟು ೩೬ ವರ್ಷಗಳ ಕಾಲ ಆಕ್ಸೆಂಚರ್ ನಲ್ಲಿ ಕೆಲಸ ಮಾಡಿದರು.[೧೨]

ಇತರ ಚಟುವಟಿಕೆಗಳು

[ಬದಲಾಯಿಸಿ]
ಪಿಯರೆ ನ್ಯಾಂಟೆರ್ಮೆ ಬರ್ಲಿನ್ ನಲ್ಲಿ ಫ್ಜೋರ್ಡ್ ನಲ್ಲಿ ಸ್ಟುಡಿಯೊ ನಾಯಿಯಾದ 'ಗ್ರಾವಿಟಿ' ಜೊತೆ

ನ್ಯಾಂಟೆರ್ಮೆ ಫ್ರಾನ್ಸ್‌ನ ಅತಿದೊಡ್ಡ ಉದ್ಯೋಗ ದಾತರ ಸಂಘಟನೆಯಾದ ಮೂವ್ಮೆಂಟ್ ಡೆಸ್ ಎಂಟ್ರಪ್ರೈಸಸ್ ಡೆ ಫ್ರಾನ್ಸ್ (ಎಮ್‌ಇಡಿಇಎಫ್) ನಲ್ಲಿ ಭಾಗವಹಿಸಿದ್ದರು ಮತ್ತು ೨೦೦೫ ರಿಂದ ೨೦೧೩ ರವರೆಗೆ ಈ ಸಂಘಟನೆಯ ಆರ್ಥಿಕ ವ್ಯವಹಾರಗಳು ಮತ್ತು ಸಾರ್ವಜನಿಕ ಹಣಕಾಸುಗಳ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.[] ಅವರು ಎಮ್‌ಇಡಿ‌ಇಎಫ್‌ ನ ಕಾರ್ಯಕಾರಿ ಮಂಡಳಿಯಲ್ಲಿಯೂ ಸೇವೆ ಸಲ್ಲಿಸಿದರು.[]

೨೦೦೭ ಮತ್ತು ೨೦೧೧ ರ ನಡುವೆ, ನ್ಯಾಂಟೆರ್ಮೆ ಅವರು ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ಸಂಶೋಧನೆ ಮತ್ತು ಸಲಹಾ ಕ್ಷೇತ್ರಗಳಿಂದ ಸದಸ್ಯ ಕಂಪನಿಗಳನ್ನು ಹೊಂದಿರುವ ಫ್ರೆಂಚ್ ಸಲಹಾ ಸಂಘ ಎಸ್‌ವೈಎನ್‌ಟಿ‌ಇಸಿ ನ ಅಧ್ಯಕ್ಷರಾಗಿದ್ದರು.[][೧೩][೧೪]

ನಾಂಟೆರ್ಮ್ ಬಿ೨೦ ಸಮ್ಮಿಟ್‌ಗಳ ಕೆಲವು ಕಾರ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಬಿ೨೦ ಗ್ರೀನ್ ಗ್ರೋತ್ ಆಕ್ಷನ್ ಅಲ್ಲಿನ ನಿರ್ವಾಹಕ ಸಮಿತಿಯ ಸದಸ್ಯರಾಗಿದ್ದಾರೆ. ಈ ಸಮಿತಿಯು ಪರಿಸರ ಹಾಗೂ ಸಾಮಾಜಿಕ ನ್ಯಾಯದ ಕ್ಷೇತ್ರದಲ್ಲಿ ಖಾಸಗಿ ನಿಧಿಯ ಅಗತ್ಯತೆಯ ಕುರಿತು ಕಾರ್ಯ ನಡೆಸಲು ವಿಶ್ವ ಆರ್ಥಿಕ ವೇದಿಕೆಯ ಮೂಲಕ ಪ್ರಾರಂಭಗೊಂಡಿದೆ.[][೧೫] ಅವರು ಅಲಯನ್ಸ್‌ನ ಎನರ್ಜಿ ಎಫಿಷಿಯನ್ಸಿ ವರ್ಕಿಂಗ್ ಗ್ರೂಪ್‌ನ ಸಹ-ಅಧ್ಯಕ್ಷರಾಗಿದ್ದರು ಮತ್ತು ಆರ್ಥಿಕ ನೀತಿ ಕಾರ್ಯ ಗುಂಪಿನ ಸದಸ್ಯರಾಗಿ ಸೇವೆ ಸಲ್ಲಿಸಿದರು.[]

ಮೇಲಿನ ಪಾತ್ರಗಳ ಜೊತೆಗೆ, ಯುರೋಪಿಯನ್ ಕಮಿಷನ್ ನ ಯುರೋಪಿಯನ್ ಕ್ಲೌಡ್ ಪಾಲುದಾರಿಕೆಯ ಸ್ಟೀರಿಂಗ್ ಬೋರ್ಡ್‌ನಲ್ಲಿ ನ್ಯಾಂಟೆರ್ಮೆ ಸೇವೆ ಸಲ್ಲಿಸಿದರು, ಇದು ಯುರೋಪ್‌ನಲ್ಲಿ ಆರ್ಥಿಕ ಬೆಳವಣಿಗೆಯನ್ನು ಸೃಷ್ಟಿಸಲು ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳನ್ನು ಬಳಸಲು ಸಾರ್ವಜನಿಕ ವಲಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.[][೧೬][೧೭] ಯುರೋಪ್ ಮತ್ತು ಅಮೆರಿಕದ ನಡುವಿನ ವ್ಯಾಪಾರವನ್ನು ಉತ್ತೇಜಿಸಲು ನೀತಿಗಳನ್ನು ರೂಪಿಸುವ ಸಿಇಒಗಳ ಸಮೂಹವಾದ ಟ್ರಾನ್ಸ್‌ಅಟ್ಲಾಂಟಿಕ್ ಬಿಸಿನೆಸ್ ಡೈಲಾಗ್‌ನ ಮಂಡಳಿಯ ಸದಸ್ಯರಾಗಿಯೂ ಅವರು ಕಾರ್ಯನಿರ್ವಹಿಸಿದರು.[]

ಗುರುತಿಸುವಿಕೆ

[ಬದಲಾಯಿಸಿ]

೨೦೧೦ ರಲ್ಲಿ, ನ್ಯಾಂಟೆರ್ಮೆ ಅವರಿಗೆ ಫ್ರೆಂಚ್ ವ್ಯಾಪಾರದ ನಾಯಕರಾಗಿ ಕೆಲಸ ಮಾಡಿದ್ದಕ್ಕಾಗಿ ಲೀಜನ್ ಆಫ್ ಆನರ್ ನ "ಚೆವಲಿಯರ್" ಚಿಹ್ನೆಯನ್ನು ನೀಡಲಾಯಿತು.[]

೨೦೧೪ ಫೆಬ್ರವರಿ ೧೧ ರಂದು, ನಾನ್ಟೆರ್ಮ್ ಅವರು ಯು.ಎಸ್. ಅಧ್ಯಕ್ಷ ಬಾರಾಕ್ ಒಬಾಮಾ ಅವರ ಆಡಳಿತದಲ್ಲಿ ಫ್ರಾನ್ಸಿಸ್ ಹೊಲ್ಲಾಂಡ್ ರಾಷ್ಟ್ರಪತಿಯ ಗೌರವಾರ್ಥವಾಗಿ ವೈಟ್ ಹೌಸ್ ನಲ್ಲಿ ಆಯೋಜಿಸಲ್ಪಟ್ಟ ಡನ್ನರ್‌ಗೆ ಹಾಜರಾಗಿದ್ದರು.[೧೮]

ಆರೋಗ್ಯ ಕಾಳಜಿ ಮತ್ತು ಸಾವು

[ಬದಲಾಯಿಸಿ]

೨೦೧೬ ರಲ್ಲಿ ನಾಂಟೆರ್ಮೆಗೆ ಕೊಲೊನ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಸಿ‌ಇಒ ಆಗಿ ಕೆಳಗಿಳಿದ ಇಪ್ಪತ್ತು ದಿನಗಳ ನಂತರ, ೩೧ ಜನವರಿ ೨೦೧೯ ರಂದು, ಪ್ಯಾರಿಸ್‌ನಲ್ಲಿ ೫೯ ನೇ ವಯಸ್ಸಿನಲ್ಲಿ ನ್ಯಾಂಟೆರ್ಮೆ ನಿಧನರಾದರು.[೧೯]

ಉಲ್ಲೇಖಗಳು

[ಬದಲಾಯಿಸಿ]
  1. "Search results". www.google.com. ಟೆಂಪ್ಲೇಟು:Better source needed
  2. ೨.೦ ೨.೧ ೨.೨ ೨.೩ ೨.೪ ೨.೫ ೨.೬ ೨.೭ Anna Teo (30 March 2013). "The global Chevalier". Business Times. Retrieved 30 June 2013.
  3. ೩.೦ ೩.೧ Dibyendu Ganguly (17 June 2011). "How Accenture's new CEO Pierre Nanterme wants to make the company truly global". The Economic Times. Archived from the original on 6 ಜೂನ್ 2016. Retrieved 30 June 2013.
  4. ೪.೦ ೪.೧ ೪.೨ Alain Ruello (17 November 2005). "Un entrepreneur à la tête d'Accenture France". Les Echos. Archived from the original on 21 ಅಕ್ಟೋಬರ್ 2013. Retrieved 30 June 2013.
  5. ೫.೦ ೫.೧ ೫.೨ ೫.೩ ೫.೪ ೫.೫ ೫.೬ "Pierre Nanterme". Bloomberg BusinessWeek. Bloomberg. Archived from the original on 6 June 2013. Retrieved 29 April 2013.
  6. "B20 Working Groups' Contributors" (PDF). B20 Business Summit. November 2011. Archived from the original (PDF) on 26 April 2012. Retrieved 29 June 2013.
  7. ೭.೦ ೭.೧ Virgile Juhan (24 October 2010). "Les nominations du 26 octobre 2010 : acteurs IT". Journal du Net. Retrieved 30 June 2013.
  8. ೮.೦ ೮.೧ ೮.೨ Cyrille Chausson (21 October 2010). "Pierre Nanterme prendra les rênes d'Accenture en 2011". LeMagIT. Retrieved 30 June 2013.
  9. "Accenture Names Pierre Nanterme Chief Leadership Officer". WebWire. 13 June 2013. Retrieved 30 July 2013.
  10. ೧೦.೦ ೧೦.೧ Matthew Monks (24 November 2010). "New Financial Group Chief at Accenture". American Banker. Retrieved 30 June 2013.
  11. Stacey Jones (11 January 2019). "Accenture Chairman & CEO Pierre Nanterme Steps Down for Health Reasons David Rowland Appointed Interim Chief Executive Officer Marge Magner Named Non-Executive Chair". Retrieved 11 January 2019.
  12. "Accenture Announces Passing of Former Chairman and CEO Pierre Nanterme | Accenture Newsroom". accntu.re (in ಇಂಗ್ಲಿಷ್). Retrieved 31 January 2019.
  13. Carole Bellemare (1 July 2009). "Hélène Pelosse: a French Agency for Renewable Energy". Le Figaro. Retrieved 30 June 2013.
  14. "Federation Syntec elects Jean-Luc Placet president" (Press release). Corporate IT Update. 26 July 2011. Retrieved 5 August 2013.
  15. Brindusa Fidenza (28 June 2013). "Accelerating investment in green growth". Korea Times. Retrieved 30 June 2013.
  16. Manon Malhère (3 December 2012). "INFORMATION SOCIETY : NEW PARTNERSHIP TO BOOST PUBLIC SECTOR USE OF CLOUD SERVICES". Europolitics. Retrieved 30 June 2013.(subscription required)
  17. "European Cloud Partnership". Digital Agenda for Europe. Retrieved 29 July 2013.
  18. Expected Attendees at Tonight’s State Dinner Office of the First Lady of the United States, press release of 11 February 2014.
  19. "Accenture's former CEO Nanterme dies". Reuters. 31 January 2019. Retrieved 31 January 2019.