ಪೀಯುಷ್ ಗೋಯಲ್ ಭಾರತ ಸರ್ಕಾರದಲ್ಲಿ ಇಂಧನ, ಹೊಸ ಮತ್ತು ನವಿಕರಿಸಬಲ್ಲ ಅಳವು ಮತ್ತು ಗಣಿಗಳ ಸ್ವತಂತ್ರ ಹೊಣೆಗಾರಿಕೆಯ ರಾಜ್ಯ ಮಂತ್ರಿ. ಪ್ರಸಕ್ತ ಅವರು ಸಂಸದರಾಗಿದ್ದಾರೆ (ರಾಜ್ಯ ಸಭೆ) ಮತ್ತು ಮುಂಚೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಖಜಾಂಚಿಯಾಗಿದ್ದರು. ಅವರು ಬಿಜೆಪಿಯ ಮಾಹಿತಿ ಸಂವಹನ ಪ್ರಚಾರ ಸಮಿತಿಯ ನೇತೃತ್ವ ವಹಿಸಿದ್ದರು ಮತ್ತು ಭಾರತದ ೨೦೧೪ರ ಸಾರ್ವತ್ರಿಕ ಚುನಾವಣೆಗಾಗಿ ಸಾಮಾಜಿಕ ಸಂಪರ್ಕಜಾಲ ಮಾಧ್ಯಮ ಪ್ರಭಾವ ಒಳಗೊಂಡಂತೆ ಪಕ್ಷದ ಪ್ರಚಾರ ಮತ್ತು ಜಾಹೀರಾತು ಕಾರ್ಯಾಚರಣೆಯ ಮೇಲುಸ್ತುವಾರಿ ನೋಡಿಕೊಂಡರು.[೧]
ಅವರು ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಕೇಂದ್ರ ನೌಕಾಯಾನ ಸಚಿವರಾಗಿ ಸೇವೆಸಲ್ಲಿಸಿದ್ದ ದಿವಂಗತ ಶ್ರೀ ವೇದ್ ಪ್ರಕಾಶ್ ಗೋಯಲ್‍ರ ಪುತ್ರ.
ಅವರು ಒಳ್ಳೆ ಶೈಕ್ಷಣಿಕ ದಾಖಲೆ ಹೊಂದಿದ್ದಾರೆ - ಭಾರತ ಮಟ್ಟದ ಎರಡನೇ ರ‍್ಯಾಂಕ್ ಧಾರಕ ಸನದಿ ಲೇಖಾಪಾಲ ಮತ್ತು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕಾನೂನು ವಿಭಾಗದಲ್ಲಿ ಎರಡನೇ ರ‍್ಯಾಂಕ್ ಧಾರಕ. ಅವರು ಯೇಲ್ ವಿಶ್ವವಿದ್ಯಾಲಯ (೨೦೧೧), ಆಕ್ಸ್‌ಫ಼ರ್ಡ್ ವಿಶ್ವವಿದ್ಯಾಲಯ (೨೦೧೨) ಮತ್ತು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ (೨೦೧೩) ನಾಯಕತ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಪ್ರಸಕ್ತ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‍ನ ಮಾಲೀಕ / ಅಧ್ಯಕ್ಷ ನಿರ್ವಹಣೆ ಕಾರ್ಯಕ್ರಮದಲ್ಲಿ (ಒಪಿಎಮ್) ತೊಡಗಿದ್ದಾರೆ.