Pundalik | |
---|---|
ಗೌರವಗಳು | A central figure in the legends of god Vithoba |
ತತ್ವಶಾಸ್ತ್ರ | Varkari |
ಪುಂಡಲೀಕ' ಅಥವಾ ಪುನ್ದರಿಕ' ಹಿಂದೂ ದೇವತೆ ವಿಠ್ಠಲನ ಪುರಾಣ ಕಥೆಗಳಲ್ಲಿ ಒಂದು ಅವತಾರ , ವಿಠ್ಠಲನು ವೈಷ್ಣವ ದೇವತೆ, ವಿಷ್ಣು ಹಾಗೂ ಆತನನ್ನು ಕೃಷ್ಣನೊಂದಿಗೆ ಗುರುತಿಸಲಾಗುತ್ತದೆ ಪುಂಡಲೀಕ ವಿಠ್ಠಲನನ್ನು ಪಂಢರಪುರ ಕ್ಕೆ ಬರಮಾಡಿಕೊಂಡನೆಂದು ಹೇಳಲಾಗುತ್ತದೆ, ಇಲ್ಲಿ ವಿಠ್ಠಲನ ಮುಖ್ಯ ದೇವಸ್ಥಾನ ಇದೆ . ಪುಂಡಲೀಕ ವಾರಕರಿ ಪಂಗಡದ ಸ್ಥಾಪಕನೆಂದು ಭಾವಿಸಲಾಗುತ್ತದೆ, ಇವರು ವಿಠ್ಠಲನ ಭಕ್ತರು .
ಪುಂಡಲೀಕನನ್ನು ಐತಿಹಾಸಿಕವಾಗಿ ವಿಠ್ಠಲ-ಕೇಂದ್ರಿತ ವಾರಕರಿ ಪಂಗಡದ ಸ್ಥಾಪನೆ ಹಾಗೂ ಅಬಿವೃದ್ಧಿಯೊಂದಿಗೆ ಗುರುತಿಸಲಾಗುತ್ತದೆ.[೧] ರಾಮಕೃಷ್ಣ ಗೋಪಾಲ್ ಭಂಡಾರ್ಕರ್ ಪ್ರಕಾರ ಪುಂಡಲೀಕ ವಾರಕರಿ ಪಂಗಡ ಸ್ಥಾಪಕ ಹಾಗೂ the ಮರಾಠ ದೇಶದ ಇದರ ವಿಸ್ತರಣೆಗೆ ಮುಖ್ಯ ಕಾರಣ.[೨] ಸ್ಟೇವೆಂಸನ್ (೧೮೪೩) ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿ , ಅವರನ್ನು ಜೈನ ಅಥವಾ ಬೌಧ ಧರ್ಮದವರೆನ್ನುತ್ತಾರೆ, ಏಕೆಂದರೆ ವಾರಕರಿ ಸಂಪ್ರದಾಯಗಳು ಜೈನ ಹಾಗು ಬೌಧ ನೀತಿಪಾಠದ ಮೇಲೆ ಅವಲಂಭಿಸಿದೆ, ಹಾಗೂ ವಿಠ್ಠಲನನ್ನು ವಿಷ್ಣುವಿನ ಅವತಾರ ಬುದ್ಧನೆಂದು ಹೇಳಲಾಗುತ್ತದೆ.[೩] ಫ್ರಜೆರ್, ಎಡ್ವರ್ಡ್ಸ್ ಹಾಗೂ ಪಿ.ಅರ. ಭಂಡಾರ್ಕರ್ (೧೯೨೨) ಹೇಳುವ ಪ್ರಕಾರ ಪುಂಡಲೀಕ ಶಿವ ಹಾಗು ವಿಷ್ಣುವಿನನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ, ಹಾಗೂ ಈ ಪಂಗಡ ಕರ್ನಾಟಕದಲ್ಲಿ ಪ್ರಾರಂಭವಾಯಿತು.[೪] ರಾನಡೆ (೧೯೩೩) ಪ್ರಕಾರ ಪುಂಡಲೀಕ, ಒಬ್ಬ ಕನ್ನಡ ಸಂತ, ಕೇವಲ ವಾರಕರಿ ಪಂಗಡದ ಸ್ಥಾಪಕ ಮಾತ್ರ ಅಲ್ಲ ಇವನು ಪಂಢರಪುರ ದೇವಸ್ತಾನದ ಮೊದಲ ಆರಾಧಕ.[೫] ಉಪಾಧ್ಯಾಯ "ಆರಾಧಕ" ಸಿದ್ಧಾಂತವನ್ನು ಒಪ್ಪಿಕೊಳುತ್ತಾರೆ ಆದರೆ ಅವ್ರು ಮೂಲಭೂತ ಕನ್ನಡದವರು ಎಂಬುದನ್ನು ನಿರಾಕರಿಸುತ್ತಾರೆ.[೪] ತುಳಪುಳೆ ಕೂಡ ಪುಂಡಲೀಕನನ್ನು ವಾರಕರಿ ಪಂಗಡದ ಸ್ಥಾಪಕ ಎಂಬುದನ್ನು ಒಪ್ಪಿಕೊಳುತ್ತಾರೆ ಆದರೆ ಅವರು ಒಂದು ನಿರ್ದಾರಿತ ಸಮಯವನ್ನು ಕೊಡಲು ನಿರಾಕರಿಸುತ್ತಾರೆ, "ಅಧಿಕೃತ ಸಾಕ್ಷಿಯ ಕೊರತೆಇಂದಾಗಿ".[೪] ಎಂ. ಎಸ. ಮೇಟ್ ಪ್ರಕಾರ, ಪುಂಡಲೀಕ ಹೊಯ್ಸಳ ರಾಜ ವಿಷ್ಣುವರ್ಧನನನ್ನು ಒಪ್ಪಿಸಿ ಪಂಢರಪುರದಲ್ಲಿ ವಿಷ್ಣು ದೇವಸ್ಥಾನ ಕಟ್ಟಿಸುವದರಲ್ಲಿ ಮುಖ್ಯ ಪಾತ್ರ ವಹಿಸಿದರು, ಇದರಿಂದಾಗಿ ಪುಂಡಲೀಕ ೧೨ನೆಯ ಶತಮಾನದವನಿರಬಹುದು ಎನ್ನಲಾಗುತ್ತದೆ .[೬] ದೆಲಯೂರಿ (೧೯೬೦) ಪ್ರಕಾರ ಪುಂಡಲೀಕ ಒಬ್ಬ ಯೋಗಿ, ಕರ್ನಾಟಕದ ವೈಷ್ಣವ ಹರಿದಾಸ ಪಂಗಡದಿಂದ ಪ್ರಭಾವಿತರಾಗಿದ್ದರು, ಹಾಗು ವಿಠ್ಠಲ ಆರಾಧನೆಯಲ್ಲಿ ಬದಲಾವಣೆ ತಂದರು . ಪುಂಡಲೀಕ ವಾರಕರಿ ಪಂಗಡದ ಸ್ಥಾಪಕ ಮಾತ್ರ ಅಲ್ಲ, ವಿಠ್ಠಲನನ್ನು ವಿಷ್ಣುವಿನೊಂದಿಗೆ ಗುರುತಿಸಿದ ಮೊದಲ ವ್ಯಕ್ತಿ. ಪುಂಡಲೀಕನಿಗೆ ಗೌರವ ಸೂಚಕವಾಗಿ ಪಂಢರಪುರವನ್ನು ಪುನ್ದ್ರಿಕ-ಕ್ಷೇತ್ರ - ಪುಂಡಲೀಕನ ಪುಣ್ಯ ಕ್ಷೇತ್ರ ಎಂದು ಹೆಸರಿಡಲಾಯಿತು.[೬]
ರೆಸಿದೆ (೧೯೬೫), ಧನ್ಪಲ್ವರ್ (೧೯೭೨), ಹಾಗು ವುದೆವಿಲ್ಲೇ (೧೯೭೪) ವಿದ್ವಾಂಸರು ಪುಂಡಲೀಕನ ಐತಿಹಾಸಿಕತೆ ಪ್ರಶ್ನಿಸಿದ್ದಾರೆ, ಹಾಗೂ ಅವನನ್ನು ಕೇವಲ ಒಬ್ಬ ಕಾಲ್ಪನಿಕ ವ್ಯಕ್ತಿ ಎಂದು ಹೇಳಿದ್ದಾರೆ. ಧಾರ್ಮಿಕ ಇತಿಹಾಸಕಾರ ಅರ.ಸಿ. ಧೆರೆ, ಸಾಹಿತ್ಯ ಅಕಾಡೆಮಿ ಪುರಸ್ಕಾರ ವಿಜೇತ ಅವರ ಕೃತಿ ಶ್ರೀ ವಿಠ್ಠಲ: ಏಕ ಮಹಸಮನ್ವಯ , ಹೇಳುವುದು, ವಿಠ್ಠಲನನ್ನು, ವಿಷ್ಣುವಿನೊಂದಿಗೆ ಗುರುತಿಸಿದರಿಂದಾಗಿ ಶೈವ (ಶಿವನಿಗೆ ಸೇರಿದು) ಪುನ್ದರಿಕ ದೇವಸ್ಥಾನ , ಪುಂಡಲೀಕನ ವೈಷ್ಣವ ದೇವಸ್ಥಾನವಾಯಿತು . ಇದಕ್ಕೆ ಮುಖ್ಯ ವಾದ ಪುಂಡಲೀಕನ ಸ್ಮಾರಕ ಕಟ್ಟಡ ಶೈವ ಕಲಶ, ವೈಷ್ಣವವಲ್ಲ, ಅದರಲ್ಲಿ ಶಿವ-ಲಿಂಗವಿದೆ, ಶಿವನ ಸಂಕೇತ.[೭]
ಪುಂಡಲೀಕ ಹಾಗು ವಿಠ್ಠಲನ ದಂತಕತೆಗಳನ್ನು ವರ್ಣಿಸುವ ಪಠ್ಯಗಳನ್ನು ವರ್ಗೀಕರಿಸಬಹುದು, ವಾರಕರಿ ಸಂಪ್ರದಾಯ, ಬ್ರಾಹ್ಮಣ ಸಂಪ್ರದಾಯ ಹಾಗು ರೆಸಿದೆ ಹೇಳುವಂತೆ "ಮೂರನೆಯ ಸಂಪ್ರದಾಯ", ಇದರಲ್ಲಿ ವಾರಕರಿ ಹಾಗು ಬ್ರಾಹ್ಮಣ ಸಂಪ್ರದಾಯ ಎರಡನ್ನು ಕಾಣಬಹುದು. ವಾರಕರಿ ಪಠ್ಯಗಳನ್ನೂ ಮರಾಠಿಯಲ್ಲಿ ಬರೆಯಲಾಗಿದೆ, ಬ್ರಾಹ್ಮಣ ಪಠ್ಯಗಳನ್ನೂ ಸಂಸ್ಕೃತದಲ್ಲಿ, ಹಾಗು "ಮೂರನೆಯ ಸಂಪ್ರದಾಯ"ವನ್ನು ಮರಾಠಿಯಲ್ಲಿ ಬ್ರಾಹ್ಮಣರು ಬರೆದಿದ್ದಾರೆ.
ವಾರಕರಿ ಗ್ರಂಥಗಳು: ಮಹಿಪತಿಯಾ ಭಕ್ತಲಿಳಮ್ರಿತ ಹಾಗು ಭಕ್ತವಿಜಯ , ಬಹಿನಬಿಯಾ ಪುಂಡಲೀಕa-ಮಹಾತ್ಮ್ಯ , ಹಾಗು ನಾಮದೇವನ ಅಭಂಗ . ಇವೆಲ್ಲವೂ ಪುಂಡಲೀಕ ಪುರಾಣ ಹೇಳುತ್ತಾವೆ. ಬ್ರಾಹ್ಮಣ ಗ್ರಂಥಗಳು: ಸ್ಕಂದ ಪುರಾಣದ ಪಾಂಡುರಂಗ-ಮಹಾತ್ಮ್ಯ (೯೦೦ ಅಧ್ಯಾಯಗಳಿವೆ); ಪದ್ಮ ಪುರಾಣದ ಪಾಂಡುರಂಗ-ಮಹಾತ್ಮ್ಯ (೧,೨೦೦ ಅಧ್ಯಾಯಗಳಿವೆ); ಪದ್ಮ ಪುರಾಣದ ಭೀಮ-ಮಹಾತ್ಮ್ಯ ; ಹಾಗು ವಿಷ್ಣು ಪುರಾಣದ ಮಾತೊಂದು ಪಾಂಡುರಂಗ-ಮಹಾತ್ಮ್ಯ .[೮][೯][೧೦] "ಮೂರನೆಯ ಸಂಪ್ರದಾಯ" ಗ್ರಂಥಗಳು: ಬ್ರಾಹ್ಮಣ ಶ್ರೀಧರನ ಪಾಂಡುರಂಗ-ಮಹಾತ್ಮ್ಯ (೭೫೦ ಅಧ್ಯಾಯಗಳಿವೆ), ಹಾಗು ಪ್ರಹ್ಲಾದ ಮಹಾರಾಜರ ಆದೆ ಹೆಸರ ಇನ್ನೊಂದು ಗ್ರಂಥ (೧೮೧ ಅಧ್ಯಾಯಗಳಿವೆ).[೧೧][೧೨]
{{cite journal}}
: More than one of |work=
and |journal=
specified (help); Unknown parameter |month=
ignored (help){{cite journal}}
: Cite has empty unknown parameter: |month=
(help); More than one of |work=
and |journal=
specified (help){{cite book}}
: Unknown parameter |chapterurl=
ignored (help){{cite journal}}
: Cite has empty unknown parameter: |month=
(help)