ಪುಷ್ಪಾಂಜಲಿ (ಪುಷ್ಪ - ಹೂವು, ಅಂಜಲಿ - ಮಡಚಿದ ಕೈಗಳಿಂದ ಅರ್ಪಣೆ) ಭಾರತೀಯ ದೇವತೆಗಳಿಗೆ ಹೂವುಗಳ ಅರ್ಪಣೆ. ಪುಷ್ಪಾಂಜಲಿ ಒಂದು ಪ್ರದರ್ಶನದಲ್ಲಿನ ಮೊದಲ ನೃತ್ಯ. ಅದು ನೃತ್ಯದ ಅಧಿಪತಿ ನಟರಾಜ, ಗುರು, ಸಂಗೀತಗಾರರು ಮತ್ತು ಪ್ರೇಕ್ಷಕರಿಗೆ ವಂದನೆ.
ನರ್ತಕಿಯರು ಕೈಯಲ್ಲಿ, ಪುಷ್ಪಪುಟ ಹಸ್ತದಲ್ಲಿ ಹೂವನ್ನು ಹಿಡಿದು ರಂಗವನ್ನು ಪ್ರವೇಶಿಸಬೇಕು. ನಂತರ ಹೂವನ್ನು ಹಿಡಿದು ನೃತ್ಯ ಮಾಡುತ್ತಾ, ನಟರಾಜ, ಇಷ್ಟ ದೇವತೆ, ಗುರು-ಹಿರಿಯರಿಗೆ, ರಂಗಮಂಟಪಕ್ಕೆ ಪುಷ್ಪವನ್ನು ಅರ್ಪಿಸಿ ವಂದಿಸಬೇಕು. ಪ್ರತೀ ದೇವರಿಗೂ ಪ್ರತ್ಯೇಕ ಹೂವುಗಳನ್ನು ಅರ್ಪಿಸಬೇಕು ಎಂಬ ನಿಯಮವಿದೆ.