ಪ್ರಕಾಶ್ ನಂಜಪ್ಪ (ಜನನ: ೨೯ ಫೆಬ್ರವರಿ ೧೯೭೬) ರವರು ೧೦ ಮೀಟರ್ ಏರ್ ಪಿಸ್ತೂಲ್ ಹಾಗೂ ೫೦ ಮೀಟರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಭಾಗವಹಿಸುವ ಭಾರತೀಯ ಶೂಟರ್ (ಗುರಿಕಾರ). ಯಾರು ಪೈಪೋಟಿ ನಲ್ಲಿ ಇವರು ೨೦೧೩ರ ಐ.ಎಸ್.ಎಸ್.ಎಫ್ ವಿಶ್ವ ಕಫ್‌ನಲ್ಲಿ ಪದಕ ಗೆದ್ದ ಏಕ ಮಾತ್ರ ಭಾರತೀಯ. ಚ್ಯಾಂಗ್ವನ್, ದಕ್ಷಿಣ ಕೊರಿಯಾದಲ್ಲಿ ನೆಡೆದ ೨೦೧೩ರ ಐ.ಎಸ್.ಎಸ್.ಎಫ್ ವಿಶ್ವ ಕಫ್‌ನಲ್ಲಿ, ೧೦ ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಇವರು ಕಂಚಿನ ಪದಕ ಗೆದ್ದಿದರು[೧]. ಇದೆ ವಿಭಾಗದಲ್ಲಿ ಗ್ಲ್ಯಾಸ್ಗೋದಲ್ಲಿ ನೆಡೆದ ೨೦೧೪ ಕಾಮನ್ವೆಲ್ತ್ ಗೇಮ್ಸ್ ಬೆಳ್ಳಿಯ ಪದಕ ಗೆದ್ದರು[೨]
ಪ್ರಕಾಶ್ ನಂಜಪ್ಪ ಜನಿಸಿದದ್ದು ಬೆಂಗಳೂರಿನಲ್ಲಿ, ಫೆಬ್ರುವರಿ ೨೯, ೧೯೭೬ ರಂದು, ಇವರ ತಂದೆ ಪಿ. ಎನ್. ಪಾಪಣ್ಣ, ಒಬ್ಬರು ರಾಷ್ಟ್ರೀಯ ಮಟ್ಟದ ಶೂಟರ್. ಪ್ರಕಾಶ್ ಅವರು ೧೯೯೯ ರಲ್ಲಿ ಶೂಟಿಂಗ್ ಆರಂಭಿಸಿದರು, ಆದರೂ ಮೋಟಾರ್ ಬೈಕ್ ತಮ್ಮ ಪ್ರಾಥಮಿಕ ಆಸಕ್ತಿ ಆಗಿತ್ತು. ೨00೩ ರಲ್ಲಿ, ಅವರು ಕೆನಡಾಗೆ ತೆರಳಿದರು ಮತ್ತು ಅಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ೨೦೦೯ ರ ತನಕ ಕೆಲಸ ಮಾಡಿದರು, ಇವರ ತಂದೆ ಭಾರತಕ್ಕೆ ಬರಲು ಒತ್ತಾಯಸಿದಾಗ, ಅವರು ಕೆಲಸ ಬಿಟ್ಟು ಭಾರತಕ್ಕೆ ಬಂದರು ಮತ್ತು ಮತ್ತೆ ಕ್ರೀಡೆಯತ್ತ ಗಮನ ಹರಿಸಿದರು.[೩]
ನಂಜಪ್ಪನವರು ಚ್ಯಾಂಗ್ವನ್, ದಕ್ಷಿಣ ಕೊರಿಯಾದಲ್ಲಿ ನೆಡೆದ ೨೦೧೩ರ ಐ.ಎಸ್.ಎಸ್.ಎಫ್ ವಿಶ್ವ ಕಫ್‌ನಲ್ಲಿ, ೧೦ ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕೊನೆಯ ಸುತ್ತಿನಲ್ಲಿ ೧೮೦.೨ ಅಂಕಗಳೊಂದಿಗೆ ಕಂಚಿನ ಪದಕ ಗಳಿಸಿದರು[೪] ಅದೇ ವರ್ಷ, ಅವರು ಗ್ರೆನಡಾ ವಿಶ್ವ ಕಪ್ ಸಮಯದಲ್ಲಿ ಮುಖದ ಬಲ ಭಾಗದಲ್ಲಿ ಪಾರ್ಶ್ವವಾಯುವಿನ ದಾಳಿಯಿಂದ ಬಳಲಿದರು, ಕಾಯಿಲೆಯಿಂದ ಚೇತರಿಸಿಕೊಂಡ ನಂತರ, ಅಕ್ಟೋಬರ್ ೨೦೧೩ ರಲ್ಲಿ, ಟೆಹ್ರಾನ್‌ನಲ್ಲಿ ನೆಡೆದ ಏಷ್ಯನ್ ಏರ್ ಗನ್ ಚಾಂಪಿಯನ್ಷಿಪ್‌ನ ೫೦ ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಪದಕ ಸಾಧಿಸಿದರು.[೩]
ಗ್ಲ್ಯಾಸ್ಗೋನಲ್ಲಿ,೨೦೧೪ ಕಾಮನ್ವೆಲ್ತ್ ಗೇಮ್ಸ್ ನಲ್ಲಿ, ೧೦ ಮೀ ಏರ್ ಪಿಸ್ತೂಲ್ ವಿಭಾಗದಲ್ಲಿ ಕೊನೆಯ ಸುತ್ತಿನಲ್ಲಿ ೧೯೮.೨ ಅಂಕ ಗಳಿಸುವ ಮೂಲಕ ಬೆಳ್ಳಿ ಪದಕ ಗೆದ್ದರು, ಇವರು ೫೮೦ ಅಂಕಗಳನ್ನು ಗಳಿಸುವ ಮೂಲಕ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದ್ದಿದರು.[೫]
ಅರ್ಹತಾ ಸುತ್ತಿನಲ್ಲಿ ೨೫ನೇ ಸ್ಥಾನ ಪಡೆಯುವ ಮೂಲಕ ಪುರಷರ ೫೦ ಮೀಟರ್ ಪಿಸ್ತೂಲ್ ವಿಭಾಗದಲ್ಲಿ, ೨೦೧೬ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು .[೬]
{{cite web}}
: Italic or bold markup not allowed in: |publisher=
(help)
{{cite web}}
: Italic or bold markup not allowed in: |publisher=
(help)
{{cite news}}
: Italic or bold markup not allowed in: |publisher=
(help)
{{cite news}}
: Italic or bold markup not allowed in: |publisher=
(help)