ಪ್ರತಿಮಾ ಬರುವಾ ಪಾಂಡೆ (೩ ಅಕ್ಟೋಬರ್ ೧೯೩೪ – ೨೭ ಡಿಸೆಂಬರ್ ೨೦೦೨) ಪಶ್ಚಿಮ ಅಸ್ಸಾಂನ ಧುಬ್ರಿ ಜಿಲ್ಲೆಯ ಗೌರಿಪುರದ ರಾಜಮನೆತನದ ಭಾರತೀಯ ಜಾನಪದ ಗಾಯಕಿ. ಬರುವಾ ಪಾಂಡೆ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು, ಹಾಗೂ ಗೋಲ್‌ಪರಿಯಾ (ಕೋಚ್ ರಾಜ್‌ಬೊಂಗ್‌ಶಿ / ಕಾಮತಪುರಿ/ ದೇಶಿ) ಹಾಡುಗಳಿಗೆ ಹಸ್ತಿರ್ ಕನ್ಯಾ ಮತ್ತು ಮುರ್ ಮಹುತ್ ಬಂಧುರೆ ಗೀತೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಪ್ರಕೃತಿಶ್ ಚಂದ್ರ ಬರುವಾ (ಲಾಲ್ಜಿ) ಅವರ ಪುತ್ರಿ ಮತ್ತು ದೇವದಾಸ್ ಖ್ಯಾತಿಯ ಚಲನಚಿತ್ರ ನಿರ್ಮಾಪಕ ಪ್ರಮಥೇಶ್ ಬರುವಾ ಅವರ ಸೊಸೆ.
ಬರುವಾ ಪಾಂಡೆ ಅಕ್ಟೋಬರ್ ೩ ೧೯೩೪ ರಂದು ಕಲ್ಕತ್ತಾದಲ್ಲಿ ಜನಿಸಿದರು. [೧] ಅವರು ನಗರದ ಗೋಖಲೆ ಸ್ಮಾರಕ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದರು. ನಂತರ ಅವರು ರಾಜಮನೆತನದ ಮನೆಯಾದ ಗೌರಿಪುರದ ಬಾಲಕಿಯರ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಲು ಅಸ್ಸಾಂಗೆ ತೆರಳಿದರು. ಬರುವಾ ಪಾಂಡೆ ತನ್ನ ಆರಂಭಿಕ ವರ್ಷಗಳನ್ನು ಕಲ್ಕತ್ತಾದಲ್ಲಿ ಮತ್ತು ತವರೂರು ಗೌರಿಪುರದ "ಗದಾಧರ್" ನದಿಯ ಪರಿಸರದ ನಡುವೆ ಕಳೆದರು. ಅವರು ಶಾಲೆಯಲ್ಲಿ ರವೀಂದ್ರಸಂಗೀತವನ್ನು ಕಲಿತಿದ್ದರು. ಆದರೆ ಅವಳು ತನ್ನ ತಂದೆ ಪ್ರಕೃತೇಶ್ ಚಂದ್ರ ಬರುವಾ (ಲಾಲ್ಜಿ) ಅವರ ಪ್ರೋತ್ಸಾಹದ ಮಾತುಗಳನ್ನು ಹೊರತುಪಡಿಸಿ ಯಾವುದೇ ಔಪಚಾರಿಕ ತರಬೇತಿಯನ್ನು ಸಂಗೀತವನ್ನು ಅಭ್ಯಸಿಸಲು ಪಡೆಯಲಿಲ್ಲ.
ಡಾ. ಭೂಪೇನ್ ಹಜಾರಿಕಾ ಅವರು ೧೯೫೫ ರಲ್ಲಿ ಗೌರಿಪುರಕ್ಕೆ ಭೇಟಿ ನೀಡಿದಾಗ ಮತ್ತು ಸಾಮಾಜಿಕ ಸಂದರ್ಭದಲ್ಲಿ ಆಯೋಜಿಸಲಾದ ಜಲ್ಸಾದಲ್ಲಿ ಭಾಗವಹಿಸಿದಾಗ ಬರುವಾ ಪಾಂಡೆಯವರ ಜೀವನದ ನಿರ್ಣಾಯಕ ಘಟ್ಟ ಬಂದಿತು. ಯುವ ಪ್ರತಿಮಾ, ಭಯದಿಂದ ನಾಲಿಗೆ ಕಟ್ಟಿಕೊಂಡಿದ್ದರೂ, ಗೋಲ್‌ಪರಿಯಾದಲ್ಲಿ ತನ್ನ ಧ್ವನಿ ಮತ್ತು ಲೋಕಗೀತೆಯ ಸಾಹಿತ್ಯವನ್ನು ಹಾಡಿದರು. ಗೋಲ್‌ಪರಿಯ ಭಾಷೆಯ ಲೋಕಗೀತೆಗಳು ಸಂಗೀತ ವಾದ್ಯಗಳಾದ ಧೋಲ್, ಜುನುಕಾ, ದೋಟೋರಾ, ದರಿಂದಾ, ಧುಲುಕಿ ಮತ್ತು ಕೊಳಲು ತಂತಿಗಳು ಮತ್ತು ಲಯಗಳೊಂದಿಗೆ ಹರಿಯುತ್ತದೆ. ಡಾ. ಹಜಾರಿಕಾ ಅವರು ಪ್ರತಿಮಾ ಅವರ ಗೀತೆಗಳಿಂದ ಪ್ರಭಾವಿತರಾದರು ಮತ್ತು ಈ ಧ್ವನಿಯು ಖಂಡಿತವಾಗಿಯೂ ಗೋಲ್‌ಪರಿಯ ಲೋಕಗೀತೆಯನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಭವಿಷ್ಯ ನುಡಿದರು. ವಾಸ್ತವವಾಗಿ, ಅವರು ಮೊದಲ ಬಾರಿಗೆ ಗೋಲ್ಪರಿಯಾ ಜಾನಪದ ಗೀತೆಯನ್ನು ತಮ್ಮ ಎರಾ ಬಟೋರ್ ಸುರ್ ಚಿತ್ರದಲ್ಲಿ ಪ್ರಸ್ತುತಪಡಿಸಿದರು. ಮಾವುತ ಹಾಡುಗಳ ಜೊತೆಗೆ, ಬರುವಾ ಪಾಂಡೆ ಅವರು ಸ್ಟೇಜ್ ಶೋಗಳಲ್ಲಿ ಪ್ರಸಿದ್ಧ ವಿ ಆರ್ ಇನ್ ದ ಸೇಮ್ ಬೋಟ್, ಬ್ರದರ್ [೨] ಎಂಬ ಹಾಡನ್ನು ಹಾಡುತ್ತಿದ್ದರು. ಅವರು ಗೌರಿಪುರ ಪಿಬಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಗಂಗಾ ಶಂಕರ್ ಪಾಂಡೆ ಅವರನ್ನು ವಿವಾಹವಾದರು. ತಮ್ಮ ಕುಟುಂಬದಲ್ಲಿ ಆನೆಗಳನ್ನು ಸೆರೆಹಿಡಿಯುವ ಹಳೆಯ ಕುಟುಂಬ ಸಂಪ್ರದಾಯಗಳಿಂದ ಅವರು ಸ್ಫೂರ್ತಿ ಪಡೆದಿದ್ದರು. ಆನೆಯನ್ನು ಹಿಡಿಯುವ ಮಾವುತರು ಹಾಡಿನ ರೂಪವನ್ನು ಹಾಡುತ್ತಾರೆ, ಅದು ಗೋಲ್ಪರಿಯ ಲೋಕಗೀತೆಯ ರೂಪವನ್ನು ನೀಡುತ್ತದೆ. ಇದನ್ನು ಅವರ "ಓ ಮೋರ್ ಮಹುತ್ ಬಂಧು ರೇ" ಹಾಡಿನಲ್ಲಿ ಕಾಣಬಹುದು.
ಗೋಲ್ಪರಿಯ ಲೋಕಗೀತೆಯನ್ನು ಜನಪ್ರಿಯಗೊಳಿಸುವಲ್ಲಿನ ಪ್ರವರ್ತಕ ಪ್ರಯತ್ನಗಳಿಗಾಗಿ ಪ್ರತಿಮಾ ಬರುವಾ ಪಾಂಡೆ ಅವರಿಗೆ ಪದ್ಮಶ್ರೀ [೪] ಮತ್ತು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಯಿತು. ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಪ್ರಬಿನ್ ಹಜಾರಿಕಾ, ಹಸ್ತಿರ್ ಕನ್ಯಾ ಅವರ ಜೀವನ ಮತ್ತು ಕೃತಿಗಳ ಮೇಲೆ ಮಾಡಿದ ಸಾಕ್ಷ್ಯಚಿತ್ರವು ೧೯೯೭ ರಲ್ಲಿ ಅತ್ಯುತ್ತಮ ಜೀವನಚರಿತ್ರೆಯ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದು, ಉತ್ತಮ ಮೆಚ್ಚುಗೆಯನ್ನು ಗಳಿಸಿ, ೧೯೯೮ ರಲ್ಲಿ ದಕ್ಷಿಣ ಏಷ್ಯಾದ ಚಲನಚಿತ್ರೋತ್ಸವದಲ್ಲಿ ಪ್ರಸಿದ್ದಿಯಾಯಿತು. ಚಲನಚಿತ್ರ ನಿರ್ಮಾಪಕ ಬಾಬಿ ಶರ್ಮಾ ಬರುವಾ ಅವರು ೨೦೧೫ ರ ಕೊನೆಯಲ್ಲಿ ಬರುವಾ ಪಾಂಡೆಯ ಜೀವನವನ್ನು ಆಧರಿಸಿದ ಪೂರ್ಣ-ಉದ್ದದ ಚಲನಚಿತ್ರವನ್ನು ಸೋನಾರ್ ಬರನ್ ಪಾಖಿ ಎಂಬ ಶೀರ್ಷಿಕೆಯಲ್ಲಿ ಚಿತ್ರೀಕರಿಸಲು ಪ್ರಾರಂಭಿಸಿದರು. ಎ.ಎಸ್.ಎಫ಼್.ಎಫ಼್.ಡಿ.ಸಿ. ಮತ್ತು ಬಿ.ಬಿ. ಎಂಟರ್‌ಟೈನ್‌ಮೆಂಟ್‌ನ ಸಹ-ನಿರ್ಮಾಣದಲ್ಲಿ, ಚಲನಚಿತ್ರವು ಡಿಸೆಂಬರ್ ೨೦೧೬ ರಲ್ಲಿ [೫] ಬಿಡುಗಡೆಯಾಯಿತು.
{{cite web}}
: CS1 maint: archived copy as title (link)