ಪ್ರತಿಮಾ ಸಿಂಗ್ | |
---|---|
![]() | |
Position | Small forward / Shooting Guard |
Height | 5 ft 8 in (1.73 m) |
Weight | 63 kg |
Nationality | ![]() |
Born | 6 February 1990 ವಾರಣಾಸಿ, ಉತ್ತರ ಪ್ರದೇಶ, ಭಾರತ |
ಪ್ರತಿಮಾ ಸಿಂಗ್ ರವರು ಭಾರತದ ಮಹಿಳಾ ರಾಷ್ಟ್ರೀಯ ಬಾಸ್ಕೆಟ್ ಬಾಲ್ ತಂಡದ ಸದಸ್ಯರಾಗಿದ್ದಾರೆ.ಉತ್ತರ ಪ್ರದೇಶದ ಜೌನ್ಪುರ್ ನಿಂದ ಬಂದವರು.ವಾರಣಾಸಿ ಮೂಲದ ಸೋಲಂಕಿ ಅಗ್ನಿವಂಶಿ ರಜಪೂತ ಕುಟುಂಬದಲ್ಲಿ ಜನಿಸಿದವರು.ಪ್ರತಿಮಾ ಸಿಂಗ್ ರವರ ಸಹೋದರಿಯರೂ ಕೂಡ ಭಾರತ ದೇಶಕ್ಕೆ ಆಡುತ್ತಿದ್ದಾರೆ.ಅವರ ಸಹೋದರಿಯರಾದ ದಿವ್ಯಾ ಸಿಂಗ್ ಮತ್ತು ಪ್ರಿಯಾಂಕಾ ಸಿಂಗ್ ಭಾರತೀಯ ರಾಷ್ಟ್ರೀಯ ಮಹಿಳಾ ಬಾಸ್ಕೆಟ್ ಬಾಲ್ ತಂಡವನ್ನು ಪ್ರತಿನಿಧಿಸುತ್ತಿದ್ದು,ಪ್ರಶಾಂತಿ ಸಿಂಗ್ ರವರು ಅರ್ಜುನ ಪ್ರಶಸ್ತಿ ವಿಜೇತರಾಗಿದ್ದಾರೆ ಮತ್ತು ಪ್ರಸ್ತುತ ತಂಡದ ನಾಯಕರಾಗಿದ್ದಾರೆ ಹಾಗೂ ಅಕಾಂಕ್ಷಾ ಸಿಂಗ್ ರವರು ಅದರ ಸದಸ್ಯರಾಗಿದ್ದಾರೆ.
ಪ್ರತಿಮಾ ಸಿಂಗ್ ರವರು ಭಾರತೀಯ ಬಾಸ್ಕೆಟ್ ಬಾಲ್ ಆಟಗಾರರ ಕುಟುಂಬದಿಂದ ಬಂದಿದ್ದಾರೆ, ಅವರ ಸಹೋದರಿಯರು ಪ್ರಸ್ತುತ ಭಾರತೀಯ ಮಹಿಳಾ ರಾಷ್ಟ್ರೀಯ ಬಾಸ್ಕೆಟ್ ಬಾಲ್ ತಂಡದ ಸದಸ್ಯರಾಗಿದ್ದಾರೆ.ಅವರನ್ನು 'ಸಿಂಗ್ ಸಿಸ್ಟರ್ಸ್' ಎಂದು ಕೂಡ ಕರೆಯಲಾಗುತ್ತದೆ.
೧೦ ಡಿಸೆಂಬರ್ ೨೦೧೬ ರಂದು, ಅವರು ಭಾರತೀಯ ಕ್ರಿಕೆಟಿಗ ಇಶಾಂತ್ ಶರ್ಮಾ ಅವರನ್ನು ಮದುವೆಯಾದರು.[೧]
೨೦೦೩ ರಲ್ಲಿ ಉತ್ತರಪ್ರದೇಶದಲ್ಲಿ ಬಾಸ್ಕೆಟ್ ಬಾಲ್ ಆಡಲು ಪ್ರಾರಂಭಿಸಿ ನಂತರದಲ್ಲಿ ಉದಯ್ ಪ್ರತಾಪ್ ಕಾಲೇಜಿನಲ್ಲಿ ಬಾಸ್ಕೆಟ್ ಬಾಲ್ ಆಡಲು ಕಲಿಯುತ್ತಾರೆ.ತನ್ನ ಬೆಳೆಯುತ್ತಿರುವ ಬಾಸ್ಕೆಟ್ ಬಾಲ್ ಕೌಶಲ್ಯದಿಂದಾಗಿ ಅವರು ೨೦೦೬ ರಲ್ಲಿ ಜೂನಿಯರ್ ಇಂಡಿಯನ್ ತಂಡಕ್ಕೆ ಆಯ್ಕೆಯಾದರು ಮತ್ತು ೨೦೦೮ ರಲ್ಲಿ ಜೂನಿಯರ್ ಇಂಡಿಯನ್ ಗರ್ಲ್ಸ್ ತಂಡದಲ್ಲಿ ನಾಯಕತ್ವ ವಹಿಸಿದರು.ಅವರ ನಾಯಕತ್ವದಲ್ಲಿ ದೆಹಲಿಯು ರಾಜಸ್ಥಾನದ ಭಿಲ್ವಾರದಲ್ಲಿ ಜೂನಿಯರ್ ನ್ಯಾಷನಲ್ ಚಾಂಪಿಯನ್ಶಿಪ್ ನಂತಹ ಹಲವಾರು ಪದಕಗಳನ್ನು ಗೆದ್ದಿದೆ.೨೦೧೦ ರಲ್ಲಿ ಅಖಿಲ ಭಾರತ ಇಂಟರ್-ವಿಶ್ವವಿದ್ಯಾನಿಲಯ,ಕೊಟ್ಟಾಯಂ, ಕೇರಳದಲ್ಲಿ ಅವರು ದೆಹಲಿ ವಿಶ್ವವಿದ್ಯಾಲಯದ ತಂಡದ ನೇತೃತ್ವ ವಹಿಸಿ ಚಿನ್ನದ ಪದಕವನ್ನು ಗೆದ್ದರು.ದೆಹಲಿ ವಿಶ್ವವಿದ್ಯಾಲಯವು ನೆಲ್ಲೂರ್ ನಲ್ಲಿರುವ ಆಲ್ ಇಂಡಿಯಾ ಯೂನಿವರ್ಸಿಟಿ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಾಗ ಅವರು ಉಪ ನಾಯಕಿಯಾಗಿದ್ದರು.ಅಲ್ಲಿ ಅವರ ಸಹೋದರಿ ಅಕಾಂಕ್ಷಾ ಸಿಂಗ್ ಅವರೊಂದಿಗೆ ಜಂಟಿ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಪಡೆದರು.ಅವರು ವಿಶ್ವವಿದ್ಯಾಲಯ ಮಟ್ಟದಲ್ಲಿ ಅನೇಕ 'ಅತ್ಯುತ್ತಮ ಆಟಗಾರ್ತಿ'ಪ್ರಶಸ್ತಿಗಳನ್ನು ಗೆದ್ದಿದ್ದಾರೆ.ಅವರು ಮೊಣಕಾಲಿನ ಗಾಯದಿಂದ ಹೋರಾಡಿದ್ದರಿಂದ ಹೋರಾಟಗಾರ್ತಿಯಾಗಿಯೂ ಕರೆಯಲ್ಪಟ್ಟರು.ಅದಲ್ಲದೇ ಶಸ್ತ್ರ ಚಿಕಿತ್ಸೆಯನ್ನು ನಿರ್ಲಕ್ಷಿಸಿ, ಒಂದು ವರ್ಷ ಕಠಿಣ ಕೆಲಸದ ನಂತರ ಪ್ರದರ್ಶನ ನೀಡಿದರು ಮತ್ತು ೨೦೧೨ ರ ಪಂದ್ಯಾವಳಿಯಲ್ಲಿ ಅತ್ಯಧಿಕ ಸ್ಕೋರರ್ ಕೂಡ ಆಗಿದ್ದರು.[೨]