ಪ್ರತ್ಯಭಿಜ್ಞಾ

ಕಾಶ್ಮೀರ ಶೈವ ಪಂಥದ ಒಂದು ಶಾಖೆಯಾದ ಪ್ರತ್ಯಭಿಜ್ಞಾ ಕ್ರಿ.ಶ. ೯ನೇ ಶತಮಾನದಲ್ಲಿ ಹುಟ್ಟಿರುವ ಒಂದು ಆದರ್ಶಾತ್ಮಕ ಏಕತತ್ವವಾದಿ ಮತ್ತು ಆಸ್ತಿಕವಾದಿ ತತ್ವಶಾಸ್ತ್ರ. ಈ ವ್ಯವಸ್ಥೆಯ ಹೆಸರನ್ನು ಅದರ ಅತ್ಯಂತ ಪ್ರಸಿದ್ಧ ಕೃತಿ ಉತ್ಪಲದೇವಈಶ್ವರ ಪ್ರತ್ಯಭಿಜ್ಞಾ ಕಾರಿಕಾದಿಂದ ಪಡೆಯಲಾಗಿದೆ. ವ್ಯುತ್ಪತ್ತಿ ಶಾಸ್ತ್ರದ ಪ್ರಕಾರ, ಪ್ರತ್ಯಭಿಜ್ಞಾ ಪ್ರತಿ - "ಒಮ್ಮೆ ತಿಳಿದಿದ್ದ, ಈಗ ಮರೆತಂತೆ ಕಂಡುಬರುವ", ಅಭಿ - "ತಕ್ಷಣದ" ಮತ್ತು ಜ್ಞಾ - "ತಿಳಿಯುವುದು" ಇಂದ ರಚನೆಗೊಂಡಿದೆ.