ಪ್ರಳಯ ಒಂದು ಸಂಸ್ಕೃತ ಶಬ್ದವಾಗಿದೆ, ಮತ್ತು ಹಿಂದೂ ಬ್ರಹ್ಮಾಂಡವಿಜ್ಞಾನದಲ್ಲಿ ಇದು ಮುಕ್ತಾಯಕ್ಕೆ ಬಳಸಲಾಗುವ ಮಹಾಕಲ್ಪ ಸಂಬಂಧಿ ಪದವಾಗಿದೆ. ಭಿನ್ನ ಶೈಲಿಗಳು ಅಥವಾ ಸಂದರ್ಭಗಳ ಪ್ರಕಾರ, ಇದು ಚಟುವಟಿಕೆಯಿಲ್ಲದ ಪರಿಸ್ಥಿತಿಯು ಇರುವ ಭಿನ್ನ ಕಾಲಾವಧಿಗಳನ್ನು ಸೂಚಿಸುತ್ತದೆ. ಮಹಾಪ್ರಳಯ ಶಬ್ದವು ಮಹಾಮುಕ್ತಾಯವನ್ನು ಸೂಚಿಸುತ್ತದೆ. ಪ್ರತಿ ಪ್ರಳಯದ ಅವಧಿಯಲ್ಲಿ, ಕೆಳಗಿನ ಹತ್ತು ಲೋಕಗಳು ನಾಶಹೊಂದುತ್ತವೆ[೧], ಮತ್ತು ಮೇಲಿನ ನಾಲ್ಕು ಲೋಕಗಳಾದ ಸತ್ಯಲೋಕ, ತಪಲೋಕ, ಜನಲೋಕ, ಮತ್ತು ಮಹರ್ಲೋಕವು ಉಳಿಯುತ್ತವೆ. ಪ್ರತಿ ಮಹಾಪ್ರಳಯದ ಅವಧಿಯಲ್ಲಿ, ಎಲ್ಲ ೧೪ ಲೋಕಗಳು ನಾಶಹೊಂದುತ್ತವೆ.
ಶಾಸ್ತ್ರೀಯ ಭಾರತೀಯ ತತ್ವಶಾಸ್ತ್ರದ ಆರು ಪರಂಪರೆಗಳಲ್ಲಿ ಒಂದಾದ ಸಾಂಖ್ಯ ತತ್ವಶಾಸ್ತ್ರದಲ್ಲಿ, ಪ್ರಳಯ ಎಂದರೆ "ಅಸ್ತಿತ್ವದಲ್ಲಿಲ್ಲದಿರುವುವುದು", ಅಂದರೆ ಮೂರೂ ಗುಣಗಳು (ದ್ರವ್ಯದ ತತ್ವಗಳು) ಪರಿಪೂರ್ಣ ಸಮತೋಲನದಲ್ಲಿದ್ದಾಗ ಸಾಧಿಸಲಾದ ದ್ರವ್ಯಸ್ಥಿತಿ. ಪ್ರ-ಳಯ ಶಬ್ದವು ಸಂಸ್ಕೃತದಿಂದ ಬರುತ್ತದೆ ಮತ್ತು ಇದರರ್ಥ ಮುಕ್ತಾಯ, ಸಮಾಪ್ತಿ ಅಥವಾ ವಿಸ್ತರಣೆಯಿಂದ 'ಮರುಹೀರಿಕೆ, ವಿನಾಶ, ಸರ್ವನಾಶ ಅಥವಾ ಮರಣ'.