ಪ್ರಶಾಂತಿ ಸಿಂಗ್ (ಜನನ ೫ ಮೇ ೧೯೮೪, ವಾರಣಾಸಿ, ಭಾರತ) ಭಾರತದ ರಾಷ್ಟ್ರೀಯ ಮಹಿಳಾ ಬ್ಯಾಸ್ಕೆಟ್ ಬಾಲ್ ತಂಡದಲ್ಲಿ ಶೂಟಿಂಗ್ ಗಾರ್ಡ್ ಆಗಿ ಆಟವಾಡುತ್ತಾರೆ. ಪ್ರಶಾಂತಿ ಸಿಂಗ್ ಭಾರತದ ಮಹಿಳಾ ಬ್ಯಾಸ್ಕೆಟ್ ಬಾಲ್ ತಂಡವನ್ನು ೨೦೦೬ರಲ್ಲಿ ಮೆಲ್ಬೊರ್ನ್ ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಪ್ರತಿನಿಧಿಸಿದ್ದರು. ಇವರು ಭಾರತದಲ್ಲಿರುವ ಅತ್ಯುತ್ತಮ ಶೂಟಿಂಗ್ ಗಾರ್ಡ್ಸ್ ಗಳಲ್ಲಿ ಒಬ್ಬರೆನಿಸಿದ್ದಾರೆ,[ಸೂಕ್ತ ಉಲ್ಲೇಖನ ಬೇಕು] ತಮ್ಮ ಕೌಶಲಭರಿತ ಆಟ, ಶೈಕ್ಷಣಿಕ ಬಲ ಹಾಗು ವ್ಯಕ್ತಿತ್ವ ಹಾಗು ಸುಂದರ ಮುಖಭಾವದಿಂದ ಹೆಸರುವಾಸಿಯಾಗಿದ್ದಾರೆ.ಅವರು ವಾರಣಾಸಿಗೆ ಸೇರಿದ, ಭಾರತದ ಪರ ಬ್ಯಾಸ್ಕೆಟ್ ಬಾಲ್ ಆಡುವ ಕುಟುಂಬ ಕ್ಕೆ ಸೇರಿವರಾಗಿದ್ದಾರೆ, ಇವರ, ಐದು ಜನ ಸಹೋದರಿಯರಲ್ಲಿ ನಾಲ್ವರು ಭಾರತದ ರಾಷ್ಟ್ರೀಯ ತಂಡದಲ್ಲಿ ಆಡಿದ್ದಾರೆ ಅಥವಾ ಆಟವಾಡುತ್ತಿದ್ದಾರೆ. ಇವರು ಪ್ರಸಕ್ತ ನವದೆಹಲಿಯ MTNLನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಶಾಂತಿ, ಭಾರತದ ಮಹಿಳಾ ಬ್ಯಾಸ್ಕೆಟ್ ಬಾಲ್ ತಂಡವನ್ನು ೨೦೦೩ರಿಂದ ಪ್ರತಿನಿಧಿಸುತ್ತಿದ್ದಾರೆ. ಅಲ್ಲದೇ ಇಂದು ಅವರು ಪ್ರತಿಯೊಂದು ಚ್ಯಾಂಪಿಯನ್ಶಿಪ್ ನಲ್ಲೂ ಅತ್ಯುತ್ತಮ ಪ್ರದರ್ಶನದೊಂದಿಗೆ ಶೋಭಿಸುತ್ತಿದ್ದಾರೆ.ಭಾರತದ ರಾಷ್ಟ್ರೀಯ ಮಹಿಳಾ ಬ್ಯಾಸ್ಕೆಟ್ ಬಾಲ್ ತಂಡ ದ ನಾಯಕಿಯಾಗಿ ಪ್ರಶಾಂತಿ ಸಿಂಗ್ ಏಶಿಯನ್ ಒಳಾಂಗಣ ಕ್ರೀಡೆಗಳಲ್ಲಿ ಭಾರತದ ತಂಡವನ್ನು ಮುನ್ನಡೆಸಿದವರಾಗಿದ್ದಾರೆ. ಜೊತೆಗೆ ೨೦೦೯ರಲ್ಲಿ ವಿಯೆಟ್ನಾಂನಲ್ಲಿ ಆಯೋಜಿಸಲಾಗಿದ್ದ ಪಂದ್ಯಾವಳಿಗಳಲ್ಲಿ ರಜತ ಪದಕ ವನ್ನು ಪಡೆದಿದ್ದಾರೆ. ಇದು ಭಾರತದ ಬ್ಯಾಸ್ಕೆಟ್ ಬಾಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೈಲಿಗಲ್ಲಾಗಿದೆ.
ವಾರಣಾಸಿಯ ಸೆಂಚುರಿ ಸ್ಪೋರ್ಟ್ಸ್ ಕ್ಲಬ್ ನ ವತಿಯಿಂದ ಅಕ್ಟೋಬರ್ ೨೦೦೬ರಲ್ಲಿ ಸೆಂಚುರಿ ಸ್ಪೋರ್ಟ್ಸ್ ಪ್ರಶಸ್ತಿ
UP ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಗಸ್ಟ್ ೨೦೦೬ರಲ್ಲಿ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ
ಘಾಜಿಯಾಬಾದ್ ನಲ್ಲಿ ಡಿಸೆಂಬರ್ ೨೦೦೨ರಲ್ಲಿ ಆಯೋಜಿಸಲಾಗಿದ್ದ UP ರಾಜ್ಯ ಶಾಲಾ ಚ್ಯಾಂಪಿಯನ್ಶಿಪ್ ನಲ್ಲಿ ಉತ್ತಮ ಆಟಗಾರ್ತಿ ಪ್ರಶಸ್ತಿ
ಎಲ್ಲೆ ಮ್ಯಾಗಜಿನ್ ನ ಮುಖಪುಟದಲ್ಲಿ ೨೦೧೦ರಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ. ಇವರು ೨೦೧೦ರ ಮೇ ಸಂಚಿಕೆಯಲ್ಲಿ ಎಲ್ಲೆ ಫ್ಯಾಶನ್ ಮ್ಯಾಗಜಿನ್ ನಲ್ಲಿ ಕಾಣಿಸಿಕೊಂಡರು.
ತಂಡದ ಶೂಟಿಂಗ್ ಗಾರ್ಡ್ ಆಗಿ ತಂಡದ ಅಂಕವನ್ನು ದುಪ್ಪಟ್ಟು ಮಾಡುವ ಸಾಮರ್ಥ್ಯವಿರುವ ಅತ್ಯುತ್ತಮ ಪಾಯಿಂಟ್ ಗಾರ್ಡ್. ತಮ್ಮ ತಂಡವನ್ನು ಪರಿಣಾಮಕಾರಿಯಾಗಿ ಕ್ವಾರ್ಟರ್ ಬ್ಯಾಕ್(ಆಕ್ರಮಣಕಾರಿ ಆಟವನ್ನು ನಿರ್ದೇಶಿಸುವ ಆಟಗಾರ್ತಿ) ಮಾರ್ಗದರ್ಶನ ಮಾಡುತ್ತಾರೆ; ಆಟದ ೩ ಕೌಶಲಗಳನ್ನು ಶೂಟ್ ಮಾಡುವಾಗ ಬಳಸುತ್ತಾರೆ.(ಸುತ್ತೊಂದಕ್ಕೆ ನಿರ್ದಿಷ್ಟ ಸಂಖ್ಯೆಯ ಸ್ಕೋರ್ ಗಳಿಕೆ); ಒಂದು ಉತ್ತಮ ಮಧ್ಯಮ ಶ್ರೇಣಿಯ ಪುಲ್ ಅಪ್ ಹಾಗು ದೂರವ್ಯಾಪ್ತಿಯ ಎಸೆತವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ. ನಿಯಂತ್ರಣದೊಂದಿಗೆ ಬ್ಯಾಸ್ಕೆಟ್ ಗೆ ಚೆಂಡನ್ನು ಎಸೆಯುವುದರ ಜೊತೆಗೆ ತಮ್ಮ ತಂಡದ ಇತರ ಸದಸ್ಯರು ಇದರಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುತ್ತಾರೆ. ಆಟದಲ್ಲಿ ನಿಯಮದ ಉಲ್ಲಂಘನೆಯಾಗಿದ್ದಾರೂ ಉತ್ತಮ ರೀತಿಯಲ್ಲಿ ಎಸೆತವನ್ನು ಪೂರ್ಣಗೊಳಿಸುತ್ತಾರೆ. ಉತ್ತಮ ನೇರ ಹೊಡೆತಗಳ ರಕ್ಷಕಿಯಾಗಿದ್ದಾರೆ. ನಿರ್ಬಂಧಿತ ಪರಿಸ್ಥಿತಿಗಳಲ್ಲೂ ಉತ್ತಮ ಪ್ರದರ್ಶನ ತೋರುವ ಆಟಗಾರ್ತಿ ಜೊತೆಗೆ ತಂಡಕ್ಕೆ ಉತ್ತಮ ಅಂಕ ಗಳಿಸಿಕೊಡುವಲ್ಲಿ ಕ್ವಾರ್ಟರ್ ಬ್ಯಾಕ್ ಸಹ ಮಾಡುತ್ತಾರೆ. ಆಸ್ಟ್ರೇಲಿಯ, ಚೀನಾ, ಜಪಾನ್, ನ್ಯೂಜಿಲ್ಯಾಂಡ್ ನಂತಹ ಅಂತಾರಾಷ್ಟ್ರೀಯ ತಂಡಗಳೊಂದಿಗೆ ಸೆಣಸಿ ಅಗಾಧ ಅನುಭವವುಳ್ಳ ಒಬ್ಬ ಪರಿಪಕ್ವ, ಪ್ರೌಢ ಆಟಗಾರ್ತಿ.
ಇವರು ಭಾರತೀಯ ತಂಡದ ಪರ ಬ್ಯಾಸ್ಕೆಟ್ ಬಾಲ್ ಆಡುವ ಕುಟುಂಬದಿಂದ ಬಂದಿದ್ದಾರೆ, ಇವರ ಮೂವರು ಸಹೋದರಿಯರು ಪ್ರಸಕ್ತ ಭಾರತದ ಮಹಿಳಾ ರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ತಂಡದ ಸದಸ್ಯರಾಗಿದ್ದಾರೆ.