ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ಮುರಳಿಕೃಷ್ಣ ಪ್ರಸಿದ್ಧ್ ಕೃಷ್ಣ | |||||||||||||||||||||||||||||||||||||||||||||||||||||||||||||||||
ಹುಟ್ಟು | ಬೆಂಗಳೂರು, ಕರ್ನಾಟಕ | 19 February 1996|||||||||||||||||||||||||||||||||||||||||||||||||||||||||||||||||
ಎತ್ತರ | 6 ft 2 in (188 cm)[೧] | |||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | ಬಲಗೈ | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | ಬಲಗೈ ಮಧ್ಯಮ ವೇಗಿ | |||||||||||||||||||||||||||||||||||||||||||||||||||||||||||||||||
ಪಾತ್ರ | ಎಸೆತಗಾರ (ಬೌಲರ್) | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ |
| |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ ೨೩೪) | ೨೩ ಮಾರ್ಚ್ ೨೦೨೧ v ಇಂಗ್ಲೆಂಡ್ | |||||||||||||||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | ೨೦ ಆಗಸ್ಟ್ ೨೦೨೨ v ಝಿಂಬಾಬ್ವೆ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಅಂಗಿ ನಂ. | ೨೪ | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
೨೦೧೫- | ಕರ್ನಾಟಕ ಕ್ರಿಕೆಟ್ ತಂಡ | |||||||||||||||||||||||||||||||||||||||||||||||||||||||||||||||||
೨೦೧೮-೨೦೨೧ | ಕೋಲ್ಕತ ನೈಟ್ ರೈಡರ್ಸ್ | |||||||||||||||||||||||||||||||||||||||||||||||||||||||||||||||||
೨೦೨೨- | ರಾಜಸ್ಥಾನ್ ರಾಯಲ್ಸ್ | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: ESPNcricinfo, ೨೦ ಆಗಸ್ಟ್ ೨೦೨೨ |
ಪ್ರಸಿದ್ದ ಕೃಷ್ಣ ರವರು ದಿನಾಂಕ ೧೯-೦೨-೧೯೯೬ ರಲ್ಲಿ ಜನಿಸಿದರು.ಇವರು ಭಾರತದ ಕ್ರಿಕೇಟ್ ಆಟಗಾರ.ಇವರು ತಮ್ಮ ವಾಸ ಸ್ಥಾನವಾದ ಕರ್ನಾಟಕಕ್ಕಾಗಿ ಕ್ರಿಕೇಟ್ ಆಡುತ್ತಾರೆ.ಇವರು ವೇಗಾವಾಗಿ ಎಸೆಯುವ ಬೋಲರ್ ಆಗಿದ್ದಾರೆ.ಇವರು ಮೊದಲ ಬಾರಿಗೆ ದಿನಾಂಕ ೨೩-೦೩-೨೦೨೧ ರಂದು ಭಾರತದ ಒಂದು ದಿನದ ಅಂತರಾಷ್ತ್ರೀಯ ಕ್ರಿಕೇಟ್ (ಒಡಿಐ) ತಂಡದಲ್ಲಿ ಕಾಣಿಸಿಕೊಂಡರು.ಮತ್ತು ಇವರು ತಮ್ಮ ಮೊದಲನೆ ಒಡಿಐ ನಲ್ಲೆ ೪ ವಿಕೆಟ್ ಪಡೆದುಕೊಂಡ ಭಾರತದ ಮೊದಲ ಬೋಲರ್[೨].
೨೦೧೫ರಲ್ಲಿ ನಡೆದ ಟೂರ್ ಆಫ಼್ ಇಂಡಿಯ ಕ್ರಿಕೇಟ್ ಪಂದ್ಯದಲ್ಲಿ ಭಾರತವನ್ನು ಪ್ರವಾಸಿ ಸುತ್ತಿದ್ದ ಬಾಂಗ್ಲದೇಶ್ ಎ ತಂಡದ ವಿರುದ್ದ ಕರ್ನಾಟಕ ತಂಡವನ್ನು ಪ್ರತಿನಿದಿಸುತ್ತ ಪ್ರಸಿದ್ದ ಕೃಷ್ಣ ರವರು ೪೯ ರನ್ನುಗಳಿಗೆ ೫ ವಿಕೆಟ್ ಪಡೆದುಕೊಳ್ಳುವುದರ ಮೂಲಕ ಬೆಳಕಿಗೆ ಬಂದ.ಇವರು ತಮ್ಮ ಮೊದಲನೆ ಬಾಲಿಗೆ ರಾನಿ ತಲುಕ್ದಾರ್ ಅವರ ವಿಕೆಟ್ ಪಡೆದುಕೊಳ್ಳುತ್ತಾರೆ. ನಂತರ ಅನಮಲ್ ಹಕ್ಯು, ಶೌಮ್ಯ ಶರ್ಕಾರ್ ಮತ್ತು ನಾಸಿರ್ ಹುಸ್ಸೇನ್ ಎಂಬುವವರ ವಿಕೆಟ್ ಪಡೆಯುತ್ತಾರೆ.
ಇವರು ೨೫-೦೨-೨೦೧೭ ರಲ್ಲಿ ವಿಜಯ್ ಹಜಾರೆ ಟ್ರೋಫಿಗೆ ಭಾಗವಹಿಸಿದ್ದ ಕರ್ನಾಟಕ ಲಿಸ್ಟ್ ಎ ತಂಡಕ್ಕೆ ಮೊದಲ ಪ್ರವೇಶ ಮಾಡಿದ್ದರು. ಹಾಗೂ ೨೧-೦೧-೨೦೧೮ ರಲ್ಲಿ ೨೦೧೭-೧೮ರ ಸೈಯಾದ್ ಮುಶ್ತಕ್ ಅಲಿ ಟ್ರೋಫಿಗೆ ಭಾಗವಹಿಸಿದ್ದ ಕರ್ನಾಟಕ ೨೦-೨೦ ತಂಡಕ್ಕೆ ಮೊದಲ ಪ್ರವೇಶ ಮಾಡಿದ್ದರು.
ಇವರು ೨೦೧೮-೧೯ ರಲ್ಲಿ ವಿಜಯ್ ಹಜಾರೆ ಟ್ರೋಫಿಗೆ ನಡೆದ ಪಂದ್ಯದಲ್ಲಿ ಕರ್ನಾಟಕಕ್ಕೆ ಅತಿ ಹೆಚ್ಚು ವಿಕೆಟ್ ಪಡೆದಿದ್ದರು. ಒಟ್ಟು ೭ ಪಂದ್ಯದಲ್ಲಿ ೧೩ ವಿಕೆಟ್ ಪಡೆದಿದ್ದರು.
೨೦೧೮ ಏಫ್ರಿಲ್ ರಂದು ನಡೆಯುತ್ತಿದ್ದ ೨೦೧೮ ಐಪಿಎಲ್ ಸೀಜನ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಗಾಯಗೊಂಡಿದ್ದ ಕಮಲೇಶ್ ನಾಗರ್ ಕೋಟಿ ಬದಲಿಗೆ ಇವರನ್ನು ಸೆರ್ಪಡೆ ಮಾಡಿಕೊಂಡಿತ್ತು.
ಇವರು ಆಗಸ್ಟ್ ೨೦೧೮ ರಂದು ಭಾರತದ ಎ ಟೀಮ್ ಕ್ವಾಡ್ರಂಗುಲ ಸೀರಿಸ್ ಗೆ ಆಡುತ್ತಿದ್ದ,ಭಾರತದ ಎ ತಂಡಕ್ಕೆ ನೇಮಕಗೊಂಡರು. ಮತ್ತು ಡಿಸೆಂಬರ್ ೨೦೧೮ ರಂದು ಎಸಿಸಿ ಎಮರ್ಜಿಂಗ್ ಟೀಮ್ ಏಷ್ಯ ಕಪ್ ಗೆ ಆಡುತಿದ್ದ ಭಾರತದ ತಂಡಕ್ಕೆ ನೇಮಕಗೊಂಡರು.
ಇವರು ೨೩-೦೩-೨೦೨೧ ರಂದು ನಡೆದ ಒಡಿಐ ಕ್ರಿಕೇಟ್ ಪಂದ್ಯದಲ್ಲಿ ಪ್ರವಾಸಿಸುತ್ತಿದ್ದ ಇಂಗ್ಲೆಂಡ್ ವಿರುದ್ದದ ಆಟದಲ್ಲಿ, ಜೇಸನ್ ರಾಯ್ ರವರನ್ನು ತಮ್ಮ ಮೊದಲ ಒಡಿಐ ವಿಕೆಟಾಗಿ ಪಡೆದರು ನಂತರದಲ್ಲಿ ಮೂರು ವಿಕೆಟ್ ಗಳನ್ನು ಪಡೆದು ಭಾರತ ೬೬ ರನ್ನುಗಳಿಂದ ಗೆಲುವನ್ನು ಪಡೆಯಲು ಸಹಕಾರಿಯಾದರು. ೨೦೨೨ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ೧೨ ರನ್ ಗಳಿಗೆ ೪ ವಿಕೆಟ್ ಪಡೆದರು.