(1996-03-10) ೧೦ ಮಾರ್ಚ್ ೧೯೯೬ (ವಯಸ್ಸು ೨೮) ಮುಜಫರ್ ನಗರ, ಉತ್ತರ ಪ್ರದೇಶ, ಭಾರತ
Sport
ಸ್ಪರ್ಧೆಗಳು(ಗಳು)
೨೦ ಕಿಲೋಮೀಟರ್
Achievements and titles
ರಾಷ್ಟ್ರೀಯ ಫ಼ೈನಲ್ಗಳು
೨೦೧೭, ೨೦೨೨
ವೈಯಕ್ತಿಕ ಪರಮಶ್ರೇಷ್ಠ
೧:೨೮.೪೫ (೨೦೨೧)
ಪದಕ ದಾಖಲೆ
ಮಹಿಳಾ ಅಥ್ಲೆಟಿಕ್ಸ್
Representing ಭಾರತ
ಕಾಮನ್‌ವೆಲ್ತ್ ಗೇಮ್ಸ್
೨೦೨೨ ಬಿರ್ಮಿಂಗ್ಹ್ಯಾಮ್
೧೦,೦೦೦ ಮೀ ನಡಿಗೆ
ಏಷ್ಯನ್ ಅಥ್ಲೆಟಿಕ್ ಚಾಂಪಿಯನಷಿಪ್
೨೦೨೩ ಬ್ಯಾಂಕಾಕ್
೨೦೦೦೦ ಮೀ ನಡಿಗೆ
ಪ್ರಿಯಾಂಕಾ ಗೋಸ್ವಾಮಿ (ಜನನ ೧೦ ಮಾರ್ಚ್ ೧೯೯೬) ೨೦ ಕಿ.ಮೀ. ಓಟದ ನಡಿಗೆಯಲ್ಲಿ ಸ್ಪರ್ಧಿಸಿದ ಭಾರತೀಯ ಕ್ರೀಡಾಪಟು. [೧][೨] ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅದರಲ್ಲಿ ೧೭ ನೇ ಸ್ಥಾನವನ್ನು ಪಡೆದರು. [೩][೪] ಅವರು ೨೦೨೨ ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ೧೦,೦೦೦ ಕಿಲೋಮೀಟರ್ ನಡಿಗೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದರು. [೫][೬] ೧೦,೦೦೦ ಮೀಟರ್ ಓಟದ ನಡಿಗೆಯಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಇವರಾಗಿದ್ದಾರೆ. [೭]
ಗೋಸ್ವಾಮಿ ಅವರು ಅಥ್ಲೆಟಿಕ್ಸ್‌ಗೆ ಬರುವ ಮೊದಲ ಕೆಲವು ತಿಂಗಳುಗಳ ಕಾಲ ಶಾಲೆಯಲ್ಲಿ ಜಿಮ್ನಾಸ್ಟಿಕ್ಸ್ ಅಭ್ಯಾಸ ಮಾಡಿದರು. ಯಶಸ್ವಿ ಸ್ಪರ್ಧಿಗಳಿಗೆ ಲಭ್ಯವಿರುವ ಬಹುಮಾನದ ಗೀಳಿಂದಾಗಿ ಅವರು ಓಟ ಕಡೆಗೆ ಆಕರ್ಷಿತರಾದರು. [೮]
ಫೆಬ್ರವರಿ ೨೦೨೧ ರಲ್ಲಿ ಅವರು ೨೦ ಕಿಮೀ ಓಟದಲ್ಲಿ ಭಾರತೀಯ ರೇಸ್‌ವಾಕಿಂಗ್ ಚಾಂಪಿಯನ್‌ಶಿಪ್ ಅನ್ನು ೧:೨೮:೪೫ ರ ಹೊಸ ಭಾರತೀಯ ದಾಖಲೆಯೊಂದಿಗೆ ಗೆದ್ದರು. ಇದರಿಂದ ೨೦೨೦ ರ ಬೇಸಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. [೯][೧೦] ಅವರು ಈ ಹಿಂದೆ ೨೦೧೭ ರಲ್ಲಿ ಇಂಡಿಯನ್ ರೇಸ್‌ವಾಕಿಂಗ್ ಚಾಂಪಿಯನ್‌ಶಿಪ್ ಗೆದ್ದಿದ್ದರು.[೧೧]