ಪ್ರೇಮ್ ಅಡ್ಡಾ | |
---|---|
ನಿರ್ದೇಶನ | ಮಹೇಶ್ ಬಾಬು |
ನಿರ್ಮಾಪಕ | ಮೇಕಾ ಮುರಳಿ ಕೃಷ್ಣ |
ಲೇಖಕ | ಮಳವಳ್ಳಿ ಸಾಯಿಕೃಷ್ಣ (ಸಂಭಾಷಣೆ) |
ಚಿತ್ರಕಥೆ | ಮಹೇಶ್ ಬಾಬು |
ಕಥೆ | ಎಂ. ಶಶಿಕುಮಾರ್ |
ಪಾತ್ರವರ್ಗ | ಪ್ರೇಮ್ , ಕೃತಿ ಖರಬಂದ |
ಸಂಗೀತ | ವಿ.ಹರಿಕೃಷ್ಣ |
ಛಾಯಾಗ್ರಹಣ | ಅರುಣ್. ಡಿ. ಪ್ರಸಾದ್ |
ಸಂಕಲನ | ಶ್ರೀನಿವಾಸ್. ಪಿ. ಭಾಬು |
ಸ್ಟುಡಿಯೋ | ಮೇಕಾ ಪಿಕ್ಚರ್ಸ್ |
ವಿತರಕರು | ಜಯಣ್ಣ ಫಿಲಮ್ಸ್ |
ಬಿಡುಗಡೆಯಾಗಿದ್ದು | 2012 ರ ನವಂಬರ್ 30 |
ಅವಧಿ | 2 ಗಂಟೆ 38 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಬಂಡವಾಳ | 4 ಕೋಟಿ |
ಬಾಕ್ಸ್ ಆಫೀಸ್ | 6 ಕೋಟಿ |
ಪ್ರೇಮ್ ಅಡ್ಡಾ ಕನ್ನಡ ಭಾಷೆಯ ಸಾಹಸ ಚಿತ್ರ. ಪ್ರೇಮ್, ಮೇಕಾ ಮುರಳಿ ಕೃಷ್ಣ ಮತ್ತು ಕೃತಿ ಖರಬಂದ ಚಿತ್ರದ ಪಾತ್ರಧಾರಿಗಳು. ಚಿತ್ರವನ್ನು ಮಹೇಶ್ ಬಾಬು ನಿರ್ದೇಶಿಸಿದ್ದಾರೆ ಮತ್ತು ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ಈ ಚಿತ್ರವು ತಮಿಳಿನ ಸುಬ್ರಮಣ್ಯಪುರಂ ಚಿತ್ರದ ರಿಮೇಕ್ ಆಗಿದೆ. ಈ ಸಿನಿಮಾದಲ್ಲಿ ಪ್ರೇಮ್ ಮೊದಲ ಬಾರಿಗೆ ಮತ್ತೊಬ್ಬ ನಿರ್ದೇಶಕರ ಅಡಿಯಲ್ಲಿ ನಟಿಸುತ್ತಿದ್ದಾರೆ.
ಪ್ರೇಮ್ ಅಡ್ಡಾದ ಆರು ಹಾಡುಗಳನ್ನು ವಿ. ಹರಿಕೃಷ್ಣ ಸಂಯೋಜಿಸಿದ್ದಾರೆ. ಮೂಲ ತಮಿಳು ಚಿತ್ರದ "ಕಂಗಲ್ ಇರಂದಾಲ್" ಹಾಡನ್ನು ಇಲ್ಲಿ "ಕಳ್ಳಿ ಇವಳು" ಎಂದು ಉಳಿಸಿಕೊಳ್ಳಲಾಗಿದೆ. ಎಲ್ಲಾ ಹಾಡುಗಳು ಮಾರುಕಟ್ಟೆಯಲ್ಲಿ ಸೂಪರ್ ಹಿಟ್ ಆಗಿವೆ.
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
---|---|---|---|---|
1. | "ಮೇಲ್ಕೋಟೆ ಹುಡುಗಿ" | ಮಳವಳ್ಳಿ ಸಾಯಿಕೃಷ್ಣ | ಕೈಲಾಶ್ ಖೇರ್, ವಿ.ಹರಿಕೃಷ್ಣ, ಅನುರಾಧಾ ಭಟ್ , ರಾಜು ತಾಳಿಕೋಟೆ | 04:48 |
2. | "ಬಸಂತಿ" | ಯೋಗರಾಜ ಭಟ್ | ವಿ.ಹರಿಕೃಷ್ಣ, ಪ್ರಿಯದರ್ಶಿನಿ | 04:36 |
3. | "ಬಾಡಿಗೆಗೆ" | ಪ್ರೇಮ್ | ಪ್ರೇಮ್, ಶ್ರೇಯಾ ಘೋಷಾಲ್ | 04:05 |
4. | "ಅಡ್ಡಾ ಬಾಯ್ಸ್" | ತುಷಾರ್ ರಂಗನಾಥ್ | ಶಂಕರ್ ಮಹದೇವನ್ | 04:00 |
5. | "ಕಳ್ಳಿ ಇವಳು" | ವಿ. ನಾಗೇಂದ್ರ ಪ್ರಸಾದ್ | ಸೋನು ನಿಗಮ್, ಶ್ರೇಯಾ ಘೋಷಾಲ್ | 05:17 |
ಈ ಚಲನಚಿತ್ರವನ್ನು ಮೂಲತಃ ೩೦ ನವೆಂಬರ್ ೨೦೧೨ [೧] ರಂದು ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು. ನಂತರ, ಚಲನಚಿತ್ರವು ೭ ಡಿಸೆಂಬರ್ ೨೦೧೨ ರಂದು ಬಿಡುಗಡೆಯಾಗಿ ಸಾಮಾನ್ಯವಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಚಿತ್ರದಲ್ಲಿ ಪ್ರೇಮ್ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ವಿಮರ್ಶಕರು ಇದನ್ನು ಹಿಂಸಾತ್ಮಕ ಚಲನಚಿತ್ರ ಎಂದು ಕರೆಯುತ್ತಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಎ' ಸರ್ಟಿಫಿಕೇಟ್ ಸಿಕ್ಕಿದೆ. ೬ ಕೋಟಿ ಗಳಿಸಿದೆ.