ಪ್ರೊ ಕಬಡ್ಡಿ ಲೀಗ್ ಟೂರ್ನಿಗಳು ಇಂಡಿಯನ್ ಪ್ರೀಮಿಯರ್ ಲೀಗ್ ಮಾದರಿಯಲ್ಲಿ 26 ಜುಲೈ 2014 ರಂದು ಚಾರು ಶರ್ಮ ನೇತೃತ್ವದಲ್ಲಿ ಶುರುವಾಹಿತು.
ಒಟ್ಟು ೬೦ ಪಂದ್ಯಗಳ ಟೂರ್ನಿ ಯಲ್ಲಿ ೧೨ ತಂಡಗಳು ಬಾಗವಹಿಸುತ್ತಿವೆ.
ಪ್ರೊ ಕಬಡ್ಡಿ 2014 ರಲ್ಲಿ ಸ್ಥಾಪನೆಯಾದ ಒಂದು ವೃತ್ತಿಪರ ಕಬಡ್ಡಿ ಲೀಗ್ ಆಗಿದೆ. ಅದು ಎಂಟು ನಗರ ಲೀಗ್ "ಕಾರವಾನ್ ಸ್ವರೂಪ" ದ ಒಂದು ಲಿಘ್-ಒಕ್ಕೂಟ. ಒಟ್ಟು ಎಲ್ಲಾ 60 ಪಂದ್ಯಗಳನ್ನು ಆಡಲು 8 ಸ್ಥಳಗಳಲ್ಲಿ ಒಟ್ಟಿಗೆ ಪ್ರಯಾಣ ಮಾಡುವ ಸೂತ್ರವನ್ನು ಇದು ಹೊಂದಿದೆ. ಇದು ಶೌರ್ಯದ ಕ್ರೀಡೆ. ಮಹೀಂದ್ರಾ ಸಮೂಹದ ಶ್ರೀ ಆನಂದ್ ಮಹೀಂದ್ರಾ, ಅಧ್ಯಕ್ಷ, ಮತ್ತು ಶ್ರೀ ಚಾರು ಶರ್ಮಾ, ಸಹ ಶೌರ್ಯದ ಸ್ವರೂಪದ ಕ್ರೀಡೆಗಳ ನಿರ್ದೇಶಕ. ಇವರ ಸಹಯೋಗದಿಂದ ಸ್ಥಾಪಿತವಾದ ಒಂದು ಸಂಸ್ಥೆ. [೧] ಸ್ಟಾರ್ ಇಂಡಿಯಾ 74% ಪಾಲನ್ನು ಪಡೆದುಕೊಂಡಿತು. ಈಗ ಸ್ಟಾರ್ ಇಂಡಿಯಾವು . ಶೌರ್ಯದ ಲೀಗ್ ಕ್ರೀಡೆಯ ಬಹುತೇಕ ಮಾಲೀಕರತ್ವ ಹೊಂದಿದೆ ಕ್ರೀಡೆಯನ್ನು ಮತ್ತಷ್ಟು ನವೀಕರಿಸಲು ಆಯ್ಕೆಯನ್ನು ಇಂಟರ್ನ್ಯಾಷನಲ್ ಕಬಡ್ಡಿ ಫೆಡರೇಷನ್ (ಐ.ಕೆ.ಎಫ್) 10 ವರ್ಷಗಳ ಕಾಲ ಲೀಗ್‍ನ್ನು ಸಂಘಟಿಸಲು ಹಕ್ಕುಗಳನ್ನು ಪಡೆದಿದೆ.
ಮೊದಲ ಸಹಿ ಮತ್ತು 8 ತಂಡಗಳ ಆಟಗಾರರ ಹರಾಜು [೨]ಮುಂಬಯಿನಲ್ಲಿ 20 ಮೇ 2014 ರಂದು ನಡೆಯಿತು. ಭಾರತದ ಕಬಡ್ಡಿ ನಾಯಕ ರಾಕೇಶ್ ಕುಮಾರ್ 12,80 ಲಕ್ಷ ಪಾಟ್ನಾ ಫ್ರ್ಯಾಂಚೈಸ್ ಮೂಲಕ ಖರೀದಿಸಿತು. ಇದು ಆಟಗಾರರ ನಡುವೆ ಅತಿ ಹೆಚ್ಚನ ಬೆಲೆ ಆಗಿತ್ತು. ಭಾರತದ ಕ್ರೀಡಾ ಪ್ರಾಧಿಕಾರದ ದೀಪಕ್ ನಿವಾಸ್‍ಅವರನ್ನು ರೂ. 12,90 ಲಕ್ಷ ವಿಶಾಖಪಟ್ಟಣದಲ್ಲಿ ಫ್ರ್ಯಾಂಚೈಸ್ ಖರೀದಿಸಿತು. [೨]ವಿದೇಶೀ ಆಟಗಾರ ಮುಸ್ತಫಾ ನೌದೇಹಿ ಯನ್ನು ರೂ. 6.6 ಲಕ್ಷಕ್ಕೆ ಪುಣೆ ಫ್ರಾಂಚೈಸ್ ಕೊಂಡುಕೊಂಡಿತು.[೩]
ಋತುವಿನ ಅವಧಿಯು 26ಜುಲೈ 2014 ರಿಂದ 31 ಆಗಸ್ಟ್ 2014. ಎರಡು ಸೆಮಿಫೈನಲ್, ಮೂರನೇ ಸ್ಥಾನ ಮತ್ತು ಅಂತಿಮ ಆಟಗಳು ಜೊತೆಗೆ ಎರಡು ರೌಂಡ್ ರಾಬಿನ್ ಪಂದ್ಯಗಳ ಗುತ್ತಿಗೆ . 56 ಆಟಗಳು ಮತ್ತು ಹೊರಗೆ 4 ಪಂದ್ಯಗಳು ನಡೆಯಬೇಕಿತ್ತು. ಒಟ್ಟು 60 ಆಟಗಳು. ಆಡುವ ಮೊದಲ ಸುತ್ತಿನಲ್ಲಿ 8 ತಂಡಗಳು ಭಾಗವಹಿಸಿದರು. ಮೊದಲ ಆಟ ಜುಲೈ 26 ರಂದು ಮೊದಲ ಆವೃತ್ತಿಯು ಮುಂಬಾ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ನಡುವೆ ಆಡಲಾಯಿತು ಆಗಸ್ಟ್ 31 ರಂದು ಮುಂಬಯಿಯಲ್ಲಿ ಅಂತಿಮ ಆಟ ಆಡಲಾಯಿತು. ಜೈಪುರ ಪಿಂಕ್ ಪ್ಯಾಂಥರ್ಸ್ 35-24 ಮೂಲಕ ಯು ಮುಂಬಾ ಸೋಲಿಸಿದರು. [೪] ಹೀಗೆ ಜೈಪುರ ಪಿಂಕ್ ಪ್ಯಾಂಥರ್ಸ್ ಉದ್ಘಾಟನಾ ಪ್ರೊ ಕಬಡ್ಡಿ ಲೀಗ್ ಗೆದ್ದರು.
ಸ್ಟಾರ್ ಕ್ರೀಡೆ ಪ್ರೊ ಕಬಡ್ಡಿ 2 ನೇ ಸೀಸನ್ 2015 ಜುಲೈ 18 ರಿಂದ 23 ಆಗಸ್ಟ್ ಆಗಿತ್ತು. ಅವರು ಒಟ್ಟು 60 ಪಂದ್ಯಗಳು, ಎರಡು ಸೆಮಿಫೈನಲ್, ಮೂರನೆ ಸ್ಥಾನವನ್ನು ಪ್ಲೇ ಆಪ್ ಪಂದ್ಯಕ್ಕೆ ಮತ್ತು ಫೈನಲ್ ಪಂದ್ಯಕ್ಕೆ. . ಜುಲೈ 18 ರಂದು ಮೊದಲ ಆಟ; ಯು ಮುಂಬಾ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ನಡುವೆ ಆಡಲಾಯಿತು ಮತ್ತು ಆಗಸ್ಟ್ 23 ರಂದು. ಯು ಮುಂಬಾ ನಡುವೆ ಬೆಂಗಳೂರು ಬುಲ್ಸ್ ನಡುವೆ ಅಂತಿಮಆಟ ಮುಂಬಯಿಯಲ್ಲಿ ಆಡಲಾಯಿತು. ಪ್ರೊ ಕಬಡ್ಡಿ ಲೀಗ್ 2015 ಋತುವಿನಲ್ಲಿ ಯು ಮುಂಬಾ 6 ಅಂಕಗಳಿಂದ ಬೆಂಗಳೂರು ಬುಲ್ಸ್ ನ್ನು ಸೋಲಿಸಿದರು. [೫] ಗೆದ್ದ ಯು ಮುಂಬಾ, ಮೊದಲನೇ ಸ್ಥಾನ, ಬೆಂಗಳೂರು ಬುಲ್ಸ್ ಎರಡನೆ ಸ್ಥಾನ ಮತ್ತು ತೆಲುಗು ಟೈಟಾನ್ಸ್ ಲೀಗ್ ಮೂರನೇ ಸ್ಥಾನವನ್ನು ಪಡೆದಿದ್ದರು.
ಸ್ಟಾರ್ ಕ್ರೀಡೆ ಪ್ರೊ ಕಬಡ್ಡಿ ಸೀಸನ್ 3 ಎರಡು ಆವೃತ್ತಿಗಳನ್ನು ಹೊಂದಿರುತ್ತದೆ. ಸ್ಟಾರ್ ಇಂಡಿಯಾ ಶ್ರೀ ಸಂಜಯ್ ಗುಪ್ತಾ ಸಿಒಒ (The COO of Star India) ಸ್ಟಾರ್ ಕ್ರೀಡೆ ಪ್ರೊ ಕಬಡ್ಡಿಯು, ಕಳೆದ ಎರಡು ವರ್ಷಗಳಿಂದ 5 ವಾರಗಳ ಒಂದು ಘಟಕದಲ್ಲಿ ನಡೆಯುತ್ತಿತ್ತು. ಈಗ ಅವರು ಒಂದು ವರ್ಷದಲ್ಲಿ ಎರಡು ಆವೃತ್ತಿಗಳಲ್ಲಿ ನೆಡೆಸಲು ಯೋಜನೆ ಇರುವುದಾಗಿ ಹೇಳಿದರು. ಒಂದು ವರ್ಷದಲ್ಲಿ 10 ವಾರ ಕ್ರೀಡೆ ನೆಡೆಸಲು ಬಯಸುವುದಾಗಿ ದೃಢಪಡಿಸಿದರು. ಜನವರಿ-ಫೆಬ್ರವರಿ 2016 ರಲ್ಲಿ ಒಮ್ಮೆ; ಮತ್ತು ಜುಲೈ ಆಗಸ್ಟ್ 2016 ರಲ್ಲಿ ಒಮ್ಮೆ ಆಡುವ ಯೋಜನೆ ಇರುವುದಾಗಿ ಹೇಳಿದರು.
ವಿಶಾಖ ಪಟ್ಟಣದ ರಾಜೀವ್ ಗಾಂಧಿ ಪೋರ್ಟ್ ಒಳಾಂಗಣ ಕ್ರೀಡಾಂಗಣದಲ್ಲಿ 30-1-2016 ದಬಾಂಗ್ ಡೆಲ್ಲಿ ಎದುರು ಪಂದ್ಯ ಆರಂಭವಾದ ನಾಲ್ಕು ನಿಮಿಷಗಳಲ್ಲಿಯೇ ಎದುರಾಳಿ ತಂಡವನ್ನು ಆಲೌಟ್ ಮಾಡಿದ ಬೆಂಗಳೂರು ಬುಲ್ಸ್, ಕಬಡ್ಡಿ ಲೀಗ್ ಮೂರನೇ ಆವೃತ್ತಿಯ ಮೊದಲ ಪಂದ್ಯದಲ್ಲಿ (ಬುಲ್ಸ್) 35–29 ಪಾಯಿಂಟ್ಸ್‌ನಿಂದ ದಬಾಂಗ್ ಡೆಲ್ಲಿ ಎದುರು ಗೆಲುವು ಪಡೆಯಿತು. ಸುಮಾರು ನಾಲ್ಕು ಸಾವಿರ ಅಭಿಮಾನಿಗಳು ಕಬಡ್ಡಿ ಲೀಗ್ ಮೂರನೇ ಆವೃತ್ತಿಯ ಮೊದಲ ದಿನದ ಪಂದ್ಯಗಳನ್ನು ನೋಡಿದರು. ಒಟ್ಟು ೬೦ ಪಂದ್ಯಗಲು ನಡೆಯುವುವು.[೬]
ಬುಲ್ಸ್ ತಂಡದ ಮುಖ್ಯ ಆಟಗಾರರು: ದೀಪಕ್ ಕುಮಾರ್ ದಹಿಯಾ, ವೈಭವ್ ಕಾಳೆ, ವಿನೋತ್ ಕುಮಾರ್, ಡಿಫೆಂಡರ್ ಲೆಫ್ಟ್ ಕಾರ್ನರ್ ವಿಜೇಂದರ್ ಸಿಂಗ್, ಆಲ್‌ರೌಂಡರ್ ಪ್ರೀತಮ್ ಚಿಲಾರ್ ಮತ್ತು ಶಶಾಂಕ್ ವಾಂಖೆಡೆ.
ದಿ.05-03-2016ರ ದಿನ ಅಂತಿಮ ಪಂದ್ಯದಲ್ಲಿ, ಪಟ್ನಾ ಪೈರೇಟ್ಸ್ ತಂಡ ಕೊನೆಯ ಒಂದು ನಿಮಿಷದಲ್ಲಿ ಅಪೂರ್ವ ಪ್ರದರ್ಶನ ನೀಡಿತು. ಅದು ಪ್ರೊ ಕಬಡ್ಡಿ ಲೀಗ್ ಮೂರನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿತು, ಹೋದ ವರ್ಷದ ಚಾಂಪಿಯನ್ ಯು ಮುಂಬಾ ತಾನೇ ಮಾಡಿಕೊಂಡ ತಪ್ಪಿನಿಂದಾಗಿ 'ರನ್ನರ್ಸ್ ಅಪ್' ಸ್ಥಾನಪಡೆಯಿತು[೭].
೧.ಪಟ್ನಾ ಪೈರೇಟ್ಸ್ =ಚಿನ್ನ
೨.ಯು ಮುಂಬಾ =ಬೆಳ್ಳಿ
ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಮೊದಲರ್ಧದಲ್ಲಿ ಪೈರೇಟ್ಸ್ ತಂಡ 19–11ರಲ್ಲಿ ಮುನ್ನಡೆ ಹೊಂದಿತ್ತು. ಆದರೆ ಎರಡನೇ ಅವಧಿಯಲ್ಲಿ ಕಂಡು ಬಂದ ಪ್ರಬಲ ಪೈಪೋಟಿಕಠಿಣವಾಗಿತ್ತು. 40ನೇ ನಿಮಿಷದಲ್ಲಿ ಮೂರು ಪಾಯಿಂಟ್ಸ್ ಗಳಿಸಿದ ಪೈರೇಟ್ಸ್ 31–28 ಪಾಯಿಂಟ್ಸ್‌ನಿಂದ ವಿಜಯ ಪಡೆಯಿತು.
ಪೈರೇಟ್ಸ್ ತಂಡ ವೇಗವಾಗಿ ಪಾಯಿಂಟ್ಸ್ ಗಳಿಸಲು ಕಾರಣವಾಗಿದ್ದು ರೈಡರ್ ರೋಹಿತ್ ಕುಮಾರ್. ಇವರ ಪಾದರಸದಂತ ವೇಗ ಮತ್ತು ಚುರುಕಿನ ಪಾದಚಲನೆ ಮುಂಬಾದ ರಕ್ಷಣಾ ವಿಭಾಗವನ್ನು ಕಂಗೆಡೆಸಿತು. ರೋಹಿತ್ ಎಂಟು ಪಾಯಿಂಟ್ಸ್ ಕಲೆ ಹಾಕಿದರು.
ಪುಣೇರಿಗೆ ಮೂರನೇ ಸ್ಥಾನ: ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕೈ ಚೆಲ್ಲಿದ್ದ ಪುಣೇರಿ ಪಲ್ಟನ್ ತಂಡ ಮೂರನೇ ಸ್ಥಾನ ಪಡೆಯಿತು.
ಇದು ಕಬಡ್ಡಿ ಲೀಗ್‌ನಲ್ಲಿ ಪುಣೇರಿ ತಂಡದ ಶ್ರೇಷ್ಠ ಸಾಧನೆ ಎನಿಸಿತು. ಏಕೆಂದರೆ ಆರಂಭದ ಎರಡು ಆವೃತ್ತಿಗಳಲ್ಲಿ ಲೀಗ್ ಹಂತದಿಂದಲೇ ಈ ತಂಡ ಹೊರ ಬಿದ್ದಿತ್ತು.
ಫೋಟೋ-:[೮]
ವಿವರ
ಪಾಟ್ಣಾ ಪೈರೇಟ್ಸ್ ಆಡಿದ ಪಂದ್ಯಗಳು:
ಪಾಟ್ಣಾ ಪೈರೇಟ್ಸ್ ಆಡಿದ ಪಂದ್ಯಗಳು
ಎದುರಾಳಿ
ಫಲಿತಾಂಶ
ಪಾಯಿಂಟ್ಸ್
1
ಜೈಪುರ ಪಿಂಕ್ ಪ್ಯಾಂಥರ್ಸ್
ಗೆಲವು
29-28
2
ಬೆಂಗಳೂರು ಬುಲ್ಸ್
ಗೆಲವು
33-24
3
ಯು ಮುಂಬಾ
ಗೆಲವು
40-26
4
ತೆಲುಗು ಟೈಟಾನ್ಸ್
ಗೆಲವು
29-25
5
ಬಂಗಾಳ ವಾರಿಯರ್ಸ್
ಗೆಲವು
36-31
6
ಪುಣೇರಿ ಪಲ್ಟನ್
ಟೈ
=
7
ದಾಬಾಂಗ್ ದೆಹಲಿ
ಗೆಲವು
47-34
8
ಬಂಗಾಳ ವಾರಿಯರ್ಸ್
ಗೆಲವು
32-27
9
ಬೆಂಗಳೂರು ಬುಲ್ಸ್
ಗೆಲವು
36-32
10
ಪುಣೇರಿ ಪಲ್ಟನ್
ಟೈ
11
ಯು ಮುಂಬಾ
ಸೋಲು
28-34
12
ಜೈಪುರ ಪಿಂಕ್ ಪ್ಯಂಥರ್ಸ್
ಗೆಲವು
47-24
13
ದಾಬಾಂಗ್ ದೆಹಲಿ
ಗೆಲವು
67-34
14
ತೆಲುಗು ಟೈಟಾನ್ಸ್
ಸೋಲು
41-42
ಸೆಮಿ ಫೈನಲ್ಸ್
ಪುಣೇರಿ ಪಲ್ಟನ್
ಗೆಲವು
40-21
1 ಕೋಟಿ ಬಹುಮಾನ
೧.ಪಟ್ನಾ ಪೈರೇಟ್ಸ್ =ಚಿನ್ನ
೨.ಯು ಮುಂಬಾ =ಬೆಳ್ಳಿ
ಚಾಂಪಿಯನ್ ತಂಡಕ್ಕೆ ರೂ.1 ಕೋಟಿ ಮತ್ತು ರನ್ನರ್ಸ್ ಅಪ್ ಸ್ಥಾನ ಪಡೆದ ತಂಡ ರೂ.50 ಲಕ್ಷ ಬಹುಮಾನವನ್ನು ಪಡೆದುಕೊಂಡಿತು. ಮೂರನೇ ಸ್ಥಾನ ಗಳಿಸಿದ ಪುಣೇರಿ ₹ 30 ಲಕ್ಷ ಮತ್ತು ನಾಲ್ಕನೇ ಸ್ಥಾನ ಪಡೆದ ಬೆಂಗಾಲ್ ತಂಡಕ್ಕೆ ರೂ.20 ಲಕ್ಷ ಕೊಡಲಾಯಿತು.[೭]
ಚೆನ್ನೈನಲ್ಲಿ ತರಬೇತಿ: ಬೆಂಗಳೂರು ಬುಲ್ಸ್ ತಂಡ ಪ್ರಸಕ್ತ ಚೆನ್ನೈ ಹೊರವಲಯದಲ್ಲಿರುವ ‘ಒನ್ ವರ್ಲ್ಡ್ ಅಕಾಡೆಮಿ’ಯಲ್ಲಿ ತರಬೇತಿ ಪಡೆಯುತ್ತಿದೆ. ಮೇ 18ರಿಂದಲೂ ಅಕಾಡೆಮಿಯಲ್ಲಿ ಬೀಡು ಬಿಟ್ಟಿರುವ ಬುಲ್ಸ್ ತಂಡ ಕೋಚ್ ರಣಧೀರ್ ಸಿಂಗ್ ಮಾರ್ಗದರ್ಶನದಲ್ಲಿ ಪಳಗುತ್ತಿದೆ. ಅಕಾಡೆಮಿಯಲ್ಲಿ ಪ್ರತಿನಿತ್ಯ ಯೋಗ, ದೈಹಿಕ ಕಸರತ್ತು ಹಾಗೂ ಫಿಟ್ನೆಸ್ ಕಡೆಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ.ಜೂನ್ 21ರವರೆಗೂ ಅಕಾಡೆಮಿಯಲ್ಲಿ ಉಳಿಯಲಿರುವ ಬುಲ್ಸ್ ತಂಡ ಜೂ.22ರಂದು ಮೊದಲ ಚರಣ ಆಡಲು ಪ್ರಯಾಣ ಬೆಳೆಸಲಿದೆ. ಇಬ್ಬರು ಆಟಗಾರರನ್ನು ಹೊರತು ಪಡಿಸಿ ಸಂಪೂರ್ಣ ಹೊಸ ತಂಡದೊಂದಿಗೆ ಸಿದ್ಧಗೊಳ್ಳುತ್ತಿರುವ ಬುಲ್ಸ್ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದೆ. ಟೂರ್ನಿಯ ದುಬಾರಿ ಆಟಗಾರ ಮೋಹಿತ್ ಚಿಲ್ಲರ್ (53 ಲಕ್ಷ ರೂ), ಸುರೇಂದರ್ ನಾಡ (30 ಲಕ್ಷ), ಕಳೆದ ಬಾರಿ ಸ್ಟಾರ್ ರೈಡರ್ ಎನಿಸಿದ್ದ ಸರ್ವೀಸಸ್ನ ರೋಹಿತ್ ಕುಮಾರ್, ಯೋಗೇಶ್ ಹೂಡಾ, ರೋಹಿತ್ ಬಲಿಯಾನ್ರಂಥ ಬಲಿಷ್ಠ ಪಡೆಯೊಂದಿಗೆ ಸಜ್ಜಾಗುತ್ತಿದೆ.
ಬೆಂಗಳೂರು ಬುಲ್ಸ್ ತಂಡದ ನಾಯಕನಾಗಿ ರಕ್ಷಣಾ ಆಟಗಾರ ಸುರೇಂದರ್ ನಾಡರನ್ನು ಆಯ್ಕೆ ಮಾಡಲಾಗಿದೆ. ಹಿಂದಿನ ಆವೃತ್ತಿಗಳಲ್ಲಿ ಯು ಮುಂಬಾ ಪರ ಗಮನಸೆಳೆದಿದ್ದ 26 ವರ್ಷದ ಸುರೇಂದರ್ ನಾಡ, ಪ್ರಸಕ್ತ ವರ್ಷದ ಹರಾಜು ಪ್ರಕ್ರಿಯೆಯಲ್ಲಿ 30 ಲಕ್ಷ ರೂಪಾಯಿಗೆ ಬುಲ್ಸ್ ತಂಡದ ಪಾಲಾಗಿದ್ದರು. ಹರಿಯಾಣ ಮೂಲದ ಆಟಗಾರನಾಗಿರುವ ಸುರೇಂದರ್ ನಾಡ, ಮೊದಲ ಆವೃತ್ತಿಯಲ್ಲಿ ಉತ್ತಮ ಡಿಫೆಂಡರ್ ಪ್ರಶಸ್ತಿ ದಕ್ಕಿಸಿಕೊಂಡಿದ್ದರು. ಎಡಬದಿಯ ರಕ್ಷಣಾತ್ಮಕ ವಿಭಾಗದಲ್ಲಿ ಸುರೇಂದರ್ ನಾಡ ನೈಪುಣ್ಯ ಸಾಧಿಸಿದ್ದಾರೆ.
ಜೂನ್ 25ರಿಂದ ನಡೆಯಲಿರುವ ಪ್ರೊ ಕಬಡ್ಡಿ ಲೀಗ್(ಪಿಕೆಎಲ್) 4ನೇ ಆವೃತ್ತಿಯ ಮೊದಲ ಚರಣ ಪುಣೆಯಿಂದ ಮುಂಬೈಗೆ ಸ್ಥಳಾಂತರಗೊಂಡಿದೆ.(ಕಾರಣ:ಪ್ರಧಾನಿ ನರೇಂದ್ರ ಮೋದಿ ರ್ಯಾಲಿ)[೯]
ಜೈಪುರದಲ್ಲಿ ನಡೆದ ಪಂದ್ಯದ ಕೊನೆಯ ಕ್ಷಣದವರೆಗೂ ಛಲದ ಹೋರಾಟ ಮಾಡಿದ ಆತಿಥೇಯ ತಂಡದ ನಾಯಕ ಜಸ್ವೀರ್ ಸಿಂಗ್ ತಮ್ಮ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು. ಇದರ ಫಲವಾಗಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಮತ್ತು ಬೆಂಗಳೂರು ಬುಲ್ಸ್ ನಡುವಣ ಪಂದ್ಯವು 28–28 ರಿಂದ ರೋಚಕ ಡ್ರಾ ಕಂಡಿತು.
ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಒಟ್ಟು ಒಂಬತ್ತು ಅಂಕ ಗಳಿಸಿದ ಜಸ್ವೀರ್ ಸಿಂಗ್ ಬುಲ್ಸ್ ಗೆಲವು ತಪ್ಪಿಸಿ ಡ್ರಾ ಆಗಲು ಕಾರಣರಾದರು.[೧೧]
ಬೆಂಗಳೂರು ತಂಡಕ್ಕೆ ಇದು 8ನೇ ಸೋಲು. ಒಟ್ಟು 10 ಪಂದ್ಯ ಆಡಿರುವ ಬೆಂಗಳೂರು ತಂಡ 13 ಅಂಕವನ್ನಷ್ಟೇ ಪಡೆದಿದೆ. 2 ಪಂದ್ಯದಲ್ಲಷ್ಟೇ ಬೆಂಗಳೂರು ತಂಡ ಗೆಲುವುಗಳಿಸಿದೆ.
ಗೆಲುವಿನೊಂದಿಗೆ ಜೈಪುರ ಕೂಟದಲ್ಲಿ 4ನೇ ಗೆಲುವು ಸಾಧಿಸಿದೆ. 4 ಪಂದ್ಯದಲ್ಲಿ ಜೈಪುರ ಸೋಲು ಕಂಡಿದೆ; 1 ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ಸದ್ಯ ಜೈಪುರ ಅಂಕಪಟ್ಟಿಯಲ್ಲಿ 25ಕ್ಕೆ ಅಂಕ ಹೆಚ್ಚಿಸಿಕೊಂಡಿದೆ. ಬುಲ್ಸ್ ಪರ ಪವನ್ ಕುಮಾರ್ (6 ಅಂಕ) ಶ್ರೇಷ್ಠ ರೈಡಿಂಗ್ ಪ್ರದರ್ಶಿಸಿದರೆ ಜೈಪುರ ಪರ ರಾಜೇಶ್ ನರ್ವಲ್ (7 ಅಂಕ) ರೈಡಿಂಗ್ ಮತ್ತು ಆಕರ್ಷಕ ಕ್ಯಾಚಿಂಗ್‌ನಿಂದ ಆಲ್‌ರೌಂಡರ್ ಆಟ ಪ್ರದರ್ಶಿಸಿ ಗಮನ ಸೆಳೆದರು.[೧೨]
07/06/2016: ಹೈದರಾಬಾದ್'ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ನಾಲ್ಕನೇ ಆವೃತ್ತಿಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 30–28 ಪಾಯಿಂಟ್‌ಗಳಿಂದ ತೆಲುಗು ಟೈಟನ್ಸ್ ತಂಡವನ್ನು ಮಣಿಸಿತು. ಈ ಗೆಲುವಿನ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.
ಉಪನಾಯಕ ರೋಹಿತ್ ಕುಮಾರ್ (11 ಪಾಯಿಂಟ್) ಅವರ ಮಿಂಚಿನ ರೈಡಿಂಗ್, ಆಶೀಶ್ ಕುಮಾರ್ ಹಾಗೂ ಸುರೇಂದ್ರ ಅವರ ಸೂಪರ್ ಟ್ಯಾಕ್ಲಿಂಗ್ ತಂಡಕ್ಕೆ ವರದಾನವಾಯಿತು.
ಮಹಿಳಾ ಕಬಡ್ಡಿ ಚಾಲೆಂಜ್ ಟೂರ್ನಿಯ ಫೈನಲ್ ಭಾನುವಾರವೇ ನಡೆಯಲಿದ್ದು ಫೈರ್ ಬರ್ಡ್ಸ್ ಮತ್ತು ಸ್ಟಾರ್ಮ್ ಕ್ವೀನ್ಸ್ ಪೈಪೋಟಿ ನಡೆಸಲಿವೆ.
ಬರ್ಡ್ಸ್ ತಂಡಕ್ಕೆ ಕನ್ನಡತಿ ಮಮತಾ ಪೂಜಾರಿ ನಾಯಕಿಯಾಗಿದ್ದರೆ, ಕ್ವೀನ್ಸ್ ತಂಡವನ್ನು ಇನ್ನೊಬ್ಬ ಕನ್ನಡತಿ ತೇಜಸ್ವಿನಿ ಬಾಯಿ ಮುನ್ನಡೆಸಲಿದ್ದಾರೆ.
ಇವರಿಬ್ಬರೂ 2014ರ ಇಂಚೆನ್ ಏಷ್ಯನ್ ಕೂಟದಲ್ಲಿ ಚಿನ್ನ ಗೆದ್ದ ಭಾರತ ತಂಡಲ್ಲಿದ್ದರು. ಜೊತೆಗೆ ಅನುಭವಿ ಆಟಗಾರ್ತಿಯರು. ಆದ್ದರಿಂದ ಈ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಕಠಿಣ ಹೋರಾಟ ನಿರೀಕ್ಷಿತವೇ ಆಗಿದೆ. ಲೀಗ್ ಹಂತದಲ್ಲಿ ಈ ತಂಡಗಳು ಎರಡು ಸಲ ಪೈಪೋಟಿ ನಡೆಸಿದ್ದವು. ಒಂದು ಪಂದ್ಯ ಟೈ ಆಗಿತ್ತು. ಇನ್ನೊಂದು ಪಂದ್ಯದಲ್ಲಿ ಕ್ವೀನ್ಸ್ ಜಯ ಪಡೆದಿತ್ತು.
ಮಹಿಳಾ ಚಾಲೆಂಜ್ ಕಬಡ್ಡಿ ಟೂರ್ನಿಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಕಾರಣ ಈ ವಿಭಾಗಕ್ಕೆ ಬಹುಮಾನ ಮೊತ್ತ ನಿಗದಿ ಮಾಡಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.[೧೫]
ಕೊನೆಯ ನಿಮಿಷದಲ್ಲಿ ರೋಚಕ ಹೋರಾಟಕ್ಕೆ ಸಾಕ್ಷಿಯಾದ ಫೈನಲ್‌ನಲ್ಲಿ ಕರ್ನಾಟಕದ ತೇಜಸ್ವಿನಿಬಾಯಿ ಎರಡು ಪಾಯಿಂಟ್ಸ್ ಕಲೆಹಾಕಿ ಕ್ರೀಡಾಂಗಣದಲ್ಲಿ ಸೇರಿದ್ದ ಅಂದಾಜು ಹತ್ತು ಸಾವಿರಕ್ಕಿಂತಲೂ ಹೆಚ್ಚು ಜನರ ಮನ ಗೆದ್ದರು. ಇದರಿಂದ ತೇಜಸ್ವಿನಿ ನಾಯಕತ್ವದ ಸ್ಟೋರ್ಮ್ ಕ್ವೀನ್ಸ್ ತಂಡ ಮಹಿಳಾ ಕಬಡ್ಡಿ ಚಾಲೆಂಜ್‌ನಲ್ಲಿ ಚಾಂಪಿಯನ್ ಆಯಿತು. ಮೊದಲ ಬಾರಿಗೆ ನಡೆದ ಮಹಿಳಾ ಚಾಲೆಂಜ್‌ನಲ್ಲಿ ಕ್ವೀನ್ಸ್ ತಂಡ 24–23 ಪಾಯಿಂಟ್ಸ್‌ನಿಂದ ಕರ್ನಾಟಕದ ಇನ್ನೊಬ್ಬ ಆಟಗಾರ್ತಿ ಮಮತಾ ಪೂಜಾರಿ ನಾಯಕತ್ವದ ಫೈರ್ ಬರ್ಡ್ಸ್ ಎದುರು ಗೆಲುವು ಸಾಧಿಸಿತು.[೧೬]