ಬಂಟ್ವಾಳ | |
ರಾಜ್ಯ - ಜಿಲ್ಲೆ |
ಕರ್ನಾಟಕ - ದಕ್ಷಿಣ ಕನ್ನಡ |
ನಿರ್ದೇಶಾಂಕಗಳು | |
ವಿಸ್ತಾರ | km² |
ಸಮಯ ವಲಯ | IST (UTC+5:30) |
ಜನಸಂಖ್ಯೆ (2001) - ಸಾಂದ್ರತೆ |
36,830 - /ಚದರ ಕಿ.ಮಿ. |
ಕೋಡ್ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 574 211 - +91-(0)8255 - KA-19, KA-21 |
ಬಂಟ್ವಾಳ(ಉಚ್ಚಾರಣೆːlisten (ಸಹಾಯ·ಮಾಹಿತಿ)) ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ನೇತ್ರಾವತಿ ನದಿಯ ತೀರದಲ್ಲಿ ಇರುವ ಈ ಊರು ಮಂಗಳೂರಿನಿಂದ ೨೩ ಕಿ.ಮಿ.ದೂರದಲ್ಲಿ ಇದೆ. ಬಂಟ್ವಾಳ ತಾಲೂಕಿನ ಹಾಗೂ ನಮ್ಮ ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರ ಪೊಳಲಿ.
ಇಲ್ಲಿನ ಶ್ರೀ ರಾಜರಾಜೇಶ್ವರೀ ದೇವಾಲಯ ಪ್ರಾಚೀನವಾದದ್ದು ಹಾಗೂ ಐತಿಹಾಸಿಕ ಪ್ರಾಮುಖ್ಯತೆಯನ್ನೂ ಪಡೆದಿರುವ ಸ್ದಳ. ಇದು ಎತ್ತರವಾದ ಗುಡ್ದ ಹಾಗೂ ವಿಶಾಲವಾದ ಗದ್ದೆಗಳಿಂದ ಸುತ್ತುವರಿದಿದ್ದು , ಪ್ರಕೃತಿ ಸೌಂದರ್ಯದಿಂದ ಕೂಡಿದೆ. ಇಲ್ಲಿಂದ ಸ್ವಲ್ಪ ದೂರದಲ್ಲಿ ಫಾಲ್ಗುಣಿ ನದಿ ಹರಿಯುತ್ತದೆ. ದೇವಾಲಯದ ಮರದ ಛಾವಣಿಯು ಸುಂದರವಾದ ಕೆತ್ತನೆ ಗಳಿಂದ ಅಲಂಕೃತವಾಗಿದೆ. ಚಕ್ರವರ್ತಿ ಅಶೋಕನ ಶಾಸನಗಳಲ್ಲಿ ಈ ಗುಡಿಯ ಉಲ್ಲೇಖವಿದೆ. ಅಬ್ದುಲ್ ರಜಾಕ್ ಎಂಬ ವಿದೇಶಿ ಯಾತ್ರಿಕ ೧೪೪೮ ರಲ್ಲಿ ಇಲ್ಲಿಗೆ ಭೇಟಿ ಕೊಟ್ಟಿದ್ದನೆಂದು ಅವನ ಬರಹಗಳಿಂದ ತಿಳಿದುಬರುತ್ತದೆ. ಈ ದೇವಾಲಯ ೮ ನೇ ಶತಮಾನದಲ್ಲಿ ನಿರ್ಮಾಣಗೊಂಡಿರಬಹುದೆಂಬುದರ ಬಗ್ಗೆ ಶಾಸನಧಾರಗಳಿವೆ. ಸುಮಾರು ೧ ತಿಂಗಳ ಕಾಲ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಇಲ್ಲಿ
* ನವದುರ್ಗಾ ಶ್ರೀ ಲಕ್ಷ್ಮೀ ಜನಾರ್ದನ ಮಠ ಸಾನ್ನಿಧ್ಯ */ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮ ೧೨ ನೇ ಶತಮಾನದ ಐತಿಹಾಸಿಕ ಇತಿಹಾಸ ವಿರುವ ಪಂಬತ್ತಜೆ, ಒಂಬತ್ತಬ್ಬೆ ಹಳೆದೇವಸ್ಥಾನದ ಅದ್ಕೆ ಎಂದೇ ಜನಜನಿತವಾದ
ಜೀರ್ಣೋದ್ಧಾರದ ಹಂತದಲ್ಲಿದ್ದು, ಮುಂದೊಂದು ದಿನ ಈ ಮಠ ಸಾನ್ನಿಧ್ಯ ಪ್ರಕಾಶವನ್ನು ನೀಡಲಿರುವುದು
ಮುಡಿಪು, ಮೂಡಬಿಡ್ರಿ, ಸುರತ್ಕಲ್, ಮುಲ್ಕಿ, ಕಿನ್ನಿಗೋಲಿ, ವಿಟ್ಲಾ ಮುಂತಾದ ಸ್ಥಳಗಳಿಗೆ ಬಿ.ಸಿ ರೋಡ್ ಬಸ್ ಸ್ಟ್ಯಾಂಡ್ನಿಂದ ಅನೇಕ ಬಸ್ಸುಗಳು ಪ್ರಯಾಣಿಸುತ್ತವೆ. ಬಿ. ಸಿ ರೋಡ್ ನಲ್ಲಿ ರೈಲ್ವೆ ನಿಲ್ದಾಣವನ್ನು ದಕ್ಷಿಣ ಪಶ್ಚಿಮ ರೈಲ್ವೆಯು ನಿರ್ವಹಿಸುತ್ತದೆ. ಮಂಗಳೂರು ಬಂದರು ಇಲ್ಲಿಂದ ಸುಮಾರು ೩೦ ಕಿ.ಮೀ ದೂರದಲ್ಲಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಬಿ.ಸಿ. ರಸ್ತೆಯಿಂದ ಸುಮಾರು ೪೫ ನಿಮಿಷಗಳು.