ಬಗನಿ | |
---|---|
Scientific classification | |
ಸಾಮ್ರಾಜ್ಯ: | plantae
|
Division: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | C. urens
|
Binomial name | |
ಕ್ಯಾರಿಯೋಟ ಉರೆನ್ಸ್ |
ಬಗನಿ (ಬೈನೆ)ಮರ ತಾಳೆ ಜಾತಿಯ ಒಂದು ಮರ.ಕರ್ನಾಟಕದಲ್ಲಿ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಕಂಡು ಬರುವುದು.
ಇದು ಪಾಲ್ಮಸಿ (Palmae)ಕುಟುಂಬಕ್ಕೆ ಸೇರಿದ್ದು,ಕ್ಯಾರಿಯೋಟ ಉರೆನ್ಸ್ (Caryota Urens)ಎಂದು ಸಸ್ಯಶಾಸ್ತ್ರೀಯ ಹೆಸರು.
ಇದು ನೀಳವಾಗಿ ಬೆಳೆಯುವ ಅಂದವಾದ ಮರ.ದೊಡ್ಡಗಾತ್ರದ ದ್ವಿಲತಾತಂತು ಎಲೆಗಳು.ಇದರ ಹೂಗೊಂಚಲು ಅಂದವಾಗಿ ಇರುವುದು. ದಾರುವು ನಾರುಮಯವಾಗಿ ಬಲಯುತವಾಗಿರುತ್ತದೆ.
ಇದರ ದಾರುವು ಬಲಯುತವಾಗಿರುವುದರಿಂದ ಗೃಹ ನಿರ್ಮಾಣಕ್ಕೆ,ನೇಗಿಲು ಮುಂತಾದ ಕೃಷಿಉಪಕರಣಗಳ ತಯಾರಿಕೆಯಲ್ಲಿ,ಒನಕೆ,ನೀರುಗೊಳವೆಗಳ ರಚನೆಯಲ್ಲಿ ಉಪಯೋಗವಾಗುತ್ತದೆ.ಇದರ ಎಲೆಯಿಂದ ನಾರು ದೊರೆಯುತ್ತದೆ.ಇದರ ಹೂ ಗೊಂಚಲುಗಳನ್ನು ಅಲಂಕಾರಕ್ಕೆ ಬಳಸುತ್ತಾರೆ.ಹೂವಿನ ತೊಟ್ಟಿನಿಂದ ಹೆಂಡವನ್ನು ಭಟ್ಟಿ ಇಳಿಸುತ್ತಾರೆ.ಇದರ ಕಾಂಡದಿಂದ ಬರುವ ಪಿಷ್ಟ ಪದಾರ್ಥವನ್ನು ಸಬ್ಬಕ್ಕಿ ಯಂತೆ ಬಳಸುತ್ತಾರೆ.
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ