ಬಚ್ಚನ್ | |
---|---|
ಚಿತ್ರ:Bachchan poster.jpg | |
ನಿರ್ದೇಶನ | ಶಶಾಂಕ್ |
ನಿರ್ಮಾಪಕ | ಉದಯ್ ಕೆ. ಮೆಹ್ತಾ |
ಲೇಖಕ | ಶಶಾಂಕ್ |
ಪಾತ್ರವರ್ಗ | |
ಸಂಗೀತ | ವಿ.ಹರಿಕೃಷ್ಣ |
ಛಾಯಾಗ್ರಹಣ | ಶೇಖರ್ ಚಂದ್ರ |
ಸಂಕಲನ | ಶ್ರೀ ಕ್ರೇಜಿಮೈಂಡ್ಸ್ |
ಸ್ಟುಡಿಯೋ | ಶ್ರೀ ವೆಂಕಟೇಶ್ವರ ಕೃಪಾ ಎಂಟರ್ಟೈನರ್ಸ್ |
ಬಿಡುಗಡೆಯಾಗಿದ್ದು |
|
ದೇಶ | ಭಾರತ |
ಭಾಷೆ | ಕನ್ನಡ |
ಬಂಡವಾಳ | ₹೧೦.೫ ಕೋಟಿ[೨] - ₹೧೧ ಕೋಟಿ [೩] |
ಬಾಕ್ಸ್ ಆಫೀಸ್ | ₹೨೦ ಕೋಟಿ[೨][೩] |
ಬಚ್ಚನ್ ೨೦೧೩ ರ ಭಾರತೀಯ ಕನ್ನಡ ಭಾಷೆಯ ಸೈಕಾಲಾಜಿಕಲ್ ಸಾಹಸ ಚಿತ್ರವಾಗಿದ್ದು ಶಶಾಂಕ್ ನಿರ್ದೇಶಿಸಿದ್ದಾರೆ ಮತ್ತು ಸುದೀಪ, ಪಾರುಲ್ ಯಾದವ್, ಜಗಪತಿ ಬಾಬು, ಭಾವನಾ ಮತ್ತು ಟುಲಿಪ್ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ [೪] ಸಂಗೀತವನ್ನು ವಿ. ಹರಿಕೃಷ್ಣ ಸಂಯೋಜಿಸಿದ್ದಾರೆ ಮತ್ತು ಛಾಯಾಗ್ರಹಣವನ್ನು ಶೇಖರ್ ಚಂದ್ರು ನಿರ್ವಹಿಸಿದ್ದಾರೆ.
ಬಚ್ಚನ್ ಭಾರತದಲ್ಲಿ ೧೧ ಏಪ್ರಿಲ್ ೨೦೧೩ ರಂದು ಬಿಡುಗಡೆಯಾಯಿತು. ದುಬೈ, ಜರ್ಮನಿ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿಯೂ ( ಪರ್ತ್, ಮೆಲ್ಬೋರ್ನ್ ಮತ್ತು ಅಡಿಲೇಡ್ ) ಬಿಡುಗಡೆಯಾಯಿತು. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. [೫] ಈ ಚಲನಚಿತ್ರವನ್ನು ತೆಲುಗು ಮತ್ತು ಹಿಂದಿಗೆ ಅದೇ ಹೆಸರಿನೊಂದಿಗೆ ಮತ್ತು ತಮಿಳಿನಲ್ಲಿ ಮುರಟ್ಟು ಕೈದಿ ಎಂದು ೨೦೧೫ ರಲ್ಲಿ ಡಬ್ ಮಾಡಲಾಯಿತು. [೬] ಚಿತ್ರದ ಮುಖ್ಯ ಕಥಾವಸ್ತುವನ್ನು ೨೦೧೬ ರ ಬಾಂಗ್ಲಾದೇಶದ ಚಲನಚಿತ್ರ ಮೆಂಟಲ್‌ನಲ್ಲಿ ಬಳಸಲಾಗಿದೆ.
ಅನಾಮಧೇಯ ವ್ಯಕ್ತಿಯೊಬ್ಬರು ಎಸ್‌ಐ ಮಹೇಶ್ ದೇಶಪಾಂಡೆ ಮತ್ತು ಡಾ.ಶ್ರೀನಿವಾಸ್ ಅಯ್ಯಂಗಾರ್ ಅವರನ್ನು ಕೊಲೆ ಮಾಡಿದ್ದಾರೆ. ಪೊಲೀಸರಿಂದ ತೀವ್ರವಾದ ಚೇಸ್ ನಂತರ, ವ್ಯಕ್ತಿ ಟ್ರಕ್ ಅಪಘಾತದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ ಮತ್ತು ವಶಕ್ಕೆ ತೆಗೆದುಕೊಳ್ಳಲಾಗುತ್ತದೆ. ಸಿಬಿಐ ವಿಜಯಕುಮಾರ್ ಅವರನ್ನು ತನಿಖೆಗೆ ನೇಮಿಸಲಾತ್ತದೆ, ನಂತರ ಅವರು ಶಂಕಿತನನ್ನು ವಿಚಾರಣೆ ಮಾಡುತ್ತಾರೆ. ಜಯರಾಜ್ (ರಿಯಲ್ ಎಸ್ಟೇಟ್ ಉದ್ಯಮಿ), ಡಾ. ಶ್ರೀನಿವಾಸ್ ಅಯ್ಯಂಗಾರ್ ಮತ್ತು ಎಸ್‌ಐ ಮಹೇಶ್ ದೇಶಪಾಂಡೆ ಭರತ್‌ಗೆ ಹಲವು ದಿನಗಳ ಕಾಲ ಚಿತ್ರಹಿಂಸೆ ನೀಡಿದ್ದಾರಂದೂ ಮತ್ತು ತಮ್ಮ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಅಂಜಲಿಯನ್ನು ಬ್ರೈನ್‌ವಾಶ್ ಮಾಡಿದ್ದಾರೆ ಎಂದೂ ವಿವರಿಸುವ ಈ ವ್ಯಕ್ತಿ, ತಾನು ಭರತ್ ಎಂಬ ರಿಯಲ್ ಎಸ್ಟೇಟ್ ವ್ಯಾಪಾರಿ ಎಂದು ಬಹಿರಂಗಪಡಿಸುತ್ತಾನೆ.
ವಿಜಯ್‌ಕುಮಾರ್ ಅವರು ಘಟನೆಗಳನ್ನು ತನಿಖೆ ಮಾಡುತ್ತಾರೆ. ಅಂಜಲಿ (ವಾಸ್ತವವಾಗಿ ಜೀವಂತವಾಗಿದ್ದಾರೆ) ಮತ್ತು ಮನೋವೈದ್ಯರಿಂದ ಭರತ್‌ಗೆ ಸ್ಕಿಜೋಫ್ರೇನಿಯಾ ಇದೆ ಎಂದು ತಿಳಿಯಲು, ಇದು ಅಂಜಲಿ ಅವರನ್ನು ಕೊಂದಿದೆ ಎಂದು ಭಾವಿಸಲು ಕಾರಣವಾಯಿತು ಎಂದು ತಿಳಿದು ಬರುತ್ತದೆ. ಭರತ್ ನಿಮ್ಹಾನ್ಸ್‌ಗೆ ದಾಖಲಾಗುತ್ತಾನೆ. ಅಲ್ಲಿ ಅವನು ಚಿಕಿತ್ಸೆಗೆ ಒಳಗಾಗುತ್ತಾನೆ. ಆದರೆ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ಅಲ್ಲಿ ಅವನು ಜಯರಾಜ್‌ನನ್ನು ಅವನ ನೈಟ್‌ಕ್ಲಬ್‌ನಲ್ಲಿ ಟ್ರ್ಯಾಕ್ ಮಾಡಿ, ಕುರಿ ಟ್ರಕ್‌ನಲ್ಲಿ ಅವನನ್ನು ದೂರ ಕರೆದುಕೊಂಡು ಹೋಗುತ್ತಾನೆ. ಸಣ್ಣ ಅಪಘಾತದ ಕಾರಣ ವಕೀಲರಿಂದ ದೂರು ಪಡೆದ ನಂತರ, ಭರತ್ ಅಸ್ವಸ್ಥನಂತೆ ನಟಿಸುತ್ತಿದ್ದಾನೆ ಮತ್ತು ಕೊಲೆಗಳನ್ನು ಅವನು, ಅವನ ಮತ್ತು ಅಂಜಲಿಯ ಕುಟುಂಬ ಯೋಜಿಸಿದೆ ಎಂದು ವಿಜಯ್ ಕುಮಾರ್ ಕಂಡುಕೊಳ್ಳುತ್ತಾರೆ. ವಿಜಯ್ ಕುಮಾರ್ ಭರತ್ ಮತ್ತು ಅಂಜಲಿಯ ಕುಟುಂಬವನ್ನು ಕರೆಸುತ್ತಾರೆ, ಅಲ್ಲಿ ಅವರು ಈ ಕೊಲೆಗಳ ಹಿಂದಿನ ಸತ್ಯವನ್ನು ಬಹಿರಂಗಪಡಿಸುತ್ತಾರೆ. ಬಳ್ಳಾರಿಯಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿರುವ ಅಂಜಲಿಯ ಸಹೋದರಿ ಅಶ್ವಿನಿಯನ್ನು ಭರತ್ ಪ್ರೀತಿಸುತ್ತಿದ್ದ.
ಅಕ್ರಮ ಗಣಿಗಾರಿಕೆ ಚಟುವಟಿಕೆಗಳ ಪರಿಣಾಮವಾಗಿ ನೀರು ಕಲುಷಿತಗೊಂಡು ತಮ್ಮ ಹಳ್ಳಿಯ ನಿವಾಸಿಗಳು ಮತ್ತು ಅವರ ಮಗುವನ್ನು ನಾಶಪಡಿಸಿದ ರೋಗಗಳಿಗೆ ಕಾರಣವಾಗುವ ಬಗ್ಗೆ ಅಶ್ವಿನಿಯು, ಸಾಣ್ಯಪ್ಪ ಮತ್ತು ಅವರ ಪತ್ನಿ ಲಕ್ಷ್ಮವ್ವರಿಂದ ತಿಳಿದುಕೊಳ್ಳುತ್ತಾಳೆ. ಅಶ್ವಿನಿ ಅವರು ಡಿಸಿಗೆ ದೂರು ನೀಡುವ ಮೂಲಕ ಕಾರ್ಖಾನೆ ವಿರುದ್ಧ ಪ್ರತಿಭಟನೆಗೆ ಗ್ರಾಮಸ್ಥರನ್ನು ಪ್ರೋತ್ಸಾಹಿಸಿದರು. ಆದಾಗ್ಯೂ, ಮರುದಿನ ಬೆಳಿಗ್ಗೆ, ಅಶ್ವಿನಿ ಗ್ರಾಮವು ನಾಶವಾಗಿರುವುದನ್ನು ಕಂಡು ಎಸ್‌ಐ ದೇಶಪಾಂಡೆಗೆ ತಿಳಿಸುತ್ತಾಳೆ. ಅಲ್ಲಿ ಅವಳನ್ನು ಕ್ಯಾಬಿನೆಟ್ ಮಂತ್ರಿಯಾಗಿರುವ ಮಧುಸೂಧನ್ ಮತ್ತು ಅವನ ಪಾಲುದಾರ ಜಯರಾಜ್ ಬಳಿಗೆ ಕರೆದೊಯ್ಯಲಾಗುತ್ತದೆ. ಗ್ರಾಮಸ್ಥರು ಅವರ ವಿರುದ್ಧ ದೂರು ನೀಡಲು ಸಿದ್ಧರಾದಾಗ ದೇಶಪಾಂಡೆ, ಡಾ.ಅಯ್ಯಂಗಾರ್ ಅವರೊಂದಿಗೆ ಶಾಮೀಲಾಗಿ ಹತ್ಯಾಕಾಂಡವನ್ನು ರೂಪಿಸಿದರು ಎಂದು ಬಹಿರಂಗಪಡಿಸುತ್ತಾರೆ. ನಂತರ ಇವರು ಅಶ್ವಿನಿಯನ್ನು ಬರ್ಬರವಾಗಿ ಕೊಲ್ಲುತ್ತಾರೆ. ಹತ್ಯಾಕಾಂಡದಿಂದ ಪಾರಾದ ಸಾಣ್ಯಪ್ಪ, ಭರತ್ ಬಗ್ಗೆ ತಿಳಿದು ಅಶ್ವಿನಿಯ ಸಾವಿನ ವಿಷಯವನ್ನು ಬಹಿರಂಗಪಡಿಸುತ್ತಾನೆ.
ಆತಂಕಗೊಂಡ ಭರತ್ ಮತ್ತು ಕುಟುಂಬ, ಅಶ್ವಿನಿಯ ಸಾವಿಗೆ ಪ್ರತೀಕಾರ ತೀರಿಸಲು ಮತ್ತು ಪೊಲೀಸರ ಗಮನವನ್ನು ಬೇರೆಡೆಗೆ ಸೆಳೆಯಲು ಒಟ್ಟಾಗಿ ಯೋಜನೆ ರೂಪಿಸಿತು. ಸತ್ಯವನ್ನು ಬಹಿರಂಗಪಡಿಸಿದ ನಂತರ, ಮಧುಸೂದನ್‌ನ ಗಣಿಗಾರಿಕೆ ಪ್ರದೇಶಕ್ಕೆ ಭರತನು, ಜಯರಾಜ್ ಮತ್ತು ಮಧುಸೂಧನ್‌ರನ್ನು ಕರೆತಂದಿದ್ದಾನೆಂದು ಅಂಜಲಿ ಹೇಳುತ್ತಾಳೆ. ವಿಜಯ್ ಕುಮಾರ್ ಗಣಿಗಳ ಕಡೆಗೆ ಹೋಗುತ್ತಾರೆ. ಗಣಿಗಳಲ್ಲಿ ಭರತ್, ಹೌಲ್ ಟ್ರಕ್ ಬಳಸಿ ಮಧುಸೂಧನ್ ಮತ್ತು ಜಯರಾಜ್ ಅವರನ್ನು ಕೊಂದು, ಅಶ್ವಿನಿಯ ಸಾವಿಗೆ ಸೇಡು ತೀರಿಸಿಕೊಳ್ಳುತ್ತಾನೆ. ಆಕಸ್ಮಿಕವಾಗಿ ಲಾರಿ ಸುಟ್ಟು ಸಣ್ಯಪ್ಪ ಸಾವನ್ನಪ್ಪಿದ್ದಾನೆ. ಭರತ್ ಪೊಲೀಸರಿಗೆ ಶರಣಾಗುತ್ತಾನೆ ಮತ್ತು "ಅವರ ಗಣಿಗಾರಿಕೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜಯರಾಜ್ ಮತ್ತು ಮಧುಸೂಧನ್ ಸಾವು" ಎಂದು ಮಾಧ್ಯಮಗಳು ವರದಿ ಮಾಡುತ್ತವೆ. ಗಣಿಗಾರಿಕೆಯನ್ನು ವಶಪಡಿಸಿಕೊಳ್ಳಲಾಗಿದ್ದು, ಹಾನಿಕಾರಕ ಚಟುವಟಿಕೆಗಳಿಗಾಗಿ ಗಣಿಗಾರರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಮೂರು ತಿಂಗಳ ನಂತರ, ವಿಜಯ್ ಕುಮಾರ್ ಸುಳ್ಳು ಸಾಕ್ಷ್ಯವನ್ನು ನೀಡಿ ಭರತ್ ನನ್ನು ಜೈಲಿನಿಂದ ರಕ್ಷಿಸುತ್ತಾನೆ, ಸಮಾಜ ವಿರೋಧಿಗಳನ್ನು ಕೊಲ್ಲುವಲ್ಲಿ ಅವನು ಸರಿಯಾದ ಕೆಲಸವನ್ನು ಮಾಡಿದ್ದಾನೆ ಎಂದು ನಂಬುತ್ತಾನೆ. ಭರತ್ ಬಂಧನದಿಂದ ಬಿಡುಗಡೆಯಾಗಿ ತನ್ನ ಕುಟುಂಬದೊಂದಿಗೆ ಮತ್ತೆ ಸೇರುತ್ತಾನೆ.
ಆರಂಭದಲ್ಲಿ, ಪ್ರಮುಖ ಸ್ತ್ರೀ ಪಾತ್ರಕ್ಕಾಗಿ ಐಂದ್ರಿತಾ ರೇ ಅವರನ್ನು ಸಂಪರ್ಕಿಸಲಾಯಿತು. ವಿಷ್ಣುವರ್ಧನ (2011) ನಂತರ ಸುದೀಪ ಅವರೊಂದಿಗೆ ಎರಡನೇ ಬಾರಿಗೆ ಸಹಕರಿಸುವ ನಾಯಕಿಯಾಗಿ ಭಾವನಾ ಅವರನ್ನು ಅಂತಿಮಗೊಳಿಸಲಾಯಿತು. [೪] ಚಿತ್ರದಲ್ಲಿ ವಿಶೇಷ ಪಾತ್ರ ಮಾಡಲು ಜಗಪತಿ ಬಾಬು ಸಹಿ ಹಾಕಿದರು. [೭] ಪಿ.ರವಿ ಶಂಕರ್, ಆಶಿಶ್ ವಿದ್ಯಾರ್ಥಿ ಮತ್ತು ಪ್ರದೀಪ್ ರಾವತ್ ಖಳನಾಯಕರ ಪಾತ್ರಕ್ಕೆ ಆಯ್ಕೆಯಾದರು. [೪] ಎರಡನೇ ಪ್ರಮುಖ ನಟಿ ಪಾತ್ರಕ್ಕಾಗಿ, ಮುಂಬರುವ ಯಶಸ್ವಿ ನಟಿ ದೀಪಾ ಸನ್ನಿಧಿಯನ್ನು ಮೊದಲು ಸಹಿ ಮಾಡಲಾಗಿತ್ತು. ಆದಾಗ್ಯೂ, ಜೂನ್ ೧೯ ರಂದು, ಚಿತ್ರಕಥೆಯಲ್ಲಿ ಬದಲಾವಣೆಯ ನಂತರ ಈ ನಟಿಯ ಬದಲಿಗೆ, ಪ್ರಣಿತಾ ಸುಭಾಷ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಗಳು ಹೊರಬಂದವು. [೮] ನಿರ್ಮಾಪಕರು ಸೂಕ್ತ ಬದಲಾವಣೆಗಾಗಿ ಹುಡುಕಾಟದಲ್ಲಿದ್ದರು. ಹಿಂದಿ ಚಲನಚಿತ್ರ ನಟಿ ಟುಲಿಪ್ ಜೋಶಿ ಅಂತಿಮವಾದರು. [೯] [೧೦]
ಕಿಚ್ಚ ಹುಚ್ಚ (೨೦೧೦) ಮತ್ತು ವಿಷ್ಣುವರ್ಧನ (೨೦೧೧) ನಂತರ ಮೂರನೇ ಬಾರಿಗೆ ಸುದೀಪ ಅವರೊಂದಿಗೆ ಸಹಯೋಗದೊಂದಿಗೆ ವಿ. ಹರಿಕೃಷ್ಣ ಅವರು ಸಂಗೀತವನ್ನು ಸಂಯೋಜಿಸಿದ್ದಾರೆ. "ಡಿ ಬೀಟ್ಸ್" ಮೂಲಕ ಆಡಿಯೋ ಬಿಡುಗಡೆ ಮಾಡಲಾಯಿತು.
ಸಂ. | ಶೀರ್ಷಿಕೆ | ಗಾಯಕ(ರು) | ಉದ್ದ |
---|---|---|---|
1. | "ಹಲೋ ಹಲೋ" | ವಿಜಯ್ ಪ್ರಕಾಶ್ | 4:20 |
2. | "ಒಂಚೂರು" | ಸುದೀಪ್, ಇಂದು ನಾಗರಾಜ್ | 4:19 |
3. | "ಸದಾ ನಿನ್ನ" | ಸೋನು ನಿಗಮ್, ಶ್ರೇಯಾ ಘೋಷಾಲ್ | 4:39 |
4. | "ಮೈಸೂರು ಪಾಕಲ್ಲಿ" | ಅನುರಾಧಾ ಭಟ್ | 4:01 |
5. | "ಬಚ್ಚನ್ ಥೀಮ್" | ಸುದೀಪ್ | 2:19 |
ಒಟ್ಟು ಉದ್ದ: | 19:40 |
ಈ ಚಲನಚಿತ್ರವು ೧೧ ಏಪ್ರಿಲ್ ೨೦೧೩ ರಂದು ಭಾರತದಲ್ಲಿ ೧೯೦ ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಲನಚಿತ್ರವು ದುಬೈ ಮತ್ತು ಇತರ ಮಧ್ಯಪ್ರಾಚ್ಯ ದೇಶಗಳಲ್ಲಿ ೧೮ ಏಪ್ರಿಲ್ ೨೦೧೩ ರಂದು ಬಿಡುಗಡೆಯಾಯಿತು [೧೧] . ಜರ್ಮನಿ ಮತ್ತು ಆಸ್ಟ್ರೇಲಿಯಾದಲ್ಲಿಯೂ ಬಿಡುಗಡೆಯಾಯಿತು. [೫] ತೆಲುಗು ಡಬ್ಬಿಂಗ್ ಆವೃತ್ತಿಯು ೧೭ ಮೇ ೨೦೧೪ ರಂದು ೩೦೦ ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
ನಟ ವಿ. ರವಿಚಂದ್ರನ್ ಅವರು ೩೧ ಮೇ ೨೦೧೨ ರಂದು ಗೋಲ್ಡ್ ಫಿಂಚ್ ಹೋಟೆಲ್‌ನಲ್ಲಿ ಟೀಸರ್ ಟ್ರೈಲರ್ ಅನ್ನು ಬಿಡುಗಡೆ ಮಾಡಿದರು.
ಚಿತ್ರದ ಉಪಗ್ರಹ(ಟಿ ವಿ) ಮತ್ತು ಡಿಜಿಟಲ್ ಹಕ್ಕುಗಳನ್ನು ಉದಯ ಟಿವಿ ಮತ್ತು ಸನ್ ನೆಕ್ಸ್ಟ್ ₹೩.೩೩ ಕೋಟಿ ಯುಎಸ್$೭,೩೯,೨೬೦)ಗೆ ಪಡೆದುಕೊಂಡಿವೆ. [೧೨]
ಬಚ್ಚನ್ ಅದರ ತಾಂತ್ರಿಕ ಅಂಶಗಳು, ಸುದೀಪ್ ಅಭಿನಯ, ಸಾಹಸ ದೃಶ್ಯಗಳು, ನಿರ್ದೇಶನ ಮತ್ತು ದೃಶ್ಯ ಶೈಲಿಯನ್ನು ಮೆಚ್ಚಿದ ವಿಮರ್ಶಕರಿಂದ ಧನಾತ್ಮಕ ವಿಮರ್ಶೆಗಳನ್ನು ಪಡೆಯಿತು.
ಸಿಫಿ ೫ ರಲ್ಲಿ ೪ ನಕ್ಷತ್ರಗಳನ್ನು ನೀಡಿದೆ ಮತ್ತು "ಸುದೀಪ್ ನಟನೆಯಲ್ಲಿ ಮತ್ತು ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ ತಮ್ಮ ಅದ್ಭುತ ಅಭಿನಯದಿಂದ ಮೇಲಕ್ಕೆ ಬರುತ್ತಾರೆ. ಆಕ್ಷನ್ ಚಲನಚಿತ್ರಗಳಿಗೆ ಬಂದಾಗ, ಇದು ಸುದೀಪ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಬಹುದು" ಎಂದು ಬರೆದಿದೆ. [೧೩] ಬೆಂಗಳೂರು ಮಿರರ್ ೫ ರಲ್ಲಿ ೪ ನಕ್ಷತ್ರಗಳನ್ನು ನೀಡಿದೆ ಮತ್ತು "ಶಶಾಂಕ್ ಅವರು ರಚಿಸಿದ ಚಿತ್ರಕಥೆಯಲ್ಲಿ ಕನ್ವಿಕ್ಷನ್ ಅನ್ನು ತೋರಿಸಿದ್ದಾರೆ. ಅವರು ಆಕ್ಷನ್ ಗೆ ಹೆಚ್ಚು ಮಹತ್ವ ಕೊಡದೇ ಕಥೆಯನ್ನು ನಿರ್ವಹಿಸುತ್ತಾರೆ. ನೀವು ಆಕ್ಷನ್ ಮತ್ತು ಆಶ್ಚರ್ಯವನ್ನು ಆನಂದಿಸುತ್ತಿದ್ದರೆ, ಬಚ್ಚನ್ ಬಿಟ್ಟು ಬೇರೆ ಏನೂ ನೋಡಬೇಡಿ" ಎಂದು ಬರೆದಿದೆ. [೧೪] ಟೈಮ್ಸ್ ಆಫ್ ಇಂಡಿಯಾ ೫ ರಲ್ಲಿ ೪ ನಕ್ಷತ್ರಗಳನ್ನು ನೀಡಿದೆ ಮತ್ತು "ಸುದೀಪ್ ಅವರು ಭರತ್ ಆಗಿ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಪಾರುಲ್ ತಮ್ಮ ಅತ್ಯುತ್ತಮ ಸಂಭಾಷಣೆ ಮತ್ತು ಅಭಿವ್ಯಕ್ತಿಯಿಂದ ನಿಮ್ಮನ್ನು ಮೆಚ್ಚಿಸಿದ್ದಾರೆ. ರವಿಶಂಕರ್ ಖಳನಾಯಕನಾಗಿ ಅದ್ಭುತವಾಗಿದ್ದಾರೆ. ವಿ ಹರಿಕೃಷ್ಣ ಅವರ ಸಂಗೀತವು ಕೆಲವು ಆಕರ್ಷಕ ಟ್ಯೂನ್‌ಗಳನ್ನು ಹೊಂದಿದೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಶ್ಲಾಘನೀಯ" ಎಂದು ಬರೆದಿದೆ. [೧೫]
ಪ್ರಶಸ್ತಿ | ವರ್ಗ | ಸ್ವೀಕರಿಸುವವರು | Ref. |
---|---|---|---|
೬೧ ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ | ಅತ್ಯುತ್ತಮ ನಟ (ನಾಮನಿರ್ದೇಶನ) | ಸುದೀಪ | [೧೬] |
ಅತ್ಯುತ್ತಮ ಪೋಷಕ ನಟಿ(ನಾಮನಿರ್ದೇಶನ) | ಪಾರುಲ್ ಯಾದವ್ | [೧೭] | |
೩ನೇ ದಕ್ಷಿಣ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು | ಅತ್ಯುತ್ತಮ ಚಿತ್ರ(ನಾಮನಿರ್ದೇಶನ) | ಉದಯ್ ಕೆ. ಮೆಹ್ತಾ | [೧೮] |
ಅತ್ಯುತ್ತಮ ನಟ(ನಾಮನಿರ್ದೇಶನ) | ಸುದೀಪ | ||
ಅತ್ಯುತ್ತಮ ಹಾಸ್ಯನಟ(ನಾಮನಿರ್ದೇಶನ) | ಬುಲೆಟ್ ಪ್ರಕಾಶ್ | ||
ಅತ್ಯುತ್ತಮ ಪೋಷಕ ನಟಿ(ನಾಮನಿರ್ದೇಶನ) | ಪಾರುಲ್ ಯಾದವ್ | ||
ಅತ್ಯುತ್ತಮ ನೃತ್ಯ ಸಂಯೋಜಕ(ನಾಮನಿರ್ದೇಶನ) | ಹರ್ಷ | ||
ಅತ್ಯುತ್ತಮ ಸಿನಿಮಾಟೋಗ್ರಾಫರ್(ನಾಮನಿರ್ದೇಶನ) | ಶೇಖರ್ ಚಂದ್ರು |