ಬಜ್ಪೆ | |
---|---|
ಪಟ್ಟಣ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ದಕ್ಷಿಣ ಕನ್ನಡ |
Area | |
• Total | ೧೧೧.೧೮ km೨ (೪೨.೯೩ sq mi) |
Elevation | ೮.೮೩ m (೨೮.೯೭ ft) |
Population (2011) | |
• Total | ೯,೭೦೧ |
• ಸಾಂದ್ರತೆ | ೪೧೬.೩/km೨ (೧,೦೭೮/sq mi) |
ಭಾಷೆಗಳು | |
• ಅಧಿಕೃತ | ತುಳು, ಕನ್ನಡ |
ಸಮಯದ ವಲಯ | |
ಸಮಯ ವಲಯ | ಯುಟಿಸಿ+5:30 (IST) |
ಅಂಚೆ ವಿಳಾಸ | ೫೭೪೧೪೨ |
ದೂರವಾಣಿ ಸಂಖ್ಯೆ | ೦೮೨೪ |
ವಾಹನ ನೋಂದಣಿ | KA-19 |
ಬಜ್ಪೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ.[೧][೨] ಇದು ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೮ ಕಿಲೋಮೀಟರ್ (೧೧ ಮೈಲಿ) ದೂರದಲ್ಲಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಬಜಪೆಯಲ್ಲಿದೆ ಮತ್ತು ಇದನ್ನು ಬಜ್ಪೆ ಏರೋಡ್ರೋಮ್ ಎಂದು ಕರೆಯಲಾಗುತ್ತದೆ. ಸಿಟಿ ಬಸ್ ಸಂಖ್ಯೆ ೪೭ ಬಜ್ಪೆಯನ್ನು ಮಂಗಳೂರು ನಗರಕ್ಕೆ ಸಂಪರ್ಕಿಸುತ್ತದೆ.[೩]ಇದನ್ನು ಬಜಪೆ ಅಂತಲೂ ಕರೆಯುತ್ತಾರೆ. ಬಜ್ಪೆ ಸುತ್ತಮುತ್ತ ಹಲವಾರು ಹಳ್ಳಿಗಳಿವೆ, ಇದು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಬಜ್ಪೆ ಕೇಂದ್ರವಾಗಿ ಕಾರ್ಯನಿರ್ವಹಿಸುವ ಹತ್ತಿರದ ಹಳ್ಳಿಗಳೆಂದರೆ ಪೆರ್ಮುದೆ , ಕಾಳಮುಂಡ್ಕೂರು ಮತ್ತು ಕಟೀಲು . ಬಜ್ಪೆಯು ಬೀಜದ ಅಪ್ಪೆ(ಬೀಜಗಳ ತಾಯಿ) ಎಂಬ ತುಳು ಪದದಿಂದ ಉತ್ಪತ್ತಿಯಾಗಿದೆ. ಹಿಂದೆ ಬಜ್ಪೆಯು ಒಂದು ಪ್ರಮುಖ ಕೃಷಿ ಉತ್ಪನ್ನಗಳ ಮಾರುಕಟ್ಟೆಯಾಗಿದ್ದರಿಂದ ಈ ಹೆಸರಿನಿಂದ ಕರೆಯಲಾಗುತ್ತಿತ್ತು ಎಂದು ಹೇಳಲಾಗುತ್ತದೆ.
೨೦೦೧ ರ ಜನಗಣತಿಯ ಪ್ರಕಾರ, ಬಜ್ಪೆ ಯು ೧೭,೦೩೨ ಜನಸಂಖ್ಯೆಯನ್ನು ಹೊಂದಿದ್ದು. ಪುರುಷರು ೪೮% ಮತ್ತು ಮಹಿಳೆಯರು ೫೨% ಇದ್ದಾರೆ. ಬಜ್ಪೆ ೯೨% ರಷ್ಟು ಸರಾಸರಿ ಸಾಕ್ಷರತಾ ಪ್ರಮಾಣವನ್ನು ಹೊಂದಿದೆ, ಇದು ರಾಷ್ಟ್ರೀಯ ಸರಾಸರಿ ೭೪.೦೪% ಕ್ಕಿಂತ ಹೆಚ್ಚಾಗಿದೆ; ಗಂಡು ಮತ್ತು ಹೆಣ್ಣು ಸಾಕ್ಷರತಾ ಪ್ರಮಾಣವು ಸಮಾನವಾಗಿರುತ್ತದೆ. ಜನಸಂಖ್ಯೆಯ ೧% ರಷ್ಟು ೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರು.As of 2001[update]
ಬಜ್ಪೆ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ನೆಲೆಯಾಗಿದೆ. ಈ ಊರಿನಲ್ಲಿರುವ ಕೆಲವು ಪ್ರಮುಖ ಶಿಕ್ಷಣ ಸಂಸ್ಥೆಗಳು :