ಬರ್ಖಾ ದತ್ ಅವರು ಭಾರತೀಯ ಪತ್ರಿಕೋದ್ಯಮಿ ಹಾಗೂ ಬರಹಗಾರ್ತಿ. ಅವರು ಎನ್ ಡಿ ಟಿ ವಿ ವಾಹಿನಿಯಲ್ಲಿ ೨೧ ವರ್ಷಗಳ ಕಾಲ ಸೇವೆ ಸಲ್ಲಿಸಿದಾರೆ. ಅವರು ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದ ಕಾರ್ಗಿಲ್ ಯುದ್ದದ ನೇರ ಪ್ರಸಾರ ಮಾಡಿದ್ದರು.[೧][೨]
ಇವರು ದೆಹಲಿಯಲ್ಲಿ ದಶಂಬರ್ ೧೮, ೧೯೭೧ರಲ್ಲಿ ಜನಿಸಿದರು. ಇವರ ತಂದೆ ಎಸ್.ಪಿ.ದತ್,ತಾಯಿ ಪ್ರಭಾ ದತ್,ತಂಗಿ ಬಾಹರ್ ದತ್. ಇವರು ಸೈಂಟ್ ಸ್ಟಿಪನ್ಸ್ ಕಾಲೇಜಿನಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪಡೆದರು. ಉನ್ನತ ಶಿಕ್ಷಣವನ್ನು ಜಾಮಿಯ ಮಿಲಿಯ ಇಸ್ಲಾಮಿಯ ಸಮೂಹ ಸಂವಹನ ಸಂಶೋಧನ ಕೇಂದ್ರ ದೆಹಲಿಯಲ್ಲಿ ಪಡೆದರು.[೩][೪]
ಅವರು ಉದ್ಯೋಗವನ್ನು ಎನ್ ಡಿ ಟಿ ವಿ ವಾಹಿನಿಯಿಂದ ಸಲಹಾ ಸಂಪಾದಕರಾಗಿ ಪತ್ರಿಕೋದ್ಯಮವನ್ನು ಪ್ರವೇಶಿಸಿದ್ದರು.ತದನಂತರ ಇಂಗ್ಲೀಷ್ ನ್ಯೂ ವಿಂಗ್ ಸಂಸ್ಥೆ ಆರಂಭಿಸಿದ್ದರು. ಇವರು ಪಾಕಿಸ್ತಾನ,ಅಫ್ಘಾನಿಸ್ತಾನ,ಇರಾಕ್,ಕಾಶ್ಮೀರದಲ್ಲಿ ನಡೆದ ಸಂಘರ್ಷಗಳ ಕುರಿತು ವರದಿ ಮಾಡಿದ್ದಾರೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಅಂಕಣಗಾರ್ತಿಯಾಗಿ ಕೆಲಸ ಮಾಡಿದ್ದಾರೆ.[೫][೬]
ದಿ ಅನ್ ಕ್ವಾಯ್ಟ್ ಲ್ಯಾಂಡ್ (೨೦೧೫)[೭]