ಬಳೆ ಎಂದರೆ ವೃತ್ತಾಕಾರವಾದ ಒಂದು ವಸ್ತು. ಸಾಮಾನ್ಯವಾಗಿ ಹೆಂಗಸರು ತಮ್ಮ ಕೈಗಳಿಗೆ ಧರಿಸುತ್ತಾರೆ. ಬಳೆಗಳು ಸಣ್ಣಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಧರಿಸುತ್ತಾರೆ. ಘಳಘಳ ಸದ್ದು ಮಾಡುತ್ತಾ ಎಲ್ಲರನ್ನು ತನ್ನತ್ತ ಸೆಳೆಯುವ ವಿಶಿಷ್ಟ ಗುಣ ಇದ್ದಕ್ಕಿದೆ.[೧]
ಗಾಜಿನ ಬಳೆಗಳು ಅಥವಾ ಮಣ್ಣಿನ ಬಳೆಗಳು:ವಿವಿಧ ಬಣ್ಣಗಳಿಂದ ಕೂಡಿದ್ದು ಬಡವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರು ಇದನ್ನು ಇಷ್ಟಪಡುತ್ತಾರೆ. ಅದರಲ್ಲಿಯೂ ಕೆಂಪು ಮತ್ತು ಹಸಿರು ಬಣ್ಣದ ಬಳೆಗಳು ಮುತೈದೆಯರ ಲಕ್ಷಣವಾಗಿದೆ.ಮಣ್ಣಿನ ಬಳೆಗಳು ಹೆಚ್ಚು ದಪ್ಪಗಿದ್ದು ವಿವಿಧ ಬಣ್ಣಗಳಿಂದ ಆಕಷಕವಾಗಿ ಕಾಣುತ್ತದೆ.
ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳೆಗಳು ಹೊಸ ಜನಾಂಗದ ಯುವತಿಯರನ್ನು ಹೆಚ್ಚು ಸೆಳೆಯುತ್ತದೆ. ಹೆಚ್ಚು ಬಾಳಿಕೆ ಬರುವ ಈ ಬಳೆಗಳು ಬೇರೆ ಬೇರೆ ಗಾತ್ರ ಮತ್ತು ಆಕಾರಗಳಲ್ಲಿಯೂ ದೊರೆಯುತ್ತದೆ.
ಹೆಚ್ಚಾಗಿ ಇದನ್ನು ಶ್ರೀಮಂತರು ಮಾತ್ರ ಧರಿಸುತ್ತಾರೆ.ಮದುವೆ ಮುಂತಾದ ಸಮಾರಂಭಗಳಲ್ಲಿ ಇದು ಹೆಚ್ಚು ಪ್ರಾಶಸ್ತ್ಯವನ್ನು ಹೊಂದಿದೆ.
ಇದನ್ನು ಬಳಸುವುದು ಬಲು ವಿರಳ. ಆದರೂ ಬೆಳ್ಳಿಯ ಬಳೆಗೆ ಚಿನ್ನದ ಲೇಪನವನ್ನು ಹಾಕಿ ಬಳಸುವುದು ಇದೆ.
ಲೋಹಗಳಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಹೊರತು ಪಡಿಸಿ ಇತರ ಲೋಹಗಳನ್ನು ಬಳಸುತ್ತಾರೆ. ಇವುಗಳಿಗೆ ಚಿನ್ನ ಅಥವಾ ಬೆಳ್ಳಿಯ ಲೇಪನ ನೀಡಿ ಹೊಳೆಯುವ ಹಾಗೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ "ಒನ್ ಗ್ರಾಂ ಗೋಲ್ಡ್" (one gram gold ornaments)[೨] ಹೆಚ್ಚು ಪ್ರಚಲಿತದಲ್ಲಿದೆ.