Basrur
ಬಸ್ರೂರು | |
---|---|
ಹಳ್ಳಿ | |
Coordinates: 13°37′53″N 74°44′20″E / 13.6313°N 74.7388°E | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಉಡುಪಿ ಜಿಲ್ಲೆ |
ಭಾಷೆಗಳು | |
• ಅಧಿಕೃತ | ಕನ್ನಡ |
Time zone | UTC+5:30 (IST) |
PIN | 576 211 |
Vehicle registration | KA-20 |
ಬಸ್ರೂರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಒಂದು ಸ್ಥಳ.ಐತಿಹಾಸಿಕವಾಗಿ ಇದು ಒಂದು ಬಂದರು ನಗರವಾಗಿತ್ತು.ಇದನ್ನು 'ವಸುಪುರ'.ಬಾರ್ಸೆಲೋರ್,ಬಾರ್ಕೊಲೊರ್,ಬಸ್ನೂರ್,ಬಾರ್ಸ್,ಅಬು-ಸರೂರ್ ಮತ್ತು ಬಾರ್ಸೆಲ್ಲೋರ್ ಎಂದೂ ವಿವಿಧ ಕಾಲಘಟ್ಟದಲ್ಲಿ ಉಲ್ಲೇಖಿಸಲಾಗಿತ್ತು.
ಐತಿಹಾಸಿಕವಾಗಿ ಬಸ್ರೂರು ಒಂದು ಮುಖ್ಯ ಬಂದರು ನಗರವಾಗಿ ಗುರುತಿಸಲ್ಪಟ್ಟಿತ್ತು.ಪುರಾಣದ ಪ್ರಕಾರ ಇದು ವಸು ಚಕ್ರವರ್ತಿಯ ರಾಜಧಾನಿಯಾಗಿದ್ದು, ಅವನು ಹಲವಾರು ದೇಗುಲಗಳನ್ನು, ಕೆರೆಗಳನ್ನು ಕಟ್ಟಿಸಿದ.೧೭ ಮತ್ತು ೧೮ ನೆಯ ಶತಮಾನದ ಶಾಸನಗಳಲ್ಲಿ ಇದನ್ನು ವಸುಪುರ ಎಂದೇ ಉಲ್ಲೇಖಿಸಲಾಗಿದೆ [೧] ಮೊರೊಕ್ಕೋದ ಯಾತ್ರಿ ಇಬಿನ್ ಬಟೂಟ ಉಲ್ಲೇಖಿಸಿದ ಅಬು-ಸರೂರ್ ಮತ್ತು ಟಾಲೆಮಿಯ ಭೂಪಟದಲ್ಲಿರುವ ಬಾರ್ಸೆಲೋರ್ ಎಂಬ ಸ್ಥಳವೂ ಇದೇ ಬಸ್ರೂರು ಆಗಿತ್ತು ಎಂದು ವಿದ್ವಾಂಸರ ಅಭಿಪ್ರಾಯವಾಗಿದೆ.೧೫೧೪ರಲ್ಲಿ ಬಾರ್ಬೋಸ ಉಲ್ಲೇಖಿಸಿದಂತ ಇಲ್ಲಿಗೆ ಮಲಬಾರ್, ಏಡೆನ್,ಒರ್ಮುಜ್ ಮುಂತಾದ ಸ್ಥಳಗಳಿಂದ ಹಲವಾರು ಹಡಗುಗಳು ಬರುತ್ತಿದ್ದು, ಇದೊಂದು ಮುಖ್ಯ ವ್ಯಾಪಾರ ಕೇಂದ್ರವಾಗಿತ್ತು.[೧]೧೬ನೆಯ ಶತಮಾನದಲ್ಲಿ ಇದು ಪೋರ್ಚುಗೀಸರ ವಶದಲ್ಲಿತ್ತು.