ಬಹಾದೂರ್‌ಗಢ್ ಕೋಟೆ ಒಂದು ಐತಿಹಾಸಿಕ ಕೋಟೆಯಾಗಿದ್ದು, ಇದನ್ನು ಕ್ರಿ.ಶ 1658 ರಲ್ಲಿ ನವಾಬ್ ಸೈಫ್ ಖಾನ್ ನಿರ್ಮಿಸಿದನು. ಆದರೆ ಕೋಟೆಯನ್ನು 1837 ರಲ್ಲಿ ಐತಿಹಾಸಿಕ ಪಟಿಯಾಲಾ ಸಂಸ್ಥಾನದ ಮಹಾರಾಜಾ ಕರಮ್ ಸಿಂಗ್ ಪುನರ್ರಚಿಸಿದನು.[೧][೨][೩]
ಈ ಕೋಟೆಯನ್ನು ಸುಮಾರು 21 ಚದರ ಕಿಲೋಮೀಟರ್ ಪ್ರದೇಶದಲ್ಲಿ ವೃತ್ತಾಕಾರದ ಆಕಾರದಲ್ಲಿ ನಿರ್ಮಿಸಲಾಗಿದೆ. ಎರಡು ಆಳುವೇರಿಗಳು ಮತ್ತು ಕಂದಕಗಳಿಂದ ಇದು ಸುತ್ತುವರಿಯಲ್ಪಟ್ಟಿದೆ. ಈ ಕೋಟೆಯನ್ನು 1658 ರಲ್ಲಿ ನಿರ್ಮಿಸಲಾಯಿತು ಮತ್ತು ನಂತರ 1837 ಮತ್ತು 1845 ರ ನಡುವೆ ಆ ಸಮಯದಲ್ಲಿ ₹೧೦೦, ೦೦೦ ವೆಚ್ಚದಲ್ಲಿ ಇದನ್ನು ನವೀಕರಿಸಲಾಯಿತು.[೧]
ಈ ಕೋಟೆಗೆ ಒಂಬತ್ತನೇ ಗುರು ಗುರು ತೇಗ್ ಬಹಾದೂರ್‌ರ ಹೆಸರಿಡಲಾಗಿದೆ.[೧][೪]