ಬಾಣಾವರ - ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನಲ್ಲಿರುವ ವಾಣಿಜ್ಯ ಕೇಂದ್ರ, ಬಹು ಪುರಾತನ ಇತಿಹಾಸವುಳ್ಳ ಕೇಂದ್ರ.
ಜಯರಾಂಪುರ: ಇದು ಅರಸೀಕೆರೆ ಇಂದ ೨೫ ಕೀ.ಮೀ.. ದೂರದಲ್ಲಿದೆ. ನಮ್ಮ ಊರು ನೋಡಲು ಸುಂದರವಾಗಿದೆ. ಹಲವಾರು ದೇವಾಲಯಗಳನ್ನು ಕಾಣಬಹುದು. ಊರಿನ ಜನರಿಗೆ ದೊಡ್ಡಮ್ಮ ದೇವರ ಮೇಲೆ ಅಪಾರವಾದ ನಂಬಿಕೆ. ನಮ್ಮ ಊರಿನಲ್ಲಿ ಹೆಚ್ಚು ತೆಂಗಿನ ಕಾಯಿಯ ತೋಟವನ್ನು ನೋಡಬಹುದು. ಅದು ನೋಡಲು ಸುಂದರವಾಗಿದೆ. ಇಲ್ಲಿ ಹೆಚ್ಚಿನದಾಗಿ ಬೆಳೆಯುವ ಬೆಳೆಗಳು ರಾಗಿ, ಎಳ್ಳು, ತೊಗರಿ, ಅವರೆ, ಇತ್ಯಾದಿ.ನಮ್ಮ ಊರಿನಲ್ಲಿ ಒಂದು ವರ್ಷಕೊಮ್ಮೆ ಜಾತ್ರೆ ನಡೆಯುತ್ತದೆ. ಗ್ರಾಮ ದೇವತೆಯ ಜಾತ್ರೆಯನ್ನು ಆಚರಿಸುತ್ತಾರೆ. ಇದು ಮೂರು ದಿನಗಳ ಕಾಲ ನಡೆಯುತ್ತದೆ. ನಮ್ಮ ಊರಿನಲ್ಲಿ ಕನಕ ಜಯಂತಿ ಮತ್ತು ಕೃಷ್ಣ ಜನ್ಮಾಷ್ಟಮಿಯನ್ನು.ತುಂಬ ಚೆನ್ನಾಗಿ ಆಚರಿಸುತ್ತಾರೆ. ಕೃಷ್ಣ ಜನ್ಮಾಷ್ಟಮಿಯಂದು ಮಡಿಕೆಯನ್ನು ಹೊಡೆಯುವುದು ಹಿಂದಿನಿಂದ ರೂಢಿ. ಮತ್ತು ಶಿವನ ಜಾತ್ರೆ ನಡೆಯುತ್ತದೆ.ಇ ರೀತಿಯಾಗಿ ನಮ್ಮ ಊರಿನ ವಿಶೇಷತೆ ಇದೆ.
ಹನ್ನೊಂದನೆಯ ಶತಮಾನದಲ್ಲಿ ಈ ಊರು ಹರಿಹರ ಸೋಮೇಶ್ವರ ರಾಯನೆಂಬ ಅರಸನ ರಾಜಧಾನಿಯಗಿತ್ತು. ಈ ಸಂಸ್ಥಾನ ಹಾರ್‍ನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನೂ ಒಳಗೊಂಡಿತ್ತಂತೆ.
ಮುಂದಿನ ದಿನಗಳಲ್ಲಿ ಬಾಣಾವರ ಹೊಯ್ಸಳ ಸಂಸ್ಥಾನದ ಭಾಗವಾಯಿತು. ವಿಜಯನಗರದ ಪತನದ ನಂತರ ಈ ಪ್ರದೇಶವನ್ನು ಚನ್ನಪಟ್ಟಣದ ಜಗದೇವರಾಯ ವಶಪಡಿಸಿಕೊಂಡ. ಆನಂತರ ಕೆಲಕಾಲ ಇಲ್ಲಿ ಇಕ್ಕೇರಿ(ಕೆಳದಿ)ಯ ನಾಯಕರ ಆಳ್ವಿಕೆಯೂ ಇತ್ತು. ಬಾಣಾವರದಲ್ಲಿ ನಡೆದ ಯುದ್ಧದಲ್ಲಿ ಚಿಕ್ಕದೇವರಾಯ ಒಡೆಯರು ಮರಾಠರು ಹಾಗೂ ಕೆಳದಿಯ ಪಡೆಗಳ ಮೇಲೆ ಗೆಲುವು ಸಾಧಿಸಿ ಈ ಪ್ರದೇಶವನ್ನು ಮೈಸೂರಿನ ವಶಕ್ಕೆ ತೆಗೆದುಕೊಂಡರು. ನಂತರದ ದಿನಗಳಲ್ಲಿ (ಹೈದರ್ ಆಲಿ ಪ್ರಬಲನಾಗಿದ್ದಾಗ) ಮರಾಠರೊಡನೆ ನಡೆದ ಅನೇಕ ಸಂಘರ್ಷಗಳಿಗೂ ಬಾಣಾವರ ಸಾಕ್ಷಿಯಾಗಿತ್ತು. ಇಂತಹುದೇ ಒಂದು ಸಂದರ್ಭದಲ್ಲಿ ಮೈಸೂರಿನ ಸೇನಾನಿ ಹೈದರ್ ಆಲಿ ಬಾಣಾವರದ ಜನರನ್ನು ಅರಸೀಕೆರೆ ಸಮೀಪವಿರುವ ಹಿರೇಕಲ್ಲು ಬೆಟ್ಟದ ಮೇಲಿನ ನಾಗಪುರಿ ಎಂಬ ಹೊಸ ಊರಿಗೆ ಸ್ಥಳಾಂತರಿಸಿದ್ದ (ಈ ಬೆಟ್ಟ ಮಾಲೇಕಲ್ಲು ತಿರುಪತಿ ದೇವಸ್ಥಾನ ಇರುವ ಬೆಟ್ಟಕ್ಕೆ ಅಂಟಿಕೊಂಡಂತೆಯೇ ಇದೆ). ಆದರೆ ಈ ಸ್ಥಳಾಂತರ ಬಹುಬೇಗ ವಿಫಲವಾಗಿ ಜನರು ಮತ್ತೆ ಬಾಣಾವರಕ್ಕೇ ಮರಳಿದರು.
ಟಿಪ್ಪೂ ಸುಲ್ತಾನನ ಕಾಲದಲ್ಲಿ ಈ ಪ್ರದೇಶದ ಕೇಂದ್ರಸ್ಥಾನವನ್ನು ಬಾಣಾವರದಿಂದ ಗರುಡನಗಿರಿಗೆ ಬದಲಾಯಿಸಲಾಗಿತ್ತು. ಹೀಗಿದ್ದರೂ ಬಾಣಾವರ ಸಾಕಷ್ಟು ಚಟುವಟಿಕೆಗಳ ಕೇಂದ್ರವಾಗಿತ್ತು. ಇಲ್ಲಿಗೆ ಸಮೀಪದ ಗುಹಾಂತರ ದರ್ಗಾಕ್ಕೆ ಟಿಪ್ಪೂ ಭೇಟಿಕೊಟ್ಟಿದ್ದನಂತೆ. ಅವನ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ಮರಾಠರ ಆಕ್ರಮಣದ ಸಂದರ್ಭದಲ್ಲಿ ಬಾಣಾವರದ ಮೇಲೂ ದಾಳಿ ನಡೆದಿತ್ತು ಎಂದು ದಾಖಲೆಗಳು ಹೇಳುತ್ತವೆ. ಪೇಶ್ವಾ ಮಾಧವರಾವ್ ನೇತೃತ್ವದಲ್ಲಿ ೧೭೬೯ರಲ್ಲಿ ಬಾಣಾವರದ ಮೇಲೆ ಮರಾಠರು ದಾಳಿ ನಡೆಸಿದ್ದಲ್ಲದೆ ಇಲ್ಲಿ ತಮ್ಮದೊಂದು ಸೇನಾ ತುಕಡಿಯನ್ನೂ ಇರಿಸಿದ್ದರು.
ಟಿಪ್ಪೂ ನಂತರ ಈ ಪ್ರದೇಶ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತು. ೧೮೮೨ರವರೆಗೂ ಕಡೂರು ಜಿಲ್ಲೆಯಲ್ಲಿದ್ದ ಬಾಣಾವರ ತನ್ನದೇ ಹೆಸರಿನ ತಾಲ್ಲೂಕು ಕೇಂದ್ರವಾಗಿತ್ತು. ಬಾಣಾವರದಲ್ಲಿ ಬ್ರಿಟಿಷ್ ಚಟುವಟಿಕೆಯ ಕುರುಹಾಗಿ ಮೇಜರ್ ಜೇಮ್ಸ್ ಕ್ಲೆಮೆನ್ಸ್ ಎಂಬಾತನ ಸಮಾಧಿ ಈಗಲೂ ಕಾಣಸಿಗುತ್ತದೆ. ಬಹಳಷ್ಟು ವರ್ಷ ಈ ಸಮಾಧಿಯನ್ನು ಸರ್ಕಾರದ ವತಿಯಿಂದಲೂ ನಿರ್ವಹಿಸಲಾಗುತ್ತಿದ್ದುದ್ದನ್ನು ಕೇಳಿದವರಿದ್ದಾರೆ. ೧೮೬೫ರಷ್ಟು ಹಿಂದೆಯೇ ಇಲ್ಲೊಂದು ಔಪಚಾರಿಕ ಶಿಕ್ಷಣ ನೀಡುವ ಕನ್ನಡ ಮಾಧ್ಯಮ ಶಾಲೆ ಪ್ರಾರಂಭವಾಗಿದ್ದ ಬಗೆಗೆ ಅಂದಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಡತಗಳಲ್ಲಿ ಮಾಹಿತಿಯಿದೆ.
೧೮೮೨ರಲ್ಲಿ ಹೋಬಳಿ ಕೇಂದ್ರವಾಗಿ ಬದಲಾದ ಬಾಣಾವರ ೧೮೮೬ರಲ್ಲಿ ಕಡೂರು ಜಿಲ್ಲೆಯಿಂದ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿಗೆ ಸೇರ್ಪಡೆಯಾಯಿತು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲೂ ಬಾಣಾವರ ಸಾಕಷ್ಟು ಸಕ್ರಿಯವಾಗಿತ್ತು. ೧೯೪೨ರ ಭಾರತ ಬಿಟ್ಟು ತೊಲಗಿ ಚಳವಳಿಯ ಸಂದರ್ಭದಲ್ಲಿ ಹೋರಾಟ ಹಿಂಸಾಚಾರಕ್ಕೂ ತಿರುಗಿ ಬಾಣಾವರ ರೈಲ್ವೇ ನಿಲ್ದಾಣಕ್ಕೆ ಬೆಂಕಿ ಹಚ್ಚಲಾಗಿತ್ತು. ಸ್ವಾತಂತ್ರ್ಯಾನಂತರ ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರವನ್ನು ಸ್ಥಾಪಿಸಲು ನಡೆದ ಹೋರಾಟದಲ್ಲಿ ಹುತಾತ್ಮರಾದ ರಾಮಸ್ವಾಮಿ ಕೂಡ ಬಾಣಾವರದವರು. ಮೈಸೂರಿನ ರಾಮಸ್ವಾಮಿ ವೃತ್ತವನ್ನು ಹೆಸರಿಸಲಾಗಿರುವುದು ಇವರ ನೆನಪಿನಲ್ಲಿಯೇ.