ಬಾಬಾ ಯೋಗೇಂದ್ರ | |
---|---|
ಜುಲೈ 2018 ರಲ್ಲಿ ಬಾಬಾ ಯೋಗೇಂದ್ರ | |
ಜನನ | |
ಸಾವು | 10 June 2022 ಲಕ್ನೋ, ಉತ್ತರ ಪ್ರದೇಶ, ಭಾರತ | (aged 98)
Known for | ಸಂಸ್ಕಾರ ಭಾರತಿ |
Honours | ಪದ್ಮಶ್ರೀ (೨೦೧೮) |
ಬಾಬಾ ಯೋಗೇಂದ್ರ (೭ ಜನವರಿ ೧೯೨೪ - ೧೦ ಜೂನ್ ೨೦೨೨) ಒಬ್ಬ ಭಾರತೀಯ ಕಲಾವಿದ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ದ ಪ್ರಚಾರಕ್ (ಪ್ರಚಾರಕ) ಮತ್ತು ಸಂಸ್ಕಾರ ಭಾರತೀಯ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಇವರಿಗೆ ೨೦೧೮ ರಲ್ಲಿ ಕಲಾ ಕ್ಷೇತ್ರದ ವಿಭಾಗದಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು.
ಬಾಬಾ ಯೋಗೇಂದ್ರ ಅವರು ೭ ಜನವರಿ ೧೯೨೪ ರಂದು ಬ್ರಿಟಿಷ್ ಇಂಡಿಯಾದ ಯುನೈಟೆಡ್ ಪ್ರಾವಿನ್ಸ್‌ನ, ಬಸ್ತಿ ಜಿಲ್ಲೆಯ ಗಾಂಧಿನಗರದಲ್ಲಿ (ಈಗಿನ ಉತ್ತರ ಪ್ರದೇಶದಲ್ಲಿ ) ಜನಿಸಿದರು. ಅವರು ಗೋರಖ್‌ಪುರದಲ್ಲಿ ಶಿಕ್ಷಣ ಪಡೆದರು. [೧]
ಯೋಗೇಂದ್ರ ಗೋರಖ್‌ಪುರ, ಅಲಹಾಬಾದ್, ಬರೇಲಿ, ಬುದೌನ್ ಮತ್ತು ಸೀತಾಪುರ್‌ನಲ್ಲಿ ಆರ್‌ಎಸ್‌ಎಸ್ ನಲ್ಲಿ ಪ್ರಚಾರಕರಾಗಿ ಕೆಲಸ ಮಾಡಿದರು. ೧೯೮೧ ರಲ್ಲಿ ಆರ್‌ಎಸ್‌ಎಸ್ ಕಲೆ ಮತ್ತು ಸಾಹಿತ್ಯವನ್ನು ಉತ್ತೇಜಿಸಲು ಸಂಸ್ಕಾರ ಭಾರತಿ ಎಂಬ ಘಟಕವನ್ನು ರಚಿಸಿತು. ಯೋಗೇಂದ್ರ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು. ಅವರು ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕರಲ್ಲಿ (ಪ್ರಚಾರಕರು) ಒಬ್ಬರಾಗಿ ತಮ್ಮನ್ನು ತಾವು ಗುರುತಿಸಿಕೂಂಡರು. [೧] [೨] [೩]
೨೦೧೮ ರಲ್ಲಿ, ಭಾರತ ಸರ್ಕಾರವು ಅವರಿಗೆ ಕಲೆಯಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು, ಇದು ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. [೪] [೫]
೧೧ ಮೇ ೨೦೨೨ ರಂದು, ಯೋಗೇಂದ್ರ ಅವರು ಗೋರಖ್‌ಪುರದಲ್ಲಿದ್ದಾಗ ಅವರ ಹೃದಯ ಸ್ತಂಭನಕ್ಕೆ ಒಳಗಾಯಿತು. ಮರುದಿನ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಯಿತು. ಮೇ ೨೭ ರಂದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋದ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಜೂನ್ ೧೦ ರಂದು ಅವರು ಆಸ್ಪತ್ರೆಯಲ್ಲಿ ನಿಧನರಾದರು. [೨]