ನಲಪಾಟ್ ಬಾಲಮಣಿ ಅಮ್ಮ (೧೯ ಜುಲೈ ೧೯೦೯-೨೯ ಸೆಪ್ಟೆಂಬರ್ ೨೦೦೪) ಮಲಯಾಳಂ ಭಾಷೆಯ ಭಾರತೀಯ ಕವಯತ್ರಿ. ಅವರು ಸಮೃದ್ಧ ಬರಹಗಾರರಾಗಿದ್ದರು ಮತ್ತು "ಮಾತೃತ್ವದ ಕವಯತ್ರಿ" [೧]ಎಂದು ಹೆಸರಾಗಿದ್ದಾರೆ. ತಾಯಿ, ಮುತಾಸ್ಸಿ (ಅಜ್ಜಿ) ಮತ್ತು ಮಝುವಿಂಟೆ ಕಥಾ (ಏಕ್ಸ್ ಕಥೆಗಳು) ಅವರ ಕೆಲವು ಪ್ರಸಿದ್ಧ ಕೃತಿಗಳಾಗಿವೆ[೨]. ಪದ್ಮಭೂಷಣ, ಸರಸ್ವತಿ ಸಮ್ಮಾನ್, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಎಜುಥಾಚನ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಮತ್ತು ಗೌರವಗಳನ್ನು ಅವರು ಸ್ವೀಕರಿಸಿದ್ದಾರೆ.[೩]
ಬಾಲಮಣಿ ಅಮ್ಮ ೧೯ ಜುಲೈ ೧೯೦೯ ರಂದು ಕೇರಳದ ತ್ರಿಸ್ಸೂರು ಜಿಲ್ಲೆಯ ಪುನ್ನಯೂರ್ಕುಲಂನಲ್ಲಿರುವ ತನ್ನ ಪೂರ್ವಜರ ಮನೆಯಾದ ನಲಪಾಟ್ನಲ್ಲಿ ಚಿತ್ತಾಂಜೂರ್ ಕುನ್ಹುನ್ನಿ ರಾಜ ಮತ್ತು ನಲಪಾಟ್ ಕೋಚುಕುಟ್ಟಿ ಅಮ್ಮಾ ಇವರಿಗೆ ಜನಿಸಿದರು. ಅವಳು ಯಾವುದೇ ಔಪಚಾರಿಕ ಶಿಕ್ಷಣವನ್ನು ಸ್ವೀಕರಿಸದಿದ್ದರೂ, ತನ್ನ ತಾಯಿಯ ಚಿಕ್ಕಪ್ಪ ಮತ್ತು ಕವಿ ನಲಪಾಟ್ ನಾರಾಯಣ ಮೆನನ್ ಮತ್ತು ಅವರ ಪುಸ್ತಕಗಳ ಸಂಗ್ರಹದಡಿಯಲ್ಲಿ ಆಕೆಯು ಕವಯತ್ರಿಯಾಗಲು ಸಹಾಯವಾಯಿತು. ಅವಳು ನಲಪಾತ್ ನಾರಾಯಣ ಮೆನನ್ ಮತ್ತು ಕವಿ ವಲ್ಲತೋಲ್ ನಾರಾಯಣ ಮೆನನ್ರಿಂದ ಪ್ರಭಾವಿತಳಾಗಿದ್ದಳು. ಬಾಲಮಣಿ ಅಮ್ಮ ಇವರಿಗೆ ವಿ.ಎಂ. ನಾಯರ್ ಜೊತೆ ವಿವಾಹವಾಯಿತು.[೪]
ಬಾಲಮಣಿ ಅಮ್ಮ ೨೦ ಕ್ಕೂ ಹೆಚ್ಚು ಕವನ ಸಂಕಲನಗಳನ್ನು, ಹಲವಾರು ಗದ್ಯ ಕೃತಿಗಳನ್ನು, ಮತ್ತು ಅನುವಾದಗಳನ್ನು ಪ್ರಕಟಿಸಿದ್ದಾರೆ. ಅವರು ಚಿಕ್ಕ ವಯಸ್ಸಿನಲ್ಲಿ ಕವಿತೆಗಳನ್ನು ಬರೆಯಲು ಆಸಕ್ತಿ ಹೊಂದಿದ್ದರು ಮತ್ತು ಅವರ ಮೊದಲ ಕವಿತೆ "ಕೂಪ್ಪುಕೈ" ೧೯೩೦ ರಲ್ಲಿ ಪ್ರಕಟವಾಯಿತು. ಕೊಚ್ಚಿನ್ ಸಾಮ್ರಾಜ್ಯದ ಮಾಜಿ ಆಡಳಿತಗಾರರಾದ ಪರಿಶಿತ್ ಥಾಂಪುರಾನ್ರಿಂದ ಪ್ರಶಸ್ತಿ ಸಾಹಿತ್ಯ ನಿಪುಣ ಪುರಸ್ಕಾರವನ್ನು ಪಡೆದ ನಂತರ ಅವರು ಗುರುತಿಸಲ್ಪಟ್ಟರು. ನಿವೇದಯಂ ಇದು ೧೯೫೯ ರಿಂದ ೧೯೮೬ ರವರೆಗಿನ ಬಾಲಮಣಿ ಅಮ್ಮನ ಕವಿತೆಗಳ ಸಂಗ್ರಹವಾಗಿದೆ.[೫]
ಬಾಲಮಣಿ ಅಮ್ಮ ಸುಮಾರು ಐದು ವರ್ಷಗಳ ಕಾಲ ಅಲ್ಝೈಮರ್ನ ಕಾಯಿಲೆಯಿಂದ ಬಳಲುತ್ತಿದ್ದು ೨೯ ಸೆಪ್ಟೆಂಬರ್ ೨೦೦೪ ರಂದು ನಿಧನರಾದರು.[೧೦]