ಬಾಲು ಶಂಕರನ್ ಅವರು ಪದ್ಮಶ್ರೀ ಮತ್ತು ಪದ್ಮ ವಿಭೂಷಣ ಪ್ರಶಸ್ತಿ ಪಡೆದ ವಿಜ್ಞಾನಿಯಾಗಿದ್ದರು. ಅವರು ಕಾರ್ಪೊರೇಷನ್ ಮತ್ತು ರಿಹ್ಯಾಬಿಲಿಟೇಶನ್ ಇನ್ಸ್ಟಿಟ್ಯೂಟ್ ತಯಾರಿಸುವ ಕೃತಕ ಅಂಗಗಳನ್ನು ಸ್ಥಾಪಿಸಲು ಸಹಾಯ ಮಾಡಿದರು.
ಶಂಕರನ್ ಅವರು ಸೆಪ್ಟೆಂಬರ್ ೪ ೧೯೨೬ ರಂದು ತಮಿಳುನಾಡಿನಲ್ಲಿ ಜನಿಸಿದರು.ಅವರು ಚೆನ್ನೈನ ಸ್ಟಾನ್ಲಿ ಮೆಡಿಕಲ್ ಕಾಲೇಜಿನಲ್ಲಿ ೧೯೪೮ ರಂದು ವೈದ್ಯಕೀಯ ಪದವಿ ಪಡೆದರು.ಅವರು ಯುನೈಟೆಡ್ ಸ್ಟೇಟ್ಸ್ ಮತ್ತು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದರು ಮತ್ತು ೧೯೫೧-೧೯೫೫ ರ ಅವಧಿಯಲ್ಲಿ ಕೊಲಂಬಿಯಾ ಪ್ರೆಸ್ಬಿಟೇರಿಯನ್ ವೈದ್ಯಕೀಯ ಕೇಂದ್ರದಿಂದ ಮತ್ತು ೧೯೫೫ ರಲ್ಲಿ ಮ್ಯಾಂಚೆಸ್ಟರ್ ರಾಯಲ್ ಇನ್ಫರ್ಮರಿಯಲ್ಲಿ ತರಬೇತಿ ಪಡೆದರು.[೧]
ಅವರು ಮ್ಯಾನ್ಚೆಸ್ಟರ್ ಯು.ಕೆ.ಯಿಂದ ಭಾರತಕ್ಕೆ ಮರಳಿದ ನಂತರ, ಎ.ಐ.ಐ.ಎಂ.ಎಸ್ ದೆಹಲಿಯಲ್ಲಿ ಸೇರುವ ಮುನ್ನ ಡಾ. ಬಾಲು ಶಂಕರ್ ಅವರು ಕೆಎಂಸಿ ಮಣಿಪಾಲ್‌ನಲ್ಲಿ ಅನ್ಯಾಟಮಿ ಇಲಾಖೆಯಲ್ಲಿ ಕೆಲವು ತಿಂಗಳು ಕಲಿಸಿದರು.೧೯೫೬ರಲ್ಲಿ ಆಲ್ರನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್) ನಲ್ಲಿ ಆರ್ಥೋಪೆಡಿಕ್ ಸರ್ಜರಿಯ ಸಹಾಯಕ ಪ್ರಾಧ್ಯಾಪಕರಾಗಿ ಶಂಕರನ್ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸಹಾಯಕ ಪ್ರೊಫೆಸರ್ ಆಗಿ ೭ ವರ್ಷಗಳ ನಂತರ, ಅವರು ೧೯೬೩ರಲ್ಲಿ ಅಸೋಸಿಯೇಟ್ ಪ್ರಾಧ್ಯಾಪಕರಾಗಿ ಇದರು ಮತ್ತು ೧೯೬೭ ರವರೆಗೆ ಎ.ಐ.ಐ.ಎಂ.ಎಸ್‌ನಲ್ಲಿ ಮುಂದುವರೆದರು. ಅವರು ೧೯೮೧ ರಲ್ಲಿ ಜಿನಿವಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅವರು ೧೯೯೨ ಮತ್ತು ೧೯೯೪ ರ ನಡುವೆ ಭಾರತದ ಪುನರ್ವಸತಿ ಕೌನ್ಸಿಲ್‌ನಲ್ಲಿ ಅಧ್ಯಕ್ಷರಾಗಿದ್ದರು.ಅವರು ದೆಹಲಿಯ ಸೇಂಟ್ ಸ್ಟೀಫನ್ಸ್ ಆಸ್ಪತ್ರೆಯಲ್ಲಿ ಪ್ರೊಫೆಸರ್ ಎಮೆರಿಟಸ್ ಆಗಿ ಕಾರ್ಯನಿರ್ವಹಿಸಿದರು. [೨]
ಅವರು ಜೂನ್ ೨೦,೨೦೧೨ರಂದು ಅಸ್ವಸ್ತತೆಯ ಕಾರಣದಿಂದ ನಿಧನ ಹೊಂದಿದರು.[೩]