ಬಾಲ್ ಪೆನ್ | |
---|---|
ನಿರ್ದೇಶನ | ಶಶಿಕಾಂತ್ |
ನಿರ್ಮಾಪಕ | ಭಾವನಾ ಬೆಳಗೆರೆ, ಶ್ರೀನಗರ ಕಿಟ್ಟಿ |
ಲೇಖಕ | ಕೆ. ಸಿ. ಮಂಜುನಾಥ್, ಮಾಸ್ತಿ ಉಪ್ಪಾರಹಳ್ಳಿ |
ಚಿತ್ರಕಥೆ | ಶಶಿಕಾಂತ್ |
ಪಾತ್ರವರ್ಗ | ಸುಚೇಂದ್ರ ಪ್ರಸಾದ್, ಮಾಸ್ಟರ್ ಸ್ಕಂದ, ಮಾಸ್ಟರ್ ಶಾಲೋಮ್ ರಾಜ್, ಮಾಸ್ಟರ್ ಸಮರ್ಥ್, ಮಿಸ್ ಚೇತನಾ |
ಸಂಗೀತ | Manikanth Kadri |
ಛಾಯಾಗ್ರಹಣ | ಸಿ. ಜೆ. Rajಕುಮಾರ್ |
ಸಂಕಲನ | Shree (Crazy Minds) |
ಬಿಡುಗಡೆಯಾಗಿದ್ದು | ೨೦೧೨ ರ ಅಕ್ಟೋಬರ್ ೨೬ |
ದೇಶ | ಭಾರತ |
ಭಾಷೆ | ಕನ್ನಡ |
ಬಾಲ್ ಪೆನ್ ಶಶಿಕಾಂತ್ ನಿರ್ದೇಶನದ 2012 ರ ಕನ್ನಡ ಚಲನಚಿತ್ರವಾಗಿದೆ. ಶ್ರೀನಗರ ಕಿಟ್ಟಿ ಮತ್ತು ಭಾವನಾ ಬೆಳಗೆರೆ ನಿರ್ಮಾಣದ ಈ ಚಿತ್ರವು ಮಕ್ಕಳ ಚಿತ್ರವಾಗಿದ್ದು, ಇದು ಮಕ್ಕಳಲ್ಲಿರುವ ಸಾಹಸ ಮನೋಭಾವ, ಭಾವನೆಗಳನ್ನು ಚಿತ್ರಿಸುತ್ತದೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ಕೇಂದ್ರೀಕರಿಸುತ್ತದೆ.
26 ಅಕ್ಟೋಬರ್ 2012 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರ, ಬಾಲ್ ಪೆನ್ ಚಲನಚಿತ್ರ ವಿಮರ್ಶಕರಿಂದ ಸಾಮಾನ್ಯವಾಗಿ ಧನಾತ್ಮಕ ವಿಮರ್ಶೆಗಳನ್ನು ಪಡೆಯಿತು. ಐಬಿಎನ್ ಲೈವ್ ಈ ಚಿತ್ರಕ್ಕೆ 3.5/5 ರೇಟಿಂಗ್ ನೀಡಿ ಚಿತ್ರದಲ್ಲಿನ ಮಕ್ಕಳ ಅಭಿನಯವನ್ನು ಶ್ಲಾಘಿಸಿದೆ. ತಾಂತ್ರಿಕ ವಿಭಾಗಗಳ ಪಾತ್ರವೂ ಮೆಚ್ಚುಗೆಗೆ ಪಾತ್ರವಾಯಿತು. [೧] ಚಿತ್ರಕ್ಕೆ 3.5/6 ರೇಟಿಂಗ್ ನೀಡಿದ ಸೂಪರ್‌ಗುಡ್‌ಮೂವೀಸ್, "ಬಾಲ್ ಪೆನ್ ಸಹಜವಾಗಿ ವಿವಿಧ ಅಂಶಗಳ ಮೇಲೆ ಸ್ಪರ್ಶಿಸುವ ಆಸಕ್ತಿದಾಯಕ ಕಥೆಯನ್ನು ಹೊಂದಿದೆ. ಆಸಕ್ತಿದಾಯಕ ಭಾಗವೆಂದರೆ ಮುಗ್ಧ ಮಕ್ಕಳ ಮನಸ್ಸುಗಳು ಸರಿಯಾದ ದೃಷ್ಟಿಕೋನದಲ್ಲಿ ಕೆಲಸ ಮಾಡುವ ಭಾಗ" ಎಂದು ಹೇಳಿತಲ್ಲದೆ ತಾಂತ್ರಿಕ ವಿಭಾಗಗಳ ಪಾತ್ರವನ್ನು ಶ್ಲಾಘಿಸಿತು. [೨] Oneindia.in ನ ರಾಜೇಂದ್ರ ಚಿಂತಾಮಣಿ ಅವರು ಚಿತ್ರಕ್ಕೆ 3/5 ರೇಟಿಂಗ್ ನೀಡಿದರು ಮತ್ತು "ಚಿತ್ರವು ಹೃದಯ ಸ್ಪರ್ಶಿಸುವ ಕಥೆ, ಸುಮಧುರ ಹಾಡುಗಳು ಮತ್ತು ವಯಸ್ಕರಿಗೆ ಕಣ್ಣು ತೆರೆಯುವ ವಿಷಯವನ್ನು ಹೊಂದಿದೆ" ಎಂದು ಬರೆದು, "ಚಲನಚಿತ್ರವು, ಕೆಲವು ಸ್ಥಳಗಳಲ್ಲಿ, ನೀರಸ ಕ್ಷಣಗಳನ್ನು ಹೊಂದಿರುವುದಾದರೂ ಒಟ್ಟಾರೆಯಾಗಿ ನ್ಯೂನತೆಗಳನ್ನು ನಿರ್ಲಕ್ಷಿಸುವಂತೆ ಮಾಡುತ್ತದೆ." [೩]
ಚಿತ್ರದ ಸಂಗೀತವನ್ನು ಮಣಿಕಾಂತ್ ಕದ್ರಿ ಸಂಯೋಜಿಸಿದ್ದಾರೆ. ಆದಿತ್ಯ ರಾವ್ ಹಾಡಿರುವ ಚಿತ್ರದ ಮೊದಲ ಹಾಡು "ಸಾವಿರ ಕಿರಣವ ಚೆಲ್ಲಿ" ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. [೪]
ಹಾಡುಗಳ ಪಟ್ಟಿ
ಕ್ರಮಸಂಖ್ಯೆ | ಶೀರ್ಷಿಕೆ | ಹಾದುಗಾರರು | ಅವಧಿ |
---|---|---|---|
1 | "ಸಾವಿರ ಕಿರಣವ ಚೆಲ್ಲಿ" | ಆದಿತ್ಯ ರಾವ್ | 2:26 |
2 | "ಇದು ಯಾರ ಭುವಿ" | ಭೂಮಿಕಾ | 3:35 |
3 | "ಬಾಳೆಯ ತೋಟದ ಪಕ್ಕದ ಕಾಡಲಿ" | ಸಮರ್ಥ್ | 4:15 |
4 | "ತಿಳಿಯೋ ಮಾನವ" | ಆದಿತ್ಯ ರಾವ್ | 1:52 |