ಬಾಳಿಕೆ ಎಂದರೆ ಒಂದು ಭೌತಿಕ ಉತ್ಪನ್ನವು ಅದರ ವಿನ್ಯಾಸ ಜೀವಮಾನದುದ್ದಕ್ಕೆ ಸಾಮಾನ್ಯ ಕಾರ್ಯದ ಸವಾಲುಗಳನ್ನು ಎದುರಿಸಿದಾಗ ಕಾರ್ಯಸಮರ್ಥವಾಗಿ ಉಳಿದುಕೊಳ್ಳುವ ಸಾಮರ್ಥ್ಯ.[೧]: 5 ಬಳಕೆಯಲ್ಲಿ ಬಾಳಿಕೆಯ ಹಲವಾರು ಅಳತೆಗಳಿವೆ. ಇವುಗಳಲ್ಲಿ ಜೀವನದ ವರ್ಷಗಳು, ಬಳಕೆಯ ಗಂಟೆಗಳು, ಮತ್ತು ಕಾರ್ಯಕಾರಿ ಆವರ್ತಗಳ ಸಂಖ್ಯೆ ಸೇರಿವೆ.[೨] ಅರ್ಥಶಾಸ್ತ್ರದಲ್ಲಿ, ದೀರ್ಘ ಪ್ರಯೋಜನಕಾರಿ ಜೀವಮಾನವುಳ್ಳ ಸರಕುಗಳನ್ನು ಬಾಳಿಕೆ ಬರುವ ಸರಕುಗಳು ಎಂದು ಕರೆಯಲಾಗುತ್ತದೆ.
ಉತ್ಪನ್ನದ ಬಾಳಿಕೆಯನ್ನು ಉತ್ತಮ ಪರಿಹಾರ್ಯತೆ ಮತ್ತು ಪುನರುಜ್ಜೀವನ ಸಾಮರ್ಥ್ಯ, ಜೊತೆಗೆ ಸಂರಕ್ಷಣೆಯಿಂದ ದೃಢೀಕರಿಸಲಾಗುತ್ತದೆ. ಪ್ರತಿಯೊಂದು ಬಾಳಿಕೆ ಬರುವ ಉತ್ಪನ್ನವು ತಾಂತ್ರಿಕ, ತಂತ್ರಜ್ಞಾನ ಸಂಬಂಧಿ ಹಾಗೂ ವಿನ್ಯಾಸ ಸಂಬಂಧಿ ಬೆಳವಣಿಗೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು. ಇದರ ಜೊತೆಗೆ ಗ್ರಾಹಕರ ಕಡೆಯಿಂದ ಒಂದು ಉತ್ಪನ್ನದ ಅತಿ ಇತ್ತೀಚಿನ ಆವೃತ್ತಿಯನ್ನು ಹೊಂದಬೇಕೆಂಬುವ ಇಚ್ಛೆಯನ್ನು ತ್ಯಜಿಸುವ ಗುಣ ಇರಬೇಕು.