ಬೆನಗಲ್ ಶಿವರಾವ್ | |
---|---|
Member of the ಭಾರತೀಯ Parliament
for ದಕ್ಷಿಣ ಕೆನರಾ (ದಕ್ಷಿಣ) | |
ಅಧಿಕಾರ ಅವಧಿ ೧೯೫೨ – ೧೯೫೭ | |
ಪೂರ್ವಾಧಿಕಾರಿ | ಇಲ್ಲ |
ಉತ್ತರಾಧಿಕಾರಿ | ಕೆ. ಆರ್. ಆಚಾರ್, ಮಂಗಳೂರು ಲೋಕಸಭಾ ಕ್ಷೇತ್ರ ಸಂಸತ್ ಸದಸ್ಯ, ಲೋಕಸಭೆ |
ಬಹುಮತ | ೮೮೪೧ |
ವೈಯಕ್ತಿಕ ಮಾಹಿತಿ | |
ಜನನ | ೨೬ ಫೆಬ್ರವರಿ ೧೮೯೧ ಮಂಗಳೂರು, ಮದ್ರಾಸ್ ಪ್ರೆಸಿಡೆನ್ಸಿ, ಬ್ರಿಟಿಷ್ ಭಾರತ (ಈಗ ಕರ್ನಾಟಕ) |
ಮರಣ | ೧೫ ಡಿಸೆಂಬರ್ ೧೯೭೫ ದೆಹಲಿ |
ರಾಷ್ಟ್ರೀಯತೆ | ಭಾರತೀಯರು |
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಸಂಗಾತಿ(ಗಳು) | ಕಿಟ್ಟಿ ವರ್ಸ್ಟಾಂಡಿಗ್ |
ವಾಸಸ್ಥಾನ | ಲಕ್ಷ್ಮೀ ಸದನ್ ಕಾಟೇಜ್, ಕದ್ರಿ ದೇವಸ್ಥಾನ ರಸ್ತೆ, ಮಂಗಳೂರು, ದಕ್ಷಿಣ ಕೆನರಾ ಜಿಲ್ಲೆ |
ಅಭ್ಯಸಿಸಿದ ವಿದ್ಯಾಪೀಠ | ಪ್ರೆಸಿಡೆನ್ಸಿ ಕಾಲೇಜು, ಮದ್ರಾಸ್ |
ವೃತ್ತಿ | ಪತ್ರಕರ್ತ |
ಉದ್ಯೋಗ | ರಾಜಕಾರಣಿ |
ಬೆನಗಲ್ ಶಿವ ರಾವ್ (೨೬ ಫೆಬ್ರವರಿ ೧೮೯೧ - ೧೫ ಡಿಸೆಂಬರ್ ೧೯೭೫) ಒಬ್ಬ ಭಾರತೀಯ ಪತ್ರಕರ್ತ ಮತ್ತು ರಾಜಕಾರಣಿ. ಇವರು ಭಾರತದ ಸಂವಿಧಾನ ಸಭೆಯ ಸದಸ್ಯರಾಗಿದ್ದರು ಮತ್ತು ಮೊದಲ ಲೋಕಸಭೆಯಲ್ಲಿ ದಕ್ಷಿಣ ಕೆನರಾ ಕ್ಷೇತ್ರದ ಚುನಾಯಿತ ಪ್ರತಿನಿಧಿಯಾಗಿದ್ದರು (ನಂತರ ಇದನ್ನು ಮಂಗಳೂರು ಎಂದು ಹೆಸರಿಸಲಾಗಿದೆ, ಪ್ರಸ್ತುತ ದಕ್ಷಿಣ ಕನ್ನಡ ). [೧] [೨] ಇವರು ದಿ ಹಿಂದೂ ಮತ್ತು ಮ್ಯಾಂಚೆಸ್ಟರ್ ಗಾರ್ಡಿಯನ್‌ನ ವರದಿಗಾರರಾಗಿದ್ದರು. [೩] ಇವರು ೧೯೫೭ - ೧೯೬೦ ವರೆಗೆ ರಾಜ್ಯಸಭೆಯ ಸದಸ್ಯರಾಗಿದ್ದರು.[೪] ಇವರು ನಾಗರಿಕ ಗೌರವವಾದ ಪದ್ಮಭೂಷಣವನ್ನು ಪಡೆದಿದ್ದಾರೆ. [೫]
ಬಿ. ಶಿವ ರಾವ್ ಅವರು ಮಂಗಳೂರಿನಲ್ಲಿ ೨೬ ಫೆಬ್ರವರಿ ೧೮೯೧ ರಂದು ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದರು. [೧] ಇವರ ತಂದೆ ಬಿ. ರಾಘವೇಂದ್ರ ರಾವ್, ಹೆಸರಾಂತ ವೈದ್ಯರಾಗಿದ್ದರು. ಇವರ ಹಿರಿಯ ಸಹೋದರರು ಬೆನಗಲ್ ನರಸಿಂಗ್ ರಾವ್ ಮತ್ತು ಬೆನಗಲ್ ರಾಮರಾವ್. [೧] ಇವರು ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿದ್ದಾರೆ. [೧] ನಂತರ ಕಾರ್ಮಿಕ ಚಳುವಳಿಯನ್ನು ಸೇರಿಕೊಂಡು ಐ.ಎನ್.ಟಿ.ಯು.ಸಿ ಯ ಉಪಾಧ್ಯಕ್ಷರಾಗಿದ್ದರು. [೧] ಇವರು ೧೯೨೯ ರಲ್ಲಿ ಆಸ್ಟ್ರಿಯಾದ ಕಿಟ್ಟಿ ವರ್ಸ್ಟಾಂಡಿಗ್ ಅವರನ್ನು ವಿವಾಹವಾದರು. [೬] ತಮ್ಮ ಜೀವನದ ಆರಂಭದಲ್ಲಿ, ಇವರು ಥಿಯಾಸಾಫಿಕಲ್ ಸೊಸೈಟಿ ಮತ್ತು ಅದರ ನಾಯಕಿ ಅನ್ನಿ ಬೆಸೆಂಟ್‌ನ ಪ್ರಭಾವಕ್ಕೆ ಒಳಗಾದರು. ಹಾಗೆಯೇ ದಿ ಹಿಂದೂ ಮತ್ತು ಮ್ಯಾಂಚೆಸ್ಟರ್ ಗಾರ್ಡಿಯನ್ ವರದಿಗಾರರಾಗಿದ್ದರು. ಇವರು ಫ್ರೇಮಿಂಗ್ ಆಫ್ ಇಂಡಿಯನ್ ಕಾನ್ಸ್ಟಿಟ್ಯೂಷನ್ (ಆರು ಸಂಪುಟಗಳಲ್ಲಿ, ೧೯೬೮) ಎಂಬ ಕೃತಿಗೆ ಹೆಸರುವಾಸಿಯಾಗಿದ್ದಾರೆ. ಇವರು ಗಾಂಧಿಯ ಕಟ್ಟಾ ಅಭಿಮಾನಿಯಾಗಿದ್ದರು ಆದರೆ ರಾಷ್ಟ್ರೀಯ ಚಳುವಳಿಗಾಗಿ ಅವರ ಕಾರ್ಯತಂತ್ರವನ್ನು ಟೀಕಿಸಿದವರಲ್ಲಿ ಮೊದಲಿಗರು. ಇವರ ವಸ್ತುನಿಷ್ಠತೆ ಮತ್ತು ಆಳವಾದ ವಿಶ್ಲೇಷಣೆಯು ನೆಹರು, ಗಾಂಧಿ ಮತ್ತು ಎಸ್. ರಾಧಾಕೃಷ್ಣನ್ ಸೇರಿದಂತೆ ಇನ್ನು ಹಲವು ಓದುಗರಿಗೆ ಇಷ್ಟವಾಯಿತು. ಅಂತರರಾಷ್ಟ್ರೀಯ ಕಾರ್ಮಿಕ ಚಳವಳಿಯಲ್ಲಿ ಇವರ ಭಾಗವಹಿಸುವಿಕೆಯು ಸ್ವಾತಂತ್ರ್ಯದ ನಂತರ ಯುಎನ್ ಮತ್ತು ಐಎಲ್ಒ ಗೆ ಪ್ರತಿನಿಧಿಯಾಗಿ ಮುಂದುವರೆಯಲು ಸಾಧ್ಯವಾಯಿತು. ಅಲ್ಲಿ ಇವರು ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್ ಮತ್ತು ಬಾಬು ಜಗಜೀವನ್ ರಾಮ್ ಅವರೊಂದಿಗೆ ಕೆಲಸ ಮಾಡಿದರು. ಅವರು ೧೯೫೨-೫೭ ರವರೆಗೆ ಲೋಕಸಭೆ ಮತ್ತು ೧೯೫೭ – ೧೯೬೦ ರವರೆಗೆ ರಾಜ್ಯಸಭೆಯ ಸದಸ್ಯರಾಗಿದ್ದರು. ನಂತರ ಸಾರ್ವಜನಿಕ ಜೀವನದಿಂದ ನಿವೃತ್ತಿ ಹೊಂದಿ ಸಂಶೋಧನೆಯತ್ತ ಗಮನ ಹರಿಸಿದರು. ತಮ್ಮ ಸಹೋದರ ಬಿಎನ್ ರಾವ್ ಅವರ ಲೇಖನಗಳನ್ನು ಇಂಡಿಯಾಸ್ ಕಾನ್‌ಸ್ಟಿಟ್ಯೂಷನ್ ಇನ್ ಮೇಕಿಂಗ್ (೧೯೬೦) ಎಂದು ಸಂಪಾದಿಸಿದ್ದಾರೆ. ಅವರು ಸಿರಿಲ್ ಹೆನ್ರಿ ಫಿಲಿಪ್ಸ್‌ಗೆ ಮತ್ತು ಮೇರಿ ಡೋರೀನ್ ವೈನ್‌ರೈಟ್ ಅವರೊಂದಿಗೆ ದಿ ಪಾರ್ಟಿಷನ್ ಆಫ್ ಇಂಡಿಯಾ: ಪಾಲಿಸೀಸ್ ಮತ್ತು ಪರ್ಸ್ಪೆಕ್ಟಿವ್ಸ್ ೧೯೩೫-೪೭ಅನ್ನು ಸಂಪಾದಿಸಿದ್ದಾರೆ. ಅವರ ಕೊನೆಯ ಕೃತಿ ಇಂಡಿಯಾಸ್ ಫ್ರೀಡಂ ಫೈಟರ್ಸ್: ಸಮ್ ನೊಟೇಬಲ್ ಫಿಗರ್ಸ್ ಇದು ೧೯೭೨ ರಲ್ಲಿ ಪ್ರಕಟವಾಯಿತು.
ಅವರು ೧೯೪೭, ೧೯೪೮, ೧೯೪೯ ಮತ್ತು ೧೯೫೦ ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನಗಳಲ್ಲಿ ಭಾರತೀಯ ನಿಯೋಗವನ್ನು ಮುನ್ನಡೆಸಿದ್ದಾರೆ.
೧೯೭೫ರ ಡಿಸೆಂಬರ್ ೧೫ ರಂದು ಅವರು ನವದೆಹಲಿಯಲ್ಲಿ ನಿಧನರಾದರು.