ಬಿ. ಸಾಯಿ ಪ್ರಣೀತ್

ಬಿ. ಸಾಯಿ ಪ್ರಣೀತ್
— ಬ್ಯಾಡ್ಮಿಂಟನ್‌ ಆಟಗಾರ —
ವೈಯುಕ್ತಿಕ ಮಾಹಿತಿ
ಹುಟ್ಟು ಹೆಸರುಸಾಯಿ ಪ್ರಣೀತ್ ಭಮಿದಿಪತಿ
ಹುಟ್ಟು (1992-08-10) 10 August 1992 (age 32)
ಆಂಧ್ರ ಪ್ರದೇಶ, ಭಾರತ
ಎತ್ತರ೧.೯೬ ಮೀ.
ದೇಶ ಭಾರತ
ಆಡುವ ಕೈಬಲಗೈ
ಪುರುಷರ ಸಿಂಗಲ್ಸ್
ಅತಿಹೆಚ್ಚಿನ ಸ್ಥಾನ೧೨ (೧೫ ಮಾರ್ಚ್, ೨೦೧೮)
ಸದ್ಯದ ಸ್ಥಾನ೧೯ (೨೦ ಅಗಸ್ಟ್, ೨೦೧೯)
ಪ್ರಶಸ್ತಿ(ಗಳು)
Medal record
ಪುರುಷರ ಬ್ಯಾಡ್ಮಿಂಟನ್
Representing  ಭಾರತ
ಬಿ ಡಬ್ಲ್ಯೂ ಎಫ್ ವಿಶ್ವ ಚಾಂಪಿಯನ್ ಶಿಪ್
Bronze medal – third place ೨೦೧೯ ಬಾಸೆಲ್ ಪುರುಷರ ಸಿಂಗಲ್ಸ್
ಏಷ್ಯಾ ಟೀಮ್ ಚಾಂಪಿಯನ್ ಶಿಪ್
Bronze medal – third place ೨೦೧೬ ಹೈದರಾಬಾದ್ ಪುರುಷರ ತಂಡ
ಬಿ ಡಬ್ಲ್ಯೂ ಎಫ್ ವಿಶ್ವ ಜೂನಿಯರ್ ಚಾಂಪಿಯನ್ ಶಿಪ್
Bronze medal – third place ೨೦೧೦ ಗ್ವಾಡಲಜರ ಬಾಲಕರ ಸಿಂಗಲ್ಸ್
BWF profile

ಸಾಯಿ ಪ್ರಣೀತ್ ಭಮಿದಿಪತಿ (ಜನನ ೧೦ ಆಗಸ್ಟ್ ೧೯೯೨) ಒಬ್ಬ ಭಾರತೀಯ ಬ್ಯಾಡ್ಮಿಂಟನ್ ಆಟಗಾರ.[][] ೧೯೮೩ ರಲ್ಲಿ ಪ್ರಕಾಶ್ ಪಡುಕೋಣೆರವರು ಪದಕ ಗೆದ್ದ ೩೬ ವರ್ಷಗಳ ಬಳಿಕ, ೨೦೧೯ ರಲ್ಲಿ ನಡೆದ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಮೊದಲ ಭಾರತೀಯ ಪುರುಷ ಶಟ್ಲರ್ ಎನಿಸಿಕೊಂಡರು.[]

ವೃತ್ತಿ

[ಬದಲಾಯಿಸಿ]

ಥೈಲ್ಯಾಂಡ್ ಓಪನ್ ಗ್ರ್ಯಾಂಡ್ ಪ್ರಿ ಗೋಲ್ಡ್ ಪಂದ್ಯಾವಳಿಯಲ್ಲಿ ನಡೆದ ಮೊದಲ ಸುತ್ತಿನಲ್ಲಿ ಬಲಗೈ ಆಟಗಾರ ಸಾಯಿ ಪ್ರಣೀತ್ ೨೦೦೩ ರ ಆಲ್ ಇಂಗ್ಲೆಂಡ್ ಚಾಂಪಿಯನ್ ಮಲೇಷ್ಯಾದ ಮುಹಮ್ಮದ್ ಹಫೀಜ್ ಹಾಶಿಮ್ ಅವರನ್ನು ದಿಗ್ಭ್ರಮೆಗೊಳಿಸಿದರು. ಅವರು ಭಾರತೀಯ ಬ್ಯಾಡ್ಮಿಂಟನ್ ಆಟಗಾರರಾಗಿದ್ದು, ಪ್ರಸ್ತುತ ಹೈದರಾಬಾದ್‌ನ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.[]

ಸಾಯಿ ಪ್ರಣೀತ್ ಬಿ ಅವರಿಗೆ ೨೦೧೩ರ ವರ್ಷ, ಇದುವರೆಗೆ ಸ್ಮರಣೀಯ ವರ್ಷವಾಗಿದೆ. ಅವರು ತೌಫಿಕ್ ಹಿದಾಯತ್ ಅವರನ್ನು ತಮ್ಮ ತವರು ಮೈದಾನದಲ್ಲಿ ಅನಿರೀಕ್ಷಿತವಾಗಿ ತಮ್ಮ ತವರಿನ ಅಭಿಮಾನಿಗಳ ಮುಂದೆಯೇ ಕಳುಹಿಸುವ ಮೂಲಕ ಜಗತ್ತನ್ನು ಬೆರಗುಗೊಳಿಸಿದರು. ಇದರಿಂದ ತೌಫಿಕ್ ವೃತ್ತಿಪರ ಬ್ಯಾಡ್ಮಿಂಟನ್ ನ ಪ್ರಸಿದ್ಧ ಆಟಗಾರನಾಗಿ, ವೃತ್ತಿಜೀವನದಿಂದ ಕೆಟ್ಟ ವಿದಾಯವನ್ನು ಪಡೆದರು. ಡಿಜಾರಮ್ ಇಂಡೋನೇಷ್ಯಾ ಓಪನ್ ೨೦೧೩ ರ ಮೊದಲ ಸುತ್ತಿನ ಪಂದ್ಯದಲ್ಲಿ ಅವರು 2-1 ಸೆಟ್ ಗಳಿಂದ ತೌಫಿಕ್ ಹಿದಾಯತ್ ಅವರನ್ನು ಸೋಲಿಸಿದರು. ಅಂತಿಮ ಸ್ಕೋರ್ 15-21, 21-12, 21-17.[] ಕೆಲವೇ ದಿನಗಳ ನಂತರ ೧೯ ಜೂನ್ ೨೦೧೩ ರಂದು,ಸಿಂಗಾಪುರ್ ಸೂಪರ್ ಸರಣಿಯಲ್ಲಿ ಅವರು ಮತ್ತೊಮ್ಮೆ, ಹೆಚ್ಚಿನ ಶ್ರೇಣಿಯ ಆಟಗಾರನಾದ ಹಾಂಗ್ ಕಾಂಗ್‌ನ ವಿಶ್ವದ ನಾಲ್ಕನೇ ಕ್ರಮಾಂಕದ ಹು ಯುನ್ ರವರನ್ನು ಮೇಲಕ್ಕೆತ್ತಿದರು.[]

೨೦೧೬ ರ ಆಲ್ ಇಂಗ್ಲೆಂಡ್ ಸೂಪರ್ ಸೀರೀಸ್ ಪ್ರೀಮಿಯರ್‌ನಲ್ಲಿ ಸಾಯಿ ಪ್ರಣೀತ್ ಮೊದಲನೇ ಸುತ್ತಿನಲ್ಲಿ 24-22, 22-20ರಲ್ಲಿ ನೇರ ಸೆಟ್‌ಗಳಲ್ಲಿ ಮಲೇಷ್ಯಾದ 2 ನೇ ಶ್ರೇಯಾಂಕದ ಲೀ ಚೊಂಗ್ ವೀ ಅವರನ್ನು ಬೆರಗುಗೊಳಿಸಿದರು.[] ಜುಲೈ ೨೦೧೬ ರಂದು ಅವರು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕೆನಡಾ ಓಪನ್ ಗ್ರ್ಯಾಂಡ್ ಪ್ರಿಕ್ಸ್ ೨೦೧೬ನ್ನು ಗೆದ್ದರು. ಕ್ಯಾಲ್ಗರಿಯಲ್ಲಿ ಆಡಿದ ಅಂತಿಮ ಪಂದ್ಯದಲ್ಲಿ ಪ್ರಣೀತ್ 21-12, 21-10 ಅಂಕಗಳಿಂದ ದಕ್ಷಿಣ ಕೊರಿಯಾದ ಲೀ ಹ್ಯುನ್-ಇಲ್ ಅವರನ್ನು ಸೋಲಿಸಿದರು. ಇದು ಅವರ ಚೊಚ್ಚಲ ಗ್ರ್ಯಾಂಡ್ ಪ್ರಿಕ್ಸ್ ಟ್ರೋಫಿಯಾಗಿದೆ. ೨೦೧೭ ರಲ್ಲಿ, ಅವರು ತಮ್ಮ ಸಹಚರರಾದ ಶ್ರೀಕಾಂತ್ ಕಿಡಾಂಬಿಯನ್ನು ಸೋಲಿಸಿದ ನಂತರ ಸಿಂಗಾಪುರ್ ಓಪನ್ ಸೂಪರ್ ಸರಣಿಯನ್ನು ಗೆದ್ದ ಸೈನಾ ನೆಹ್ವಾಲ್, ಶ್ರೀಕಾಂತ್ ಕಿಡಾಂಬಿ ಮತ್ತು ಪಿ.ವಿ ಸಿಂಧು ಅವರ ಸಾಲಿಗೆ ಸೇರಿದರು.[]

೨೦೧೯ ರಲ್ಲಿ, ಕೆಂಟೊ ಮೊಮೊಟಾಗೆ ಸೆಮಿಫೈನಲ್‌ನಲ್ಲಿ ಸೋತ ನಂತರ ಸಾಯಿ ಪ್ರಣೀತ್ ಸ್ವಿಟ್ಜರ್‌ಲ್ಯಾಂಡ್‌ನ ಬಾಸೆಲ್‌ನಲ್ಲಿ ನಡೆದ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದರು. ಸೆಮಿಫೈನಲ್‌ಗೆ ಹೋಗುವ ಮಾರ್ಗದಲ್ಲಿ ಸಾಯಿ ಮೂರನೇ ಸುತ್ತಿನಲ್ಲಿ ಇಂಡೋನೇಷ್ಯಾದ ಆಂಥೋನಿ ಸಿನಿಸುಕಾ ಜಿಂಟಿಂಗ್ ಅವರನ್ನು ಸೋಲಿಸಿದರು ಮತ್ತು ಕ್ವಾರ್ಟರ್‌ಫೈನಲ್‌ನಲ್ಲಿ ಏಷ್ಯನ್ ಗೇಮ್‌ನ ಚಿನ್ನದ ಪದಕ ವಿಜೇತ ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ ಅವರನ್ನು ಸೋಲಿಸಿದರು.[][೧೦]

ಸಾಧನೆ

[ಬದಲಾಯಿಸಿ]

ಬಿ ಡಬ್ಲ್ಯೂ ಎಫ್ ವಿಶ್ವ ಚಾಂಪಿಯನ್ ಶಿಪ್

[ಬದಲಾಯಿಸಿ]

ಪುರುಷರ ಸಿಂಗಲ್ಸ್

ವರ್ಷ ಸ್ಥಳ ಎದುರಾಳಿ ಅಂಕ ಫಲಿತಾಂಶ
ಬಿ ಡಬ್ಲ್ಯೂ ಎಫ್ ವಿಶ್ವ ಚಾಂಪಿಯನ್ ಶಿಪ್ ೨೦೧೯ – ಪುರುಷರ ಸಿಂಗಲ್ಸ್ ಸೇಂಟ್. ಜೆಕೋಬ್ ಶೆಲ್ಲ, ಬ್ಯಾಸಲ್, ಸ್ವಿಟ್ಜರ್ಲೆಂಡ್ನ ಜಪಾನ್ ಕೆಂಟೊ ಮೊಮೊಟ 13–21, 8–21 Bronze ಕಂಚು

ಬಿ ಡಬ್ಲ್ಯೂ ಎಫ್ ವಿಶ್ವ ಜೂನಿಯರ್ ಚಾಂಪಿಯನ್ ಶಿಪ್

[ಬದಲಾಯಿಸಿ]

ಬಾಲಕರ ಸಿಂಗಲ್ಸ್

ವರ್ಷ ಸ್ಥಳ ಎದುರಾಳಿ ಅಂಕ ಫಲಿತಾಂಶ
ಬಿ ಡಬ್ಲ್ಯೂ ಎಫ್ ವಿಶ್ವ ಜೂನಿಯರ್ ಚಾಂಪಿಯನ್ ಶಿಪ್ ೨೦೧೦ ಫೈನಲ್ಸ್ ಡೋಮೊ ಡೆಲ್ ಕೋಡೋ ಜೆಲಿಸ್ಕೊ, ಗೌದಾಲಜಾರ, ಮೆಕ್ಸಿಕೋ ಡೆನ್ಮಾರ್ಕ್ ವಿಕ್ಟರ್ ಅಕ್ಸೆಲ್ಸನ್ 21–19, 15–21, 15–21 Bronze ಕಂಚು

ಬಿ ಡಬ್ಲ್ಯೂ ಎಫ್ ವರ್ಲ್ಡ್ ಟೂರ್

[ಬದಲಾಯಿಸಿ]

ಬಿ ಡಬ್ಲ್ಯೂ ಎಫ್ ವರ್ಲ್ಡ್ ಟೂರ್, ಮಾರ್ಚ್ ೧೯, ೨೦೧೭ ರಂದು ಘೋಷಿಸಲ್ಪಟ್ಟಿತು ಮತ್ತು ೨೦೧೮ ರಲ್ಲಿ ಜಾರಿಗೆ ಬಂದಿತು; ಇದು ಗಣ್ಯ ಬ್ಯಾಡ್ಮಿಂಟನ್ ಪಂದ್ಯಾವಳಿಗಳ ಸರಣಿಯಾಗಿದ್ದು, ಇದನ್ನು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯೂಎಫ್) ಅನುಮೋದಿಸಿದೆ. ಬಿ ಡಬ್ಲ್ಯೂ ಎಫ್ ವರ್ಲ್ಡ್ ಟೂರ್ ಅನ್ನು ಆರು ಹಂತಗಳಾಗಿ ವಿಂಗಡಿಸಲಾಗಿದೆ, ಅವುಗಳೆಂದರೆ ವರ್ಲ್ಡ್ ಟೂರ್ ಫೈನಲ್ಸ್, ಸೂಪರ್ 1000, ಸೂಪರ್ 750, ಸೂಪರ್ 500, ಸೂಪರ್ 300 (ಎಚ್‌ಎಸ್‌ಬಿಸಿ ವರ್ಲ್ಡ್ ಟೂರ್‌ನ ಭಾಗ), ಮತ್ತು ಬಿಡಬ್ಲ್ಯೂಎಫ್ ಟೂರ್ ಸೂಪರ್ 100.

ಪುರುಷರ ಸಿಂಗಲ್ಸ್

ವರ್ಷ ಪಂದ್ಯಾವಳಿ ಹಂತ ಎದುರಾಳಿ ಅಂಕ ಫಲಿತಾಂಶ
ಸ್ಡಿಸ್ ಓಪನ್ ಬ್ಯಾಡ್ಮಿಂಟನ್ ೨೦೧೯ ಫೈನಲ್ಸ್ ಸ್ವಿಸ್ ಓಪನ್ Super 300 ಚೀನಾ ಶಿ ಯುಕಿ 21–19, 18–21, 12–21 ರನ್ನರ್ ಅಪ್

ಬಿಡಬ್ಲ್ಯೂಎಫ್ ಸೂಪರ್‌ಸಿರೀಸ್

[ಬದಲಾಯಿಸಿ]

ಬಿಡಬ್ಲ್ಯೂಎಫ್ ಸೂಪರ್‌ಸಿರೀಸ್, ಡಿಸೆಂಬರ್ ೧೪, ೨೦೦೬ ರಂದು ಪ್ರಾರಂಭವಾಯಿತು ಮತ್ತು ೨೦೦೭ರಲ್ಲಿ ಜಾರಿಗೆ ಬಂದಿತು; ಇದು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯೂಎಫ್) ಅನುಮೋದಿಸಿದ ಗಣ್ಯ ಬ್ಯಾಡ್ಮಿಂಟನ್ ಪಂದ್ಯಾವಳಿಗಳ ಸರಣಿಯಾಗಿದೆ. ಬಿಡಬ್ಲ್ಯುಎಫ್ ಸೂಪರ್‌ಸಿರೀಸ್‌ ಎರಡು ಹಂತಗಳನ್ನು ಹೊಂದಿದೆ: ಸೂಪರ್‌ಸಿರೀಸ್ ಮತ್ತು ಸೂಪರ್‌ಸಿರೀಸ್ ಪ್ರೀಮಿಯರ್. ಸೂಪರ್‌ಸರೀಸ್‌ನ ಒಂದು ಋತುವಿನಲ್ಲಿ ವಿಶ್ವದಾದ್ಯಂತ ಹನ್ನೆರಡು ಪಂದ್ಯಾವಳಿಗಳನ್ನು ಒಳಗೊಂಡಿರುತ್ತದೆ. ಇದು ೨೦೧೧ ರಲ್ಲಿ ಪರಿಚಯಿಸಲ್ಪಟ್ಟಿತು ಮತ್ತು ಯಶಸ್ವಿ ಆಟಗಾರರನ್ನು ವರ್ಷಾಂತ್ಯದಲ್ಲಿ ನಡೆಯುವ ಸೂಪರ್‌ಸರೀಸ್ ಫೈನಲ್‌ಗೆ ಆಹ್ವಾನಿಸಲಾಗುತ್ತದೆ.

ಪುರುಷರ ಸಿಂಗಲ್ಸ್

ವರ್ಷ ಪಂದ್ಯಾವಳಿ ಎದುರಾಳಿ ಅಂಕ ಫಲಿತಾಂಶ
೨೦೧೭ ಸಿಂಗಾಪುರ್ ಸೂಪರ್ ಸೀರೀಸ್ ಫೈನಲ್ಸ್ ಸಿಂಗಾಪುರ್ ಓಪನ್ ಭಾರತ ಕಿಡಂಬಿ ಶ್ರೀಕಾಂತ್ 17–21, 21–17, 21–12 ವಿಜೇತ
  ಬಿಡಬ್ಲ್ಯೂಎಫ್ ಸೂಪರ್‌ಸರೀಸ್ ಫೈನಲ್ಸ್ ಪಂದ್ಯಾವಳಿ
  ಬಿಡಬ್ಲ್ಯೂಎಫ್ ಸೂಪರ್‌ಸರೀಸ್ ಪ್ರೀಮಿಯರ್ ಪಂದ್ಯಾವಳಿ
  ಬಿಡಬ್ಲ್ಯೂಎಫ್ ಸೂಪರ್‌ಸರೀಸ್ ಪಂದ್ಯಾವಳಿ

ಬಿಡಬ್ಲ್ಯೂಎಫ್ ಗ್ರ್ಯಾಂಡ್ ಪ್ರಿಕ್ಸ್

[ಬದಲಾಯಿಸಿ]

ಬಿಡಬ್ಲ್ಯೂಎಫ್ ಗ್ರ್ಯಾಂಡ್ ಪ್ರಿಕ್ಸ್ ಎರಡು ಹಂತಗಳನ್ನು ಹೊಂದಿದೆ: ಬಿಡಬ್ಲ್ಯೂಎಫ್ ಗ್ರ್ಯಾಂಡ್ ಪ್ರಿಕ್ಸ್ ಮತ್ತು ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್. ಇದು ೨೦೦೭ ರಲ್ಲಿ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯೂಎಫ್) ಅನುಮೋದಿಸಿದ ಬ್ಯಾಡ್ಮಿಂಟನ್ ಪಂದ್ಯಾವಳಿಗಳ ಸರಣಿಯಾಗಿದೆ.

ಪುರುಷರ ಸಿಂಗಲ್ಸ್

ವರ್ಷ ಪಂದ್ಯಾವಳಿ ಎದುರಾಳಿ ಅಂಕ ಫಲಿತಾಂಶ
೨೦೧೭ ಥೈಲ್ಯಾಂಡ್ ಓಪನ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಫೈನಲ್ಸ್ ಥೈಲ್ಯಾಂಡ್ ಓಪನ್ ಇಂಡೋನೇಷ್ಯಾ ಜೊನಾಥನ್ ಕ್ರಿಸ್ಟಿ 17–21, 21–18, 21–19 ವಿಜೇತ
೨೦೧೭ ಸೈಯದ್ ಮೋದಿ ಇಂಟರ್ನ್ಯಾಷನಲ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಫೈನಲ್ಸ್ ಸೈಯದ್ ಮೋದಿ ಅಂತರ್ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಭಾರತ ಸಮೀರ್ ವರ್ಮ 19–21, 16–21 ರನ್ನರ್ಸ್ ಅಪ್
೨೦೧೬ ಕೆನಡಾ ಓಪನ್ ಗ್ರ್ಯಾಂಡ್ ಪ್ರಿಕ್ಸ್ ಫೈನಲ್ಸ್ ಕೆನಡಾ ಓಪನ್ South Korea ಲೀ ಹ್ಯುನ್-ಇಲ್ 21–12, 21–10 ವಿಜೇತ
  ಬಿಡಬ್ಲ್ಯೂಎಫ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಪಂದ್ಯಾವಳಿ
  ಬಿಡಬ್ಲ್ಯೂಎಫ್ ಗ್ರ್ಯಾಂಡ್ ಪ್ರಿಕ್ಸ್ ಪಂದ್ಯಾವಳಿ

ಬಿಡಬ್ಲ್ಯೂಎಫ್ ಇಂಟರ್ನ್ಯಾಷನಲ್ ಚಾಲೆಂಜ್ / ಸರಣಿ

[ಬದಲಾಯಿಸಿ]

'ಪುರುಷರ ಸಿಂಗಲ್ಸ್

ವರ್ಷ ಪಂದ್ಯಾವಳಿ ಎದುರಾಳಿ ಅಂಕ ಫಲಿತಾಂಶ
೨೦೧೫ ಬಾಂಗ್ಲಾದೇಶ ಇಂಟರ್ನ್ಯಾಷನಲ್ ಭಾರತ ಸಮೀರ್ ವರ್ಮ 21–14, 8–21, 21–17 ವಿಜೇತ
೨೦೧೫ ಲಾಗೋಸ್ ಇಂಟರ್ನ್ಯಾಷನಲ್ Poland ಆಡ್ರಿಯನ್ ಡಿಜಿಯೋಲ್ಕೊ 21–14, 21–11 ವಿಜೇತ
೨೦೧೫ ಶ್ರೀಲಂಕಾ ಇಂಟರ್ನ್ಯಾಷನಲ್ ಭಾರತ ಸಮೀರ್ ವರ್ಮ 21–18, 21–8 ವಿಜೇತ
೨೦೧೨ ಟಾಟಾ ಓಪನ್ ಇಂಡಿಯಾ ಇಂಟರ್ನ್ಯಾಷನಲ್ ಚಾಲೆಂಜ್ ಭಾರತ ಆರ್.ಎಂ.ವಿ.ಗುರುಸಾಯಿದತ್ತ್ 19–21, 12–21 ರನ್ನರ್ಸ್ ಅಪ್
೨೦೧೨ ಬಹ್ರೇನ್ ಇಂಟರ್ನ್ಯಾಷನಲ್ ಶ್ರೀಲಂಕಾ ನಿಲುಕಾ ಕರುಣರತ್ನೆ 14–21, 21–14, 21–17 ವಿಜೇತ
೨೦೧೦ ಇರಾನ್ ಫಜ್ರ್ ಇಂಟರ್ನ್ಯಾಷನಲ್ ಇರಾನ್ ಮೊಹಮ್ಮದ್ರೆಜಾ ಖೇರಾದ್ಮಂಡಿ 21–19, 21–18 ವಿಜೇತ

ಪುರುಷರ ಡಬಲ್ಸ್

ವರ್ಷ ಪಂದ್ಯಾವಳಿ ಜೊತೆಗಾರ ಎದುರಾಳಿ ಅಂಕ ಫಲಿತಾಂಶ
೨೦೧೦ ಇರಾನ್ ಫಜ್ರ್ ಇಂಟರ್ನ್ಯಾಷನಲ್ ಭಾರತ ಪ್ರಣವ್ ಚೋಪ್ರಾ ಇರಾನ್ ಅಲಿ ಶಾಹೋಸ್ಸಿನಿ
ಇರಾನ್ ಮೊಹಮ್ಮದ್ರೆಜಾ ಖೇರಾದ್ಮಂಡಿ
21–17, 21–12 ವಿಜೇತ
  ಬಿಡಬ್ಲ್ಯೂಎಫ್ ಇಂಟರ್ನ್ಯಾಷನಲ್ ಚಾಲೆಂಜ್ ಪಂದ್ಯಾವಳಿ
  ಬಿಡಬ್ಲ್ಯೂಎಫ್ ಇಂಟರ್ನ್ಯಾಷನಲ್ ಸಿರೀಸ್ ಪಂದ್ಯಾವಳಿ

ಉಲ್ಲೇಖಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. http://bwfbadminton.com/player/42776/sai-praneeth-b
  2. "ಆರ್ಕೈವ್ ನಕಲು". Archived from the original on 2017-01-06. Retrieved 2019-08-26.
  3. https://www.hindustantimes.com/other-sports/bwf-world-championships-b-sai-praneeth-settles-for-bronze-after-losing-to-kento-momota/story-z5vZ2jvTSD113aoNfkkC7L.html
  4. http://www.rediff.com/sports/report/badminton-easy-win-for-saina-nehwal-praneeth-stuns-hashim/20130605.htm
  5. http://www.dnaindia.com/sport/report-b-sai-praneeth-spoils-taufik-hidayat-s-swansong-parupalli-kashyap-exits-1847399
  6. http://timesofindia.indiatimes.com/sports/badminton/Sai-Praneeth-stuns-world-No-4-Yun-Hu-in-Singapore-Open/articleshow/20671866.cms?
  7. http://www.news18.com/news/badminton/indian-shuttler-sai-praneeth-stuns-three-time-winner-lee-chong-wei-in-1st-round-at-all-england-1214286.html
  8. http://www.thehindu.com/sport/other-sports/sai-praneeth-rallies-to-down-srikanth-wins-maiden-super-series-title/article18071466.ece
  9. https://indianexpress.com/article/sports/badminton/b-sai-praneeth-indian-male-bwf-world-championships-5931770/
  10. https://www.news18.com/news/badminton/world-badminton-championships-b-sai-praneeth-enter-quarters-hs-prannoy-loses-2280431.html