ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ | |
---|---|
ಪರಿಕಲ್ಪನೆಗಳು | |
ಶೃತಿ · ಸ್ವರ · ಅಲಂಕಾರ · ರಾಗ | |
ತಾಳ · ಘರಾನಾ · ಥಾಟ್ | |
ಸಂಗೀತೋಪಕರಣಗಳು | |
ಭಾರತೀಯ ಸಂಗೀತೋಪಕರಣಗಳು | |
ಶೈಲಿಗಳು | |
ದ್ರುಪದ್ · ಧಮಾರ್ · ಖಯಾಲ್ · ತರಾನ | |
ಠುಮ್ರಿ · ದಾದ್ರ · ಖವ್ವಾಲಿ · ಘಝಲ್ | |
ವಿದಾನಗಳು (ಥಾಟ್‌ಗಳು) | |
ಬಿಲಾವಲ್ · ಖಮಾಜ್ · ಕಾಫಿ · ಅಸಾವರಿ · ಭೈರವ್ | |
ಭೈರವಿ · ತೋಡಿ · ಪೂರ್ವಿ · ಮಾರ್ವ · ಕಲ್ಯಾಣಿ |
ಬಿಲಾವಲ್ ಒಂದು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ರಾಗ ಮತ್ತು ಥಾಟ್. ಇದು ಪಾಶ್ಚಿಮಾತ್ಯ ಸಂಗೀತದ ಐಯೋನಿಯನ್ ಮೋಡ್ (major scale)ಗೆ ಸಮಾನವಾಗಿದೆ ಮತ್ತು ಎಸ್ ಆರ್ ಜಿ ಎಂ ಪಿ ಡಿ ಎನ್ ಎಸ್' ಸ್ವರಗಳನ್ನು ಹೊಂದಿದೆ. ಬಿಲಾವಲ್ ಥಾಟ್‍ನ ಎಲ್ಲಾ ಸ್ವರಗಳೂ ಶುದ್ಧ ಅಥವಾ ಪ್ರಕೃತಿಕ.ಬಿಲಾವಲ್ ಥಾಟ್‍ನಲ್ಲಿ ಕೋಮಲ ಅಥವಾ ತೀವ್ರ ಸ್ವರಗಳು ಯಾವಾಗಲೂ ಅಂತರಿಕ ಮಾದರಿಗೆ ಅನುಗುಣವಾಗಿರುತ್ತದೆ.
ಇದು ಸಿಖ್ ಸಂಪ್ರದಾಯದ ಪವಿತ್ರ ಗ್ರಂಥ, ಶ್ರೀ ಗುರು ಗ್ರಂಥ ಸಾಹಿಬ್ನಲ್ಲಿ ಉಲ್ಲೇಖಿವಾದ ಒಂದು ರಾಗವಾಗಿದೆ.ಪ್ರತಿ ರಾಗಗಳೂ ಒಂದು ಕಟ್ಟುನಿಟ್ಟಾದ ನಿಯಮಗಳಿಗೆ ಒಳಪಟ್ಟಿರುತ್ತವೆ. ಇದರಲ್ಲಿ ಯಾವ ಸ್ವರಗಳನ್ನು ಬಳಸಬಹುದು ಅಥವಾ ಬಳಸಬಾರದು, ಅವುಗಳ ನಡುವೆ ಇರಬೇಕಾದ ಅಂತರಗಳು ಇವುಗಳನ್ನು ಗಮನದಲ್ಲಿರಿಸಿಕೊಂಡು ಅಯಾ ರಾಗಗಳಲ್ಲಿ ಸಂಯೋಜನೆಗಳನ್ನು ಮಾಡಬಹುದು.
ಶ್ರೀ ಗುರು ಗ್ರಂಥ ಸಾಹಿಬ್‍ನಲ್ಲಿ ಒಟ್ಟು 31 ರಾಗಗಳಿವೆ.ಅದರಲ್ಲಿ ಬಿಲಾವಲ್ ಹದಿನಾರನೆಯ ರಾಗವಾಗಿ ಕಾಣಿಸಿಕೊಂಡಿದೆ. ಈ ರಾಗದ ರಚನೆಗಳು ಒಟ್ಟು ೬೪ ಪುಟಗಳಲ್ಲಿದ್ದು ಅದು ೭೯೫ ರಿಂದ ೮೫೯ರವರೆಗಿನ ಪುಟಸಂಖ್ಯೆಗಳಲ್ಲಿವೆ.ಸುಮಾರು ೧೭೦ ಮಂತ್ರಗಳಿದ್ದು ಇದನು ಗುರು ನಾನಕ್, ಗುರು ಅಮರ ದಾಸ, ಗುರು ರಾಮ ದಾಸ, ಗುರು ಅರ್ಜುನ ಮತ್ತು ಗುರು ತೇಜ್ ಬಹಾದೂರ್ ರಚಿಸಿದ್ದಾರೆ.
ಬಿಲಾವಲ್ ಉತ್ತರ ಭಾರತದ ಹಿಂದೂಸ್ಥಾನಿ ಸಂಗೀತ ಪದ್ಧತಿಯಲ್ಲಿ ೧೯ನೆಯ ಶತಮಾನದಿಂದ ಮೂಲ ರಾಗವಾಗಿ ಬಳಕೆಯಲ್ಲಿದೆ.ಬಿಲಾವಲ್ ರಾಗಮಾಲಾದಲ್ಲಿ ಭೈರವಿ ರಾಗದ ರಾಗಿಣಿಯಾಗಿ ಉಲ್ಲೇಖಿತವಾಗಿದೆಯಾದರೂ ಇಂದು ಇದು ಒಂದು ಸ್ವತಂತ್ರ ಥಾಟ್ ಆಗಿ ಪರಿಗಣಿಸಲ್ಪಟ್ಟಿದೆ.
ರಾಗಮಾಲಾ ದಲ್ಲಿ ಬಿಲಾವಲ್‍ನ್ನು ಭೈರವನ ಪುತ್ರ ಎಂದು ಪರಿಗಣಿಸಲಾಗಿದೆಯಾದರೂ ಇಂದು ಈ ಎರಡು ರಾಗಗಳಲ್ಲಿ ಯಾವುದೇ ಸಂಬಂಧ ಕಂಡು ಬರುವುದಿಲ್ಲ.ಬಿಲಾವಲ್‍ನ್ನು ಬೇಸಗೆ ಕಾಲದಲ್ಲಿ ಹಾಡಲಾಗುತ್ತದೆ.ಇದರ ಭಾವ ಉತ್ಕಟ ಭಕ್ತಿ ಮತ್ತು ಶಾಂತ ಸ್ಥಿತಿ. ಇದು ಬೆಳಗಿನ ರಾಗವಾಗಿದೆ.
ಅರೋಹ ಸ ರಿ ಗ ಮ ಪ ಧ ನಿ ಸ
ಸ ನಿ ಧ, ಪ, ಸ ಗ,ರಿ ಸ
ವಾದಿ:ಧ
ಸಂವಾದಿ:ಗ
ಗ ರಿ, ಗ ಮ ಧ ಪ, ಮಾ ಗ,ಮ ರಿ ಸ
ಬೆಳಿಗ್ಗಿನ ಮೊದಲ ಪ್ರಹರ.
Bor, Joep (ed). Rao, Suvarnalata; der Meer, Wim van; Harvey, Jane (co-authors) The Raga Guide: A Survey of 74 Hindustani Ragas. Zenith Media, London: 1999.