ಬೀರೂರು

ಬೀರೂರು
ಬೀರೂರು
city
Population
 (2001)
 • Total೨೨,೬೦೧

ಬೀರೂರು ಕರ್ನಾಟಕಚಿಕ್ಕಮಗಳೂರು ಜಿಲ್ಲೆಯ ಒಂದು ಪಟ್ಟಣ. ತಾಲೂಕು ಕೇಂದ್ರವಾದ ಕಡೂರುನಿಂದ ವಾಯವ್ಯಕ್ಕೆ ಕೇವಲ ೬ ಕಿ.ಮೀ. ದೂರದಲ್ಲಿದೆ. ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ರೈಲ್ವೇ ಜಂಕ್ಷನ್‌ ಆಗಿದೆ. ಜನಸಂಖ್ಯೆ 18,081 (1981) ಬೆಂಗಳೂರು ಪುಣೆ ರೈಲು ಮಾರ್ಗ ಮತ್ತು ಬೆಂಗಳೂರು-ಹೊನ್ನಾವರ ರಸ್ತೆ ಈ ಊರಿನ ಮೂಲಕ ಹಾದುಹೋಗುತ್ತವೆ.

ಹೆಸರು

[ಬದಲಾಯಿಸಿ]

ವೀರರ ಊರು ಬೀರೂರಾಗಿದೆ.

ಇತಿಹಾಸ

[ಬದಲಾಯಿಸಿ]

ಕದಂಬ ವಿಷ್ಣುವರ್ಮನ ಕಾಲದ (5ನೆಯ ಶತಮಾನ) ಒಂದು ತಾಮ್ರಶಾಸನ ಈ ಊರಿನಲ್ಲಿ ದೊರೆತಿದೆ. ಇದರಲ್ಲಿ ಕರ್ನಾಟಕ ಪ್ರದೇಶವೆಂಬ ಉಲ್ಲೇಖವಿರುವುದು ಗಮನಾರ್ಹ. ಇಲ್ಲಿರುವ ಹೊಯ್ಸಳ ಎರಡನೆಯ ವಿನಯಾದಿತ್ಯನ ಶಾಸನದಿಂದ ಈ ಊರು ಹನ್ನೊಂದನೆಯ ಶತಮಾನದಲ್ಲಿ ಒಂದು ಪ್ರಮುಖ ಪಟ್ಟಣವಾಗಿತ್ತೆಂದು ತಿಳಿದುಬರುತ್ತದೆ. ಅಲ್ಲದೆ ಶಾಸನದಲ್ಲಿ ಹೊಯ್ಸಳ ದಂಡನಾಯಕ ಪೊಚಿಮಯ್ಯ ಇಲ್ಲಿ ಪೋಚೇಶ್ವರ ದೇವಾಲಯ ಕಟ್ಟಿಸಿದುದರ ಉಲ್ಲೇಖವಿದೆ. ಹೊಯ್ಸಳರ ಕಾಲದಲ್ಲಿ ಇದು ಸ್ಥಳೀಯ ಆಡಳಿತದ ಮುಖ್ಯ ಕೇಂದ್ರವಾಗಿತ್ತು.


ವಾಣಿಜ್ಯ , ವ್ಯಾಪಾರ

[ಬದಲಾಯಿಸಿ]

ಇದೊಂದು ಪ್ರಮುಖ ವಾಣಿಜ್ಯ ಕೇಂದ್ರ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪ್ರಾಮುಖ್ಯಕ್ಕೆ ಬರುವ ತನಕವೂ ಬೀರೂರು ಅಡಿಕೆ ವ್ಯಾಪಾರಕ್ಕೆ ಪ್ರಸಿದ್ಧವಾಗಿತ್ತು. ತೆಂಗಿನ ಕಾಯಿ, ಅಡಿಕೆ, ದಿನಸಿ ಸಾಮಾನುಗಳ ವ್ಯಾಪಾರ ಈಗ ಗಣನೀಯ ಪ್ರಮಾಣದಲ್ಲಿ ನಡೆಯುತ್ತದೆ. ವ್ಯವಸಾಯಕ್ಕೆ ಸಂಬಂಧಿಸಿದ ಉಪಕರಣಗಳು, ಬಳೆ, ಸುಣ್ಣ ಮುಂತಾದವು ಇಲ್ಲಿ ತಯಾರಾಗುತ್ತದೆ. ಕಂಬಳಿ ತಯಾರಿಸುವ ಮಗ್ಗಗಳೂ ಇವೆ. ಪ್ರಥಮ ದರ್ಜೆ ಕಾಲೇಜು, ಆಸ್ಪತ್ರೆ, ಪಶು ವೈದ್ಯಶಾಲೆ ಮೊದಲಾದವುಗಳಿವೆ. ಪಟ್ಟಣ ಪುರಸಭಾಡಳಿತಕ್ಕೆ ಸೇರಿದೆ.

ಬೀರೂರಿನಲ್ಲಿ ಕಾಂಗ್ರೆಸ್ ಅಧಿವೇಶನ ಮತ್ತು ಕರ್ನಾಟಕ ಏಕೀಕರಣ

[ಬದಲಾಯಿಸಿ]

೧೦-೮-೧೯೪೭ರಂದೇ ಮೈಸೂರಿನ ಮಹಾರಾಜರು ಭಾರತ ಒಕ್ಕೂಟದಲ್ಲಿ ಸೇರುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಭಾರತಕ್ಕೆ ಸ್ವಾತಂತ್ರ ಬಂದ ೧೫-೮-೧೯೪೭ರಂದು ಮೈಸೂರು ಸಂಸ್ಥಾನ ಅದರಲ್ಲಿ ಸೇರಲಿಲ್ಲ ಇದರಿಂದ ಕಂಗಲಾದ ಮೈಸೂರು ಸಂಸ್ಥಾನದ ಜನತೆ ಮೈಸೂರು ಚಲೋ ಚಳವಳಿ ಮಾಡಿದರು. ೨೪-೧೦-೧೯೪೭ರಂದು ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರವು ಅಸ್ತಿತ್ವಕ್ಕೆ ಬಂದಿತು.ಅದರೆ ಬೇರೆ ಬೇರೆ ಆಡಳಿತಗಳಲ್ಲಿ ಹರಿದು ಹಂಚಿಹೋಗಿರುವ ಭಾಗಗಳನ್ನೆಲ್ಲಾ ಒಗ್ಗೂಡಿಸಿ, ಶೀಘ್ರವೇ ಕರ್ನಾಟಕ ರಚನೆ ಆಗಬೇಕೆಂಬ ಗೊತ್ತುವಳಿ ಸ್ವೀಕರಿಸಿಬೇಕಾಗಿತ್ತು.ಅದರಂತೆ ೬-೧೧-೧೯೪೮ರಂದು ಬೀರೂರಿನಲ್ಲಿ ನಡೆದ ಅಖಿಲ ಮೈಸೂರು ಕಾಂಗ್ರೆಸ್ ಅಧಿವೇಶನದಲ್ಲಿ ಮೈಸೂರು ರಾಜ್ಯದ ಮೊದಲ ಮುಖ್ಯ ಮಂತ್ರಿಯಾದ ಕೆ.ಸಿ.ರೆಡ್ಡಿ (ಚೆಂಗಲರಾಯ ರೆಡ್ಡಿ) ಅವರು ಕರ್ನಾಟಕ ಪ್ರಾಂತ ರಚನೆಗೆ ಮೈಸೂರು ರಾಜ್ಯವು ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಂತರ ಅದೇ ಅಧಿವೇಶನದಲ್ಲಿ ಕರ್ನಾಟಕ ಪ್ರಾಂತ ರಚನೆಗೆ ಒಂದು ಸಮಿತಿಯನ್ನು ನೇಮಕಮಾಡಲಾಗುತ್ತದೆ. ನಿರ್ಣಯದಂತೆ ನೇಮಕಗೊಂಡ ಸಮಿತಿಯಲ್ಲಿ ಟಿ.ಸಿದ್ಧಲಿಂಗಯ್ಯ, ಟಿ.ಸುಬ್ರಹ್ಮಣ್ಯ, ಎಸ್.ಚನ್ನಯ್ಯ, ಕೆ.ಜಿ. ಒಡೆಯರ್, ಜಿ.ಬಂಡಿ ಗೌಡ ಮತ್ತು ನಾಮಕರಣಗೊಂಡಿದ್ದ ಬಿ.ಪಿ.ಹಾಲಪ್ಪ ಇದ್ದರು.ಈ ಸಮಿತಿಯು ಕರ್ನಾಟಕದ ಎಲ್ಲ ಭಾಗ ಗಳಲ್ಲಿ ಪ್ರವಾಸ ಮಾಡಿ ತನ್ನ ವರದಿಯನ್ನು ಸಲ್ಲಿಸಿತು.

ಪ್ರಮುಖ ಸ್ಥಳಗಳು

[ಬದಲಾಯಿಸಿ]
  1. . ವೀರಭದ್ರ ಸ್ವಾಮಿ ದೇವಸ್ಥಾನ
  2. . ಹಿರಿಯಂಗಳ ಈಶ್ವರನ ದೇವಸ್ಥಾನ
  3. . ಆಂಜನೇಯಸ್ವಾಮಿ ದೇವಸ್ಥಾನ
  4. . ಭೂತಪ್ಪಸ್ವಾಮಿ ದೇವಸ್ಥಾನ

ದೇವಾಲಯಗಳು, ಜಾತ್ರೆಗಳು=

[ಬದಲಾಯಿಸಿ]

ಕನ್ನಿಕಾಪರಮೇಶ್ವರಿ, ರಾಮದೇವರು, ಆಂಜನೇಯ, ವೀರಭದ್ರ, ಜೈನ ದೇವಾಲಯಗಳಿವೆ. ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ವೀರಭದ್ರಸ್ವಾಮಿ ಜಾತ್ರೆ ನಡೆಯುವುದು. ಸುಗ್ಗಿಯ ಕಾಲದಲ್ಲಿ ನಡೆಯುವ ಅಂತರಗಟ್ಟಮ್ಮನ ಜಾತ್ರೆ ರೈತರಿಗೆ ಮುಖ್ಯವಾದುದು. ದಸರ ಸಮಯದಲ್ಲಿ ಮೈಲಾರಿ ಲಿಂಗನ ಜಾತ್ರೆ ನಡೆಯವುದು. ಮತ್ತು ಕಾರ್ತಿಕ ಮಾಸದಲ್ಲಿ ಭೂತಪ್ಪಸ್ವಾಮಿಯ ಕಾರ್ತಿಕ ಪೂಜೆ ನಡೆಯುತ್ತದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: