ಬೃಹದ್ರಥ | |
---|---|
ಬೃಹದ್ರಥ ರಾಜವಂಶದ ಸಂಸ್ಥಾಪಕ | |
ಉತ್ತರಾಧಿಕಾರಿ | ಜರಾಸಂಧ |
ಸಂತಾನ | |
ಜರಾಸಂಧ ಮತ್ತು ಶಶಿರೇಖಾ | |
ತಂದೆ | ವಸು |
ತಾಯಿ | ಗಿರಿಕೆ |
ಮಹಾರಥ ಎಂದೂ ಪರಿಚಿತವಿರುವ ಬೃಹದ್ರಥನು ಮಗಧವನ್ನು ಆಳಿದ ಅತ್ಯಂತ ಮುಂಚಿನ ರಾಜವಂಶವಾದ ಬರ್ಹದ್ರಥ ರಾಜವಂಶದ ಸಂಸ್ಥಾಪಕನಾಗಿದ್ದನು. ಮಹಾಭಾರತ ಮತ್ತು ಪುರಾಣಗಳ ಪ್ರಕಾರ, ಇವನು ಚೇದಿಯ ಕುರು ರಾಜನಾದ ವಸು ಮತ್ತು ಅವನ ರಾಣಿ ಗಿರಿಕೆಯ ಐವರು ಪುತ್ರರಲ್ಲಿ ಅತ್ಯಂತ ಹಿರಿಯನಾಗಿದ್ದನು.[೧] ಬೃಹದ್ರಥನ ಹೆಸರು ಋಗ್ವೇದದಲ್ಲೂ (I.36.18, X.49.6) ಕಂಡುಬರುತ್ತದೆ. ಪಾಂಚಾಲದ ಧೃಷ್ಟದ್ಯುಮ್ನ ಅವರನ್ನು ವಿವಾಹವಾದ ಶಶಿರೇಖಾ ಎಂಬ ಸುಂದರ ಮಗಳಿದ್ದಳು. [೨]
ಇವನ ಸಹೋದರಿ ಆಮ್ನಾ ಇವನ ನಂತರ ಉತ್ತರಾಧಿಕಾರಿಯಾದಳು ಎಂದು ಎಲ್ಲ ಪುರಾಣಗಳು ಉಲ್ಲೇಖಿಸುತ್ತವೆ. ಕುಶಾಗ್ರನ ನಂತರ ಅವನ ಮಗ ವೃಷಭನು ಉತ್ತರಾಧಿಕಾರಿಯಾದನು. ಪುಷ್ಪವಂತನು (ಅಥವಾ ಪುಷ್ಯವಂತ ಅಥವಾ ಪುಣ್ಯವಂತ) ವೃಷಭನ ಮಗ. ಪುಷ್ಪವಂತನ ನಂತರ ಅವನ ಮಗ ಸತ್ಯಹಿತನು (ಅಥವಾ ಸತ್ಯಧೃತ) ಉತ್ತರಾಧಿಕಾರಿಯಾದನು. ಸುಧನ್ವನನು (ಅಥವಾ ಸುಧರ್ಮನ, ಧರ್ಮಾತ್ಮ, ಅಥವಾ ಧನುಷ) ಸತ್ಯಹಿತನ ಮಗ. ಧನುಷನ ನಂತರ ಅವನ ಮಗ ಸರ್ವನು (ಅಥವಾ ಊರ್ಜಾ ಅಥವಾ ಜಾತು ಅಥವಾ ಜಾಹು ಅಥವಾ ಜಂತು) ಉತ್ತರಾಧಿಕಾರಿಯಾದನು. ಸರ್ವನ ನಂತರ ಅವನ ಮಗ ಸಂಭವನು ಉತ್ತರಾಧಿಕಾರಿಯಾದನು. ಅಗ್ನಿ ಪುರಾಣದ ಪ್ರಕಾರ, ಸಂಭವನ ನಂತರ ಜರಾಸಂಧನು ಉತ್ತರಾಧಿಕಾರಿಯಾದನು,[೩] ಜರಾಸಂಧನು ಮಹಾಭಾರತದಲ್ಲಿ ಉಲ್ಲೇಖಿಸಲ್ಪಟ್ಟ ಪ್ರಸಿದ್ಧ ವೀರ ರಾಜ. ಆದರೆ, ಇತರ ಎಲ್ಲ ಪೌರಾಣಿಕ ವಂಶಾವಳಿ ಪಟ್ಟಿಗಳು ಬೃಹದ್ರಥ ಹೆಸರನ್ನು ಜಂತು ಮತ್ತು ಜರಾಸಂಧನ ನಡುವೆ ಅಥವಾ ಸಂಭವ ಮತ್ತು ಜರಾಸಂಧನ ನಡುವೆ ಮತ್ತೊಮ್ಮೆ ಉಲ್ಲೇಖಿಸುತ್ತವೆ. ಜರಾಸಂಧನ ನಂತರ ಅವನ ಮಗ ಸಹದೇವನು ಉತ್ತರಾಧಿಕಾರಿಯಾದನು. ಜರಾಸಂಧನು ಕುರುಕ್ಷೇತ್ರ ಯುದ್ಧದಲ್ಲಿ ಸಂಹರಿಸಲ್ಪಟ್ಟನು.[೧]