![]() | |
ಸಂಸ್ಥೆಯ ಪ್ರಕಾರ | ಸಾರ್ವಜನಿಕ, ಸಾರಿಗೆ ಇಲಾಖೆ ಕರ್ನಾಟಕ ಸರ್ಕಾರ[೧] |
---|---|
ಸ್ಥಾಪನೆ | 1997[೨] |
ಮುಖ್ಯ ಕಾರ್ಯಾಲಯ | ಬೆಂಗಳೂರು, ಭಾರತ |
ವ್ಯಾಪ್ತಿ ಪ್ರದೇಶ | ಬೆಂಗಳೂರು |
ಉದ್ಯಮ | ಸಾರ್ವಜನಿಕ ಸಾರಿಗೆ ಬಸ್ ಸೇವೆ |
ಉತ್ಪನ್ನ | ಸಾರಿಗೆ ಸೇವೆ |
ಜಾಲತಾಣ | www.mybmtc.com/ |
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) (ಇಂಗ್ಲಿಷ್: Bangalore Metropolitan Transport Corporation) ಭಾರತದ, ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಾರಿಗೆ, ಬಸ್ ಸೇವೆ ಒದಗಿಸುವ ಕರ್ನಾಟಕ ಸರ್ಕಾರ ಒಂದು ಸರ್ಕಾರಿ ಸಂಸ್ಥೆಯಾಗಿದೆ. ಇದು ಭಾರತದ ಸಾರ್ವಜನಿಕ ಸಾರಿಗೆಗಳಲ್ಲಿ ಹೆಚ್ಚು ವೋಲ್ವೋ ಬಸ್ ಹೊಂದಿದೆ.[೩]
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು 1997ರಲ್ಲಿ ವಿಭಾಗಗಳಾಗಿ ಮಾಡಲಾಯಿತು. ಆ ಸಂಧರ್ಭದಲ್ಲಿ ಬೆಂಗಳೂರು ನಗರಕ್ಕೆ ಸಾರಿಗೆ ಸೇವೆ ನೀಡಲು ಪ್ರತ್ಯೆಕ ಸಾರಿಗೆ ಸಂಸ್ಥೆ ಬೆಂಗಳೂರು ಸಾರಿಗೆ ಸೇವೆ (BTS) ರಚಿಸಲಾಯಿತು. ನಂತರ ಬೆಂಗಳೂರು ಸಾರಿಗೆ ಸೇವೆ (BTS) ನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಯಿತು. ಮತ್ತು ಬಿಟಿಸ್ ಬಸ್ ಗಳ ಕೆಂಪು ವರ್ಣವನ್ನು ವರ್ಣವನ್ನು ನೀಲಿ ಮತ್ತು ಬಿಳಿಗೆ ಬದಲಾಯಿಸಲಾಯಿತು.[೪]
4 ಫೆಬ್ರವರಿ 2010 ರಂದು ಪರಿಚಯಿಸಿದ ಬಸ್ ದಿನ ಬೆಂಗಳೂರು ಎಲ್ಲಾ ನಾಗರಿಕರು ಸಾರ್ವಜನಿಕ ಸಾರಿಗೆ ಬಳಸಲು ಕರೆ ನೀಡುವ ಒಂದು ಘಟನೆಯಾಗಿದೆ. ಬಸ್ ದಿನ ಹಿಂದಿನ ಉದ್ದೇಶ ಪರಿಸರ ಸಂರಕ್ಷಣೆ, ಸಂಚಾರ ಪರಿಸ್ಥಿತಿ ಸುಧಾರಣೆ, ಆರೋಗ್ಯ ಬದಲಾವಣೆ.[೫],ಪ್ರತಿ ತಿಂಗಳ 4 ರಂದು "ಬಸ್ ದಿನವನ್ನಾಗಿ ಆಚರಿಸಲಾಗುತ್ತದೆ.