Kydia calycina | |
---|---|
Scientific classification | |
Unrecognized taxon (fix): | Kydia |
ಪ್ರಜಾತಿ: | K. calycina
|
Binomial name | |
Kydia calycina | |
Synonyms[೨] | |
List
|
ಬೆಂಡೆಮರ ಅಥವಾ ಕಿಡಿಯಾ ಕ್ಯಾಲಿಸಿನಾ ಎಂಬುದು ಭಾರತೀಯ ಉಪಖಂಡ, ದಕ್ಷಿಣ ಚೀನಾ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುವ ಕಿಡಿಯಾ ಕುಲದ ಹೂಬಿಡುವ ಸಸ್ಯವಾಗಿದೆ.[೨] ವೇಗವಾಗಿ ಬೆಳೆಯುವ, ಮಧ್ಯಮ ಗಾತ್ರದ ಮರ. ಇದನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತದೆ. ಇದು ಅಗ್ಗದ ಮರ ಮತ್ತು ಫೈಬರ್‌ಗಾಗಿ ಬೆಳೆಸಲಾಗುತ್ತದೆ.[೩] ಭಾರತದಲ್ಲಿ ಪಶ್ಚಿಮ ಘಟ್ಟ, ಪೂರ್ವ ಘಟ್ಟ, ಎಲೆ ಉದುರಿಸುವ ಶುಷ್ಕ ಕಾಡುಗಳಲ್ಲಿ ಕಂಡು ಬರುತ್ತದೆ.
ಭಾರತದ ವಿವಿಧ ಪ್ರದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ಈ ಮರದ ಹೆಸರುಗಳು ಇಂತಿವೆ.
ಸುಮಾರು ೧೫ ಮೀಟರ್ ಎತ್ತರಕ್ಕೆ ಬೆಳೆಯುವ ಮರ. ತೊಗಟೆ ೫-೬ ಸೆ.ಮೀ ದಪ್ಪ ಇರುತ್ತದೆ.ಬಣ್ಣ ಬೂದು ಕಂದು.ಕಿರುಕೊಂಬೆಗಳು ದುಂಡಾಗಿದ್ದು, ನಕ್ಷತ್ರಾಕಾರದ ಮೃದುತುಪ್ಪಳದಿಂದ ಕೂಡಿರುತ್ತವೆ.ಎಲೆಗಳು ಸರಳವಾಗಿದ್ದು, ಪರ್ಯಾಯವಾಗಿರುತ್ತವೆ.ಅಕ್ಟೋಬರ್ -ಡಿಸೆಂಬರ್ ತಿಂಗಳಲ್ಲಿ ಹೂವು ಬಿಡುತ್ತದೆ.
ಮರ ಉರುವಲಾಗಿ ಉಪಯೋಗವಾಗುತ್ತದೆ. ಎಲೆಗಳು ಆನೆಗಳಿಗೆ, ಜಿಂಕೆ ಮತ್ತು ಕಾಡುಕೋಣಗಳಿಗೆ ಉತ್ತಮ ಮೇವು.