ಬೆಲ್ ಬಾಟಮ್: ದಿ ಅಡ್ವೆಂಚರ್ಸ್ ಆಫ್ ಡಿಟೇಕ್ಟಿವ್ ದಿವಾಕರ್ | |
---|---|
![]() ಚಲನಚಿತ್ರದ ಪೋಸ್ಟರ್ | |
ನಿರ್ದೇಶನ | ಜಯತೀರ್ಥ |
ನಿರ್ಮಾಪಕ | ಸಂತೋಷ್ ಕುಮಾರ್ ಕೆ.ಸಿ |
ಚಿತ್ರಕಥೆ | ಜಯತೀರ್ಥ |
ಕಥೆ | ದಯಾನಂದ ಟಿ.ಕೆ |
ಪಾತ್ರವರ್ಗ | ರಿಷಭ್ ಶೆಟ್ಟಿ ಹರಿಪ್ರಿಯಾ ಅಚ್ಯುತ್ ಕುಮಾರ್ ಯೋಗರಾಜ್ ಭಟ್ |
ಸಂಗೀತ | ಬಿ.ಅಜನೀಶ್ ಲೋಕನಾಥ್ |
ಛಾಯಾಗ್ರಹಣ | ಅರವಿಂದ್ ಕಶ್ಯಪ್ |
ಸಂಕಲನ | ಕೆ.ಎಂ. ಪ್ರಕಾಶ್ |
ಸ್ಟುಡಿಯೋ | ಗೋಲ್ಡನ್ ಹಾರ್ಸ್ ಸಿನೆಮಾ |
ಬಿಡುಗಡೆಯಾಗಿದ್ದು |
|
ದೇಶ | ಭಾರತ |
ಭಾಷೆ | ಕನ್ನಡ |
ಬೆಲ್ ಬಾಟಮ್: ದಿ ಅಡ್ವೆಂಚರ್ಸ್ ಆಫ್ ಡಿಟೇಕ್ಟಿವ್ ದಿವಾಕರ್ ಇದು ೨೦೧೯ರಲ್ಲಿ ಬಿಡುಗಡೆಯಾದ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು ಇದನ್ನು ಜಯತೀರ್ಥ ಅವರು ನಿರ್ದೇಶಿಸಿದ್ದಾರೆ. ಇದರ ಕಥೆಯನ್ನು ದಯಾನಂದ ಟಿ.ಕೆ. ಅವರು ಬರೆದಿದ್ದಾರೆ. ೮೦ರ ದಶಕದಲ್ಲಿ ನಡೆಯುವ ಈ ಚಿತ್ರವನ್ನು ಸಂತೋಷ್ ಕುಮಾರ್ ಕೆ.ಸಿ. ಅವರು ಗೋಲ್ಡನ್ ಹಾರ್ಸ್ ಸಿನೆಮಾಸ್ ಬ್ಯಾನರ್‌ನಡಿಯಲ್ಲಿ ನಿರ್ಮಿಸಿದ್ದಾರೆ.[೧] ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.[೨][೩] ಅಚ್ಯುತ್ ಕುಮಾರ್, ಯೋಗರಾಜ್ ಭಟ್ ಮತ್ತು ಪ್ರಮೋದ್ ಶೆಟ್ಟಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಬಿ.ಅಜನೀಶ್ ಲೋಕನಾಥ್ ಚಿತ್ರಕ್ಕೆ ಹಿನ್ನಲೆ ಸಂಗೀತ ಮತ್ತು ಹಾಡುಗಳನ್ನು ಸಂಯೋಜಿಸಿದ್ದರೆ, ಅರವಿಂದ್ ಕಶ್ಯಪ್ ಛಾಯಾಗ್ರಹಣವನ್ನು ಮಾಡಿದ್ದಾರೆ ಮತ್ತು ಕೆ.ಎಂ.ಪ್ರಕಾಶ್ ರವರು ಚಿತ್ರವನ್ನು ಸಂಪಾದಿಸಿದ್ದಾರೆ. ರಘು ನಡುವಳ್ಳಿ ರವರು ಚಿತ್ರದ ಸಂಭಾಷಣೆಯನ್ನು ಬರೆದಿದ್ದಾರೆ.[೪]
ಈ ಚಿತ್ರವು ೧೫ ಫೆಬ್ರವರಿ ೨೦೧೯ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಯಿತು. ಈ ಚಿತ್ರವು ೨೫ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶತದಿನೋತ್ಸವವನ್ನು ಆಚರಿಸಿತು. ಈ ಚಿತ್ರದ ಪ್ರಚಾರವನ್ನು ಆಡಿಯೋ ಟ್ರೇಲರ್ ಬಿಡುವ ಮೂಲಕ ವಿಭಿನ್ನವಾಗಿ ಮಾಡಲಾಯಿತು. ಇದರೊಂದಿಗೆ ಆಡಿಯೋ ಟ್ರೇಲರ್ ಬಿಡುಗಡೆ ಮಾಡಿದ ವಿಶ್ವದ ಮೊದಲ ಚಿತ್ರ ಇದಾಯಿತು.[೫] ಚಿತ್ರದ ಟ್ರೇಲರ್ ಅನ್ನು ಹರಿಕಥೆಯ ಮಾದರಿಯಲ್ಲಿ ಬಿಡುಗಡೆ ಮಾಡಲಾಯಿತು.
ಡಿಟೆಕ್ಟಿವ್ ದಿವಾಕರ್ (ರಿಷಬ್ ಶೆಟ್ಟಿ) ವೃತ್ತಿಯಿಂದ ಕಾನ್‌ಸ್ಟೆಬಲ್ ಆದರೆ ಹೃದಯದಲ್ಲಿ ಪತ್ತೇದಾರಿ. ಅವನು ಗೋವಾದಲ್ಲಿ ಸಿಐಡಿ ೯೯೯, ಜೇಡರ ಬಲೆ ನಂತಹ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಬಾಂಡ್ ಮಾದರಿಯ ಚಲನಚಿತ್ರಗಳನ್ನು ನೋಡುತ್ತಾ ಬೆಳೆಯುತ್ತಾನೆ. ಮತ್ತು ಪತ್ತೇದಾರಿ ಕಾದಂಬರಿಗಳನ್ನು ಓದುತ್ತಾ ಓದುತ್ತಾ ಸ್ವತಃ ಒಬ್ಬ ಪತ್ತೆದಾರನಾಗುವ ಕನಸು ಕಾಣುತ್ತಾನೆ. ಊರಿನ ಕೆಲವು ಜನರ ಇವನ ಬಳಿ ಪ್ರಾಣಿಗಳ ಸಾವಿನ ರಹಸ್ಯವನ್ನು ಪತ್ತೆಹಚ್ಚಲು ಕೇಳಿಕೊಂಡು ಬರುತ್ತಾರೆ. ಇದರಿಂದ ದಿವಾಕರ್ ಬಹಳ ಅಪಹಾಸ್ಯಕ್ಕೆ ಒಳಗಾಗುತ್ತಾನೆ. ದಿವಾಕರ ನ ತಂದೆ ಅಣ್ಣಪ್ಪ (ಅಚ್ಯುತ್ ಕುಮಾರ್) ಅವರ ಭಾರೀ ಒತ್ತಡ, ಇವನನ್ನು ಪೊಲೀಸ್ ಕಾನ್‌ಸ್ಟೆಬಲ್ ಆಗುವಂತೆ ಮಾಡುತ್ತದೆ. ಒಂದು ತಿಂಗಳಲ್ಲಿ, ಅವನ ಹಿರಿಯ ಅಧಿಕಾರಿ ಸಹದೇವ (ಪ್ರಮೋದ್ ಶೆಟ್ಟಿ) ನೀಡಿದ ಕೊಲೆ ರಹಸ್ಯವನ್ನು ಸುಲಭವಾಗಿ ಪರಿಹರಿಸುತ್ತಾನೆ. ಇದು ಅವನನ್ನು ಜನಪ್ರಿಯಗೊಳಿಸುತ್ತದೆ ಮತ್ತು ನೆರೆಹೊರೆಯಲ್ಲಿರುವ ಪೊಲೀಸ್ ಠಾಣೆಯಲ್ಲಿ ನಡೆಯುತ್ತಿರುವ ಮುಂದಿನ ದೊಡ್ಡ ದರೋಡೆಗಳನ್ನು ಪರಿಹರಿಸಲು ಇವನನ್ನು ಆಯ್ಕೆ ಮಾಡಲಾಗುತ್ತದೆ. ಒಂದು ದಿನ ಅವನ ಕಣ್ಣ ಎದುರಲ್ಲೇ ಲಾಕರ್ ಪೆಟ್ಟಿಗೆಯಲ್ಲಿ ಇದ್ದ ಚಿನ್ನ, ಹಣವೆಲ್ಲ ಕಾಣೆಯಾದಗ ಅವನು ಆತಂಕಗೊಳ್ಳುತ್ತಾನೆ. ದಿವಾಕರ ಮೊದಲು ಪಕ್ಷಿ ಸಾಕುವವನೊಬ್ಬನ್ನು ವಿಚಾರಿಸುತ್ತಾನೆ. ಅವನಿಂದ ಮರಕುಟಿಕ (ಯೋಗರಾಜ್ ಭಟ್)ನ ಬಗ್ಗೆ ತಿಳಿಯುತ್ತದೆ. ಮರಕುತಿಕನನ್ನು ವಿಚಾರಿಸಿದ ನಂತರ ಸೆಗಣಿ ಪಿಂಟೊವನ್ನು (ಸುಜಯ್ ಶಾಸ್ತ್ರಿ) ವಿಚಾರಿಸತ್ತಾನೆ. ನಂತರ ಪ್ರಕರಣವನ್ನು ಪರಿಹರಿಸುವಾಗ, ಆ ಪ್ರದೇಶದಲ್ಲಿ ಕಳ್ಳ ಭಟ್ಟಿ ಮಾರುವ ಕುಸುಮಾ (ಹರಿಪ್ರಿಯಾ) ಮೇಲೆ ಇವನಿಗೆ ಪ್ರೀತಿ ಆಗುತ್ತದೆ. ತನಿಖೆ ನಡೆಸುತ್ತ ನಡೆಸುತ್ತಾ ಕುಸುಮಾಳ ಮೇಲೆಯೇ ಇವನಿಗೆ ಅನುಮಾನ ಬರುತ್ತದೆ. ಠಾಣೆಗಳು ಕಳುವಾದ ಎಲ್ಲ ದಿನವೂ ಕುಸುಮ ಬೇರೆ ಬೇರೆ ಹೆಸರುಗಳಲ್ಲಿ ಅಲ್ಲಿಗೆ ದೂರು ನೀಡಲು ಬಂದಿರುತ್ತಾಳೆ. ಎಲ್ಲ ಚುಕ್ಕೆಗಳನ್ನು ಜೋಡಿಸುತ್ತ ಹೋದಾಗ ದಿವಾಕರನಿಗೆ ಸತ್ಯ ಗೋಚರಿಸುತ್ತದೆ. ಈ ಪ್ರಕರಣವನ್ನು ದಿವಾಕರ ಹೇಗೆ ಪರಿಹರಿಸುತ್ತಾನೆ ಎಂಬುದೇ ಈ ಚಿತ್ರದ ಸಾರಾಂಶ.
Untitled | |
---|---|
ಬಿ.ಅಜನೀಶ್ ಲೋಕನಾಥ್ ಚಿತ್ರಕ್ಕೆ ಹಿನ್ನಲೆ ಸಂಗೀತ ಮತ್ತು ಹಾಡುಗಳನ್ನು ಸಂಯೋಜಿಸಿದ್ದಾರೆ.[೭] ಹಾಡುಗಳಿಗೆ ಸಾಹಿತ್ಯವನ್ನು ಯೋಗರಾಜ್ ಭಟ್ ಮತ್ತು ರಘು ನಡುವಳ್ಳಿ ಅವರು ಬರೆದಿದ್ದಾರೆ.
ಹಾಡುಗಳು | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಗಾಯಕ(ರು) | ಸಮಯ |
1. | "ಏತಕೆ" | ಯೋಗರಾಜ್ ಭಟ್ | ವಿಜಯ್ ಪ್ರಕಾಶ್ | 04:07 |
2. | "ಆದಿ ಜ್ಯೋತಿ ಬನ್ ಯೋ" | ಜನಪದ | ಕಡಬಗೆರೆ ಮುನಿರಾಜು | 03:38 |
3. | "ರೇಟ್ರೋ ಕ್ಲಬ್" | ರಘು ನಡುವಳ್ಳಿ | ಸಂಗೀತ ರವೀಂದ್ರನಾಥನ್ | 03:33 |
4. | "ಆಡಿಯೋ ಟ್ರೇಲರ್" | ಬಿ. ಅಜನೀಶ್ ಲೋಕನಾಥ್ | 02:40 | |
ಒಟ್ಟು ಸಮಯ: | 13:54 |