ಬ್ಯಾಟಿಂಗ್‌ (ಕ್ರಿಕೆಟ್)

ಬ್ಯಾಟಿಂಗ್‌ನ ಮೂಲಭೂತ ಅಂಶಗಳು.
ಇಂಗ್ಲೆಂಡ್‌‌ ನ ಪರವಾಗಿ 2005ರ ಸಾಲಿನ ನ್ಯಾಟ್‌ವೆಸ್ಟ್‌ ಸರಣಿಯಲ್ಲಿ ಬ್ಯಾಟಿಂಗ್‌ ಮಾಡುತ್ತಿರುವ ಆಂಡ್ರ್ಯೂ ಸ್ಟಾಸ್‌
ಕ್ರಿಕೆಟ್ ಎಂಬ ಕ್ರೀಡೆಯಲ್ಲಿ, ಬ್ಯಾಟಿಂಗ್‌‌  ಎಂಬುದು   ಓಟ/ರನ್‌‌ಗಳನ್ನು ಗಳಿಸಲು ಅಥವಾ  ವಿಕೆಟ್‌‌ಅನ್ನು ಕಳೆದುಕೊಳ್ಳುವುದನ್ನು ತಪ್ಪಿಸಲು  ಕ್ರಿಕೆಟ್ ಬ್ಯಾಟಿ ‌ನೊಂದಿಗೆ  ಕ್ರಿಕೆಟ್ ಚೆಂಡನ್ನು  ಹೊಡೆಯುವ ಕ್ರಿಯೆ ಅಥವಾ ಕೌಶಲ್ಯವಾಗಿರುತ್ತದೆ . ಪ್ರಸ್ತುತ ಬ್ಯಾಟಿಂಗ್‌‌ಅನ್ನು ಮಾಡುತ್ತಿರುವ ಓರ್ವ ಆಟಗಾರನನ್ನು ಬ್ಯಾಟುಗಾರ/ಬ್ಯಾಟ್ಸ್‌ಮನ್‌ರೆಂದು ಕರೆಯಲಾಗುತ್ತದಾದರೆ, ಚೆಂಡನ್ನು ಹೊಡೆಯುವ ಕ್ರಿಯೆಯನ್ನು ಹೊಡೆತ/ಶಾಟ್‌  ಅಥವಾ ಬೀಸು/ಹೊಡೆತ ಎಂದು ಕರೆಯಲಾಗುತ್ತದೆ. ಬ್ಯಾಟುಗಾರ/ಬ್ಯಾಟ್ಸ್‌ಮನ್‌ ಅಥವಾ ವಿಶೇಷಜ್ಞ ಬ್ಯಾಟುಗಾರ/ಬ್ಯಾಟ್ಸ್‌ಮನ್‌  ಎಂಬ ಪದಗಳನ್ನು ಸಾರ್ವತ್ರಿಕವಾಗಿ ( e.g. ಬೌಲಿಂಗ್‌/ಚೆಂಡೆಸೆತದಲ್ಲಿ ವಿಶೇಷಜ್ಞರಾಗಿರುವ ಬೌಲರ್‌/ಚೆಂಡೆಸೆತಗಾರರ ವಿರುದ್ಧವಾಗಿ) ಬ್ಯಾಟಿಂಗ್‌ನಲ್ಲಿ ಪರಿಣತಿ ಹೊಂದಿದ ಆಟಗಾರರನ್ನು ವರ್ಣಿಸಲು ಕೂಡಾ ಬಳಸಲಾಗುತ್ತದೆ.

ಒಂದು ಇನ್ನಿಂಗ್ಸ್‌‌ನ ಅವಧಿಯಲ್ಲಿ ತಂಡದ ಇಬ್ಬರು ಬ್ಯಾಟುಗಾರ/ಬ್ಯಾಟ್ಸ್‌ಮನ್ನರು ಬ್ಯಾಟಿಂಗ್‌ ಮಾಡುತ್ತಾರೆ: ಬೌಲರ್‌/ಚೆಂಡೆಸೆತಗಾರನ ಪ್ರಸ್ತುತ ಎಸೆತವನ್ನು ಎದುರಿಸುವ ಆಟಗಾರನನ್ನು ಹೊಡೆತಗಾರ/ಸ್ಟ್ರೈಕರ್‌ನೆಂದು ಕರೆದರೆ ಮತ್ತೋರ್ವನನ್ನು ನಾನ್‌-ಸ್ಟ್ರೈಕರ್‌ ಎಂದು ಕರೆಯುವರು. ಓರ್ವ ಬ್ಯಾಟುಗಾರ/ಬ್ಯಾಟ್‌ಮನ್‌ ಔಟ್‌ ಆದಾಗ ಆತನ ಬದಲಿಗೆ ತಂಡದ ಮತ್ತೋರ್ವನನ್ನು ಕಳಿಸಲಾಗುತ್ತದೆ. ಇನ್ನಿಂಗ್ಸ್‌‌ನ ಕೊನೆಯವರೆಗೆ ಪ್ರಕ್ರಿಯೆಯು ಮುಂದುವರೆಯುತ್ತಾ ಹೋಗುತ್ತದೆ, ಆಗ ಮತ್ತೊಂದು ತಂಡವು ಬ್ಯಾಟಿಂಗ್‌ ಮಾಡುವ ಸರದಿಯನ್ನು ಹೊಂದುತ್ತದೆ.

ಬ್ಯಾಟಿಂಗ್‌ ತಂತ್ರಗಳು ಹಾಗೂ ಕಾರ್ಯನೀತಿಗಳು ನಡೆಯುತ್ತಿರುವ ಪಂದ್ಯದ ವಿಧ ಹಾಗೂ ಪಂದ್ಯದಲ್ಲಿನ ಸದ್ಯದ ಪರಿಸ್ಥಿತಿಗಳ ಮೇಲೆ ಆಧಾರಿತವಾಗಿರುತ್ತದೆ. ಬ್ಯಾಟುಗಾರ/ಬ್ಯಾಟ್ಸ್‌ಮನ್ನರ ಪ್ರಧಾನ ತವಕವು ತಮ್ಮ ವಿಕೆಟ್‌‌ಅನ್ನು ಕಳೆದುಕೊಳ್ಳದಿರುವುದು ಹಾಗೂ ಸಾಧ್ಯವಾದಷ್ಟು ಬೇಗ ಎಷ್ಟು ಸಾಧ್ಯವೋ ಅಷ್ಟು ಓಟಗಳನ್ನು ಕಲೆಹಾಕುವುದು. ಇವೆರಡೂ ಗುರಿಗಳು ಸಾಧಾರಣವಾಗಿ ಪರಸ್ಪರ ವೈರುದ್ಧ್ಯವನ್ನು ಹೊಂದಿವೆ - ಹೆಚ್ಚು ಓಟಗಳನ್ನು ಗಳಿಸಬೇಕೆಂದರೆ, ಹಲವು ಅಪಾಯಕರ ಹೊಡೆತಗಳನ್ನು ಕೂಡಾ ಆಡಬೇಕಾಗುತ್ತದೆ ತನ್ಮೂಲಕ ಬ್ಯಾಟುಗಾರ/ಬ್ಯಾಟ್‌ಮನ್‌ ತಮ್ಮ ವಿಕೆಟ್‌ಗಳನ್ನು ಕಳೆದುಕೊಳ್ಳಬೇಕಾದ ಸಾಧ್ಯತೆಗಳನ್ನು ಎದುರಿಸಬೇಕಾಗಿರುತ್ತದೆ. ಪ್ರಸ್ತುತ ಪರಿಸ್ಥಿತಿಯ ಮೇಲೆ ಆಧಾರಿತವಾಗಿ, ಬ್ಯಾಟುಗಾರ/ಬ್ಯಾಟ್ಸ್‌ಮನ್ನರು ತಮ್ಮ ವಿಕೆಟ್‌‌ಅನ್ನು ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ಓಟಗಳನ್ನು ಗಳಿಸುವ ಅನೇಕ ಅವಕಾಶಗಳನ್ನು ಬಿಟ್ಟುಕೊಡಬೇಕಾಗುತ್ತದೆ, ಇಲ್ಲವೇ ಸಾಧ್ಯವಾದಷ್ಟೂ ಬೇಗ ಆದಷ್ಟು ಹೆಚ್ಚು ಓಟಗಳನ್ನು ಗಳಿಸುವುದಕ್ಕಾಗಿ ಸಾಕೂಸಾಲದ ಎಚ್ಚರಿಕೆಗಳನ್ನು ಮಾತ್ರವೇ ವಹಿಸಿರಬೇಕಾಗುತ್ತದೆ.

ಇತರೆ ಎಲ್ಲಾ ಕ್ರಿಕೆಟ್‌‌ ಅಂಕಿಅಂಶಗಳ ಹಾಗೆಯೇ, ಬ್ಯಾಟಿಂಗ್‌ ಅಂಕಿಅಂಶಗಳು ಹಾಗೂ ದಾಖಲೆಗಳು ಆಟದ ಬಹು ಮುಖ್ಯವಾದ ಭಾಗವಾಗಿದ್ದು ಆಟಗಾರರ ಸಫಲತೆಯ ಬಗ್ಗೆ ಪರಿಮಾಣದ ಮಾಹಿತಿಯನ್ನು ನೀಡುತ್ತವೆ. ಬ್ಯಾಟಿಂಗ್‌ಗೆ ಸಂಬಂಧಪಟ್ಟಂತೆ ಪ್ರಮುಖ ಅಂಕಿಅಂಶವೆಂದರೆ ಬ್ಯಾಟಿಂಗ್‌ ಸರಾಸರಿಯಾಗಿದ್ದು, ಈ ಸರಾಸರಿ ಓಟಗಳ ಗಳಿಕೆಯು, ಬ್ಯಾಟುಗಾರ/ಬ್ಯಾಟ್‌ಮನ್‌ನು ತನ್ನ ವೃತ್ತಿಜೀವನದ ಅವಧಿಯಲ್ಲಿ ಗಳಿಸಿದ ಒಟ್ಟಾರೆಯ ಸರಾಸರಿಯೆಂದು ಪರಿಗಣಿಸಲಾಗುತ್ತದೆ. ಆತನು ಗಳಿಸಿದ ಓಟಗಳ ಮೊತ್ತವನ್ನು, ಆತನಾಡಿದ ಇನ್ನಿಂಗ್ಸ್‌‌ಗಳ ಸಂಖ್ಯೆಗಳ ಬದಲಿಗೆ, ಆತನು ಔಟ್‌ ಆದಷ್ಟು ಬಾರಿಯಿಂದ ಭಾಗಿಸುವ ಮೂಲಕ ಈ ಸಂಖ್ಯೆಯನ್ನು ಪಡೆಯಲಾಗುತ್ತದೆ. ನಿಯಮಿತ ಓವರ್‌ಗಳ ಕ್ರಿಕೆಟ್‌‌ ‌‌ನಲ್ಲಿ ಮತ್ತೊಂದು ಪ್ರಮುಖ ಅಂಕಿಅಂಶವೆಂದರೆ ಹೊಡೆತದ ದರ, ಅಂದರೆ ಬ್ಯಾಟುಗಾರ/ಬ್ಯಾಟ್‌ಮನ್‌ ತನ್ನ ಓಟಗಳನ್ನು ಗಳಿಸುವ ತೀವ್ರತೆಯ ದರವಾಗಿರುತ್ತದೆ.

ತಾವು ದಾಖಲಿಸಿದ ಬ್ಯಾಟಿಂಗ್‌ ದಾಖಲೆಗಳ ಸಂಖ್ಯೆಯಿಂದಾಗಿ, ಅದರಲ್ಲೂ ಕೆಲವನ್ನು 1930ರ ದಶಕದಷ್ಟು ಮುಂಚೆಯೇ ಸಾಧಿಸಿದ್ದು ಅಜೇಯರಾಗಿಯೇ ಉಳಿದಿದ್ದರಿಂದಾಗಿ, ಸರ್‌ ಡೊನಾಲ್ಡ್‌ ಬ್ರಾಡ್‌ಮನ್‌‌ರನ್ನು ಸಾರ್ವಕಾಲಿಕ ಅತ್ಯುತ್ತಮ ಬ್ಯಾಟುಗಾರ/ಬ್ಯಾಟ್‌ಮನ್‌ ಎಂದು ವ್ಯಾಪಕವಾಗಿ ಪರಿಗಣಿಸಲಾಗುತ್ತದೆ.ಆಧುನಿಕ ಯುಗದಲ್ಲಿ , ಸಚಿನ್‌ ತೆಂಡೂಲ್ಕರ್‌ರನ್ನು ಟೆಸ್ಟ್‌ ಪಂದ್ಯ ಹಾಗೂ ನಿಯಮಿತ ಓವರ್‌ಗಳ ವಿಧಗಳೆರಡರಲ್ಲೂ ಅವರು ಸಾಧಿಸಿದ ಬಹುತೇಕ ಸಂಖ್ಯೆಯ ಶತಕಗಳಿಂದಾಗಿ ಹಾಗೂ ಇತರೆ ದಾಖಲೆಗಳಲ್ಲಿ ಏಕ ದಿನ ಕ್ರಿಕೆಟ್‌‌ ‌‌ನಲ್ಲಿ ಅಜೇಯ 200 ಓಟಗಳ ಅತ್ಯಧಿಕ ಗಳಿಕೆಯೂ ಸೇರಿದಂತೆ ಟೆಸ್ಟ್‌ ಪಂದ್ಯ ಮತ್ತು ನಿಯಮಿತ ಓವರ್‌ಗಳ ವಿಧಗಳಲ್ಲಿ ಅವರು ಗಳಿಸಿದ ಬಹಳಷ್ಟು ಓಟಗಳಿಂದಾಗಿ ಅತ್ಯುತ್ತಮ ಬ್ಯಾಟುಗಾರ/ಬ್ಯಾಟ್‌ಮನ್‌ ಎಂದು ಪರಿಗಣಿಸಲಾಗುತ್ತದೆ.

ಬ್ಯಾಟಿಂಗ್‌ ಕೌಶಲ ಮತ್ತು ಹೊಡೆತದ ಶೈಲಿ

[ಬದಲಾಯಿಸಿ]
ಸಾಂಪ್ರದಾಯಿಕ ಕ್ರಿಕೆಟ್‌‌ ಹೊಡೆತಗಳ ಹೆಸರುಗಳು ಹಾಗೂ ಬಲಗೈ ಬ್ಯಾಟುಗಾರ/ಬ್ಯಾಟ್‌ಮನ್ನರಿಗೆ ಸಂಬಂಧಿಸಿದಂತೆ ಯಾವ ದಿಕ್ಕಿನಲ್ಲಿ ಅವನ್ನು ಹೊಡೆಯಲಾಗುತ್ತದೆ. ಕೇಂದ್ರ ಪ್ರದೇಶದಲ್ಲಿ ದಕ್ಷಿಣದೆಡೆಗೆ ಮುಖ ಮಾಡಿ ಬ್ಯಾಟುಗಾರ/ಬ್ಯಾಟ್‌ಮನ್‌ ನಿಂತಿದ್ದಾನೆ. ಈ ನಿಲುವುಗಳು ಎಡಗೈ ಆಟಗಾರರ ಸಂದರ್ಭದಲ್ಲಿ ಪ್ರತಿಬಿಂಬದ ಸ್ವರೂಪದಲ್ಲಿರುತ್ತದೆ.

ಸಮಯ ಕಳೆಯುತ್ತಿದ್ದ ಹಾಗೆ ಕ್ರಿಕೆಟ್‌‌ನ ಬೆಳವಣಿಗೆಯು ಆಟದಲ್ಲಿ ಬಹುತೇಕ ಆಟಗಾರರು ಬಳಸುವ ಪ್ರಮಾಣಿತ ಬ್ಯಾಟಿಂಗ್‌ ಕೌಶಲ ರೂಪುಗೊಳ್ಳುವುದಕ್ಕೆ ನಾಂದಿ ಹಾಡಿತು. ಈ ಸಂದರ್ಭದಲ್ಲಿ ಕೌಶಲವೆನ್ನುವುದರ ಅರ್ಥ ಬ್ಯಾಟುಗಾರ/ಬ್ಯಾಟ್‌ಮನ್‌ರ ನಿಲುವು ಚೆಂಡನ್ನು ಎಸೆಯುವ ಮುನ್ನ ಹಾಗೂ ಕ್ರಿಕೆಟ್‌‌ ನ ಹೊಡೆತವೊಂದನ್ನು ನಡೆಸುವಲ್ಲಿ ಕೈಗಳ,ಕಾಲುಗಳ, ತಲೆ ಹಾಗೂ ದೇಹದ ಚಲನೆಗಳನ್ನು ಒಳಗೊಂಡಿರುತ್ತದೆ. ತ್ವರಿತವಾಗಿ ಹೊಡೆತವನ್ನು ನಡೆಸಲು ಆಡಲು ಸೂಕ್ತವಾದ ಸರಿಯಾದ ನಿಲುವಿಗೆ ಬರುವುದು, ವಿಶೇಷವಾಗಿ ಚೆಂಡಿಗೆ ನೇರವಾಗಿ ತನ್ನ ತಲೆ ಹಾಗೂ ದೇಹವನ್ನು ಹೊಂದಿಸುವುದು, ಚೆಂಡು ಬಿದ್ದು ಮೇಲೇರುವ ಸ್ಥಳಕ್ಕೆ ಸ್ವಲ್ಪ ಹಿಂದೆ ಕಾಲಿಟ್ಟು /ಬ್ಯಾಟನ್ನು ಚೆಂಡಿನ ಕಡೆಗೆ ಬೀಸಿ ನಿರ್ದಿಷ್ಟವಾದ ಹೊಡೆತವನ್ನು ನೀಡಲು ಅಗತ್ಯವಾದ ನಿಖರವಾದ ಸಮಯದಲ್ಲಿ ಚೆಂಡಿಗೆ ತಗಲುವಂತೆ ಮಾಡುವುದು ಮುಂತಾದವು ಉತ್ತಮ ಕೌಶಲಗಳೆನಿಸಿಕೊಳ್ಳುತ್ತವೆ.

ನಿರ್ದಿಷ್ಟ ಎಸೆತವೊಂದಕ್ಕೆ ಬ್ಯಾಟುಗಾರ/ಬ್ಯಾಟ್‌ಮನ್‌ನ ವಾಸ್ತವಿಕ ಚಲನೆಯು ಯಾವ ರೀತಿಯ ಹೊಡೆತವನ್ನು ಪ್ರಯತ್ನಿಸಲಾಗಿತ್ತು ಎಂಬುದರ ಮೇಲೆ ಆಧಾರಿತವಾಗುತ್ತದೆ. ಮುಂಗಾಲಿಟ್ಟು ಹೊಡೆಯುವ ಹೊಡೆತಗಳನ್ನು ಮುಂಗಾಲಿನ ಮೇಲೆ ಭಾರವನ್ನು ಹಾಕಿ (ಬಲಗೈ ಆಟಗಾರರಿಗೆ ಎಡಗಾಲುಗಳು) ಆಡಬೇಕಾಗುತ್ತದೆ ಹಾಗೂ ಸಾಧಾರಣವಾಗಿ ಇಂತಹಾ ಹೊಡೆತಗಳನ್ನು ಚೆಂಡು ಬ್ಯಾಟುಗಾರ/ಬ್ಯಾಟ್‌ಮನ್‌ನರ ಕಡೆಗೆ ಎಗರಿ ಬಂದಾಗ ಆಡಲಾಗುತ್ತದಾದರೆ, ಹಿಂಗಾಲಿನ ಹೊಡೆತಗಳನ್ನು ಹಿಂಗಾಲಿನ ಮೇಲೆ ಭಾರವನ್ನು ಹಾಕಿ ಆಡಲಾಗುತ್ತದೆ, ಸಾಧಾರಣವಾಗಿ ಇಂತಹಾ ಹೊಡೆತವನ್ನು ಕಡಿಮೆ ಅಂತರದಲ್ಲಿ ಹಾಕಿದ ಎಸೆತಕ್ಕೆ ಬೀಸಲಾಗುತ್ತದೆ. ಹೊಡೆತಗಳನ್ನು ಶೃಂಗೀಯ/ಲಂಬವಾದ ಬ್ಯಾಟ್‌ ಹೊಡೆತಗಳು ಎಂದೂ ಕರೆಯಬಹುದಾಗಿದ್ದು, ಅದರಲ್ಲಿ ಬ್ಯಾಟನ್ನು ಲಂಬವಾಗಿ ಚೆಂಡಿನ ಕಡೆಗೆ ಬೀಸಿ (e.g. ಒಂದು ಬೀಸುಹೊಡೆತವನ್ನು ಆಡುವಾಗ ಅಥವಾ ಕಾಲಿನ ಕಡೆ ಓರೆ ಹೊಡೆತ), ಅಥವಾ ಸಮತಲೀಯ ಅಥವಾ ಬ್ಯಾಟನ್ನು ಓರೆಯಾಗಿಟ್ಟುಕೊಂಡು ಹೊಡೆಯುವ ಹೊಡೆತಗಳು, ಇದರಲ್ಲಿ ಬ್ಯಾಟನ್ನು ಸಮತಲೀಯವಾಗಿ ಚೆಂಡಿನೆಡೆಗೆ ಬೀಸಲಾಗಿರುತ್ತದೆ (e.g. ಆಡುವಾಗ ಎಳೆತದ ಅಥವಾ ಕೊಚ್ಚು ಹೊಡೆತಗಳು).

ಓರ್ವ ಬ್ಯಾಟುಗಾರ/ಬ್ಯಾಟ್‌ಮನ್‌ ಚೆಂಡನ್ನು ಎಲ್ಲಿ ಅಥವಾ ಹೇಗೆ ಹೊಡೆಯಬಹುದು ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಪರಿಮಿತಿ ಇಲ್ಲವಾದರೂ, ಉತ್ತಮ ಕೌಶಲದ ಬೆಳವಣಿಗೆಯು ನಿರ್ದಿಷ್ಟ ವಿಧವಾದ ಹೊಡೆತಗಳಿಗೆ ಆಡಬೇಕಾದ ಪ್ರಮಾಣಿತ ಅಥವಾ ಶಾಸ್ತ್ರಸಮ್ಮತ ಕ್ರಿಕೆಟ್‌‌ ಹೊಡೆತಗಳನ್ನು ರೂಪಿಸುವಲ್ಲಿ ಜೊತೆಜೊತೆಯಾಗಿ ಸಾಗಿದೆ. ಇಂತಹಾ "ನಿಷ್ಕೃಷ್ಟವಾದ" ಹೊಡೆತಗಳು ಹಲವು ತರಬೇತಿ ಪುಸ್ತಕಗಳಲ್ಲಿ ಕಂಡುಬರುವ ಪ್ರಮಾಣಿತ ಮಾಹಿತಿಗಳಾಗಿವೆ.

ನಿಯಮಿತ ಓವರ್‌ಗಳ ಕ್ರಿಕೆಟ್‌‌ನ ಉದಯವು, ಅದರಲ್ಲಿನ ತೀವ್ರಗತಿಯ ಓಟಗಳಿಕೆಯ ಮೇಲಿನ ಪ್ರಾಮುಖ್ಯತೆಯಿಂದಾಗಿ ಕ್ಷೇತ್ರರಕ್ಷಣೆಗಾರರು ಇಲ್ಲದ ತೆರಪು ಪ್ರದೇಶದಲ್ಲಿ ಶಾಸ್ತ್ರಸಮ್ಮತವಲ್ಲದ ರೀತಿಯಲ್ಲಿ ಚೆಂಡನ್ನು ಹೊಡೆಯುವಿಕೆಗಳು ಹೆಚ್ಚಾಗುತ್ತಲಿವೆ. ಶಾಸ್ತ್ರಸಮ್ಮತವಲ್ಲದ ಹೊಡೆತಗಳು ಪ್ರಾತಿನಿಧಿಕವಾಗಿ ಯಾವಾಗಲೂ ಅಲ್ಲವಾದರೂ ಉತ್ತಮ ಬ್ಯಾಟಿಂಗ್‌ ಕೌಶಲದ ಕೆಲವು ಮಗ್ಗಲುಗಳನ್ನು ಹೊರತುಪಡಿಸುವುದರಿಂದಾಗಿ ಶಾಸ್ತ್ರಸಮ್ಮತ ಹೊಡೆತಗಳಿಗಿಂತ ಹೆಚ್ಚು ಅಪಾಯಕಾರಿಯಾಗಿರುತ್ತವೆ.

ಬಿಲ್‌ ವುಡ್‌ಫುಲ್‌ರ ಹೊಡೆತದ ಭಂಗಿ.

ಹೊಡೆತದ ಭಂಗಿ

[ಬದಲಾಯಿಸಿ]

ತನ್ನೆಡೆಗೆ ಎಸೆಯಲಾದ ಚೆಂಡನ್ನು ಹೊಡೆಯಲು ಬ್ಯಾಟುಗಾರ/ಬ್ಯಾಟ್‌ಮನ್‌ ನಿಲ್ಲುವ ನಿಲುವನ್ನು ಹೊಡೆತದ ಭಂಗಿ ಎನ್ನಲಾಗುತ್ತದೆ. "ಹಿತಕರವಾದ ಒತ್ತಡರಹಿತ ಹಾಗೂ ಸಮ ಮನಸ್ಥಿತಿಯಲ್ಲಿ", ಕ್ರೀಸ್‌ನ ಎರಡೂ ಭಾಗಗಳೆಡೆ ವಿಸ್ತರಿಸುವಂತೆ ಕಾಲುಗಳನ್ನು 20 cm ಅಂತರದಲ್ಲಿ ಸಮಾಂತರದಲ್ಲಿಟ್ಟು ನಿಲ್ಲುವ ನಿಲುವು ಆದರ್ಶ ನಿಲುವಾಗಿರುತ್ತದೆ. ಅಷ್ಟೇ ಅಲ್ಲದೇ, ಮುಂಬದಿಯ ಭುಜವು ವಿಕೆಟ್‌‌ನೆಡೆಗೆ ಬಾಗಿರಬೇಕು, ಮುಖವು ಬೌಲರ್‌/ಚೆಂಡೆಸೆತಗಾರನ ಕಡೆಗಿರಬೇಕು ಹಾಗೂ ದೇಹದ ತೂಕವು ಸಮಾನವಾಗಿ ಹಂಚಿಕೊಂಡಿರಬೇಕು ಮತ್ತು ಬ್ಯಾಟ್‌ ಹಿಂಬದಿಯ ಹೆಬ್ಬೆಟ್ಟಿನ ಸನಿಹವಿರಬೇಕು.[]

ಈ ಆದರ್ಶಪ್ರಾಯವಾದ ಮಗ್ಗಲಿನ ನಿಲುವು ಬಹುತೇಕ ಸರ್ವೇಸಾಮಾನ್ಯವಾದ ನಿಲುವಾರೂ, ಶಿವನರೇನ್‌ ಚಂದರ್‌ಪಾಲ್‌‌ನಂತಹಾ ಕೆಲವು ಅಂತರರಾಷ್ಟ್ರೀಯ ಬ್ಯಾಟುಗಾರ/ಬ್ಯಾಟ್ಸ್‌ಮನ್ನರು ಒಂದು "ಓಪನ್‌/ಮುಕ್ತ" ಅಥವಾ "ಸ್ಕ್ವೇರ್‌ ಆನ್‌" ನಿಲುವುಗಳನ್ನು ಬಳಸುತ್ತಾರೆ.

ಲೀವ್‌/ತಪ್ಪಿದ ಚೆಂಡು ಮತ್ತು ಬ್ಲಾಕ್‌/ತಡೆಹೊಡೆತ

[ಬದಲಾಯಿಸಿ]
ಚಿತ್ರ:Trescodriving.jpg
ಲೀವ್‌/ತಪ್ಪಿದ ಚೆಂಡು. ಬ್ಯಾಟುಗಾರ/ಬ್ಯಾಟ್‌ಮನ್‌ನ ಮುಖವು ಚೆಂಡು ಪುಟಿದೆದ್ದ ಸ್ಥಳದ ಕಡೆಗೆ ಗಮನವನ್ನು ಕೇಂದ್ರೀಕರಿಸಿರುವುದನ್ನು ಗಮನಿಸಿ. ಬ್ಯಾಟ್‌ ಮತ್ತು ಕೈಗಳನ್ನು ಚೆಂಡು ಹಾದು ಹೋಗುವ ಪಥದ ಸಂಪೂರ್ಣ ಆಚೆಗೆ ಇಟ್ಟುಕೊಳ್ಳಲಾಗಿರುತ್ತದೆ.

ಬ್ಯಾಟುಗಾರ/ಬ್ಯಾಟ್‌ಮನ್‌ ದೈಹಿಕವಾಗಿ ಚೆಂಡನ್ನು ಆಡದಿದ್ದರೂ ಅಥವಾ ಅದು ಹಾದು ಹೋಗುವಾಗ ಹಾದಿಗೆ ಅಡ್ಡಬರದಿದ್ದರೂ ಕೆಲವು ಬಾರಿ ಲೀವ್‌/ತಪ್ಪಿದ ಚೆಂಡು ಅನ್ನು ಕೂಡಾ ಕ್ರಿಕೆಟ್‌‌ ಹೊಡೆತವನ್ನಾಗಿ ಪರಿಗಣಿಸಲಾಗುತ್ತದೆ. ಹೊಡೆತವೊಂದನ್ನು ಪ್ರಯತ್ನಿಸುವ ಮುನ್ನ ಮೊದಲ ಕೆಲವು ಎಸೆತಗಳನ್ನು ಪಡೆಯುವ ಅವಧಿಯಲ್ಲಿ ಮೈದಾನ/ಪಿಚ್‌ನ ಪರಿಸ್ಥಿತಿಯನ್ನು ಹಾಗೂ ಚೆಂಡೆಸೆತ/ಬೌಲಿಂಗ್‌ನ ವೈಖರಿಯನ್ನು ಅಂದಾಜಿಸಲು ತಮಗೆ ಸಮಯವನ್ನು ಪಡೆದುಕೊಳ್ಳಲು ಸಂಭವನೀಯವಾಗಿ ಬ್ಯಾಟುಗಾರ/ಬ್ಯಾಟ್ಸ್‌ಮನ್ನರು ಲೀವ್‌/ತಪ್ಪಿದ ಚೆಂಡುಗಳನ್ನು ಬಳಸುತ್ತಾರೆ. ಎಸೆತವೊಂದನ್ನು ಬಿಟ್ಟುಬಿಡುವುದು ಕೇವಲ ವಿವೇಚನೆ ಮತ್ತು ಕೌಶಲಗಳಿಗೆ ಸಂಬಂಧಪಟ್ಟ ವಿಚಾರವಾಗಿರುತ್ತದೆ. ಬ್ಯಾಟುಗಾರ/ಬ್ಯಾಟ್‌ಮನ್‌ನು ಆಗಲೂ ಸಹಾ ಚೆಂಡನ್ನು ಸನಿಹದಿಂದಲೇ ಗಮನಿಸಿ ಅದು ತನ್ನನ್ನು ಅಥವಾ ವಿಕೆಟ್‌‌ ಅನ್ನು ತಗಲುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕಾಗಿರುತ್ತದೆ; ಆತನು ಆಕಸ್ಮಿಕವಾಗಿ ತಗಲಿ ಔಟ್‌ ಆಗಬಹುದಾದ ಸಾಧ್ಯತೆ ಉಂಟಾಗದಂತೆ ತನ್ನ ಬ್ಯಾಟ್‌ ಅಥವಾ ಕೈಗಳು ಚೆಂಡು ಹಾದು ಹೋಗುವ ಪಥದಲ್ಲಿ ಬರದಂತೆ ಖಚಿತಪಡಿಸಿಕೊಳ್ಳಬೇಕು.

ಉದ್ದವಾದ ಬೀಸುಗಾಲು ಹಾಕಿರುವ, ಓರ್ವ ಬ್ಯಾಟುಗಾರ/ಬ್ಯಾಟ್‌ಮನ್‌ನು ಮುಂಭಾಗದ ರಕ್ಷಣಾತ್ಮಕ ಹೊಡೆತದೊಂದಿಗೆ ಚೆಂಡನ್ನು ತಡೆಯುತ್ತಿದ್ದಾನೆ.

ಬ್ಲಾಕ್‌‌/ತಡೆಹೊಡೆತ ಬೀಸುವಿಕೆಯು ಸಾಧಾರಣವಾಗಿ ಬ್ಯಾಟುಗಾರ/ಬ್ಯಾಟ್‌ಮನ್‌ನ ದೇಹ ಅಥವಾ ವಿಕೆಟ್‌‌ಗೆ ತಗಲದಂತೆ ಚೆಂಡನ್ನು ತಡೆಯಲು ಯೋಜಿಸಿದ ಶುದ್ಧಾಂಗವಾಗಿ ರಕ್ಷಣಾತ್ಮಕವಾದ ಹೊಡೆತವಾಗಿರುತ್ತದೆ. ಈ ಹೊಡೆತಕ್ಕೆ ಯಾವುದೇ ರೀತಿಯ ಬಲಪ್ರಯೋಗದ ಅವಶ್ಯಕತೆ ಇರುವುದಿಲ್ಲ ಹಾಗೂ ಸಾಧಾರಣವಾಗಿ ಲಘುವಾದ ಅಥವಾ "ಮೆದುವಾದ" ಕೆಳಭಾಗದ ಕೈಹಿಡಿತದೊಂದಿಗೆ ವಿಕೆಟ್‌‌ನ ಕಡೆಗೆ ಹೋಗುತ್ತಿರುವ ಚೆಂಡನ್ನು ತಡೆಯುವಷ್ಟು ಮಾತ್ರವೇ ಆಡಲಾಗುತ್ತದೆ. ಮುಂಗಾಲಿಟ್ಟುಕೊಂಡು ಆಡಲಾಗುವ ಬ್ಲಾಕ್‌‌/ತಡೆಹೊಡೆತವನ್ನು ಮುಂಭಾಗದ ರಕ್ಷಣಾತ್ಮಕ ಆಟ ವೆಂದು ಕರೆಯಲಾಗುವುದಾದರೆ ಹಿಂಗಾಲಿಟ್ಟುಕೊಂಡು ಆಡಲಾಗುವ ಆಟವನ್ನು ಹಿಂಭಾಗದ ರಕ್ಷಣಾತ್ಮಕ ಆಟ ವೆಂದೂ ಕರೆಯಲಾಗುತ್ತದೆ. ಇಂತಹಾ ಹೊಡೆತಗಳನ್ನು ಓಟಗಳನ್ನು ಗಳಿಸಲು ಕೂಡಾ, ಬ್ಲಾಕ್‌‌/ತಡೆಹೊಡೆತವನ್ನು ಚೆಂಡು ಕ್ಷೇತ್ರದಲ್ಲಿನ ಖಾಲಿ ಭಾಗಗಳೆಡೆ ಹೋಗುವಂತೆ ಬದಲಿಸಿ ಆಡಬಹುದಾಗಿರುತ್ತದೆ, ಅಂತಹಾ ಬ್ಲಾಕ್‌‌/ತಡೆಹೊಡೆತವನ್ನು "ತಳ್ಳುಹೊಡೆತ/ಪುಷ್‌" ಎಂದು ಕರೆಯಲಾಗುತ್ತದೆ. ಬ್ಯಾಟುಗಾರ/ಬ್ಯಾಟ್‌ಮನ್ನರು ಹೊಡೆತಗಳನ್ನು ಬದಲಿಸಿ ಆಡುವ ಸಾಧಾರಣ ವೈಖರಿಗಳಲ್ಲಿ ಚೆಂಡನ್ನು ತಳ್ಳಿದಂತೆ ಹೊಡೆಯುವುದು ಕೂಡಾ ಒಂದಾಗಿದೆ.

ಚೆಂಡು ತಪ್ಪಿಸುವಿಕೆ ಹಾಗೂ ಬ್ಲಾಕ್‌‌/ತಡೆಹೊಡೆಯುವಿಕೆಗಳನ್ನು ಸಾಧ್ಯವಾದಷ್ಟು ಬೇಗ ಓಟಗಳನ್ನು ಗಳಿಸುವ ಅನಿವಾರ್ಯತೆ ಇಲ್ಲದಿರುವುದರಿಂದ, ಬ್ಯಾಟುಗಾರ/ಬ್ಯಾಟ್‌ಮನ್‌ನಿಗೆ ಯಾವ ರೀತಿಯ ಹೊಡೆತಗಳು ಬೇಕೆಂದು ಆಯ್ಕೆ ಮಾಡುವ ಅವಕಾಶ ಇರುವುದರಿಂದ ಪ್ರಥಮ ದರ್ಜೆಯ ಕ್ರಿಕೆಟ್‌‌ನಲ್ಲಿ ಅನೇಕ ವೇಳೆ ಬಳಸಲಾಗುತ್ತದೆ.

ಚಿತ್ರ:Batsmandrivesballonbat.JPG
ಓರ್ವ ಬ್ಯಾಟುಗಾರ/ಬ್ಯಾಟ್‌ಮನ್‌ನು ಮುಂಗಾಲಿನಿಂದ ಆಚೆಗೆ ಕವರ್‌ ಡ್ರೈವ್‌ ಹೊಡೆತವನ್ನು ಆಡುತ್ತಿದ್ದಾನೆ ಬ್ಯಾಟುಗಾರ/ಬ್ಯಾಟ್‌ಮನ್ನನ ಹೊಡೆತದ ಭಂಗಿಯನ್ನು ಹಾಗೂ ಆತನ ಕೈಗಳು, ಕಾಲುಗಳು,ದೇಹ ಹಾಗೂ ಮುಖದ ನಿಲುವುಗಳನ್ನು ಗಮನಿಸಿ.

ಬೀಸು ಹೊಡೆತ

[ಬದಲಾಯಿಸಿ]

ಬೀಸು ಹೊಡೆತ ವೆನ್ನುವುದು ಚೆಂಡಿನ ನೇರಕ್ಕೆ ಸರಿಯಾಗಿ ಲಂಬವಾದ ಕಮಾನಿನ ಆಕಾರದಲ್ಲಿ ಬ್ಯಾಟ್‌ಅನ್ನು ಬೀಸಿ ಬ್ಯಾಟುಗಾರ/ಬ್ಯಾಟ್‌ಮನ್‌ನ ಎದುರಿಗೆ ಬಂದ ಚೆಂಡನ್ನು ಮೈದಾನದಲ್ಲಿ ಮುಂದಕ್ಕೆ ಹೋಗುವಂತೆ ಬ್ಯಾಟನ್ನು ನೇರವಾಗಿಟ್ಟು ಆಡುವ ಹೊಡೆತವಾಗಿರುತ್ತದೆ. ಚೆಂಡು ಹೋಗುವ ದಿಕ್ಕನ್ನನುಸರಿಸಿ ಬೀಸು ಹೊಡೆತವನ್ನು ಕವರ್‌ ಡ್ರೈವ್‌ (ಕವರ್‌ ಕ್ಷೇತ್ರರಕ್ಷಣಾ ಸ್ಥಾನದೆಡೆಗೆ ಹೊಡೆಯುವುದು, ಆಫ್‌ ಡ್ರೈವ್‌ (ಮಿಡ್‌-ಆಫ್‌ನೆಡೆಗೆ ), ನೇರ ಬೀಸು ಹೊಡೆತ (ಬೌಲರ್‌/ಚೆಂಡೆಸೆತಗಾರನ್ನು ದಾಟಿ ಹೋಗುವ ಹಾಗೂ ಕೆಲವೊಮ್ಮೆ ಮಿಡ್‌ ಆನ್‌ನ ಕಡೆಗೆ ), ಆನ್‌ ಡ್ರೈವ್‌ (ದೂರದಲ್ಲಿ ಮಿಡ್‌ ಆನ್‌ ಹಾಗೂ ಮಿಡ್‌ ವಿಕೆಟ್‌‌ಗಳ ಕಡೆಗೆ) ಅಥವಾ ಸ್ಕ್ವೇರ್‌ ಡ್ರೈವ್‌ (ಪಾಯಿಂಟ್‌ನ ಕಡೆಗೆ ) ಎಂಬ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಬೀಸು ಹೊಡೆತಗಳನ್ನು ಮುಂಗಾಲು ಹಾಗೂ ಹಿಂಗಾಲು ಎರಡರಲ್ಲೂ ಆಡಬಹುದಾದರೂ, ಹಿಂಗಾಲಿನ ಬೀಸುಹೊಡೆತಗಳಲ್ಲಿ ಚೆಂಡಿನ ನೇರಕ್ಕೆ ಬೀಸುವುದು ಕಷ್ಟಕರವಾಗಿರುತ್ತದೆ.

ಓರ್ವ ಬ್ಯಾಟುಗಾರ/ಬ್ಯಾಟ್‌ಮನ್ನನು ಹಿಂಗಾಲಿನಿಂದ ದೂರಕ್ಕೆ ಕೊಚ್ಚು ಹೊಡೆತವೊಂದನ್ನು ಹೊಡೆಯುತ್ತಿದ್ದಾನೆ.ಬ್ಯಾಟುಗಾರ/ಬ್ಯಾಟ್‌ಮನ್ನನ ತೂಕ ಹಾಗೂ ಸಮತೋಲನವನ್ನು ಆತನ ಹಿಂಗಾಲಿನ (ಬಲಗಾಲಿನ) ಮೇಲೆ ಹಾಕಲಾಗುತ್ತಿದೆ ಎಂಬುದನ್ನು ಗಮನಿಸಿ.

ಕೊಚ್ಚು ಹೊಡೆತ

[ಬದಲಾಯಿಸಿ]

ಕೊಚ್ಚು ಹೊಡೆತ ವೆಂದರೆ ಕಾಲಿನ ಸನಿಹಕ್ಕೆ ಹಾಕಿದ ಚೆಂಡನ್ನು ಆಡುವಾಗ ಬಲಗಡೆಗೆ ಬ್ಯಾಟನ್ನು ದೂರವಾಗಿಟ್ಟುಕೊಂಡು ಹೊಡೆಯುವ ಓರೆ ಹೊಡೆತವಾಗಿರುತ್ತದೆ. ಚೆಂಡು ಪಕ್ಕಕ್ಕೆ ಬರುವಾಗ ಅಥವಾ ದಾಟಿಹೋಗುವಾಗಲಷ್ಟೇ ಬ್ಯಾಟುಗಾರ/ಬ್ಯಾಟ್‌ಮನ್‌ ಅದನ್ನು ಹೊಡೆಯುವ ಪ್ರಯತ್ನ ಮಾಡುವುದರಿಂದ ಆತನು ವಸ್ತುತಃ ತನ್ನ ಕಡೆಯಿಂದ ಯಾವ ಪ್ರಯತ್ನವನ್ನು ಮಾಡುವುದು ಬೇಕಿರದೇ ಕೇವಲ ಚೆಂಡನ್ನು ಬೇರೆಡೆಗೆ ತಿರುಗಿಸಲು ಬೌಲರ್‌/ಚೆಂಡೆಸೆತಗಾರರ ವೇಗವನ್ನು ಬಳಸಬೇಕಿರುತ್ತದೆ. ಸ್ಕ್ವೇರ್‌ ಕಟ್‌ ಕೊಚ್ಚು ಹೊಡೆತ ವು ವಿಕೆಟ್‌‌ ನಿಂದ (ಪಾಯಿಂಟ್‌ನ ಕಡೆಗೆ) 90 ಡಿಗ್ರಿಗಳ ಸಮೀಪಕ್ಕೆ ಬಲಬದಿಗೆ ಬೀಸುವ ಹೊಡೆತವಾಗಿರುತ್ತದೆ. ಲೇಟ್‌ ಕಟ್‌/ತಡವಾದ ಕೊಚ್ಚು ಹೊಡೆತ ವನ್ನು ಚೆಂಡು ಬ್ಯಾಟುಗಾರ/ಬ್ಯಾಟ್‌ಮನ್‌ನ ದೇಹದ ಬಳಿ ಬರುತ್ತಿದ್ದಂತೆ ಅಥವಾ ಅದನ್ನು ದಾಟುತ್ತಿದ್ದಂತೆ ಆಡಲಾಗುತ್ತದಲ್ಲದೇ ಮೂರನೇ ವ್ಯಕ್ತಿಯೆಡೆಗೆ ಅದನ್ನು ಹೊಡೆಯಲಾಗುತ್ತದೆ. ಕೊಚ್ಚು ಹೊಡೆತವನ್ನು ಸಾಮಾನ್ಯವಾಗಿ ಹಿಂಗಾಲಿನಿಂದ ಆಡಲಾಗುತ್ತದಾದರೂ, ಕೆಲವೊಮ್ಮೆ ನಿಧಾನವಾದ ಚೆಂಡೆಸೆತವನ್ನು ಆಡುವಾಗ ಮುಂಗಾಲಿಟ್ಟು ಬಲಬದಿಗೆ ಬೀಸುವುದರ ಮೂಲಕ ಕೂಡಾ ಆಡಲಾಗುತ್ತದೆ. ರಕ್ಷಣಾ ಕೌಶಲವನ್ನು ಹೊರತುಪಡಿಸಿ, ಕೊಚ್ಚು ಹೊಡೆತವನ್ನು ಸಾಧಾರಣವಾಗಿ ಬ್ಯಾಟುಗಾರ/ಬ್ಯಾಟ್‌ಮನ್‌ನು ಪಡೆದುಕೊಳ್ಳಬೇಕಾದ ಬಹು ಪ್ರಮುಖ ಹೊಡೆತದ ಕೌಶಲ್ಯವೆಂದು ಪರಿಗಣಿಸಲಾಗಿದೆ. ಕೊಚ್ಚು ಹೊಡೆತವನ್ನು ಬ್ಯಾಟಿನ ಅಗಲಭಾಗವು ಅಧೋಮುಖವಾಗಿ ಚೆಂಡನ್ನು ನೆಲಕ್ಕೆ ತಾಗಿಸುವಂತೆ ಹೊರಳಿಸುವ ಮೂಲಕ ಆಡಬೇಕಾಗಿರುತ್ತದೆ. ತೆರೆದ ಮುಖಭಾಗದ ಬ್ಯಾಟ್‌ನ (ಬ್ಯಾಟ್‌ನ ಮುಖಭಾಗ ಬೌಲರ್‌/ಚೆಂಡೆಸೆತಗಾರನೆಡೆಗೆ ಮಾಡಿದ ಭಂಗಿ) ಮೂಲಕ ನೀಡಿದ ಅಕಾಲಿಕವಾದ ಕೊಚ್ಚು ಹೊಡೆತವು ಸಾಧಾರಣವಾಗಿ ಚೆಂಡನ್ನು ಮೇಲೇರುವಂತೆ ಮಾಡಿ ಬ್ಯಾಟುಗಾರ/ಬ್ಯಾಟ್‌ಮನ್‌ ಕ್ಯಾಚ್‌ ಕೊಡುವಂತಹಾ ಸನ್ನಿವೇಶ ಸೃಷ್ಟಿಸುತ್ತದೆ. ನಿಯಮಬದ್ಧತೆಯವರು ಸಾಧಾರಣವಾಗಿ ಬೀಸು ಹೊಡೆತಕ್ಕೆ ಮೊರೆ ಹೋದರೂ, ಸರಿಯಾದ ರೀತಿಯಲ್ಲಿ ನೀಡಿದ ಕೊಚ್ಚು ಹೊಡೆತವು ನಿಶ್ಚಯವಾಗಿಯೂ ಕ್ರಿಕೆಟ್‌‌ನ ಅತ್ಯಂತ ಸುಂದರ ಹೊಡೆತವಾಗಿರುತ್ತದೆ.

ಎಡ ಹೊಡೆತ ಮತ್ತು ಕೊಕ್ಕೆ ಹೊಡೆತ

[ಬದಲಾಯಿಸಿ]
ಎಡ ಹೊಡೆತವನ್ನು ಆಡುತ್ತಿರುವ ರಿಕಿ ಪಾಂಟಿಂಗ್‌.

ಎಡ ಹೊಡೆತ ಎಂಬುದು ಬ್ಯಾಟ್‌ಅನ್ನು ಓರೆಯಾಗಿಟ್ಟುಕೊಂಡು ಹೊಡೆಯುವ ನಡುವಿನೆತ್ತರಕ್ಕೆ ಪುಟಿದು ಬರುವ ಚೆಂಡನ್ನು ಬ್ಯಾಟ್‌ ದೇಹದ ಮುಂದೆ ಸಮತಲೀಯ ಕಮಾನಿನ ರೂಪದಲ್ಲಿ ಬೀಸಿ ಮಿಡ್‌-ವಿಕೆಟ್‌‌ ಅಥವಾ ಸ್ಕ್ವೇರ್‌ ಲೆಗ್‌ನ ಕಡೆಗೆ ಎಡಬದಿಗೆ ಎಳೆದು ನೀಡುವ ಹೊಡೆತ ವಾಗಿರುತ್ತದೆ. ಕೊಕ್ಕೆ ಹೊಡೆತ ಎಂಬ ಪದಪುಂಜವನ್ನು ಬ್ಯಾಟುಗಾರ/ಬ್ಯಾಟ್‌ಮನ್‌ನ ಎದೆಯ ಕಡೆಗೆ ಅಥವಾ ಎದೆಯ ಮೇಲಕ್ಕೆ ಪುಟಿದು ಬರುವ ಚೆಂಡಿಗೆ ಬೀಸುವ ಹೊಡೆತವನ್ನು ಹೆಸರಿಸಲು ಬಳಸಲಾಗುತ್ತದೆ, ಆದ್ದರಿಂದ ಬ್ಯಾಟುಗಾರ/ಬ್ಯಾಟ್‌ಮನ್‌ನು "ಕೊಕ್ಕೆ ಹೊಡೆತವನ್ನು " ಸ್ಕ್ವೇರ್‌ ಲೆಗ್‌ನ ಹಿಂಭಾಗದಲ್ಲಿ ಚೆಂಡು ನೆಲದ ಮೇಲೆಯೇ ಅಥವಾ ಮೇಲೇರುವಂತೆ ಹೊಡೆದಿರುತ್ತಾರೆ. ಎಡ ಹೊಡೆತ ಹಾಗೂ ಕೊಕ್ಕೆ ಹೊಡೆತಗಳನ್ನು ಮುಂಗಾಲಿನಲ್ಲಿ ಅಥವಾ ಹಿಂಗಾಲಿನಲ್ಲಿ ಆಡಬಹುದಾಗಿದ್ದು, ಅದರಲ್ಲಿ ಹಿಂಗಾಲಿಟ್ಟುಕೊಂಡು ಆಡುವುದು ಹೆಚ್ಚು ಸಾಮಾನ್ಯವಾಗಿರುತ್ತದೆ.

ಎಡಬದಿಯ ಓರೆಹೊಡೆತ

[ಬದಲಾಯಿಸಿ]

ಎಡಬದಿಯ ಓರೆಹೊಡೆತ ಎಂಬುದು ಬ್ಯಾಟನ್ನು ನೇರವಾಗಿಟ್ಟುಕೊಂಡು ಬೀಸುವ ಒಂದು ಸೂಕ್ಷ್ಮವಾದ ಹೊಡೆತವಾಗಿದ್ದು ಸ್ವಲ್ಪಮಟ್ಟಿಗೆ ಎಡಬದಿಗೆ ಹೋಗುವಂತೆ ಎಸೆದ ಚೆಂಡನ್ನು ಬ್ಯಾಟನ್ನು ಬಳಸಿ ಕ್ಷಿಪ್ರವಾಗಿ ತಿರುಗಿಸುವಂತೆ ಹೊಡೆಯುವ ಹೊಡೆತವಾಗಿದ್ದು ಇದರಲ್ಲಿ ಚೆಂಡು ಬ್ಯಾಟುಗಾರ/ಬ್ಯಾಟ್‌ಮನ್‌ನನ್ನು ದಾಟಿಕೊಂಡು ಹೋಗುತ್ತಿರುವಾಗ ಸ್ಕ್ವೇರ್‌ ಲೆಗ್‌ ಅಥವಾ ಫೈನ್‌ ಲೆಗ್‌‌ ಪ್ರದೇಶಗಳೆಡೆಗೆ ತಿರುಗಿಸಲು ಸ್ವಲ್ಪಮಟ್ಟಿನ ಮಣಿಕಟ್ಟಿನ ಚಲನೆಯೂ ಅಗತ್ಯವಿದೆ. ಈ ಹೊಡೆತದಲ್ಲಿ ಕೊನೆಯ ಗಳಿಗೆಯಲ್ಲಿ ಬ್ಯಾಟಿನ ಮುಖಭಾಗವನ್ನು ಎಡಬದಿಗೆ ತಿರುಗಿಸುವ ಹಾಗೂ ತನ್ನ ಮುಖ ಹಾಗೂ ದೇಹಗಳನ್ನು ಚೆಂಡಿಗೆ ನೇರವಾಗಿಟ್ಟುಕೊಳ್ಳುವುದು ಸೇರಿರುತ್ತದೆ. ಈ ಹೊಡೆತವನ್ನು "ಕಾಲಿನ ಹೆಬ್ಬೆರಳು, ಮೊಣಕಾಲಿನಿಂದ ಅಥವಾ ಸೊಂಟದಿಂದ ಆಚೆಗೆ" ಬೀಸಿ ಆಡಲಾಗುತ್ತದೆ. ಬ್ಯಾಟುಗಾರ/ಬ್ಯಾಟ್‌ಮನ್‌ನ ಕಾಲಿನ ಹೆಬ್ಬೆರಳು ಅಥವಾ ಮೊಣಕಾಲಿನ ಬಳಿ ಚೆಂಡನ್ನು ಎಸೆದಿದ್ದಲ್ಲಿ ಮುಂಗಾಲಿನಿಂದ ಆಚೆಗೆ , ಅಥವಾ ಚೆಂಡು ಬ್ಯಾಟುಗಾರ/ಬ್ಯಾಟ್‌ಮನ್‌ನ ಸೊಂಟ/ನಡುವಿನ ಎತ್ತರಕ್ಕೆ ಪುಟಿದು ಬಂದರೆ ಎಡಗಾಲಿನಿಂದ ಆಚೆಗೆ ಈ ಹೊಡೆತವನ್ನು ಆಡಲಾಗುತ್ತದೆ.

ಬಾಚು ಹೊಡೆತ

[ಬದಲಾಯಿಸಿ]

ಬಾಚು ಹೊಡೆತ ಎಂಬುದು ಬ್ಯಾಟ್‌ಅನ್ನು ಓರೆಯಾಗಿಟ್ಟುಕೊಂಡು ಮುಂಗಾಲಿನಲ್ಲಿ ಹೊಡೆಯುವ ಸಾಧಾರಣವಾಗಿ ಓರ್ವ ನಿಧಾನ ಬೌಲರ್‌/ಚೆಂಡೆಸೆತಗಾರರಿಂದ ಬರುವ ಕೆಳಮಟ್ಟದಲ್ಲಿ ಪುಟಿಯುವ ಚೆಂಡನ್ನು, ಒಂದು ಮಂಡಿಯನ್ನೂರಿಕೊಂಡು ಚೆಂಡಿನ ಮಟ್ಟಕ್ಕೆ ಬಂದು ಬ್ಯಾಟನ್ನು ಸಮತಲೀಯ ಕಮಾನಿನ ಆಕಾರದಲ್ಲಿ ಚೆಂಡು ಬರುತ್ತಿದ್ದ ಹಾಗೆ ಮೈದಾನ/ಪಿಚ್‌ನ ಬಳಿ, ಸಾಧಾರಣವಾಗಿ ಸ್ಕ್ವೇರ್‌ ಲೆಗ್‌ ಅಥವಾ ಫೈನ್‌ ಲೆಗ್‌ನ ಕಡೆಗೆ ಎಡ ಬದಿಯಲ್ಲಿ ಝಾಡಿಸಿದಂತೆ ಬೀಸುವುದರ ಮೂಲಕ ಆಡಲಾಗುತ್ತದೆ.

ಓರ್ವ ಬ್ಯಾಟುಗಾರ/ಬ್ಯಾಟ್‌ಮನ್‌ ತನಗೆ ಇಷ್ಟಬಂದ ಯಾವುದೇ ರೀತಿಯ ಹೊಡೆತವನ್ನು ಯಾವುದೇ ರೀತಿಯ ಎಸೆತಕ್ಕೆ ಬಳಸುವ ಸ್ವಾತಂತ್ರ್ಯವನ್ನು ಹೊಂದಿರುವುದರಿಂದ ಮೇಲ್ಕಂಡ ಪಟ್ಟಿಯು ಯಾವುದೇ ರೀತಿಯಲ್ಲಿಯೂ ಬ್ಯಾಟುಗಾರ/ಬ್ಯಾಟ್ಸ್‌ಮನ್ನರು ಆಡಲು ಆಯ್ದುಕೊಳ್ಳುವ ಹೊಡೆತಗಳ ವಿಧಗಳು ಇವು ಮಾತ್ರವೇ ಆಗಿರುವುದಿಲ್ಲ. ಈ ಕ್ರೀಡೆಯ ಇತಿಹಾಸದುದ್ದಕ್ಕೂ ಹಲವು ಶಾಸ್ತ್ರಸಮ್ಮತವಲ್ಲದ ಸಾಧಾರಣವಾಗಿ ಹೆಚ್ಚಿನ ಅಪಾಯದ ಹೊಡೆತಗಳನ್ನು ಬಳಸಲಾಗಿದೆ. ನಿಯಮಿತ ಓವರ್‌ಗಳ ಕ್ರಿಕೆಟ್‌‌ ನ ಉದಯದಿಂದಾಗಿ ಯಾವುದೇ ಕ್ಷೇತ್ರರಕ್ಷಣೆಗಾರರು ಇರದ ಅಂತರಗಳಲ್ಲಿ ಚೆಂಡನ್ನು ನುಗ್ಗಿಸಲು ಶಾಸ್ತ್ರಸಮ್ಮತವಲ್ಲದ ಹೊಡೆತಗಳ ಬಳಕೆಯು ಹೆಚ್ಚಾಗಿದೆ. ಶಾಸ್ತ್ರಸಮ್ಮತವಲ್ಲದ ಹೊಡೆತಗಳನ್ನು ಅದಕ್ಕೆ ತೆಗೆದುಕೊಳ್ಳಬೇಕಾದ ಹೆಚ್ಚುವರಿ ಅಪಾಯವನ್ನು ಸಮರ್ಥಿಸುವಷ್ಟು ವೇಗದಲ್ಲಿ ಓಟಗಳನ್ನು ಗಳಿಸುವುದು ಅನಿವಾರ್ಯವಲ್ಲವಾದುದರಿಂದ ಪ್ರಥಮ ದರ್ಜೆಯ ಕ್ರಿಕೆಟ್‌‌ನಲ್ಲಿ ಅಪರೂಪವಾಗಿಯಷ್ಟೇ ಬಳಸಲಾಗುತ್ತದೆ.

ಓರ್ವ ಎಡಗೈ ಬ್ಯಾಟುಗಾರ/ಬ್ಯಾಟ್‌ಮನ್‌ ಬಾಚು ಹೊಡೆತವನ್ನು ನೀಡುತ್ತಿದ್ದಾನೆ.

ಅವುಗಳಿಗೆ ತಮ್ಮದೇ ಆದ ಹೆಸರುಗಳನ್ನು ಹಾಗೂ ಜನಬಳಕೆಯನ್ನು ಪಡೆದುಕೊಳ್ಳುವಷ್ಟು ಮಟ್ಟಿಗಿನ ಸಾಕಷ್ಟು ಜನಪ್ರಿಯತೆ ಅಥವಾ ಕುಖ್ಯಾತಿಯನ್ನು ಕೆಲವು ಶಾಸ್ತ್ರಸಮ್ಮತವಲ್ಲದ ಹೊಡೆತಗಳು ಪಡೆದಿವೆ.

ವಿರುದ್ಧ ಬಾಚು ಹೊಡೆತ

[ಬದಲಾಯಿಸಿ]

ವಿರುದ್ಧ ಬಾಚು ಹೊಡೆತ ಎಂಬುದು ಪ್ರಮಾಣಿತ ಬಾಚು ಹೊಡೆತದ ವಿರುದ್ಧ ದಿಕ್ಕಿನಲ್ಲಿ ಆಡಲಾಗುವ ಬ್ಯಾಟ್‌ಅನ್ನು ಓರೆಯಾಗಿಟ್ಟುಕೊಂಡು ಹೊಡೆಯುವ ಬಾಚು ಹೊಡೆತವಾಗಿದೆ, ಎಂದರೆ ಇದರಲ್ಲಿ ಚೆಂಡನ್ನು ಎಡಬದಿಗೆ ಝಾಡಿಸಿ ಹೊಡೆಯುವ ಬದಲಿಗೆ, ಹಿಂಬದಿಯ ಪಾಯಿಂಟ್‌ ಅಥವಾ ಮೂರನೇ ವ್ಯಕ್ತಿಯ ಕಡೆಗೆ ಅದನ್ನು ಬಲಬದಿಗೆ ಝಾಡಿಸಿ ಹೊಡೆಯಲಾಗುತ್ತದೆ. ಬ್ಯಾಟುಗಾರ/ಬ್ಯಾಟ್‌ಮನ್ನನು ಹೊಡೆತವನ್ನು ಸರಳಗೊಳಿಸುವುದಕ್ಕೋಸ್ಕರ ಬ್ಯಾಟಿನ ಹಿಡಿಯ ಮೇಲಿರುವ ಕೈಗಳನ್ನು ಅದಲು ಬದಲಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಬ್ಯಾಟುಗಾರ/ಬ್ಯಾಟ್‌ಮನ್ನನು ತನ್ನ ಹಿಂಗಾಲನ್ನು ಮುಂದಕ್ಕೆ ಕೂಡಾ ತರಲು ಸಾಧ್ಯವಿದ್ದು ಅದರ ಮೂಲಕ ಇದು ಬಹುಮಟ್ಟಿಗೆ ಸಾಂಪ್ರದಾಯಿಕ ಬಾಚು ಹೊಡೆತದ ಹಾಗೆಯೇ ಎನಿಸಿಕೊಳ್ಳಬಲ್ಲದು. ವಿರುದ್ಧ ಬಾಚು ಹೊಡೆತದಿಂದಾಗುವ ಅನುಕೂಲವೆಂದರೆ ಇದು ಕಾರ್ಯತಃ ಕ್ಷೇತ್ರರಕ್ಷಣಾ ಸ್ಥಾನಗಳನ್ನು ಅದಲು ಬದಲು ಮಾಡುವುದರಿಂದ ಇದನ್ನು ತಡೆಯುವುದಕ್ಕೆ ಸೂಕ್ತವಾದ ಕ್ಷೇತ್ರರಕ್ಷಣೆಯ ಯೋಜಿಸುವುದು ಕಷ್ಟಕರವಾಗಿರುತ್ತದೆ.

ಮುಷ್ತಾಕ್‌ರ ಸಹೋದರ ಹನೀಫ್‌‌‌ ಮೊಹಮ್ಮದ್‌‌ರು ಇದನ್ನು ಕಂಡು ಹಿಡಿದರು ಎಂದು ಹೇಳಲಾಗುವುದಾದರೂ 1970ರ ದಶಕದಲ್ಲಿ ಈ ಹೊಡೆತವನ್ನು ಮೊದಲಿಗೆ ನಿಯತವಾಗಿ ಪಾಕಿಸ್ತಾನಿ ಬ್ಯಾಟುಗಾರ/ಬ್ಯಾಟ್‌ಮನ್‌ ಮುಷ್ತಾಕ್‌ ಮೊಹಮ್ಮದ್‌‌ರು ಆಡುತ್ತಿದ್ದರು. ಕ್ರಿಕೆಟ್‌‌ ತರಬೇತುದಾರ ಬಾಬ್‌ ವೂಲ್ಮರ್‌‌ರು ಈ ಹೊಡೆತವನ್ನು ಜನಪ್ರಿಯಗೊಳಿಸುವುದಕ್ಕೆ ಕಾರಣರು ಎಂದು ಹೇಳಲಾಗುತ್ತದೆ.[][]

ಜಿಂಬಾಬ್ವೆಯ ಆಂಡಿ ಫ್ಲವರ್‌‌‌ರು ಈ ಹೊಡೆತದ ಸಮೃದ್ಧ ಹಾಗೂ ಪರಿಣತ ನಿರ್ವಾಹಕರಾಗಿದ್ದರು. ಆಸ್ಟ್ರೇಲಿಯಾದ ಡೇಮಿಯೆನ್‌ ಮಾರ್ಟಿನ್‌‌ರವರು "ಈ ಕ್ರೀಡೆಯಲ್ಲಿನ ಅತ್ಯಂತ ನಿರ್ದಯಿ ವಿರುದ್ಧ-ಬಾಚು ಹೊಡೆತಗಾರರು" ಎಂದು ಹೇಳಲಾಗುತ್ತದೆ. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ವಿರುದ್ಧ ಬಾಚು ಹೊಡೆತದ ಅತ್ಯುತ್ತಮ ಹೊಡೆತಗಾರರು ನ್ಯೂಜಿಲೆಂಡ್‌‌ನ ವಿಕೆಟ್‌‌ ಕೀಪರ್‌‌ ಬ್ರೆಂಡನ್‌ ಮೆಕಲಮ್‌ರವರಾಗಿದ್ದಾರೆ.[]

ವಿರುದ್ಧ ಬಾಚು ಹೊಡೆತವು ತಿರುಗುಬಾಣವಾಗಿ ಪರಿಣಮಿಸಿದುದರ ಅತ್ಯಂತ ಜನಜನಿತ ಉದಾಹರಣೆ ಎಂದರೆ 1987ರ ಕ್ರಿಕೆಟ್‌‌ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅಲ್ಲನ್‌ ಬಾರ್ಡರ್‌‌ ವಿರುದ್ಧದ ಆಟದಲ್ಲಿ ಇಂಗ್ಲೆಂಡ್‌ನ‌ ಮೈಕ್‌ ಗ್ಯಾಟಿಂಗ್‌‌‌ರದ್ದು. ಇಂಗ್ಲೆಂಡ್‌‌ ತನ್ನ ಜಯದ ಹಾದಿಯಲ್ಲಿರುವಾಗ ಬಾರ್ಡರ್‌ರು ಎಸೆದ ಮೊದಲ ಎಸೆತದಲ್ಲಿ ಗ್ಯಾಟಿಂಗ್‌‌ರು‌ ವಿರುದ್ಧ ಬಾಚು ಹೊಡೆತವನ್ನು ಪ್ರಯತ್ನಿಸಿದಾಗ ತುದಿಗೆ ತಾಗಿದ ಚೆಂಡು ಪುಟಿದು ವಿಕೆಟ್‌‌ -ಕೀಪರ್‌ ಗ್ರೆಗ್‌ ಡೈಯರ್‌ರ ಕೈಸೇರಿತ್ತು. ತರುವಾಯ ತೀವ್ರತೆಯನ್ನು ಕಳೆದುಕೊಂಡ ಇಂಗ್ಲೆಂಡ್‌‌ ಅಂತಿಮವಾಗಿ ಪಂದ್ಯದಲ್ಲಿ ಸೋಲು ಕಂಡಿತ್ತು.

ಕೈಗಳು ಹಾಗೂ ದೇಹದ ನಿಲುವುಗಳಲ್ಲಿನ ಶಾಸ್ತ್ರಸಮ್ಮತವಲ್ಲದ ಸ್ವಭಾವ/ಲಕ್ಷಣದಿಂದಾಗಿ ವಿರುದ್ಧ ಬಾಚು ಹೊಡೆತದಲ್ಲಿ ಬೇಕಾದ ಅಗತ್ಯ ಬೀಸು ಶಕ್ತಿಯನ್ನು ಪಡೆದುಕೊಳ್ಳಲು ಕಷ್ಟಸಾಧ್ಯವಾಗಿರುತ್ತದೆ ; ಹಲವು ಸಂದರ್ಭಗಳಲ್ಲಿ, ಇದರ ಉದ್ದೇಶವು ಚೆಂಡನ್ನು ಹಿಂಭಾಗದ ಲೆಗ್‌ ಪ್ರದೇಶದೆಡೆಗೆ ಓರೆ ಹೊಡೆತ ಅಥವಾ ಕೊಚ್ಚು ಹೊಡೆತಗಳನ್ನು ಹೊಡೆಯುವುದಾಗಿರುತ್ತದೆ. ಆದಾಗ್ಯೂ, ಅಪರೂಪದ ಸನ್ನಿವೇಶಗಳಲ್ಲಿ , ಆಟಗಾರರು ವಿರುದ್ಧ ಬಾಚು ಹೊಡೆತಗಳ ಮೂಲಕ ಸಿಕ್ಸ್‌‌‌ ಬಾರಿಸಲು ಸಾಧ್ಯವಾಗಿದ್ದಿದೆ. ಕೈಬದಲಿಸಿ ಹೊಡೆಯುವುದರ ಪ್ರವರ್ತಕರಾಗಿರುವ ಕೆವಿನ್‌ ಪೀಟರ್‌ಸನ್‌ರು ಈ ವೈಖರಿಯಲ್ಲಿ ಸಿದ್ಧಹಸ್ತರಾಗಿದ್ದು, ಈ ವೈಖರಿಯಿಂದ ಹೊರಬರುವ ಹೊಡೆತವು ಮೂಲತಃ ವಿರುದ್ಧ ಬಾಚು ಹೊಡೆತವಾಗುವ ಬದಲಿಗೆ ಕೇವಲ ಬಾಚು ಹೊಡೆತವಾಗಿರುತ್ತದೆ ಎಂಬ ಪ್ರತಿಪಾದನೆಯೂ ಒಪ್ಪುವಂತಹುದಾಗಿದೆ. ಅಂತಹಾ ಹೊಡೆತದ ಮತ್ತೊಂದು 'ಶ್ರೇಷ್ಠ ಉದಾಹರಣೆ' ಎಂದರೆ ರಾಬಿನ್‌ ಪೀಟರ್‌‌ಸನ್‌ರ ಎಸೆತಕ್ಕೆ ಯೂಸುಫ್‌ ಪಠಾಣ್‌ರು ಎತ್ತಿದ್ದ ಸಿಕ್ಸರ್‌ ಆಗಿದೆ.[]

ಅಡ್ಡಾದಿಡ್ಡಿ ಹೊಡೆತ ಮತ್ತು ಅಡ್ಡಾದಿಡ್ಡಿ ಬಾಚು ಹೊಡೆತ

[ಬದಲಾಯಿಸಿ]

ಅಡ್ಡಾದಿಡ್ಡಿ ಹೊಡೆತ ಎಂಬುದೊಂದು ಮಿಡ್‌-ವಿಕೆಟ್‌‌ನ ಮೇಲೆ ಆಡಲಾಗುವ ಶಕ್ತಿಶಾಲಿ ಎಡ ಹೊಡೆತವಾಗಿದ್ದು, ಸಾಧಾರಣವಾಗಿ ಸಿಕ್ಸರ್‌ ಹೊಡೆಯುವ ಯತ್ನದ ಭಾಗವಾಗಿ ಗಾಳಿಯಲ್ಲಿ ಬೀಸಲಾಗಿರುತ್ತದೆ. ಹೊಡೆತವೊಂದನ್ನು ಸಾಧಾರಣ ರೀತಿಯಲ್ಲಿ ಎಳೆದು ಹೊಡೆಯಲು ಸಾಧ್ಯವಾಗದ ಎಸೆತವೊಂದಕ್ಕೆ ಆಡುವಾಗ ಅಂತಹಾ ಹೊಡೆತಕ್ಕೆ ಅಡ್ಡಾದಿಡ್ಡಿ ಹೊಡೆತ ಎನ್ನಲಾಗುತ್ತದೆ. ಅಡ್ಡಾದಿಡ್ಡಿ ಹೊಡೆತವೊಂದನ್ನು ಕೌ ಶಾಟ್‌ ಅಥವಾ "ಕೌ ಕಾರ್ನರ್‌" ಎಂದೂ ಕರೆಯುತ್ತಾರೆ. ಅಡ್ಡಾದಿಡ್ಡಿ ಹೊಡೆತ ಬ್ಯಾಟುಗಾರ/ಬ್ಯಾಟ್‌ಮನ್‌ರ ಶಕ್ತಿ ಹಾಗೂ ದೇಹದ ಭಾರವು ಚೆಂಡಿನ ಕಡೆಗೆ ಬ್ಯಾಟನ್ನು ಬೀಸಲು ಸಾಧ್ಯವಾಗುವುದರಿಂದಾಗಿ ಒಂದು ಪರಿಣಾಮಕಾರಿ ಹೊಡೆತವಾಗಿರುತ್ತದೆ.

ಅಡ್ಡಾದಿಡ್ಡಿ ಬಾಚು ಹೊಡೆತ ಎಂಬುದು ಬಾಚು ಹೊಡೆತದಲ್ಲಿ ಬಳಸಲಾಗುವ ಮಂಡಿಯೂರುವಿಕೆಯನ್ನು ಬಳಸಿ ಹೊಡೆಯುವ ಅಡ್ಡಾದಿಡ್ಡಿ ಹೊಡೆತವಾಗಿರುತ್ತದೆ. ಅಡ್ಡಾದಿಡ್ಡಿ ಬಾಚು ಹೊಡೆತಗಳನ್ನು ಸಾಧಾರಣವಾಗಿ ಮಿಡ್‌-ವಿಕೆಟ್‌‌ನ ಬದಲಿಗೆ ಸ್ಕ್ವೇರ್‌ -ಲೆಗ್‌ನ ಕಡೆಗೆ ಬೀಸಲಾಗಿರುತ್ತದೆ. ಚೆಂಡು ಎಷ್ಟು ದೂರವಿದೆ ಎಂಬುದನ್ನು ಅಂದಾಜಿಸಲು ಹಾಗೂ ಮಂಡಿಯೂರುವಿಕೆಗೆ ಸಮಯವು ತಗಲುವುದರಿಂದ ಬ್ಯಾಟುಗಾರ/ಬ್ಯಾಟ್‌ಮನ್ನನು ಅಡ್ಡಾದಿಡ್ಡಿ ಬಾಚು ಹೊಡೆತಕ್ಕೆ ಬೇಕಾಗುವ ಸಮಯವನ್ನು ಕೇವಲ ನಿಧಾನ ಬೌಲರ್‌/ಚೆಂಡೆಸೆತಗಾರರು ಯುಕ್ತವಾದಷ್ಟು ಪೂರ್ಣವಾಗಿ ಬೀಳಿಸುವ ಚೆಂಡುಗಳನ್ನು ಆಡುವಾಗ ಮಾತ್ರವೇ ಪಡೆಯಲು ಸಾಧ್ಯವಾಗುವುದರಿಂದ ಆಗ ಮಾತ್ರವೇ ನಿರ್ದಿಷ್ಟವಾಗಿ ಈ ಹೊಡೆತವನ್ನು ಆಡಲಾಗುತ್ತದೆ. ಹೊಡೆತದ ಫ್ರಂಟ್‌ ಲೆಗ್‌‌ಅನ್ನು ಸಾಧಾರಣವಾಗಿ ದೂರವಾಗಿ ಲೆಗ್‌ ಸ್ಟಂಪ್‌ನ ಹೊರಕ್ಕೆ ಇಟ್ಟು ಬ್ಯಾಟನ್ನು ಸಂಪೂರ್ಣವಾಗಿ ತಿರುಗಿಸಿ ಬೀಸಲಾಗುವಂತೆ ಇಡಲಾಗುತ್ತದೆ.

ಕೈ ಬದಲಿಸಿ ಹೊಡೆವ ಹೊಡೆತ

[ಬದಲಾಯಿಸಿ]

ಕೈ ಬದಲಿಸಿ ಹೊಡೆವ ಹೊಡೆತ ವು 2008ರಲ್ಲಿ ಕೆವಿನ್‌ ಪೀಟರ್‌ಸನ್‌ರು ಪ್ರವರ್ತಿಸಿದ ಹೊಡೆತವಾಗಿದ್ದು ಅದನ್ನು ಮೊತ್ತಮೊದಲಿಗೆ 2008ರಲ್ಲಿ ಇಂಗ್ಲೆಂಡ್‌‌ನಲ್ಲಿ ನಡೆದ ನ್ಯೂಜಿಲೆಂಡ್‌‌ ಸರಣಿ ಪಂದ್ಯಗಳಲ್ಲಿ ಬಳಸಲಾಗಿತ್ತು. ಈ ಹೊಡೆತದಲ್ಲಿ ಬೌಲರ್‌/ಚೆಂಡೆಸೆತಗಾರ ಚೆಂಡನ್ನು ಎಸೆಯಲು ಓಡಿ ಬರುತ್ತಿರುವಾಗ ಓರ್ವ ಬ್ಯಾಟುಗಾರ/ಬ್ಯಾಟ್‌ಮನ್ನನು ತಾನು ಸಾಧಾರಣವಾಗಿ ಬಳಸುವ ಕೈಗಳಿಂದ ಬ್ಯಾಟನ್ನು ಹಿಡಿಯುವ ನಿಲುವಿನ ಕನ್ನಡಿ ಪ್ರತಿಬಿಂಬದ ನಿಲುವಾಗಿ ಬದಲಿಸಿಕೊಳ್ಳುತ್ತಾನೆ. ಕ್ಷೇತ್ರ ರಕ್ಷಣಾ ತಂಡವು ಬೌಲರ್‌/ಚೆಂಡೆಸೆತಗಾರನು ಓಡಿಬರುತ್ತಿರುವ ಕ್ಷಣದಲ್ಲಿ ಕ್ಷೇತ್ರ ರಕ್ಷಣೆಗಾರರ ಸ್ಥಾನಪಲ್ಲಟ ಮಾಡಲು ಅಸಾಧ್ಯವಾದ ಕಾರಣ ಪರಿಣಾಮಕಾರಿಯಾಗಿ ಕ್ಷೇತ್ರ ರಕ್ಷಕರು ಈ ಪರಿಸ್ಥಿತಿಯಲ್ಲಿ ಇರಬೇಕಾದುದಕ್ಕಿಂತ ಭಿನ್ನಸ್ಥಾನದಲ್ಲಿರುವ ಮೂಲಕ ಕ್ಷೇತ್ರರಕ್ಷಣಾ ತಂಡವು ತಪ್ಪು ಸ್ಥಿತಿಯಲ್ಲಿರುತ್ತದೆ. ಸರಣಿಯಲ್ಲಿ ಅಂತಹಾ ತಂತ್ರದ ನ್ಯಾಯಸಮ್ಮತತೆಯನ್ನು ಪ್ರಶ್ನಿಸಲಾಯಿತಾದರೂ ಅಂತರರಾಷ್ಟ್ರೀಯ ಕ್ರಿಕೆಟ್‌‌ ಸಮಿತಿಯು ಆ ಹೊಡೆತವನ್ನು ವಿಧಿಬದ್ಧವೆಂದು ಸ್ಪಷ್ಟಪಡಿಸಿತು. ಈ ಹೊಡೆತವು ಬ್ಯಾಟುಗಾರ/ಬ್ಯಾಟ್‌ಮನ್ನನು ಮತ್ತೊಂದು ಕೈಯನ್ನು ಬಳಸುವಲ್ಲಿ ಕಡಿಮೆ ನಿಪುಣತೆಯನ್ನು ಹೊಂದಿರುತ್ತಾರಾಗಿ ಅಂತಹಾ ಹೊಡೆತಗಳನ್ನು ಕಾರ್ಯಗತಗೊಳಿಸುವಲ್ಲಿ ತಪ್ಪು ಮಾಡುವ ಸಾಧ್ಯತೆಗಳು ಹೆಚ್ಚಿರುವದರಿಂದ ಹೆಚ್ಚು ಅಪಾಯಕಾರಿಯಾಗಿರುತ್ತದೆ.

ಸ್ಕೂಪ್/ತೋಡುಹೊಡೆತ

[ಬದಲಾಯಿಸಿ]

"ಸ್ಕೂಪ್‌/ತೋಡುಹೊಡೆತ"ವನ್ನು (ಪ್ಯಾಡಲ್‌/ಹುಟ್ಟು ಸ್ಕೂಪ್‌/ತೋಡುಹೊಡೆತ ಅಥವಾ ಮಾರಿಲ್ಲಿಯರ್‌ ಹೊಡೆತ ಅಥವಾ ಡಿಲ್‌‌ಸ್ಕೂಪ್‌/ತೋಡುಹೊಡೆತ ಎಂದೂ ಕರೆಯಲಾಗುತ್ತದೆ) ಹಲವು ಪ್ರಥಮ ದರ್ಜೆಯ ಬ್ಯಾಟುಗಾರ/ಬ್ಯಾಟ್ಸ್‌ಮನ್ನರು ಪ್ರಯೋಗಿಸಿದ್ದು ಅವರಲ್ಲಿ ಡಗ್ಲಾಸ್‌‌ ಮಾರಿಲ್ಲಿಯರ್‌ ಮೊದಲಿಗರಾಗಿದ್ದಾರೆ. ಅಂತರರಾಷ್ಟ್ರೀಯ ಪಂದ್ಯದಲ್ಲಿ ಶ್ರೀಲಂಕಾದ ಬ್ಯಾಟುಗಾರ/ಬ್ಯಾಟ್‌ಮನ್‌ ತಿಲಕರತ್ನೆ ದಿಲ್ಷಾನ್‌‌ರವರು (ಬಹಳ ಯಶಸ್ವಿಯಾಗಿ) ಇದನ್ನು ಮೊದಲು ಪ್ರಯೋಗಿಸಿದ್ದರು.

ಈ ಹೊಡೆತವನ್ನು ಸಾಂಪ್ರದಾಯಿಕವಾಗಿ ರಕ್ಷಣಾತ್ಮಕವಾಗಿ ಆಡಲಾಗುತ್ತಿದ್ದ ಅಥವಾ ಹೆಚ್ಚು ಆಕ್ರಮಣಕಾರಿಯಾಗೆಂದರೆ ಎಡ ಬದಿಗೆ ಎಳೆದ ಹೊಡೆತವನ್ನು ನೀಡಲಾಗುತ್ತಿದ್ದ ಕಡಿಮೆ ಅಂತರದಲ್ಲಿ ಬೀಳುವ ನೇರ ಎಸೆತವನ್ನು ಆಡುವಾಗ ಬಳಸಲಾಗುತ್ತದೆ - ಎರಡೂ ಹೊಡೆತಗಳಲ್ಲೂ "ಹಿಂಗಾಲಿನಿಂದ ದೂರಕ್ಕೆ " ಹೊಡೆಯಲಾಗುತ್ತಿತ್ತು. ಸ್ಕೂಪ್‌/ತೋಡುಹೊಡೆತವನ್ನು ಆಡಲು ಬ್ಯಾಟುಗಾರ/ಬ್ಯಾಟ್‌ಮನ್‌ ಮುಂಗಾಲಿನ ಮೇಲೆ ನಿಂತಿದ್ದು ಚೆಂಡಿನ ಪುಟಿತದ ಕೆಳಭಾಗದಲ್ಲಿ ಹೊಡೆಯಲು ಗುರಿಯನ್ನಿಟ್ಟು ಹೊಡೆಯಬೇಕಾಗಿರುತ್ತದೆ ವಿಕೆಟ್‌‌ ಕೀಪರ್‌ರ ತಲೆ ಮೇಲೆ ಹಾರಿ ಹೋಗುವ ಹಾಗೆ ಸ್ಟಂಪ್‌ಗಿಂತ ಹಿಂದೆ ನೇರ ಹೊಡೆತದ ಮೂಲಕ ಆಡಲಾಗುತ್ತದೆ. ಕಾರ್ಯಗತಗೊಳಿಸಲು ಈ ಹೊಡೆತವು ಅಪಾಯಕಾರಿಯೆನಿಸಿದರೂ, ಕ್ಷೇತ್ರರಕ್ಷಣೆಗಾರ ಅಪರೂಪಕ್ಕೆ ಮಾತ್ರವೇ ನಿಲ್ಲಿಸಲಾಗುವ ಕ್ಷೇತ್ರದ ಒಂದೆಡೆಗೆ ಗುರಿಯಿಡುವ ಅನುಕೂಲತೆಯನ್ನು ಹೊಂದಿದೆ - ನಿರ್ದಿಷ್ಟವಾಗಿ ಕ್ಷೇತ್ರದ ಹೊರಭಾಗದಲ್ಲಿ ಕ್ಷೇತ್ರರಕ್ಷಣೆಗಾರರು ಕಡಿಮೆಯಿರುವ ಟ್ವೆಂಟಿ20 ಹಾಗೂ ODI ಕ್ರಿಕೆಟ್‌‌ ಗಳಲ್ಲಿ ಇದು ಅನುಕೂಲಕರ.

ನೇರ ಹೊಡೆತ

[ಬದಲಾಯಿಸಿ]

ನೇರ ಹೊಡೆತ ಎಂಬುದು ಅದನ್ನು ಬೀಸಿದ ನಂತರ ಹಾಗೂ ಬ್ಯಾಟ್‌ ಚೆಂಡನ್ನು ಸ್ಪರ್ಶಿಸುವ ಬಿಂದುವಿನಲ್ಲಿ ನೆಲಕ್ಕೆ ಲಂಬವಾಗಿರುವಾಗ ಬ್ಯಾಟುಗಾರ/ಬ್ಯಾಟ್ಸ್‌ಮನ್ನರು ಚೆಂಡನ್ನು ನೆಲದಲ್ಲಿಯೇ ಓಡುವ ಹಾಗೆ ಆಡಲು ಸಾಧ್ಯವಾಗುವ ಹಾಗೆ ಬ್ಯಾಟನ್ನು ಇಟ್ಟುಕೊಳ್ಳುವ ಸ್ಥಾನವಾಗಿರುತ್ತದೆ. ಇದನ್ನು ಸಾಧಿಸಲು ಕೈನ ಮೇಲ್ಭಾಗವನ್ನು ಬಳಸಲಾಗುತ್ತದೆ.[]

ಬ್ಯಾಟಿಂಗ್‌ನ ತಂತ್ರಗಳು

[ಬದಲಾಯಿಸಿ]

ಅಂತರರಾಷ್ಟ್ರೀಯ ಕ್ರಿಕೆಟ್‌‌ ನಲ್ಲಿ T20, ಟೆಸ್ಟ್‌ ಕ್ರಿಕೆಟ್‌‌ ಹಾಗೂ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌‌ಗಳ ನಡುವೆ ಬ್ಯಾಟಿಂಗ್‌ನ ತಂತ್ರಗಳು ವ್ಯತ್ಯಾಸವಾಗುತ್ತವೆ.

ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌‌‌‌

[ಬದಲಾಯಿಸಿ]

ಏಕದಿನ ಅಂತರರಾಷ್ಟ್ರೀಯ ಪಂದ್ಯಗಳು ಸೀಮಿತ ಓವರ್‌ಗಳನ್ನು ಹೊಂದಿರುವುದರಿಂದ, ಬ್ಯಾಟುಗಾರ/ಬ್ಯಾಟ್ಸ್‌ಮನ್ನರು ಓಟಗಳನ್ನು ತ್ವರಿತವಾಗಿ ಗಳಿಸಲು ಪ್ರಯತ್ನಿಸುತ್ತಾರೆ. ತ್ವರಿತವಾಗಿ ಓಟಗಳನ್ನು ಗಳಿಸುವುದೆಂದರೆ ಎಸೆಯಲಾದ ಒಂದು ಎಸೆತಕ್ಕೆ ಕನಿಷ್ಟ ಒಂದು ಓಟವನ್ನು ಗಳಿಸಲು ಪ್ರಯತ್ನಿಸುವುದು. ಬಹುತೇಕ ಬ್ಯಾಟುಗಾರ/ಬ್ಯಾಟ್ಸ್‌ಮನ್ನರು ಪ್ರತಿ ಓವರ್‌ಗೆ ಸರಾಸರಿ ನಾಲ್ಕು ಓಟಗಳಂತೆ ಗಳಿಸಲು ಸಂಭಾಳಿಸಿಕೊಳ್ಳುವರು (i.e. ಆರು ಎಸೆತಗಳ ಒಂದು ಓವರ್‌ಗೆ ನಾಲ್ಕು ಓಟಗಳ ಹಾಗೆ).

ಚಿತ್ರ:Battingthroughshot.JPG
ಚೆಂಡು ಬ್ಯಾಟುಗಾರ/ಬ್ಯಾಟ್‌ಮನ್ನನ್ನು (ಎಡಕ್ಕೆ) ತಲುಪುವ ಮೊದಲೇ ಫಾರ್ವರ್ಡ್‌ ಡ್ರೈವ್‌ ಹೊಡೆತವನ್ನು ಹೊಡೆಯಲು ಬ್ಯಾಟನ್ನು ಮುಂಗಾಲಿಟ್ಟು ಬೀಸುವ ಮುನ್ನ (ಬಲಕ್ಕೆ ) ಬ್ಯಾಟನ್ನು ಎತ್ತರಕ್ಕೆ ಹಿಂದೆತ್ತಿ ಹಿಡಿದಿರುವುದು.

ಯಾವುದೇ ತಂಡವು ಬ್ಯಾಟಿಂಗ್‌ ಮಾಡಲು ಹೋಗುವಾಗ, ಮೊದಲಿಗೆ ಅತ್ಯುತ್ತಮ ಆಟಗಾರರು ಬ್ಯಾಟಿಂಗ್‌ ಮಾಡುವರು. ಮೊದಲ ಮೂವರು ಬ್ಯಾಟುಗಾರ/ಬ್ಯಾಟ್ಸ್‌ಮನ್ನರನ್ನು (ಸಂಖ್ಯೆ 1, 2, 3) ಉಚ್ಚ ಕ್ರಮಾಂಕ ದವರೆಂದು ; ಮುಂದಿನ ನಾಲ್ವರು (ಸಂಖ್ಯೆಗಳು 4, 5, 6 ಹಾಗೂ ಬಹುಶಃ 7) ಮಧ್ಯಮ ಕ್ರಮಾಂಕ ವೆನಿಸಿಕೊಳ್ಳುತ್ತಾರೆ, ಹಾಗೂ ಉಳಿದ ನಾಲ್ವರು (ಸಂಖ್ಯೆಗಳಾದ 8, 9, 10 ಮತ್ತು 11) ಕೆಳ ಕ್ರಮಾಂಕ ದವರು ಅಥವಾ ಬಾಲಂಗೋಚಿ ಗಳೆಂದು ಕರೆಸಿಕೊಳ್ಳುತ್ತಾರೆ.

ತಂಡವೊಂದರ ವಿಶೇಷಜ್ಞ ಬ್ಯಾಟುಗಾರ/ಬ್ಯಾಟ್ಸ್‌ಮನ್ನರು ಸಾಧಾರಣವಾಗಿ ಹೆಚ್ಚಿನ ಓಟಗಳನ್ನು ಗಳಿಸಲು ಸಾಧ್ಯವಾಗುವಂತೆ ಮೇಲಿನ ಕ್ರಮಾಂಕಗಳ ಸನಿಹದಲ್ಲಿಯೇ ಬ್ಯಾಟಿಂಗ್‌ ಮಾಡುತ್ತಾರೆ. ಆರಂಭಿಕರು ಅಥವಾ ಆರಂಭಿಕ ಬ್ಯಾಟುಗಾರ/ಬ್ಯಾಟ್ಸ್‌ಮನ್ನರು ಎಂದರೆ ಕ್ರೀಸನ್ನು ಪ್ರವೇಶಿಸುವ ಮೊದಲ ಇಬ್ಬರು ಬ್ಯಾಟುಗಾರ/ಬ್ಯಾಟ್ಸ್‌ಮನ್ನರಾಗಿರುತ್ತಾರೆ. ಇವರುಗಳು ಅತ್ಯುತ್ತಮ ಬ್ಯಾಟುಗಾರ/ಬ್ಯಾಟ್ಸ್‌ಮನ್ನರಾಗಿರಬೇಕೆಂದೇನಿಲ್ಲ , ಆದರೆ ಹೊಸ ಚೆಂಡನ್ನು ಪಳಗಿಸುವ ಹಾಗೂ ಚೆಂಡಿನ ಹೊಳಪು ಸಾಕಷ್ಟು ಮಾಸುವವರೆಗೆ (ಕಠಿಣವಾದ ಹಾಗೂ ಹೊಳಪಿನ ಚೆಂಡು ಪುಟಿಯುವುದು ಹಾಗೂ ತಿರುಗುವುದು ಹೆಚ್ಚಾದುದರಿಂದ ಬ್ಯಾಟುಗಾರ/ಬ್ಯಾಟ್ಸ್‌ಮನ್ನರಿಗೆ ಅದನ್ನು ಎದುರಿಸುವುದು ಕಷ್ಟಸಾಧ್ಯ) ವಿಕೆಟ್‌‌ಗಳನ್ನು ಕಳೆದುಕೊಳ್ಳದಿರುವ ಹಾಗೆ ಕಾಪಾಡಿಕೊಳ್ಳಬಲ್ಲರೆಂದು ನಿರೀಕ್ಷಿಸಲಾಗುತ್ತದೆ. ಇಷ್ಟು ಮಾತ್ರವಲ್ಲದೇ, ಅವರು ಒಂದು ತ್ವರಿತ ಇನ್ನಿಂಗ್ಸ್‌‌ಅನ್ನು (ಕಡಿಮೆ ಎಸೆತಗಳಲ್ಲಿ ಹೆಚ್ಚು ಓಟಗಳು), ಕಟ್ಟುವ ಅನಿವಾರ್ಯತೆಯನ್ನು ಎದುರಿಸಬೇಕಿರುತ್ತದೆ ಏಕೆಂದರೆ ಮೊದಲ 15 ಓವರ್‌ಗಳಲ್ಲಿ ಕ್ಷೇತ್ರ ರಕ್ಷಣೆಗಾರರ ನಿಯೋಜನೆಯಲ್ಲಿ ಕಟ್ಟುಪಾಡುಗಳಿದ್ದು ಓಟಗಳನ್ನು ಗಳಿಸುವುದು ಹೆಚ್ಚು ಅನುಕೂಲವಾಗಿರುತ್ತದೆ. ODI ಕ್ರಿಕೆಟ್‌‌ ನ ನಿಯಮಗಳಲ್ಲಿ ಇತ್ತೀಚೆಗೆ ಆದ ಒಂದು ತಿದ್ದುಪಡಿಯ [೧] Archived 2006-08-28 ವೇಬ್ಯಾಕ್ ಮೆಷಿನ್ ನಲ್ಲಿ., ಪ್ರಕಾರ ಕ್ಷೇತ್ರ ರಕ್ಷಣಾ ತಂಡದ ನಾಯಕರಿಗೆ ಮೊದಲ 10 ಓವರ್‌ಗಳ ಕಾಲ ಕಡ್ಡಾಯವಾದ ಕ್ಷೇತ್ರರಕ್ಷಣಾ ಕಟ್ಟುಪಾಡುಗಳಿದ್ದು ಹಾಗೂ ನಂತರ ನಿಗದಿಪಡಿಸಿದ 50 ಓವರ್‌ಗಳ ಅವಧಿಯಲ್ಲಿ ತಮ್ಮ ಆಯ್ಕೆಯ ಯಾವ ಹಂತದಲ್ಲಿಯಾದರೂ ವಿಧಿಸಬಹುದಾದ ಪವರ್‌-ಪ್ಲೇ ಓವರ್‌ಗಳೆಂದೂ ಕರೆಯಲಾಗುವ 5 ಓವರ್‌ಗಳ ಎರಡು ವಿಭಾಗಗಳನ್ನು ಪಡೆದಿರುತ್ತವೆ.

ಆರಂಭಿಕರಾದ ನಂತರ ಬರುವಾತ No. 3 ಅಥವಾ ಒನ್‌ ಡ್ರಾಪ್‌ ಬ್ಯಾಟುಗಾರ/ಬ್ಯಾಟ್‌ಮನ್‌ ಆಗಿರುತ್ತಾರೆ. ಅವರ ಜವಾಬ್ದಾರಿಯು ಆರಂಭಿಕರಿಂದ ಆಟವನ್ನು ವಹಿಸಿಕೊಂಡು ಸಾಧಾರಣವಾಗಿ ಎಚ್ಚರಿಕೆಯ ಹಾಗೂ ದೀರ್ಘಕಾಲದ ಇನ್ನಿಂಗ್ಸ್‌‌ಅನ್ನು ಆಡುತ್ತಾ, ಬ್ಯಾಟಿಂಗ್‌ನ ಒಂದೆಡೆಯನ್ನು ಪರಿಣಾಮಕಾರಿಯಾಗಿ ಹಿಡಿದುನಿಲ್ಲಿಸಿಕೊಳ್ಳಬೇಕಿರುತ್ತದೆ. ಇದು ಬ್ಯಾಟಿಂಗ್‌ನಲ್ಲಿ ಸ್ವಲ್ಪ ಮಟ್ಟಿನ ದೃಢತೆಯನ್ನು ತರಬಲ್ಲದು, ಏಕೆಂದರೆ ಹೊಸ ಬ್ಯಾಟುಗಾರ/ಬ್ಯಾಟ್ಸ್‌ಮನ್ನರು ಹೊಂದಿಕೊಳ್ಳಲು ಕಷ್ಟಪಡುತ್ತಿರುತ್ತಾರೆ ಹಾಗೂ ಮತ್ತೊಂದೆಡೆಯಲ್ಲಿ ಸ್ಥಿರವಾಗಿರುವ ಬ್ಯಾಟುಗಾರ/ಬ್ಯಾಟ್‌ಮನ್‌ನನ್ನು ಹೊಂದಿರುವುದು ಅನುಕೂಲಕರವೆನಿಸುತ್ತದೆ. ತಂಡದ ಅತ್ಯುತ್ತಮ ಬ್ಯಾಟುಗಾರ/ಬ್ಯಾಟ್‌ಮನ್‌ನನ್ನು ಸಾಧಾರಣವಾಗಿ ಹೊಸದಾದ ಮೈದಾನದ/ಪಿಚ್‌ನ ಮೇಲೆ ಅತ್ಯುತ್ತಮ ಬೌಲರ್‌/ಚೆಂಡೆಸೆತಗಾರರ ವಿರುದ್ಧ ಬ್ಯಾಟಿಂಗ್‌ ಮಾಡಬೇಕಾದ ಕಷ್ಟವನ್ನು ಎದುರಿಸದಿರುವಂತೆ ಹಾಗೂ ಆತನು ದೀರ್ಘಕಾಲೀನ ಇನ್ನಿಂಗ್ಸ್‌‌ಅನ್ನು ಆಡಲಾಗುವಂತೆ 3 ಅಥವಾ 4ನೇ ಸ್ಥಾನದಲ್ಲಿ ಆಡಿಸಲಾಗುತ್ತದೆ.

ಮಧ್ಯಮ ಕ್ರಮಾಂಕವನ್ನು ಹಲವು ಬಾರಿ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಬ್ಯಾಟಿಂಗ್‌ ಶ್ರೇಣಿಯ ಅತ್ಯಮೂಲ್ಯ ಆಸ್ತಿಯೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅದರ ಸದಸ್ಯರು 50 ಓವರ್‌ಗಳ ಮಧ್ಯಭಾಗದುದ್ದಕ್ಕೂ ಬ್ಯಾಟಿಂಗ್‌ ತಂಡದ ಸ್ಥಾನವನ್ನು ಬಲಪಡಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನ ಗುಣಲಕ್ಷಣವೆಂದರೆ ಪ್ರಧಾನವಾಗಿ ಬೌಂಡರಿಗಳಲ್ಲಿಯೇ ಓಟಗಳನ್ನು ಪೇರಿಸುವ ಆಕ್ರಮಣಕಾರಿ ಆರಂಭಿಕರ ಶೈಲಿಗೆ ಹೊರತಾಗಿ ಹಲವು ಸಿಂಗಲ್‌ಗಳು (ಅಥವಾ ಒಂದು ಓಟಗಳನ್ನು ) ಹಾಗೂ 'ಎರಡು ಓಟಗಳನ್ನು' ಪಡೆದುಕೊಳ್ಳುತ್ತಾ ಆಗ್ಗಾಗ್ಗೆ ಮಾತ್ರವೇ ಬೌಂಡರಿ ಹೊಡೆತ ಗಳನ್ನು (ಒಂದು ಫೋರ್‌ ಅಥವಾ ಸಿಕ್ಸ್‌ ) ಪಡೆಯುವ ಪದ್ಧತಿಯಾಗಿರುತ್ತದೆ.

ಹೀಗೇಕೆಂದರೆ ಪ್ರತಿಸ್ಪರ್ಧಿ ತಂಡದ ಮೇಲಿನ ಕ್ಷೇತ್ರ ರಕ್ಷಣಾ ಕಟ್ಟುಪಾಡುಗಳನ್ನು ಮಧ್ಯಮ ಸಂಖ್ಯೆಯ ಓವರ್‌ಗಳಲ್ಲಿ ಬೌಂಡರಿ ಹೊಡೆತಗಳ ಪ್ರಮಾಣವು ಕಡಿಮೆಯಾಗುವಂತೆ ತೆಗೆದುಹಾಕಲಾಗಿರುತ್ತದೆ. ಮಧ್ಯಮ ಕ್ರಮಾಂಕದ ಬ್ಯಾಟುಗಾರ/ಬ್ಯಾಟ್ಸ್‌ಮನ್ನರನ್ನು ಆಯ್ಕೆ ಮಾಡಬೇಕಾದರೆ ವಿಕೆಟ್‌‌ಗಳ ನಡುವೆ ಅವರು ತ್ವರಿತವಾಗಿ ಚಾಕಚಕ್ಯತೆಯಿಂದ (ಬೌಂಡರಿಗಳ ಹೊರತಾಗಿ ಪಡೆಯುವ ಓಟಗಳನ್ನು ಗರಿಷ್ಠಕ್ಕೇರಿಸಲು ) ಓಡುವ ಸಾಮರ್ಥ್ಯವನ್ನು ಹಾಗೂ ಅವರ ಸಹಿಷ್ಣುತೆ ಹಾಗೂ ತಾಳ್ಮೆಗಳನ್ನು ಪರಿಗಣಿಸಲಾಗುತ್ತದೆ. ಮಧ್ಯಮ ಕ್ರಮಾಂಕವು ಸಾಧಾರಣವಾಗಿ ಪಂದ್ಯದ ಅಂತಿಮ 10 ಓವರ್‌ಗಳ ಅವಧಿಯಲ್ಲಿ ತೀವ್ರತರವಾದ ಆಕ್ರಮಣವನ್ನು ನಡೆಸಲು ವೇದಿಕೆಯನ್ನು ಸಜ್ಜುಗೊಳಿಸುತ್ತದೆ. ಈ ತರಹದ ಆಕ್ರಮಣಗಳನ್ನು ನಡೆಸಲು ಎರಡು ಅಂಶಗಳು ಅತ್ಯಗತ್ಯ - ಭಾರೀ ಹೊಡೆತಗಳನ್ನು ಬಾರಿಸಬಲ್ಲಂತಹಾ ಬ್ಯಾಟುಗಾರ/ಬ್ಯಾಟ್ಸ್‌ಮನ್ನರು ಇನ್ನೂ ಬ್ಯಾಟಿಂಗ್‌ ಮಾಡಲಿಕ್ಕಿರಬೇಕು ಅಥವಾ ಔಟಾಗಿರಬಾರದು ಹಾಗೂ ಹಲವು ವಿಕೆಟ್‌ಗಳು ಕೈಯಲ್ಲಿರಬೇಕು (ಏಕೆಂದರೆ ಆಕ್ರಮಣಕಾರಿ ಆಟವೆಂದರೆ ವಿಕೆಟ್‌‌ ಗಳನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುವುದು). ಏಕದಿನ ಕ್ರಿಕೆಟ್‌‌ ಪಂದ್ಯದ ಇನ್ನಿಂಗ್ಸ್‌‌ನಲ್ಲಿನ ಕಡೆಯ 10 ಓವರ್‌ಗಳು ಅನೇಕ ವೇಳೆ ಇನ್ನಿಂಗ್ಸ್‌‌ನ ರೋಚಕ ಭಾಗವಾಗಿರುತ್ತದೆ, ಏಕೆಂದರೆ ಓಟಗಳ ಗಳಿಕೆ ಹಾಗೂ ತೆಗೆದುಕೊಳ್ಳಲಾದ ವಿಕೆಟ್‌‌ಗಳ ಸಂಖ್ಯೆಗಳಲ್ಲಾಗುವ ಏರಿಕೆಯು ಹೆಚ್ಚಿರುತ್ತದೆ. ODI ಪಂದ್ಯವೊಂದರ ಕಡೆಯ ಹತ್ತು ಓವರ್‌ಗಳಲ್ಲಿ, ಇನ್ನಿಂಗ್ಸ್‌‌ನ ಆರಂಭದಲ್ಲಿ ಆಡಲಾದ ಹೊಡೆತಗಳಿಗಿಂತ ಅಪಾಯಕರವಾದ ಹೊಡೆತಗಳನ್ನು ಹಲವು ವೇಳೆ ಬ್ಯಾಟುಗಾರ/ಬ್ಯಾಟ್ಸ್‌ಮನ್ನರು ಬಳಸುತ್ತಾರೆ.

ಅಪಾಯಕರ ಹೊಡೆತಗಳ ಉದಾಹರಣೆಗಳಲ್ಲಿ ವಿರುದ್ಧ ಬಾಚು ಹೊಡೆತ ಮತ್ತು ಪ್ಯಾಡಲ್‌-ಸ್ಕೂಪ್‌/ತೋಡುಹೊಡೆತಗಳು ಸೇರಿವೆ. ಸುರಕ್ಷಿತವಾದ ಹಾಗೂ ಹೆಚ್ಚು ಸಾಂಪ್ರದಾಯಿಕವಾದ ಹೊಡೆತವನ್ನು ಆಡುವಾಗ ಸಾಧ್ಯವಾಗದ ಬೌಂಡರಿಯೊಂದನ್ನು ಗಳಿಸಲು ಇಂತಹಾ ಹೊಡೆತಗಳನ್ನು ಬಳಸಲಾಗುತ್ತದೆ. ಅಂತಿಮವಾಗಿ, ಕೆಳ ಕ್ರಮಾಂಕವು ತಮ್ಮ ಬ್ಯಾಟಿಂಗ್‌ ಶೌರ್ಯದ ಬಗ್ಗೆ ಯಾವ ಖ್ಯಾತಿಯನ್ನೂ ಪಡೆಯದವರಾದ ತಂಡದ ಬೌಲರ್‌/ಚೆಂಡೆಸೆತಗಾರರಿಂದ ಕೂಡಿದ್ದು ಆದರಿಂದಲೇ ಸಾಧ್ಯವಾದಷ್ಟು ಕೆಳ ಕ್ರಮಾಂಕದಲ್ಲಿ ಅವರನ್ನು ಆಡಿಸಲಾಗುತ್ತದೆ.

ಆದಾಗ್ಯೂ ಬ್ಯಾಟಿಂಗ್‌ ಸ್ಥಾನಗಳ ಬಗ್ಗೆ ವಾಸ್ತವವಾಗಿ ಯಾವುದೇ ನಿರ್ಬಂಧಗಳಿಲ್ಲ. ನಿರ್ದಿಷ್ಟ ಅನುಕೂಲತೆಗಳನ್ನು ಪಡೆಯುವುದಕ್ಕಾಗಿ ಬ್ಯಾಟಿಂಗ್‌ ಕ್ರಮಾಂಕದ ಶ್ರೇಣಿಯಲ್ಲಿ ಪ್ರಯೋಗಗಳನ್ನು ಮಾಡಿ ನಾಯಕರುಗಳು ಪರಿಚಿತರಾಗಿದ್ದಾರೆ. ಉದಾಹರಣೆಗೆ, ಎಷ್ಟೇ ಆದರೂ (ಓರ್ವ ಕಡಿಮೆ ಸಾಧನೆಯ ಕೆಳ ಕ್ರಮಾಂಕದ ಬ್ಯಾಟುಗಾರ/ಬ್ಯಾಟ್‌ಮನ್‌ನಾಗಿ) ತನ್ನ ವಿಕೆಟ್‌‌ ಕಡಿಮೆ ಮಹತ್ವದ್ದಾದುದರಿಂದ ಓರ್ವ ಕೆಳ ಕ್ರಮಾಂಕದ ಬ್ಯಾಟುಗಾರ/ಬ್ಯಾಟ್‌ಮನ್‌ನನ್ನು ಕೆಲವೊಮ್ಮೆ 3ನೆಯ ಸ್ಥಾನದಲ್ಲಿ ಕಳುಹಿಸಿ ಹೆಚ್ಚು ಓಟಗಳನ್ನು ಗಳಿಸಲು ತೀವ್ರ-ಹೊಡೆತ/ಪಿಂಚ್‌-ಹಿಟ್‌ ಗಳ ಮೂಲಕ (ಕೆಲವೇ ಎಸೆತಗಳಲ್ಲಿ ಹೆಚ್ಚು ಓಟಗಳನ್ನು ಗಳಿಸುವ ಯತ್ನದಲ್ಲಿ ಆಕ್ರಮಣಕಾರಿಯಾದ ಆಟದಲ್ಲಿ ತೊಡಗುವಿಕೆ - ಬೇಸ್‌ಬಾಲ್‌ನಿಂದ ಎರವಲು ಪಡೆದ ಪದ) ತ್ವರಿತವಾಗಿ ಓಟಗಳನ್ನು ಗಳಿಸಿ ಉತ್ತಮ ಆಟಗಾರರನ್ನು ಒತ್ತಡದಿಂದ ರಕ್ಷಿಸುವ ಆದೇಶವನ್ನು ನೀಡಿರಲಾಗುತ್ತದೆ.

ಟೆಸ್ಟ್‌ ಕ್ರಿಕೆಟ್‌

[ಬದಲಾಯಿಸಿ]

ಟೆಸ್ಟ್‌ ಕ್ರಿಕೆಟ್‌‌ ಪಂದ್ಯಗಳಲ್ಲಿ, ಸಾಧಾರಣವಾಗಿ ಗುರಿಯು ಸಾಧ್ಯವಾದಷ್ಟು ಹೆಚ್ಚಿನ ಮೊತ್ತವನ್ನು ಪೇರಿಸುವುದಾಗಿರುತ್ತದೆ. ಓವರ್‌ಗಳಿಗೆ ಯಾವುದೇ ಮಿತಿಯಿಲ್ಲದಿರುವುದರಿಂದ, ಓರ್ವ ಬ್ಯಾಟುಗಾರ/ಬ್ಯಾಟ್‌ಮನ್‌ ಸಾವಕಾಶವಾಗಿಯೇ ತನ್ನ ಓಟಗಳನ್ನು ಗಳಿಸಬಹುದಾಗಿರುತ್ತದೆ. ಸಾಧಾರಣವಾಗಿ ಟೆಸ್ಟ್‌ ಕ್ರಿಕೆಟ್‌‌ ಪಂದ್ಯಗಳಲ್ಲಿ ಪ್ರತಿ ದಿನ 90 ಓವರ್‌ಗಳನ್ನು ಬೌಲ್‌/ಎಸೆತಗಳನ್ನು ಮಾಡಲೇಬೇಕಿರುತ್ತದೆ. ಟೆಸ್ಟ್‌ ಕ್ರಿಕೆಟ್‌‌ ಪಂದ್ಯದಲ್ಲಿ ಆರಂಭಿಕರು ಅಥವಾ ಆರಂಭಿಕ ಬ್ಯಾಟುಗಾರ/ಬ್ಯಾಟ್ಸ್‌ಮನ್ನರನ್ನು ಅನೇಕ ವೇಳೆ ಅವರ ದೃಢತೆಯ ಕೌಶಲ ಹಾಗೂ ತಮ್ಮ ವಿಕೆಟ್‌‌ಅನ್ನು ಕಾಪಾಡಿಕೊಳ್ಳಬಲ್ಲ ಸಾಮರ್ಥ್ಯಗಳನ್ನು ಆಧರಿಸಿ ಆಯ್ಕೆ ಮಾಡಿರಲಾಗುತ್ತದೆ, ಏಕೆಂದರೆ ಇನ್ನಿಂಗ್ಸ್‌‌ನ ಮೊದಲ 1–2 ಗಂಟೆಗಳ ಅವಧಿಯು, ವಿಶೇಷವಾಗಿ ಅದು ಬೆಳಿಗ್ಗೆಯಾಗಿದ್ದರೆ ಬೌಲಿಂಗ್‌/ಚೆಂಡೆಸತಕ್ಕೆ ಸೂಕ್ತವಾದ, ನಿರ್ದಿಷ್ಟವಾಗಿ ಹೇಳಬೇಕೆಂದರೆ ವೇಗ ಹಾಗೂ ಮೈದಾನದ ಪುಟಿಕೆ ಹಾಗೂ ಗಾಳಿಯಲ್ಲಿ ಚೆಂಡಿನ ಪಾರ್ಶ್ವಸ್ಥ ಚಲನೆಗಳಿಗೆ ಸಂಬಂಧಪಟ್ಟಂತೆ ಸಾಧಾರಣವಾಗಿ ಅತ್ಯುತ್ತಮ ಸ್ಥಿತಿಯಲ್ಲಿರುತ್ತವೆ.

ಒನ್‌‌-ಡ್ರಾಪ್‌ ಬ್ಯಾಟುಗಾರ/ಬ್ಯಾಟ್‌ಮನ್ನರನ್ನು ಕೂಡಾ ಸಾಧಾರಣವಾಗಿ ಓರ್ವ ಆರಂಭಿಕ ಆಟಗಾರ ಔಟ್‌ ಆದರೆ ತನ್ನ ಸ್ಥಾನವನ್ನು ಸ್ಥಿರವಾಗಿರಿಸಿಕೊಳ್ಳಬೇಕಾಗುವುದರಿಂದ ತನ್ನ ದೃಢತೆಯ ಕೌಶಲಕ್ಕಾಗಿ ಕೂಡಾ ಆಯ್ಕೆ ಮಾಡಲಾಗುತ್ತದೆ. ಟೆಸ್ಟ್‌ ಪಂದ್ಯಗಳಲ್ಲಿ ಬ್ಯಾಟಿಂಗ್‌ ತಂಡದ ಮಧ್ಯಮ ಕ್ರಮಾಂಕವು ಸಾಧಾರಣವಾಗಿ ಹೊಡೆತಗಳನ್ನು ಬೀಸುವ ಸಾಮರ್ಥ್ಯದಲ್ಲಿ ಅತ್ಯುತ್ತಮ ಕೌಶಲ್ಯವನ್ನು ಹೊಂದಿದ ಬ್ಯಾಟುಗಾರ/ಬ್ಯಾಟ್ಸ್‌ಮನ್ನರನ್ನು ಹೊಂದಿರುತ್ತದೆ, ಏಕೆಂದರೆ ದಿನ ಮಧ್ಯದ ಓವರ್‌ಗಳ ಅವಧಿಯಲ್ಲಿ ಇನ್ನಿಂಗ್ಸ್‌‌ನ ಆರಂಭಿಕ ಹಂತಗಳಿಗೆ ಹೋಲಿಸಿದರೆ ಬ್ಯಾಟಿಂಗ್‌ ಸುಲಭವಾದದ್ದಾಗಿರುತ್ತದೆ. ತಂಡವೊಂದರ ಬ್ಯಾಟಿಂಗ್‌ ಇನ್ನಿಂಗ್ಸ್‌‌ ದಿನವೊಂದರ ಕಡೆಯ ಅರ್ಧಗಂಟೆಯ ಹೊತ್ತಿನಲ್ಲಿ ಆರಂಭವಾದರೆ, ತಂಡವು ಓರ್ವ ಬ್ಯಾಟುಗಾರ/ಬ್ಯಾಟ್‌ಮನ್‌ ಔಟ್‌ ಆದರೆ ಬ್ಯಾಟಿಂಗ್‌ ಮಾಡಲು ನೈಟ್‌ ವಾಚ್‌ಮನ್‌(ರಾತ್ರಿಕಾವಲುಗಾರ)ನನ್ನು ಆಡಲು ಕಳಿಸಬಹುದಾಗಿರುತ್ತದೆ.

ನೈಟ್‌ ವಾಚ್‌ಮನ್‌(ರಾತ್ರಿಕಾವಲುಗಾರ) ಆಟಗಾರನೆಂದರೆ ಸಾಧಾರಣವಾಗಿ ಓರ್ವ ಕೆಳ ಕ್ರಮಾಂಕದ ಬ್ಯಾಟುಗಾರ/ಬ್ಯಾಟ್‌ಮನ್‌ ಆಗಿದ್ದು, ಪ್ರಧಾನವಾಗಿ ತನ್ನ ತಂಡಕ್ಕಾಗಿ ಹೆಚ್ಚಿನ ಮೊತ್ತವನ್ನು ಪೇರಿಸುವ ಬದಲಾಗಿ ಪ್ರಧಾನವಾಗಿ ಅಪಾಯಕಾರಿ ಎಸೆತಗಳಿಂದ ತನ್ನ ವಿಕೆಟನ್ನು ಕಾಪಾಡಿಕೊಂಡು ಅಪಾಯಕರವಲ್ಲದವನ್ನು ಹಾಗೆಯೇ ಬಿಟ್ಟು ಆಡುವ, ಆದರೂ ಸಂಪೂರ್ಣವಾಗಿ ಸಾಧುವಂತಿರುವ ಆಟಗಾರನಾಗದೇ ದಿನದ ನಂತರದ ಸಮಯದಲ್ಲಿ ಇತರೆ ಬ್ಯಾಟುಗಾರ/ಬ್ಯಾಟ್ಸ್‌ಮನ್ನರನ್ನು ಕಣಕ್ಕಿಳಿಯುವಂತೆ ಮಾಡುವ ಜವಾಬ್ದಾರಿಯನ್ನು ಹೊಂದಿರುವ ಆಟಗಾರನಾಗಿರುತ್ತಾನೆ. ಈ ಒಂದು ನಡೆಯು ಓರ್ವ ಅಪ್ಪಟ ಬ್ಯಾಟುಗಾರ/ಬ್ಯಾಟ್‌ಮನ್‌ನನ್ನು ದಿನದ ಕೊನೆಯಲ್ಲಿ ಉಳಿದಿರುವ ಓವರ್‌ಗಳನ್ನು ಎದುರಿಸುವುದು ಅಥವಾ ಮರುದಿನದ ಆರಂಭದಲ್ಲಿಯೇ ಬ್ಯಾಟಿಂಗ್‌ಗೆ ಇಳಿಯುವುದನ್ನು ತಡೆಹಿಡಿಯುತ್ತದೆ; ಆದಾಗ್ಯೂ, ಕೆಲವು ತಂಡಗಳು ನೈಟ್‌ ವಾಚ್‌ಮನ್‌(ರಾತ್ರಿಕಾವಲುಗಾರ) ಆಟಗಾರನನ್ನು , ಮಧ್ಯಮ ಕ್ರಮಾಂಕದ ಬ್ಯಾಟುಗಾರ/ಬ್ಯಾಟ್ಸ್‌ಮನ್ನರು ತಮ್ಮ ವಿಕೆಟ್‌ಅನ್ನು ಉತ್ತಮ ಪರಿಸ್ಥಿತಿಗಳಲ್ಲಿ ಮಾತ್ರವಲ್ಲ ಅಪಾಯಕರ ಪರಿಸ್ಥಿತಿಗಳಲ್ಲಿಯೂ ಕಾಪಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬೇಕು ಎಂಬ ನಂಬಿಕೆಯಿಂದ ಅಥವಾ ರಕ್ಷಣಾತ್ಮಕವಾಗಿ ಆಡಲಿಚ್ಛಿಸದ ಕೆಳ ಕ್ರಮಾಂಕದ ಬ್ಯಾಟುಗಾರ/ಬ್ಯಾಟ್ಸ್‌ಮನ್ನರುಗಳಿಂದಾಗಿಯೂ ಸೇರಿದಂತೆ ಹಲವು ಕಾರಣಗಳಿಗಾಗಿ ಬಳಸಲಿಚ್ಛಿಸುವುದಿಲ್ಲ.

ಮೂರನೇ ಇನ್ನಿಂಗ್ಸ್‌‌ನಲ್ಲಿ, ಬ್ಯಾಟಿಂಗ್‌ ತಂಡವು ಪ್ರತಿಸ್ಪರ್ಧಿ ತಂಡಕ್ಕೆ ಭಾರೀ ಸವಾಲನ್ನು ನೀಡಲು ತ್ವರಿತವಾಗಿ ಹೆಚ್ಚಿನ ಓಟಗಳಿಕೆಯನ್ನು ಸಾಧಿಸಬಹುದಾಗಿರುತ್ತದೆ. ಈ ರೀತಿಯ ಸಂದರ್ಭವು ಸಾಧಾರಣವಾಗಿ ನಾಲ್ಕನೆಯ ದಿನದ ಆಟದಲ್ಲಿ ಸಂಭವಿಸುತ್ತದೆ. ಬ್ಯಾಟಿಂಗ್‌ ತಂಡದ ನಾಯಕನು ತಮ್ಮ ನಾಲ್ಕನೆಯ ಇನ್ನಿಂಗ್ಸ್‌‌ನಲ್ಲಿ ತಾನು ನಿಗದಿಪಡಿಸುವ ಓಟಗಳ ಮೊತ್ತವನ್ನು ಬೆನ್ನಟ್ಟಲು ಎಷ್ಟು ಓವರ್‌ಗಳನ್ನು ನೀಡಲು ತಾನು ಸಿದ್ಧನಿದ್ದೇನೆ ಎಂಬುದನ್ನು ನಿರ್ಧರಿಸುತ್ತಾನೆ. ಆತನು ಸಾಧಾರಣವಾಗಿ ಅದೇ ದಿನ ತನ್ನ ತಂಡವು ಕನಿಷ್ಟ 20 ಓವರ್‌ಗಳನ್ನಾದರೂ ಹಾಗೂ ಕಡೆಯ ದಿನ 90 ಓವರ್‌ಗಳನ್ನು ಎಸೆಯಲಾಗುವಂತೆ ತಂಡದ ಇನ್ನಿಂಗ್ಸ್‌‌ಅನ್ನು ಪೂರ್ವನಿರ್ಧರಿತ ಸಮಯವೊಂದರಲ್ಲಿ ಡಿಕ್ಲೇರ್‌ ಮಾಡಿ ಕೊನೆಗೊಳಿಸುತ್ತಾನೆ. ನಾಲ್ಕನೆಯ ಇನ್ನಿಂಗ್ಸ್‌‌ನಲ್ಲಿ ಪ್ರತಿಸ್ಪರ್ಧಿ ತಂಡದ ಮೇಲೆ ಎಸೆತಗಳ ದಾಳಿ ನಡೆಸಲು ಸಾಕಷ್ಟು ದೊಡ್ಡ ಸಂಖ್ಯೆಯ ಓವರ್‌ಗಳಿರುವುದು ಅತ್ಯಗತ್ಯ ಏಕೆಂದರೆ ಸಾಧಾರಣವಾಗಿ ಟೆಸ್ಟ್‌ ಪಂದ್ಯದ ನಾಲ್ಕನೆಯ ಹಾಗೂ ಐದನೆಯ ದಿನಗಳಲ್ಲಿ ಮೈದಾನವು ಸಾಕಷ್ಟು ಮಟ್ಟಿಗೆ ಸವೆದು ಹೋಗಿ ಪಂದ್ಯದ ಪರಿಸ್ಥಿತಿಯು ಬೌಲಿಂಗ್‌/ಚೆಂಡೆಸತಕ್ಕೆ ಅನುಕೂಲಕರವಾಗಿರುತ್ತದೆ (ವಿಶೇಷವಾಗಿ ನಿಧಾನವಾದ ಬೌಲಿಂಗ್‌ ಚೆಂಡೆಸೆತಕ್ಕೆ). ಆದ್ದರಿಂದ ಪಂದ್ಯದ ಗುರಿಯನ್ನು ಸಾಧ್ಯವಾದಷ್ಟು ಕಷ್ಟಗೊಳಿಸಲು, ನಾಯಕನು ಡಿಕ್ಲೇರ್‌ ಘೋಷಿಸುವವರೆಗೆ ಬ್ಯಾಟಿಂಗ್‌ ತಂಡವು ಓಟದ ದರವನ್ನು (ಪ್ರತಿ ಓವರ್‌ಗೆ ಗಳಿಸುವ ಓಟಗಳು) ವೇಗಗೊಳಿಸುತ್ತದೆ.

ಆದಾಗ್ಯೂ ಬ್ಯಾಟಿಂಗ್‌ ತಂಡವೊಂದು ಟೆಸ್ಟ್‌ ಪಂದ್ಯವೊಂದರ ನಾಲ್ಕನೆಯ ದಿನದಲ್ಲಿಯೂ ಓಟಗಳಿಗೆ ಸಂಬಂಧಪಟ್ಟಂತೆ ಸಾಕಷ್ಟು ಗಮನಾರ್ಹ ಪ್ರಮಾಣದಲ್ಲಿ ಹಿಂದುಳಿದಿದ್ದಲ್ಲಿ, ಬ್ಯಾಟಿಂಗ್‌ ತಂಡದ ಸಾಧಾರಣವಾದ ಕಾರ್ಯನೀತಿಯು ರಕ್ಷಣಾತ್ಮಕವಾಗಿ ವಿಕೆಟ್‌‌ಗಳನ್ನು ಕಳೆದುಕೊಳ್ಳದಂತೆ ಆಡುವುದನ್ನು ಒಳಗೊಂಡಿರುತ್ತದೆ. ಹೀಗೆ ಮಾಡುವುದರಿಂದ ಪಂದ್ಯವು ಐದನೆಯ ದಿನದಲ್ಲಿ ಕೊನೆಗೊಳ್ಳುವವರೆಗೆ ಬಹುತೇಕ ಸಮಯ ಮೈದಾನದಲ್ಲಿ ತಾವೇ ಇರುವ ಹಾಗೆ ಖಚಿತಪಡಿಸಿಕೊಳ್ಳಬಹುದು, ಏಕೆಂದರೆ ತಂಡವೊಂದರ ಇನ್ನಿಂಗ್ಸ್‌‌ ಐದನೆಯ ದಿನದಲ್ಲಿಯೂ ಕೊನೆಗೊಳ್ಳದೇ ಹೋದರೆ ಆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗುತ್ತದೆ ಅಥವಾ ಸಮಸಮನಾದ ಸ್ಥಿತಿಯನ್ನು ತಲುಪಿದಂತಾಗುತ್ತದೆ. ಅದೇನೇ ಆದರೂ, ಹೀಗೆ ಮಾಡಲು ಪ್ರಯತ್ನಿಸುವಾಗಲೇ, ಮೇಲ್ಕಂಡ ಬ್ಯಾಟಿಂಗ್‌ ತಂಡವು ತನ್ನ ಹಿನ್ನಡೆಯ ಮೊತ್ತವನ್ನು ಮೀರಿಸಿ ಪ್ರತಿಸ್ಪರ್ಧಿಯ ವಿರುದ್ದ ಗಮನಾರ್ಹವಾದ ಮುನ್ನಡೆ ಯನ್ನು (ಹೆಚ್ಚುವರಿ ಓಟಗಳ ಗಳಿಕೆ) ಸಾಧಿಸಲು ಶಕ್ಯವಾದರೆ, ಅದರ ನಾಯಕನು ಇನ್ನಿಂಗ್ಸ್‌‌ ಅನ್ನು ಡಿಕ್ಲೇರ್‌ ಮಾಡುವ ನಿರ್ಧಾರವನ್ನು ಕೈಗೊಳ್ಳಬಹುದಾಗಿದೆ ತನ್ಮೂಲಕ ಆತನು ತಂಡ ಗಳಿಸಿದ ಮುನ್ನಡೆಯ ಪ್ರಮಾಣಕ್ಕನುಗುಣವಾಗಿ ತನ್ನ ಬೌಲರ್‌/ಚೆಂಡೆಸೆತಗಾರರ ಸಿದ್ಧತೆ ಹಾಗೂ ಮೈದಾನದ ಪರಿಸ್ಥಿತಿಗಳನ್ನು ಆಧರಿಸಿ ಅಂತಿಮ ದಿನದಲ್ಲಿ "ವಿಜಯವು" ಕಡ್ಡಾಯವಾಗಿ ತನ್ನ ತಂಡಕ್ಕೆ ಒಲಿಯುವಂತೆ ಮಾಡಬಹುದು.

ಇವನ್ನೂ ಗಮನಿಸಿ‌

[ಬದಲಾಯಿಸಿ]
  • ಬೌಲಿಂಗ್/ಚೆಂಡೆಸತ
  • ಕ್ಷೇತ್ರರಕ್ಷಣೆ
  • ಕ್ರಿಕೆಟ್‌ನ ಪಾರಿಭಾಷಿಕ ಶಬ್ದಗಳು

ಉಲ್ಲೇಖಗಳು‌

[ಬದಲಾಯಿಸಿ]
  1. ಕ್ರಿಕೆಟ್‌‌ : ಎ ಗೈಡ್‌ ಬುಕ್‌ ಫಾರ್‌ ಟೀಚರ್ಸ್‌, ಕೋಚಸ್‌ ಅಂಡ್‌ ಪ್ಲೇಯರ್ಸ್‌ (ವೆಲ್ಲಿಂಗ್‌ಟನ್‌: ನ್ಯೂಜಿಲೆಂಡ್‌‌ ಸರ್ಕಾರಿ ಮುದ್ರಣಾಲಯ, 1984), p. 8.
  2. ಬಾಬ್‌ ವೂಲ್ಮರ್‌‌ | ಮರಣಪ್ರಕಟಣೆಗಳು | ಗಾರ್ಡಿಯನ್‌ ಅನ್‌ಲಿಮಿಟೆಡ್‌
  3. "ಇತ್ತೀಚಿನ ಕ್ರಿಕೆಟ್‌‌ ಸುದ್ದಿ  » ಬಾಬ್‌ ವೂಲ್ಮರ್‌‌ ಎಂಬ `ಗಣಕ ತರಬೇತುದಾರ1". Archived from the original on 2016-01-10. Retrieved 2011-04-15.
  4. Cricinfo - ಆಟಗಾರರ/ರು ಮತ್ತು ಅಧಿಕಾರಿಗಳು - ಡೇಮಿಯೆನ್‌ ಮಾರ್ಟಿನ್‌‌
  5. ಯೂಸುಫ್‌ ಪಠಾಣ್‌ರ ವಿರುದ್ಧ ಬಾಚು ಹೊಡೆತ ಸಿಕ್ಸ್
  6. "ಆರ್ಕೈವ್ ನಕಲು". Archived from the original on 2011-07-15. Retrieved 2011-04-15.