ಬ್ರಹ್ಮಾವರ
ಬ್ರಹ್ಮಾವರ | |
---|---|
![]() ಬ್ರಹ್ಮಾವರ | |
Website | www.brahmavara.com |
ಬ್ರಹ್ಮಾವರ ರಾಷ್ಟೀಯ ಹೆದ್ದಾರಿ ೬೬(೧೭) ರಲ್ಲಿ ಉಡುಪಿ ಜಿಲ್ಲೆಯಿಂದ ಉತ್ತರಕ್ಕೆ ಇರುವ ತಾಲ್ಲೂಕು. ಪುರಾಣದ ಪ್ರಕಾರ ಬ್ರಹ್ಮಾವರ ನಗರವನ್ನು ರಾಜರು ಬ್ರಾಹ್ಮಣರಿಗೆ ಉಡುಗೊರೆಯಾಗಿ ಕೊಟ್ಟ ಪೇಟೆಯೆಂದು, ನಂತರ ಆಡುಭಾಷೆಯಲ್ಲಿ "ಬ್ರಹ್ಮಾವರ"(ಅಜಪುರ)ಯೆಂದು ಕರೆಯಲ್ಫಟ್ಟಿತು.
ಬ್ರಹ್ಮಾವರದಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನ ಕ್ರಿ.ಶ. ೯ ನೇ ಶತಮಾನದಲ್ಲಿ ಕಟ್ಟಲಾಯಿತು ಎಂದು ನಂಬಲಾಗಿದೆ. ದೇವಸ್ಥಾನದ ಗೋಡೆಗಳಲ್ಲಿ ಗಜ-ಗೌರಿಯ ಚಿತ್ರವಿದ್ದು ಅದನ್ನು ನವರಂಗದಲ್ಲಿ ಇಡಲಾಗಿದೆ ಆದ್ದರಿಂದ ಅದನ್ನು ಹೊಯ್ಸಳರ ಕಾಲದ್ದೆಂದು ನಂಬಲಾಗಿದೆ. ಹಂದಾಡಿ ಬ್ರಹ್ಮಾವರದ ಹತೀರದ ಚಿಕ್ಕ ಊರು, ಅದನ್ನು ಹಂದೆ ಕುಟುಂಬಕ್ಕೆ ಉಡುಗೊರೆಯಾಗಿ ನೀಡಲಾಯಿತು ಎನ್ನಲಾಗಿದೆ. ಬ್ರಹ್ಮಾವರದಲ್ಲಿರುವ ಗೊಪಿನಾಥ ದೇವಸ್ತಾನ ೩ನೇಯ ಶತಮಾನದ ದೇವಸ್ಥಾನ ಎಂದು ಬರವಣಿಗೆಯಲ್ಲಿ ಇದೆ.ಹಾಗೂ ಚಾಂತಾರು ಗ್ರಾಮದ ನಂದಿಗುಡ್ಡೆಯಲ್ಲಿ ನೆಲೆನಿಂತಿರುವ ತುಳುನಾಡಿನ ಕಾರ್ಣಿಕ ಪುರುಷ ಊರಿಗೆ ದಾತ ಮಾರಿಗೆ ಧೂತ ನಂಬಿದವರಿಗೆ ವೈದ್ಯನಾಥ ಏಂದು ಕರೆಯುವ ದೈವರಾಜ ಭಗವಾನ್ ಶ್ರೀ ಬಬ್ಬುಸ್ವಾಮಿ ತನ್ನ ಪರಿವಾರ ದೈವಗಳೊಂದಿಗೆ ಕಾರ್ಣಿಕ ಮೆರೆಯುತ್ತ ಮುಂಡಾಲ ಜನಾಂಗದವರ ಕುಲದೇವರಾಗಿ ಇಡೀ ಗ್ರಾಮದ ಜನರ ನಂಬಿಕೆಯ ಹಾಗೂ ಭಕ್ತರ ಇಷ್ಟಾರ್ಥಗಳನ್ನು ನೆರೆವೇರಿಸುವ ಪ್ರಧಾನ ಶಕ್ತಿಯಾಗಿದ್ದಾರೆ. ಇಲ್ಲಿ ಪ್ರತಿವರ್ಷ ಡಿಸಂಬರ್ ನಲ್ಲಿ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ದರ್ಶನ ಸೇವೆ ಬಲಿಮೂರ್ತಿಯ ಭವ್ಯ ಮೆರವಣಿಗೆ ಹಾಗೂ ಅನ್ನಸಂತರ್ಪಣೆ ನಡೆಯೋದು ಗ್ರಾಮದ ಎಲ್ಲಾ ಭಕ್ತರು ಭಾಗವಹಿಸೋದು ವಿಶೇಷ
ಬ್ರಹ್ಮಾವರದಲ್ಲಿ ಬಂಟರು,ಕೊಂಕಣಿ, ಬ್ರಾಹ್ಮಣರು, ಕ್ರೈಸ್ತ ಧರ್ಮದವರು, ಹಾಗು ಚಿಕ್ಕ ಸಂಖ್ಯೆಯಲ್ಲಿ ಮುಸಲ್ಮಾನ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿದ್ದಾರೆ.
ಬ್ರಹ್ಮಾವರವು ರಾ.ಹೆ. ೬೬(೧೭) ರಲ್ಲಿ ಉಡುಪಿ ಮತ್ತು ಕುಂದಾಪುರಗಳ ನಡುವೆ ಇರುವುದರಿಂದಾಗಿ ನೇರ ಖಾಸಗಿ ಮತ್ತು ಸರಕಾರಿ ಬಸ್ ಸಂಪರ್ಕ ಹೊಂದಿದೆ. ಇಲ್ಲಿಂದ ರಾಜ್ಯದ ಬೆಂಗಳೂರು, ಮುಂಬಯಿ, ಹುಬ್ಬಳ್ಳಿ, ಶಿವಮೊಗ್ಗ ಹಾಗೂ ಮೊದಲಾದ ಸ್ಥಳಗಳಿಗೆ ನೇರ ರಸ್ತೆ ಸಂರ್ಪಕವನ್ನು ಕೂಡ ಹೊಂದಿದೆ.
ಬಾರ್ಕೂರು ಹತ್ತಿರದ ರೈಲು ನಿಲ್ದಾಣವಾಗಿರುತ್ತಾದೆ..
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣವಾಗಿರುತ್ತಾದೆ.
ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ರುವ ಸುವರ್ಣ ಹಾಗು ಸೀತಾ ನದಿಗಳು ಬ್ರಹ್ಮಾವರದ ಮೂಲಕ ಹರಿದು ಅರಬ್ಬೀ ಮಹಾಸಾಗರದಲ್ಲಿ ಸೇರುತ್ತವೆ.
ಹೊಸ ಲೇಖನ